Author: admin

22.55 ಲಕ್ಷ ರೂ. ಲಾಭ, ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಉಡುಪಿ: ಇಲ್ಲಿನ ಶ್ರೀ ವೀರಭದ್ರ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ನಿ. ಪರ್ಕಳ ಇದರ 13ನೇ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಭಾನುವಾರ ಪರ್ಕಳದ ಶ್ರೀ ಸುರಕ್ಷಾ ಸಭಾಭವನದಲ್ಲಿ ನಡೆಯಿತು. ಸೊಸೈಟಿಯು 22.55 ಲಕ್ಷ ರೂ. ಲಾಭ ಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಲಾಯಿತು. https://chat.whatsapp.com/EbVKVnWB6rlHT1mWtsgbch ಸಹಕಾರಿಯ ಅಧ್ಯಕ್ಷರಾದ ಬಿ.ಎಚ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಹಕಾರಿಯ ಬೆಳವಣಿಗೆಗೆ ಸದಸ್ಯರ ಸಹಕಾರ ತುಂಬಾ ಮುಖ್ಯ. ಮುಂದೆ ಕೂಡಾ ಇದೇ ರೀತಿಯಲ್ಲಿ ಸದಸ್ಯರು ಸಹಕಾರ ನೀಡಿ ಸೊಸೈಟಿಯ ಅಭಿವದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿನಂತಿಸಿದರು. ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ರತ್ನಾ ಎಸ್.ಶೆಟ್ಟಿಯವರು 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಈ ಆರ್ಥಿಕ ವರ್ಷದಲ್ಲಿ ಶ್ರೀ ವೀರಭದ್ರ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯು ರೂ.22,55,646 ಲಾಭ ಗಳಿಸಿದೆ ಮತ್ತು ಸದಸ್ಯರಿಗೆ 10% ಡಿವಿಡೆಂಡ್ ನೀಡಲು ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಹಕಾರಿಯ ಸುಸ್ತಿ ಸಾಲದ ಪ್ರಮಾಣವು…

Read More

ಉತ್ತಮ ಕೃಷಿಕ ಪ್ರಶಸ್ತಿ ಪ್ರದಾನ, ಪ್ರಗತಿಪರ ಕೃಷಿಕರಿಗೆ ಗೌರವಾರ್ಪಣೆ ಬಂಟ್ವಾಳ: ದಕ್ಷಿಣ ಕನ್ನಡ ಸೌಹಾರ್ದ ಸಹಕಾರಿ ಅಣ್ಣಳಿಕೆ ಬಂಟ್ವಾಳ ಇದರ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಬಿ.ಸಿ.ರೋಡ್ ರಂಗೋಲಿ ಹೋಟೆಲ್‌ನಲ್ಲಿ ಜರುಗಿತು. ಸಹಕಾರಿಯ ಅಧ್ಯಕ್ಷರಾದ ಸಿಲ್ವೆಸ್ಟರ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿಯ ಸಿಬ್ಬಂದಿ ಸುಮಂಗಲಾ, ವಿನೋದಾ ಪ್ರಾರ್ಥಿಸಿದರು. ಸಹಕಾರಿಯ ಉಪಾಧ್ಯಕ್ಷ ದೇವಪ್ಪ ಕುಲಾಲ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುದೇಶ್ ಪೂಜಾರಿ ವಾರ್ಷಿಕ ವರದಿ, ಲೆಕ್ಕಪತ್ರಗಳು ಹಾಗೂ ನಿವ್ವಳ ಲಾಭದ ವಿಂಗಡನೆಯ ವಿಷಯ ಮಂಡಿಸಿದರು. ಸದಸ್ಯರಿಗೆ ಶೇ.5.13 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಸಹಕಾರಿಯ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಮಾತನಾಡಿ ಸದಸ್ಯರ ನಂಬಿಕೆ, ವಿಶ್ವಾಸದಿಂದ ಸಹಕಾರಿಯ ಅಭಿವೃದ್ಧಿ ಸಾಧ್ಯ ಎಂದರು. https://chat.whatsapp.com/EbVKVnWB6rlHT1mWtsgbch ನೇತ್ರಾವತಿ ಕೃಷಿಕ ಅಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ 2025ರ ಸಾಲಿನ ಉತ್ತಮ ಕೃಷಿಕ ಪ್ರಶಸ್ತಿಯನ್ನು ಬಂಟ್ವಾಳ ತಾಲೂಕಿನ ಪ್ರಗತಿಪರ ಕೃಷಿಕರಾದ ಮಹಾಬಲ ಶೆಟ್ಟಿ ಕುಂದಬೆಟ್ಟು ತೆಂಕಬೆಳ್ಳೂರು, ರಂಜಿನಿ ದಿವಾಕರ್ ಮಾದಾಯಿ ಸಿದ್ದಕಟ್ಟೆ, ಜೆರಾಲ್ದ್ ಲೋಬೊ ದೆಂಬುಡೆ ಅರಳ, ಕೃಷ್ಣರಾಜ್…

Read More

ವಾರ್ಷಿಕ ಮಹಾಸಭೆಯಲ್ಲಿ ಘೋಷಣೆ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮಂಗಳೂರು; ಶ್ರೀ ಗುರುಶಕ್ತಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಕಾವೂರು ಇದರ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಕೋಡಿಕಲ್ ಎಸ್‌ಎನ್‌ಡಿಪಿ ಸಂಘದ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಸಹಕಾರಿಯ ಅಧ್ಯಕ್ಷರಾದ ಚಂದ್ರಶೇಖರ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿಯ ಸದಸ್ಯರಾದ ಕೋಡಿಕಲ್ ಎಸ್.ಎನ್.ಡಿ.ಪಿ. ಸಂಘದ ಅಧ್ಯಕ್ಷ ಉಮ್ಮಪ್ಪ ಪೂಜಾರಿ ಪಿ., ಪದ್ಮನಾಭ ಕಾರ್ನಾಡ್, ಪ್ರಮೀಳಾ ಈಶ್ವರ್, ಶಾಲಿನಿ, ಸೀತಾರಾಮ, ಕೃಷ್ಣ ಎನ್. ಪೂಜಾರಿ, ರಮೇಶ್ ಹಾಗೂ ಆಡಳಿತ ಮಂಡಳಿ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. https://chat.whatsapp.com/EbVKVnWB6rlHT1mWtsgbch ನಿರ್ದೇಶಕರಾದ ಪುರುಷೋತ್ತಮ್ ಎನ್ ಪೂಜಾರಿ ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಾಹಕರಾದ ರಚನಾ 2024-25ನೇ ಸಾಲಿನ ವರದಿ, ಲೆಕ್ಕಪತ್ರಗಳು ಹಾಗೂ ನಿವ್ವಳ ಲಾಭದ ವಿಂಗಡಣೆಯ ಕುರಿತು ವಿಷಯ ಮಂಡಿಸಿದರು. ಸಹಕಾರಿಯ ಸದಸ್ಯರಿಗೆ ಶೇ.8 ಡಿವಿಡೆಂಡ್‌ ಘೋಷಣೆ ಮಾಡಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಚಂದ್ರಶೇಖರ್ ಕುಮಾರ್ ಮಾತನಾಡಿ ಶ್ರೀ ಗುರುಶಕ್ತಿ ಸೌಹಾರ್ದ…

Read More

ಉಡುಪಿ: ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಉಡುಪಿ ಇದರ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ಸಹಕಾರಿಯ ಮುಖ್ಯ ಕಚೇರಿಯ ಸಭಾಂಗಣದಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಅಧ್ಯಕ್ಷರಾದ ಆರ್.ವಿ.ಕುಂದರ್ ಮಾತನಾಡಿ, ಸಂಘವು ಸತತವಾಗಿ ಲಾಭದೊಂದಿಗೆ ಮುನ್ನಡೆಯುತ್ತಿದೆ. ಇದಕ್ಕೆ ಕಾರಣರಾದವರಿಗೆ ಹಾಗೂ ಅಭಿವೃದ್ಧಿಗೆ ಸಹಕರಿಸಿದ ಠೇವಣಿದಾರರಿಗೆ, ಪಿಗ್ಮಿ ಸಂಗ್ರಹಗಾರರಿಗೆ, ಸಿಬ್ಬಂದಿ ಹಾಗೂ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರಿತಾ ಪ್ರಾಸ್ತಾವಿಕ ಮಾತನಾಡಿ, ವಾರ್ಷಿಕ ವರದಿ ಮಂಡಿಸಿದರು. ವಾರ್ಷಿಕ ವರ್ಷದಲ್ಲಿ ಅತಿಹೆಚ್ಚು ಠೇವಣಿ ಸಂಗ್ರಹಿಸಿದ ಸಿಬ್ಬಂದಿ, ನಿರ್ದೇಶಕರನ್ನು ಗೌರವಿಸಲಾಯಿತು. ಉಪಾಧ್ಯಕ್ಷರಾದ ಪ್ರಶಾಂತ್ ಎಸ್, ನಿರ್ದೇಶಕರಾದ ಅಶೋಕ್ ಸೇರಿಗಾರ್, ಜಲಜಾ ಕೆ, ಮಾಧವ, ನಯನ ದಾಸ್, ರಾಮ ಶೇರಿಗಾರ್, ನಾರಾಯಣ್, ಪ್ರಕಾಶ್ ಕುಂದರ್, ಶಿವಾನಂದ್, ಅಮಿತಾ, ಚಿತ್ರಾಕ್ಷಿ ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ತರಬೇತುದಾರರಾದ ಎಸ್.ಎನ್ ಶೆಟ್ಟಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ದಿವ್ಯಾ ಸ್ವಾಗತಿಸಿ, ಅಶ್ಮಿತಾ ಹಾಗೂ ಚೈತ್ರ ಕಾರ್ಯಕ್ರಮ ನಿರೂಪಿಸಿದರು. ಪ್ರತೀಕ್ಷಾ ವಂದಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694…

Read More

ಮಂಗಳೂರು: ಸಹಕಾರಿ ರಂಗದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಬ್ಯಾಂಕಿಂಗ್ ಸೇವೆಯನ್ನು ನೀಡುತ್ತ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್)ಗೆ ಕರ್ನಾಟಕ ರಾಜ್ಯ ಸಹಕಾರಿ ಅಪಕ್ಸ್ ಬ್ಯಾಂಕ್‌ನ ಪ್ರಥಮ ಪ್ರಶಸ್ತಿ ಲಭಿಸಿದೆ. https://chat.whatsapp.com/EbVKVnWB6rlHT1mWtsgbch ಅಪೆಕ್ಸ್ ಬ್ಯಾಂಕ್ ರಾಜ್ಯದ ಅತ್ಯುತ್ತಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಪ್ರಶಸ್ತಿ ನೀಡುತ್ತಿದೆ. ಸಮಾಜಮುಖಿ ಸೇವೆಗಳೊಂದಿಗೆ ಗ್ರಾಹಕರಿಗೆ ಸಂತೃಪ್ತ ಸೇವೆ ನೀಡುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ 2023-24ನೇ ಸಾಲಿನಲ್ಲಿ ತೋರಿದ ಸರ್ವಾಂಗೀಣ ಪ್ರಗತಿಯೊಂದಿಗೆ ಲೆಕ್ಕಪರಿಶೋಧನೆಯಲ್ಲಿ ‘ಎ’ ವರ್ಗ ಪಡೆದು ಪ್ರಥಮ ಪ್ರಶಸ್ತಿಗೆ ಆಯ್ಕೆಯಾಗಿದೆ. ಬ್ಯಾಂಕ್ ವರದಿ ವರ್ಷದಲ್ಲಿ ನೀಡಿದ ಎಲ್ಲಾ ಕೃಷಿ ಸಾಲಗಳು ಶೇಕಡಾ ೧೦೦ಯಾಗಿದ್ದು ಇಂತಹ ಸಾಧನೆಯನ್ನು ಬ್ಯಾಂಕ್ 30 ವರ್ಷಗಳಿಂದ ನಿರಂತರವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ. 23 ಬಾರಿ ಅಪೆಕ್ಸ್‌ ಬ್ಯಾಂಕ್ ಪ್ರಶಸ್ತಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 113 ಶಾಖೆಗಳ ಮೂಲಕ ಉತ್ಕೃಷ್ಟ ಬ್ಯಾಂಕಿಂಗ್ ಸೇವೆ ನೀಡುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್‌…

Read More

ಹೈಕಮಾಂಡ್‌ ಸೂಚನೆ ಹಿನ್ನೆಲೆಯಲ್ಲಿ ದಿಢೀರ್‌ ನಿರ್ಧಾರ? ಬೆಂಗಳೂರು: ರಾಜ್ಯದ ಸಹಕಾರ ಸಚಿವ ಕೆ.ಎನ್‌ ರಾಜಣ್ಣ ಅವರು ತಮ್ಮ ಸಚಿವ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ಘೋಷಣೆ ಮಾಡಿದ್ದು, ಆಡಳಿತ ಪಕ್ಷ ಕಾಂಗ್ರೆಸ್‌ಗೆ ಶಾಕ್‌ ನೀಡಿದ್ದಾರೆ. ಆದರೆ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಆದೇಶ ಬಂದ ಹಿನ್ನೆಲೆಯಲ್ಲಿ ರಾಜಣ್ಣ ಈ ನಿರ್ಧಾರ ಮಾಡಿದ್ಧಾರೆ ಎನ್ನಲಾಗಿದೆ. https://chat.whatsapp.com/EbVKVnWB6rlHT1mWtsgbch ಕೆಲವು ದಿನಗಳಿಂದ ಪಕ್ಷ, ಹೈಕಮಾಂಡ್ ಹಾಗೂ ರಾಜಕೀಯ ವಿಷಯಗಳಿಂದ ದೂರವಿದ್ದ ಕೆ.ಎನ್‌ ರಾಜಣ್ಣ ಅವರು ಇತ್ತೀಚೆಗೆ ಪಕ್ಷ ಹಾಗೂ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಮಾತನಾಡಿದ್ದರು. ಜತೆಗೆ ಡಿ.ಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಜತೆಗೂ ಒಳಮುನಿಸು ಇತ್ತು. ಇದು ಕೂಡ ರಾಜೀನಾಮೆ ನೀಡಲು ಕಾರಣ ಎನ್ನಲಾಗುತ್ತಿದೆ. ರಾಜಣ್ಣ ಅವರ ದಿಢೀರ್‌ ರಾಜೀನಾಮೆ ರಾಜ್ಯ ರಾಜಕೀಯದಲ್ಲಿ ಬಹುದೊಡ್ಡ ಸಂಚಲನ ಮೂಡಿಸಿದ್ದು, ಕಾಂಗ್ರೆಸ್‌ ಹಿರಿಯ ನಾಯಕ, ಗೃಹಸಚಿವರ ಆಪ್ತರ ವಿರುದ್ಧವೇ ಹೈಕಮಾಂಡ್ ಈ ರೀತಿ ಕ್ರಮ ಕೈಗೊಂಡಿರುವುದು ಆತಂಕ ಮೂಡಿಸಿದೆ.ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಬೆಂಬಲಿಗರು ಮುಖ್ಯಮಂತ್ರಿ…

Read More

ಬೈಂದೂರು: ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉಪ್ಪುಂದ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ ಉಪ್ಪುಂದ ಪರಿಚಯ ದೇವಕಿ ಜಿ.ಆರ್ ಸಭಾಂಗಣದಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘವು 83.19 ಲಕ್ಷ ರೂ. ವ್ಯವಹಾರ ನಡೆಸಿದ್ದು 26.74 ಲಕ್ಷ ರೂ. ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.10.05 ಡಿವಿಡೆಂಡ್ ಘೋಷಣೆ ಮಾಡಲಾಗಿದೆ. ಜನರಿಗೆ ಉತ್ತಮ ಆರ್ಥಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಆರಂಭಿಸಿದ ಸಂಸ್ಥೆಗೆ ಜನರ ಉತ್ತಮ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸಿದೆ. ಇದಕ್ಕೆ ಸಿಬ್ಬಂದಿಗಳ ಪರಿಶ್ರಮ ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸುವುದು ಹಾಗೂ ಶಾಖೆಗಳು ಸ್ವಂತ ಕಟ್ಟಡವನ್ನು ಹೊಂದುವಂತೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು. ಸೊಸೈಟಿಯ ನಿರ್ದೇಶಕರಾದ ರಾಘವೇಂದ್ರ ಪೂಜಾರಿ ನಾರಂಬಳ್ಳಿ, ದೇವನ್ ಕೆ .ಪೂಜಾರಿ, ಮಾಲತಿ ಪೂಜಾರಿ, ಪಾರ್ವತಿ ಪೂಜಾರಿ, ಮಾಚಯ್ಯ ಬಿಲ್ಲವ, ಗಿರೀಶ್ ಹೊಳ್ಳ,…

Read More

ಉಡುಪಿ: ಕರ್ನಾಟಕ ಪ್ರಗತಿಪರ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ ಇತ್ತೀಚೆಗೆ ನಡೆಯಿತು. ಸದಸ್ಯರಿಗೆ ಲಾಭಾಂಶದಲ್ಲಿ ಶೇ.9 ಡಿವಿಡೆಂಡ್‌ ಘೋಷಿಲಾಯಿತು. https://chat.whatsapp.com/EbVKVnWB6rlHT1mWtsgbch ಸಹಕಾರಿ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅರುಣ್ ಕುಮಾರ್ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಅರುಣ್ ಕುಮಾರ್ ಮಾತನಾಡಿ, ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು. ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ್ ಕೆ ಸಂಸ್ಥೆ ಬೆಳೆದು ಬಂದ ಹಾದಿಯ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರ ಪೂಜಾರಿ ಸ್ವಾಗತಿಸಿದರು. ನಿರ್ದೇಶಕರಾದ ಗೋಪಾಲ್ ವಿ, ಸುರೇಶ್ ಪೂಜಾರಿ, ಲೋಕೇಶ್ ಪೂಜಾರಿ, ರಮೇಶ್ ಪ್ರಭು, ಉಮೇಶ್ ಪೂಜಾರಿ, ರಾಘವೇಂದ್ರ ಪೂಜಾರಿ, ಗುರುರಾಜ್, ಮಂಜುನಾಥ್ ಪೂಜಾರಿ, ಗಂಗಾಧರ್ ಪೂಜಾರಿ ಭಾಗವಹಿಸಿದ್ದರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಪೂಜಾರಿ ವಂದಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಎಂಸಿಸಿ ಬ್ಯಾಂಕ್‌ ಸುರತ್ಕಲ್ ಶಾಖೆಯಲ್ಲಿ 10ನೇ ಎಟಿಎಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಅನಿಲ್‌ ಲೋಬೊ ಅಭಿಪ್ರಾಯ ಮಂಗಳೂರು: ಎಂಸಿಸಿ ಬ್ಯಾಂಕ್ ಜನರ ಬ್ಯಾಂಕ್ ಆಗಿದ್ದು, ಇದು ಕೇವಲ ಸಿಬ್ಬಂದಿ ಅಥವಾ ನಿರ್ದೇಶಕರಿಗೆ ಮಾತ್ರ ಸೇರದೆ ಗ್ರಾಹಕರು ಮತ್ತು ಎಲ್ಲಾ ಸಮುದಾಯಗಳಿಗೆ ಸೇರಿರುವಂಥದ್ದು. ನಮ್ಮ ಗ್ರಾಹಕರೇ ನಮ್ಮ ಬ್ರಾಂಡ್ ರಾಯಭಾರಿಗಳು ಎಂದು ಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಸಹಕಾರ ರತ್ನ ಅನಿಲ್‌ ಲೋಬೊ ಹೇಳಿದರು. https://chat.whatsapp.com/EbVKVnWB6rlHT1mWtsgbch ಎಂಸಿಸಿ ಬ್ಯಾಂಕ್‌ನ ಸುರತ್ಕಲ್‌ ಶಾಖೆಯಲ್ಲಿ ಭಾನುವಾರ ಬ್ಯಾಂಕಿನ 10ನೇ ಎಟಿಎಂ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂಸಿಸಿ ಬ್ಯಾಂಕ್ ಪ್ರಸ್ತುತ ಹಣಕಾಸು ವರ್ಷದ ಅಂತ್ಯದ ವೇಳೆಗೆ 25 ಶಾಖೆಗಳಿಗೆ ವಿಸ್ತರಿಸುವ ಗುರಿ ಹೊಂದಿದೆ. ಇದರ ಜೊತೆಗೆ, ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿದೆ. ಮುಂದಿನ ದಿನಗಳಲ್ಲಿ ಯುಪಿಐ ಸೇವೆಗಳನ್ನು ಪರಿಚಯಿಸುವ ಯೋಜನೆಗಳಿವೆ. ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾಹಕರು ಮತ್ತು ಸಮುದಾಯದ ಸದಸ್ಯರು ಎಂಸಿಸಿ ಬ್ಯಾಂಕ್‌ಗೆ ನಿರಂತರ ಬೆಂಬಲ ನೀಡಿದ್ದಾರೆ. ಸೇವೆಯಲ್ಲಿ ರಾಜಿ ಮಾಡಿಕೊಳ್ಳದೆ ಉತ್ತಮ…

Read More

ಶೇ.50 ಸುಂಕ ವಿಧಿಸುವ ಅಮೆರಿಕದ ಆದೇಶಕ್ಕೆ ಸೆಡ್ಡು ಹೊಡೆಯಲು ದಿಲೀಪ್‌ ಸಂಘಾನಿ ಕರೆ ಅಮೆರಿಕನ್ ಉತ್ಪನ್ನಗಳನ್ನು ಬಹಿಷ್ಕರಿಸಿ ಆತ್ಮನಿರ್ಭರ ಭಾರತ ಪರಿಕಲ್ಪನೆ ಬೆಂಬಲಿಸಲು ಮನವಿ ನವದೆಹಲಿ: ಭಾರತದ ಮೇಲೆ ಆರ್ಥಿಕವಾಗಿ ಒತ್ತಡ ಹೇರಲು ಅಮೆರಿಕವು ಮಾಡುತ್ತಿರುವ ಪ್ರಯತ್ನಗಳನ್ನು ಖಂಡಿಸಿರುವ ಹಿರಿಯ ಸಹಕಾರಿ ಮುಖಂಡ ದಿಲೀಪ್‌ಸಂಘಾನಿ, ಭಾರತೀಯ ನಾಗರಿಕರು ಅಮೆರಿಕನ್ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ತಮ್ಮ ದೇಶಭಕ್ತಿ ಮತ್ತು ರಾಷ್ಟ್ರೀಯ ಶಕ್ತಿಯನ್ನು ಪ್ರದರ್ಶಿಸುವ ಜೊತೆಗೆ ಭಾರತೀಯರು ಆತ್ಮನಿರ್ಭರ ಪರಿಕಲ್ಪನೆಯ ಮೂಲಕ ಸ್ವಾವಲಂಬಿಯಾಗಲು ಇದು ಸುಸಮಯ ಎಂದು ಹೇಳಿದ್ದಾರೆ. https://chat.whatsapp.com/EbVKVnWB6rlHT1mWtsgbch ಭಾರತೀಯ ಜನ ಪರಿಷತ್ತಿನ ಸಭೆಯಲ್ಲಿ ಮಾತನಾಡಿದ ಸಂಘಾನಿ, ಜಾಗತಿಕ ಶಕ್ತಿಕೇಂದ್ರವಾಗಿ ಬೆಳೆಯುತ್ತಿರುವ ಭಾರತದ ಪ್ರಮುಖ ವಲಯಗಳ ಮೇಲೆ ಪ್ರಭಾವ ಬೀರಲು ಅಮೆರಿಕ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಭಾರತೀಯರು ಅಮೆರಿಕದ ಸರಕುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ಮೂಲಕ ಡೊನಾಲ್ಡ್‌ಟ್ರಂಪ್‌ಹೇರಲು ಹೊರಟಿರುವ ಶೇ.50ರ ಸುಂಕ ನೀತಿಗೆ ಬಲವಾದ ತಿರುಗೇಟು ನೀಡಬೇಕು. ಇದು ಕೇವಲ ಪ್ರತಿಭಟನೆಯಲ್ಲ, ಆದರೆ ಭಾರತದ ಸಾರ್ವಭೌಮತ್ವ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಬಲಪಡಿಸುವ ಕಾರ್ಯತಂತ್ರದ ಕ್ರಮವಾಗಿ…

Read More