ನವದೆಹಲಿ: ಕೇರಳ ರಾಜ್ಯವನ್ನು ಹೊರತುಪಡಿಸಿ ದೇಶದ 35 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳು ಸಹಕಾರ ಸಂಘಗಳ ನೋಂದಣಿ ಕಚೇರಿ (ಆರ್‌ಒಸಿ) ಗಣಕೀಕರಣಕ್ಕೆ ಆಸಕ್ತಿ ತೋರಿಸಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ತಿಳಿಸಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಈ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಸಚಿವಾಲಯವು ಪ್ರಸ್ತಾವನೆಗಳನ್ನು ಪಡೆದುಕೊಂಡಿವೆ ಮತ್ತು ಯೋಜನೆಯನ್ನು ಸುಗಮಗೊಳಿಸಲು 18.22 ಕೋಟಿ ರೂ. (ಅಂದಾಜು) ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಸಹಕಾರ ಸಂಘಗಳ ಕೇಂದ್ರ ನೋಂದಣಿ (ಸಿಆರ್‌ಸಿಎಸ್) ಕಚೇರಿಯ ಡಿಜಿಟಲ್ ರೂಪಾಂತರದೊಂದಿಗೆ, ನೋಂದಣಿ, ಉಪ-ಕಾನೂನುಗಳ ತಿದ್ದುಪಡಿ, ವಾರ್ಷಿಕ ರಿಟರ್ನ್ಸ್ ಸಲ್ಲಿಕೆ, ಶಾಖೆ ತೆರೆಯುವುದು, ಮಾರಾಟ ಅಧಿಕಾರಿಗಳ ನೇಮಕಾತಿ ಮತ್ತು ಸಹಕಾರಿ ಶಿಕ್ಷಣ ನಿಧಿ (ಸಿಇಎಫ್) ಮತ್ತು ಸಹಕಾರಿ ಪುನರ್ವಸತಿ, ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ನಿಧಿ (ಸಿಆರ್‌ಆರ್‌ಡಿಎಫ್)ಗೆ ಆನ್‌ಲೈನ್ ಪಾವತಿಗಳಂತಹ ಪ್ರಮುಖ ಕಾರ್ಯಗಳನ್ನು ಈಗ ಸುಧಾರಿತ ಆನ್‌ಲೈನ್ ಪೋರ್ಟಲ್ ಮೂಲಕ ಸರಾಗವಾಗಿ ನಿರ್ವಹಿಸಲಾಗುತ್ತಿದೆ. ಸಿಆರ್‌ಸಿಎಸ್ ಕಚೇರಿಯ ಗಣಕೀಕರಣವು ಯಶಸ್ವಿಯಾಗಿ ಪೂರ್ಣಗೊಂಡಿದೆ ಮತ್ತು ಅಧಿಕೃತ ಸಿಆರ್‌ಸಿಎಸ್ ಪೋರ್ಟಲ್ (www.crcs.gov.in) ಅನ್ನು ಆಗಸ್ಟ್ 6, 2023ರಂದು ಪ್ರಾರಂಭಿಸಲಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com