Author: admin

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನ ವಾರ್ಷಿಕ ಸಾಮಾನ್ಯ ಸಭೆ ಸೋಮವಾರ ಎಸ್‌ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ. ಎನ್ ರಾಜೇಂದ್ರ ಕುಮಾರ್ ಸಭೆಯಲ್ಲಿ ಮಾರ್ಗದರ್ಶನ ನೀಡಿದರು. ಜಿಲ್ಲಾ ಸಹಕಾರಿ ಯೂನಿಯನ್‌ನ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದ ಅವರು, ಮುಂದೆಯೂ ಹೆಚ್ಚಿನ ರೀತಿಯಲ್ಲಿ ಯೂನಿಯನ್ ಮೂಲಕ ಎಲ್ಲಾ ಸಹಕಾರಿ ಸಂಘಗಳಿಗೆ ಗುಣಮಟ್ಟದ ತರಬೇತಿ ಶಿಕ್ಷಣ ಒದಗಿಸಿ ಸಂಘಗಳ ಆಡಳಿತ ವ್ಯವಸ್ಥೆ ಸುಧಾರಿಸಲು ಸಲಹೆ ನೀಡಿದರು. https://chat.whatsapp.com/EbVKVnWB6rlHT1mWtsgbch ಅಧ್ಯಕ್ಷತೆ ವಹಿಸಿದ ಸಹಕಾರಿ ಯೂನಿಯನ್‌ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಯೂನಿಯನ್‌ನ ವಾರ್ಷಿಕ ವರದಿ ಮಂಡಿಸಿ ಮಾತನಾಡಿ ಈ ವರ್ಷ ಅಂತಾರಾಷ್ಟ್ರೀಯ ಸಹಕಾರ ವರ್ಷಾಚರಣೆ ಆಗಿರುವುದರಿಂದ ಯೂನಿಯನ್ ಮುಖಾಂತರ ಉತ್ತಮ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು, ಇದರಲ್ಲಿ ಎಲ್ಲಾ ಸಹಕಾರಿ ಸಂಘಗಳ ಪ್ರತಿನಿಧಿಗಳು ಭಾಗವಹಿಸಿ ಪ್ರಯೋಜನೆ ಪಡೆಯಬೇಕು ಎಂದು ತಿಳಿಸಿದರು. 2024-25ನೇ ಸಾಲಿನಲ್ಲಿ 7.33 ಲಕ್ಷ ರೂ. ಲಾಭಾಂಶ ಬಂದಿದೆ. ಈ ವರ್ಷ ಯೂನಿಯನ್ನಿನ…

Read More

ಮೂಡುಬಿದಿರೆ: 109ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಮೂಡುಬಿದಿರೆ ಕೋ ಆಪರೇಟಿವ್ ಸರ್ವೀಸ್‌ ಸೊಸೈಟಿಯು 2024-25ನೇ ಸಾಲಿನಲ್ಲಿ 57.33 ಕೋಟಿ ರೂ. ಆದಾಯದೊಂದಿಗೆ 10.42 ಕೋಟಿ ರೂ.ಗೂ ಅಧಿಕ ಲಾಭ ಗಳಿಸಿದ್ದು ತಮ್ಮ ಸಂಸ್ಥೆಯ ಸದಸ್ಯರಿಗೆ ಸತತ 25ನೇ ವರ್ಷವೂ ಶೇ.25 ಡಿವಿಡೆಂಡ್ ನೀಡಿದೆ. https://chat.whatsapp.com/EbVKVnWB6rlHT1mWtsgbch ಮೂಡುಬಿದಿರೆ ಸ್ಕೌಟ್ಸ್‌ ಆ್ಯಂಡ್ ಗೈಡ್ಸ್ ಕನ್ನಡ ಭವನದಲ್ಲಿ ನಡೆದ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊಸೈಟಿ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಈ ವಿಷಯ ತಿಳಿಸಿದರು. ಸದಸ್ಯರ ನಂಬಿಕೆ, ವಿಶ್ವಾಸಾರ್ಹತೆಯ ನೆಲೆಯಲ್ಲಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ಬದ್ಧತೆಯ ಸೇವೆಯಿಂದಾಗಿ ‘ನಮ್ಮ ಸೊಸೈಟಿʼ ಎಂಬ ಅಭಿಮಾನಕ್ಕೆ ಪಾತ್ರವಾಗಿದೆ ಎಂದು ಅವರು ಹೇಳಿದರು. ಸುದರ್ಶನ ಭಟ್ ಲೆಕ್ಕ ಪರಿಶೋಧನಾ ವರದಿ, ಲಾಭಾಂಶ ವಿಂಗಡಣೆ ವರದಿ ಮಂಡಿಸಿದರು. ಮಂಜುನಾಥ ಎಸ್. ಇವರು 2024-25ನೇ ಸಾಲಿನ ಬಜೆಟ್‌ಗಿಂತ ಜಾಸ್ತಿ ಖರ್ಚಾದ ಐವೇಜುಗಳ ಮಂಜೂರು, ಸಂತೋಷ್ ನಾಯ್ಕ 2025-26ನೇ ಸಾಲಿನ ಬಜೆಟ್ ಮಂಡನೆ ಕಲಾಪ ನಡೆಸಿಕೊಟ್ಟರು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ…

Read More

ನವದೆಹಲಿ: ಕೇಂದ್ರ ಸಹಕಾರ ಸಚಿವಾಲಯದ ಮಹತ್ವಾಕಾಂಕ್ಷೆಯ ಸಹಕಾರ್‌ ಟ್ಯಾಕ್ಸಿ ಯೋಜನೆಗೆ ಪೂರಕ ಪ್ರೋತ್ಸಾಹ ಲಭಿಸಿದ್ದು ತ್ವರಿತ ಪ್ರಗತಿಯತ್ತ ದಾಪುಗಾಲಿಟ್ಟಿದೆ. ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆಯಡಿಯಲ್ಲಿ ನೋಂದಾಯಿಸಲಾದ ಸಹಕಾರ್ ಟ್ಯಾಕ್ಸಿ ಭಾರತದ ಮೊದಲ ದೊಡ್ಡ-ಪ್ರಮಾಣದ, ಚಾಲಕ-ಮಾಲೀಕತ್ವದ ರೈಡ್-ಹೇಲಿಂಗ್ ವೇದಿಕೆ ಪ್ರಾರಂಭಿಸುವತ್ತ ಮುನ್ನಡೆಯುತ್ತಿದೆ. https://chat.whatsapp.com/EbVKVnWB6rlHT1mWtsgbch ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (NCDC) ದ ಬೆಂಬಲದೊಂದಿಗೆ ಮತ್ತು ಅಮುಲ್, ಎನ್‌ಎಎಫ್‌ಇಡಿ, ನಬಾರ್ಡ್‌, ಇಫ್ಕೋ, ಕಿಭ್ಕೋ, ಎನ್‌ಡಿಡಿಬಿ ಮತ್ತು ಎನ್‌ಸಿಇಎಲ್‌ನಂತಹ ಪ್ರಮುಖ ಸಹಕಾರಿ ಸಂಸ್ಥೆಗಳಿಂದ ಬೆಂಬಲಿತವಾದ ಈ ಸಹಕಾರಿಯು ಆರಂಭದಲ್ಲಿ ದೆಹಲಿ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದಾದ್ಯಂತ ಕಾರ್ಯನಿರ್ವಹಿಸಲಿದೆ. ಸುಮಾರು 200 ಚಾಲಕರು ಸಹಕಾರ್‌ ಟ್ಯಾಕ್ಸಿಯಲ್ಲಿ ನೋಂದಣಿ ಮಾಡಿದ್ದಾರೆ. ನಾಲ್ಕು ರಾಜ್ಯಗಳಿಂದ ತಲಾ 50 ಚಾಲಕರು ಮತ್ತು ಸಹಕಾರಿಯು ತನ್ನ ಜಾಲವನ್ನು ವಿಸ್ತರಿಸಲು ಇತರ ಸಹಕಾರಿ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ವರದಿಯೊಂದರ ಪ್ರಕಾರ, ಪ್ರವರ್ತಕರು ಈಗಾಗಲೇ 80 ಕೋಟಿ ರೂ. ಪಾವತಿಸಲು ಬದ್ಧರಾಗಿದ್ದಾರೆ. ಉಬರ್ ಮತ್ತು ಓಲಾದಂತಹ ಖಾಸಗಿ ವ್ಯವಸ್ಥೆಗೆ ವ್ಯತಿರಿಕ್ತವಾಗಿ, ಸಹಕಾರ್ ಟ್ಯಾಕ್ಸಿಯನ್ನು ಚಾಲಕರು…

Read More

ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾಡ್ ಅಭಿಪ್ರಾಯ ಹಳೆಯಂಗಡಿ: ಸಹಕಾರಿ ಚಳವಳಿ ಕರಾವಳಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಚಳವಳಿಯನ್ನು ಪ್ರಾರಂಭಿಸಿ ಇಂದು ಸಹಕಾರಿ ರಂಗವು ಬಲಿಷ್ಠವಾಗಿ ಇರಬೇಕಾದರೆ ಸಹಕಾರಿ ಪಿತಾಮಹ ದಿ। ಮೊಳಹಳ್ಳಿ ಶಿವರಾಯರೇ ಕಾರಣ ಎಂದು ಪ್ರಿಯದರ್ಶಿನಿ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಹೇಳಿದರು. ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ ಸೋಮವಾರ ಮೊಳಹಳ್ಳಿ ಶಿವರಾಯರ ೧45ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. https://chat.whatsapp.com/EbVKVnWB6rlHT1mWtsgbch ಪಾವಂಜೆ ಶ್ರೀ ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಬಿ.ಸೂರ್ಯಕುಮಾರ ಅವರು ಮುಖ್ಯ ಅತಿಥಿಯಾಗಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಅವರು ಸ್ವಾಗತಿಸಿ, ಲೆಕ್ಕಿಗರಾದ ಲೋಲಾಕ್ಷಿ ವಂದಿಸಿದರು. ಬ್ಯಾಂಕ್‌ನ ನಿರ್ದೇಶಕರಾದ ಉಮಾನಾಥ್ ಜೆ.ಶೆಟ್ಟಿಗಾರ್, ನವೀನ್ ಸಾಲ್ಯಾನ್ ಪಂಜ, ಶಾಖಾ ಪ್ರಬಂಧಕರಾದ ಪ್ರಜ್ಞಾಶ್ರೀ, ಅಭಿಷ್ಠಾ ಜೈನ್, ಸಿಬ್ಬಂದಿ ಸಿತಾರ ಕೋಟ್ಯಾನ್, ಪ್ರತೀಕ್ ಪಿ., ಅಕ್ಷಯ್, ನಂದಿತಾ ವಿ.ಪದ್ಮಶಾಲಿ, ರೇಷ್ಮಾ ಕುಮಾರಿ, ವಿನಿತಾ ವಿಲ್ಮಾ ಕೈರನ್ನ, ಪ್ರಕಾಶ್ಚಂದ್ರ…

Read More

ಮೊಳಹಳ್ಳಿ ಶಿವರಾವ್‌ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸಹಕಾರ ರತ್ನ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಅಭಿಪ್ರಾಯ ಮಂಗಳೂರು: ಮೊಳಹಳ್ಳಿ ಶಿವರಾವ್‌ ಜನ್ಮದಿನಾಚರಣೆ ಅಂಗವಾಗಿ ಸಹಕಾರಿಗಳು ಇಂದು ತೆಗೆದುಕೊಂಡ ಪ್ರಮಾಣವಚನದಲ್ಲಿ ಬೋಧಿಸಿದಂತೆ ಸಹಕಾರಿಗಳು ನಡೆದುಕೊಂಡರೆ ದೇಶದಲ್ಲೇ ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಿದೆ. ಕರಾವಳಿ ಭಾಗದಲ್ಲಿ ಅದರಲ್ಲೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ಗಟ್ಟಿಯಾಗಿ ತಳವೂರಲು ಕರಾವಳಿ ಸಹಕಾರ ಕ್ಷೇತ್ರದ ಪಿತಾಮಹ ಮೊಳಹಳ್ಳಿ ಶಿವರಾವ್‌ ಅವರು ಹಾಕಿಕೊಟ್ಟ ಗಟ್ಟಿ ಅಡಿಪಾಯ ಕಾರಣ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಕರ್ನಾಟಕ ರಾಜ್ಯ  ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಸಹಕಾರ ರತ್ನ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಅವರು ಹೇಳಿದರು. https://chat.whatsapp.com/EbVKVnWB6rlHT1mWtsgbch ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ದಿ.ಮೊಳಹಳ್ಳಿ ಶಿವರಾವ್‌ ಅವರ 145ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೊಳಹಳ್ಳಿ ಶಿವರಾವ್‌ ಅವರು, ಸಹಕಾರ ಕ್ಷೇತ್ರವಲ್ಲದೆ ಶಿಕ್ಷಣ ಹಾಗೂ ಸ್ಥಳೀಯಾಡಳಿತ ಕ್ಷೇತ್ರಕ್ಕೂ ಕೊಡುಗೆ ಸಲ್ಲಿಸಿದ್ದಾರೆ. ಆ ಕ್ಷೇತ್ರದಲ್ಲೂ ಅನೇಕರನ್ನು ಬೆಳೆಸಿದ್ದಾರೆ. ಆದರೆ ಅವರ ಹೆಸರನ್ನು…

Read More

ಮಂಗಳೂರು: ಸಹಕಾರ ಎಂಬ ಶಬ್ಧದ ಹಿಂದೆ ಬಹಳಷ್ಟು ಅರ್ಥವಿದೆ. ಯಾವುದೇ ಕೆಲಸವಾಗಲಿ ಒಬ್ಬರಿಗೊಬ್ಬರು ಹೆಗಲಿಗೆ ಹೆಗಲು ಜೋಡಿಸಿ ದುಡಿಯುವುದೇ ಸಹಕಾರದ ತತ್ವ. ಒಂದು ಕಾಲದಲ್ಲಿ ನಮ್ಮ ಹಿರಿಯರು ಕೃಷಿ ಕೆಲಸ ಮಾಡುವಾಗ ಹೊಲ -ಗದ್ದೆಗಳಲ್ಲಿ ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡುತ್ತಿದ್ದರು. ಒಂದು ಮನೆಯವರು ಕೃಷಿ ಕೆಲಸದಲ್ಲಿ ತೊಡಗಿದರೆಂದರೆ ಅಕ್ಕಪಕ್ಕದ ಮನೆಯವರು ಅವರಿಗೆ ಜೊತೆಯಾಗುತ್ತಿದ್ದರು. ಸಿಗುವ ಫಸಲನ್ನು ಹಂಚಿ ತಿನ್ನುವ ಕಾಲವದಾಗಿತ್ತು. ಇದುವೇ ಸಹಕಾರ ತತ್ವದ ಮೂಲವಾಗಿತ್ತು. ಈ ತತ್ವದ ಮೂಲವನ್ನೇ ಹಿಡಿದುಕೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಮಹಾನ್‌ ಚೇತನವೊಂದರ ಜನ್ಮವಾಗಿತ್ತು. ಅವರೇ ಕರಾವಳಿ ಭಾಗದಲ್ಲಿ ಸಹಕಾರ ತತ್ವದ ಮಂತ್ರವನ್ನು ಊರಿಂದೂರಿಗೆ ಪಸರಿಸಿದ ಮಹಾನ್‌ ಚೇತನ, ತಮ್ಮ ಸರ್ವಸ್ವವನ್ನೂ ಸಹಕಾರ ಕ್ಷೇತ್ರದ ಏಳಿಗೆಗೆ ಅರ್ಪಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಪಿತಾಮಹ ಮೊಳಹಳ್ಳಿ ಶಿವರಾಯರು. https://chat.whatsapp.com/EbVKVnWB6rlHT1mWtsgbch ಮೊಳಹಳ್ಳಿ ಶಿವರಾಯರು ಕರಾವಳಿ ಭಾಗದಲ್ಲಿ ಸಹಕಾರ ಚಳುವಳಿಯ ಹರಿಕಾರರು. ಸಹಕಾರ ತತ್ವ, ಸಹಕಾರ ಮಂತ್ರವನ್ನು ತನ್ನ ಜೀವಿತಾವಧಿಯ ಕೊನೆಯವರೆಗೂ…

Read More

ಎಂಸಿಸಿ ಬ್ಯಾಂಕ್‌ ಬೈಂದೂರು ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಧರ್ಮಗುರು ವಂದನೀಯ ವಿನ್ಸೆಂಟ್‌ ಕುವೆಲ್ಲೋ ಅಭಿಪ್ರಾಯ ಬೈಂದೂರು: ಎಂಸಿಸಿ ಬ್ಯಾಂಕ್‌ ಜನರಲ್ಲಿ ಜಾತಿ, ಧರ್ಮ, ಭೇದ ನೋಡದೆ ತಮ್ಮ ಗ್ರಾಹಕರಿಗೆ ವಿಶೇಷ ಆದ್ಯತೆ ನೀಡುತ್ತಿದ್ದು ಸಮಾಜಮುಖಿ ಕೆಲಸಗಳಿಂದ ಗುರುತಿಸಿಕೊಂಡಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ನಂಬಿಕೆ, ಪ್ರೀತಿ, ವಿಶ್ವಾಸ ಗಳಿಸಿ ಆದರ್ಶ ಬ್ಯಾಂಕ್‌ ಆಗಿ ಗುರುತಿಸಿಕೊಂಡಿದೆ ಎಂದು ಬೈಂದೂರು ಹೋಲಿಕ್ರಾಸ್‌ ಚರ್ಚ್‌ನ ಧರ್ಮಗುರು ವಂದನೀಯ ವಿನ್ಸೆಂಟ್‌ ಕುವೆಲ್ಲೋ ಹೇಳಿದರು. ಬೈಂದೂರಿನಲ್ಲಿ ಭಾನುವಾರ ಎಂಸಿಸಿ ಬ್ಯಾಂಕಿನ ನೂತನ ೨೦ನೇ ಶಾಖೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. https://chat.whatsapp.com/EbVKVnWB6rlHT1mWtsgbch ಎಂಸಿಸಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್‌ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ, 113 ವರ್ಷಗಳ ಇತಿಹಾಸ ಹೊಂದಿರುವ ಎಂಸಿಸಿ ಬ್ಯಾಂಕ್ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಶಾಖೆಗಳನ್ನು ಆರಂಭಿಸುವ ಮೂಲಕ ಜನರ ಬಳಿಗೆ ಹೋಗಿ ಸೇವೆ ಮಾಡುತ್ತಿದೆ. ಕೇವಲ ಲಾಭದ ದೃಷ್ಟಿಗಿಂತ ಮುಖ್ಯವಾಗಿ ಸೌಹಾರ್ದ, ಸಾಮರಸ್ಯ ಜೀವನದ ತತ್ವಗಳನ್ನು ಅಳವಡಿಸಿಕೊಂಡು ಸೇವೆಗೆ ಹೆಚ್ಚು ಮಹತ್ವ…

Read More

ಉಡುಪಿ: ಡಿಜಿಟಲ್ ಪರಿವರ್ತನೆಯತ್ತ ಇನ್ನೊಂದು ಹೆಜ್ಜೆ ಇಟ್ಟಿರುವ ಉಡುಪಿ ಸಿಂಡಿಕೇಟ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ನೂತನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಯುನಿಗ್ಸ್ (UNIGS) ಅನ್ನು ಆಗಸ್ಟ್ 1, 2025ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದರ ಮೂಲಕ ಸದಸ್ಯರಿಗೆ ಸುಲಭ, ಸುರಕ್ಷಿತ ಹಾಗೂ ಬಳಕೆದಾರ ಸ್ನೇಹಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವಲ್ಲಿ ಮಹತ್ವದ ಹೆಜ್ಜೆ ಇಟ್ಟಂತಾಗಿದೆ. https://chat.whatsapp.com/EbVKVnWB6rlHT1mWtsgbch ಈ ಹೊಸ ಯುನಿಗ್ಸ್ ಆಪ್‌ನ ಮೂಲಕ ಸದಸ್ಯರು ತಮ್ಮ ಖಾತಾ ವಿವರಗಳನ್ನು ನೇರವಾಗಿ ಮೊಬೈಲ್‌ನಲ್ಲಿ ನೋಡಬಹುದಾಗಿದೆ. ಈ ಆಪ್‌ನಲ್ಲಿ ರಿಯಲ್-ಟೈಂ ಬ್ಯಾಲೆನ್ಸ್ ಎಂಕ್ವೈರಿ, ವ್ಯವಹಾರ ಇತಿಹಾಸ, ತಕ್ಷಣದ ನವೀಕರಣಗಳಂತೆ ಅನೇಕ ವೈಶಿಷ್ಟ್ಯಗಳಿವೆ. ಜೊತೆಗೆ ಸದಸ್ಯರು ಮಹತ್ವದ ಸೂಚನೆಗಳನ್ನು ಪಡೆಯಬಹುದಾಗಿದ್ದು, ಗೂಗಲ್ ಪೇ ಮತ್ತು ಫೋನ್‌ಪೇಯಂತಹ ಪ್ಲಾಟ್‌ ಫಾರ್ಮ್‌ಗಳಿಂದ ನೇರವಾಗಿ ತಮ್ಮ ಕೋ-ಆಪರೇಟಿವ್ ಖಾತೆಗೆ ಹಣ ವರ್ಗಾಯಿಸಬಹುದಾಗಿದೆ. ಈ ಆಪ್ ಅನ್ನು ಈಗ ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ. ಸಂಸ್ಥೆಯ ನಿರ್ವಹಣಾ ಮಂಡಳಿ ಈ ಯೋಜನೆಯು…

Read More

ಮಂಗಳೂರು: ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಂಸಿಸಿ ಬ್ಯಾಂಕ್‌ನ 20ನೇ ಶಾಖೆ ಬೈಂದೂರಿನಲ್ಲಿ ಆಗಸ್ಟ್‌ 3ರಂದು ಉದ್ಘಾಟನೆಗೊಳ್ಳಲಿದೆ. https://chat.whatsapp.com/EbVKVnWB6rlHT1mWtsgbch ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಬೈಂದೂರಿನ ಹೋಲಿಕ್ರಾಸ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ವಿನ್ಸೆಂಟ್ ಕುವೆಲ್ಲೊ ಶಾಖೆಯನ್ನು ಆಶೀರ್ವದಿಸಲಿದ್ದಾರೆ. ಬೈಂದೂರಿನ ಶಾಸಕ ಗುರುರಾಜ್ ಗಂಟಿಹೊಳೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಾಬು ಶೆಟ್ಟಿ, ಬೈಂದೂರು ಸೇಂಟ್ ಥಾಮಸ್ ರೆಸಿಡೆನ್ಸಿಯಲ್ ಸ್ಕೂಲ್‌ನ ಪ್ರಾಂಶುಪಾಲ ವಂದನೀಯ ಫಿಲಿಪ್ ನೆಲಿವಿಲ್ಲ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯ ಸದಾಶಿವ ಡಿ.ಪಡುವರಿ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಪ್ಸಿನೂರ್ ಮೊಹಮ್ಮದ್, ನಾಡದೋಣಿ ರಾಜ್ಯ ಸಂಘದ ಅಧ್ಯಕ್ಷ ನಾಗೇಶ್ ಖಾರ್ವಿ, ಬೈಂದೂರಿನ ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ. ಗೌರವ…

Read More

ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಆರನೇ ವರ್ಷದ ಸ್ಥಾಪನಾ ದಿನದ ಅಂಗವಾಗಿ ಅಶಕ್ತರಿಗೆ ವೀಲ್‌ಚೇರ್ ಕೊಡುಗೆ ನೀಡಲು ಉದ್ದೇಶಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಮಂಗಳೂರು ತಾಲೂಕಿನ ಆರ್ಥಿಕವಾಗಿ ಹಿಂದುಳಿದ, ಸ್ವತಂತ್ರವಾಗಿ ನಡೆದಾಡಲೂ ತೀವ್ರ ತೊಂದರೆ ಅನುಭವಿಸುತ್ತಿರುವ ಹಾಗೂ ಸ್ವಂತ ಹಣದಲ್ಲಿ ಕೊಳ್ಳಲು ಅಶಕ್ತರಾಗಿರುವವರಿಗೆ ವೀಲ್‌ಚೇರ್‌ಗಳನ್ನು ನೀಡಲಾಗುತ್ತಿದೆ. ಅವಶ್ಯಕತೆ ಇದ್ದವರು ಆಗಸ್ಟ್ 15ರೊಳಗೆ ಸೊಸೈಟಿಯನ್ನು ಸಂಪರ್ಕಿಸಬಹುದು. ಮೊದಲು ನೋಂದಾಯಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಎಂ.ಎಸ್‌ ಗುರುರಾಜ್ ತಿಳಿಸಿದ್ದಾರೆ. ಸಂಪರ್ಕಿಸಲು ಮೊಬೈಲ್‌ ನಂಬರ್‌: 9845032598. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More