Author: admin

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ವಾರ್ಷಿಕ ಮಹಾಸಭೆಯು ಭಾನುವಾರ ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನವನದ ಬಳಿ ಇರುವ “ಸ್ಪರ್ಶಾ ಕಲಾ ಮಂದಿರ”ದಲ್ಲಿ ಸಂಘದ ಅಧ್ಯಕ್ಷರಾದ ಸುರೇಶ ಕುಲಾಲ್‌ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಮಹಾಸಭೆಯಲ್ಲಿ 2025-26ನೇ ಸಾಲಿಗೆ ಶೇ.15ರಂತೆ ಡಿವಿಡೆಂಡ್ ನೀಡಲು ನಿರ್ಧರಿಸಲಾಯಿತು. https://chat.whatsapp.com/FCEnlTkAKCC0MGPhXtX4i4 ಸಂಘದಲ್ಲಿ 9,319 ಸದಸ್ಯರಿದ್ದು ಪಾಲು ಬಂಡವಾಳ ರೂ. 8.28 ಕೋಟಿ, ಠೇವಣಾತಿಗಳು ರೂ. 264.07 ಕೋಟಿ, ನಿಧಿಗಳು 22.63 ಕೋಟಿ, ವಿನಿಯೋಗಗಳು 57.84 ಕೋಟಿ, ಸಾಲಗಳು ರೂ. 250.14 ಕೋಟಿ, ವಸೂಲಾತಿ ಶೇಕಡ 95.01 ಆಗಿರುತ್ತದೆ. 2025-26ನೇ ಸಾಲಿನಲ್ಲಿ ರೂ. 1435.15 ಕೋಟಿ ವ್ಯವಹಾರ ನಡೆಸಿ ರೂ. 5.00 ಕೋಟಿ ಲಾಭ ಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. 297.71 ಕೋಟಿ ಆಗಿರುತ್ತದೆ. ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಲಭಿಸಿದೆ. ಉಪಾಧ್ಯಕ್ಷರಾದ ಜನಾರ್ಧನ ಕುಲಾಲ್ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಬಿ.ರಮೇಶ್ ಸಾಲ್ಯಾನ್, ಸತೀಶ, ಸುರೇಶ್ ಎನ್., ರಮೇಶ್ ಸಾಲ್ಯಾನ್, ಅರುಣ್ ಕುಮಾರ್, ಭೋಜ…

Read More

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ ಮಂಗಳೂರು ಇದರ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಶೇಷ ಗೌರವಾರ್ಪಣೆ ಕಾರ್ಯಕ್ರಮವನ್ನು ಸಂಘದ ಎಲ್ಲಾ ಶಾಖೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರನ್ನು ಗೌರವಿಸುವ ಮೂಲಕ ಆಚರಿಸಲಾಯಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ವಿಶೇಷ ಗೌರವಾರ್ಪಣೆ ಕಾರ್ಯಕ್ರಮಕ್ಕೆ ಪ್ರಧಾನ ಕಚೇರಿಯಲ್ಲಿ ಚಾಲನೆ ನೀಡಿದರು. ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಹಾಗೂ ಸಂಘದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸುಮಾರು 50ಕ್ಕೂ ಮಿಕ್ಕಿ ಅಂಗನವಾಡಿ ಕಾರ್ಯಕರ್ತರಿಗೆ ಸಂಘದ ಎಲ್ಲಾ ಶಾಖೆಗಳಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷವಾಗಿ ಗೌರವಾರ್ಪಣೆ ಮಾಡಲಾಯಿತು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಆರ್ಥಿಕ ವ್ಯವಹಾರದ ಜೊತೆಜೊತೆಗೆ ತನ್ನನ್ನು ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ಜೋಡಿಸಿಕೊಂಡು ಮುನ್ನಡೆಯುತ್ತಿದೆ. ಅದರೊಂದಿಗೆ ವಿವಿಧ ದಿನಾಚರಣೆಗಳನ್ನು ಕೂಡ ಅರ್ಥಪೂರ್ಣವಾಗಿ ಆಯೋಜಿಸಿಕೊಂಡು ಬರುತ್ತಿರುವುದು ಸಂಘದ ವಿಶೇಷತೆಗಳಲ್ಲೊಂದಾಗಿದೆ.

Read More

ಬೆಂಗಳೂರು: ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ನಿಯಮಿತ ಬೆಂಗಳೂರು ಇದರ 10ನೇ ವಾರ್ಷಿಕ ಮಹಾಸಭೆಯು ಭಾನುವಾರ ಚಿಕ್ಕಬಾಣಾವರದ ಊರ ಬಸವಣ್ಣ ದೇವಸ್ಥಾನ ಆವರಣದಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಲೋಕೇಶ್ ಎಸ್ ಎಸ್, ಮಾತನಾಡಿ ಸಹಕಾರಿಯು ಒಟ್ಟು 928 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 4.97 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಮಾಹಿತಿ ನೀಡಿದರು. ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ಸಂಗವು 2017ರಲ್ಲಿ ಆರಂಭಗೊಂಡು ಪಾರದರ್ಶಕ ಆಡಳಿತ ನಡೆಸುತ್ತಿದೆ ಎಂದು ತಿಳಿಸಿದ ಯೋಗಾನಂದ ಮೂರ್ತಿ ಎನ್, ಮುಂದಿನ ಸಾಲಿನ ಅಂದಾಜು ಆಯವ್ಯಯ ಮಂಡಿಸಿದರು. ಮಹಾಸಭೆಯಲ್ಲಿ ನಿರ್ದೇಶಕರಾದ ಕೈಲಾಸ್ ಮೂರ್ತಿ ಜಿ.ಎಸ್, ಶಿವಗಂಗಾಧರ್ ಯು, ಲಕ್ಷ್ಮೀಪತಿ ಕೆ, ಬಸವರಾಜು, ಶೋಭಾ, ಪುಷ್ಪಲತಾ ಎಚ್., ಗಾಯತ್ರಿ ಮತ್ತು ಗೀತಾ ಮತ್ತಿತರರು ಉಪಸ್ಥಿತರಿದ್ದರು. ಪುಟಾಣಿ ಮಕ್ಕಳ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಪಡೆದ ಆರು…

Read More

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ವಿಟ್ಲ: ಸಿಬ್ಬಂದಿಯ ಅರ್ಪಣಾ ಮನೋಭಾವದಿಂದ ಸಂಘವು ಯಶಸ್ವಿಯಾಗಿ ಮುನ್ನಡೆದಿದೆ. ಸೇವೆಯೇ ಸಾಧನೆಯಾಗಬೇಕು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ರೈತರ ಒಳಿತಿಗಾಗಿ ಶ್ರಮಿಸುತ್ತಿದೆ. ಸಹಕಾರಿ ಸಂಘದ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು. https://chat.whatsapp.com/FCEnlTkAKCC0MGPhXtX4i4 ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಭಾನುವಾರ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 15ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಅವರು ಅನುಗ್ರಹ ಸಂದೇಶ ನೀಡಿದರು. ಸಾಧ್ವಿ ಶ್ರೀ ಮಾತಾನಂದಮಯೀ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವಚನ ನೀಡಿ, ಗುರುಗಳ ಸಂಕಲ್ಪದಿಂದ ಸಹಕಾರಿ ಸಂಘವು ಅತ್ಯಂತ ವೇಗವಾಗಿ 24 ಶಾಖೆಗಳನ್ನು ತೆರೆಯಲು ಸಾಧ್ಯವಾಗಿದೆ. ಸಮರ್ಥ ನಾಯಕತ್ವದ ಅಧ್ಯಕ್ಷರು, ನಿರ್ದೇಶಕ ಮಂಡಳಿ, ಸಿಇಒ ಮತ್ತು ಸಿಬ್ಬಂದಿಗಳ ಶ್ರಮದಿಂದ ಸಂಘ ಅಭಿವೃದ್ಧಿ ಹೊಂದಿರುವುದು ಸಂತಸವಾಗಿದೆ ಎಂದರು. ಸಂಘದ ಅಧ್ಯಕ್ಷ ಸಹಕಾರ ರತ್ನ ಎ. ಸುರೇಶ್ ರೈ ಅಧ್ಯಕ್ಷತೆ ವಹಿಸಿ, ಮಾತನಾಡಿ,…

Read More

ಮಂಗಳೂರು: ಸಹಕಾರಿ ರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಶ್ರೀಶಾ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿಯ ಸುಸಜ್ಜಿತ 6ನೇ ಶಾಖೆ ಪದವಿನಂಗಡಿ -ಬೋಂದೆಲ್ ಚರ್ಚ್ ಸನಿಹದ ಸನ್ನಿಧಿ ಎನ್‌ಕ್ಲೇವ್ ಕಟ್ಟಡದಲ್ಲಿ ಭಾನುವಾರ ಉದ್ಘಾಟನೆಗೊಂಡಿತು. https://chat.whatsapp.com/FCEnlTkAKCC0MGPhXtX4i4 ಧರ್ಮಗುರು ವಂ| ಬೇಸಿಲ್ ವಾಸ್ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಶ್ರೀಶಾ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಮೂಲಕ ವೈದ್ಯಕೀಯ ನೆರವು, ವಿದ್ಯಾರ್ಥಿವೇತನ ನೀಡುವಂತಹ ಸೇವಾ ಕಾರ್ಯಗಳು ಶ್ಲಾಘನೀಯ. ಸೊಸೈಟಿಯು ಬೆಳೆದು ಮತ್ತಷ್ಟು ಶಾಖೆಗಳನ್ನು ಪ್ರಾರಂಭಿಸಿ ಅತ್ಯುತ್ತಮ ಸೇವೆ ನೀಡುವಂತಾಗಲಿ ಎಂದರು. ಸದಸ್ಯರಿಗೆ ಶೇ. 25 ಡಿವಿಡೆಂಡ್: ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್. ಗುರುರಾಜ್ ಮಾತನಾಡಿ, 2019ರಲ್ಲಿ ಮಂಗಳೂರಿನ ಉರ್ವಸ್ಟೋರ್ ಬಳಿಯ ರಘು ಬಿಲ್ಡಿಂಗ್ ನಲ್ಲಿ ಆರಂಭವಾದ ಶ್ರೀಶಾ ಸೊಸೈಟಿಯು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯ ಪರಿಶ್ರಮ ಹಾಗೂ ನಗುಮುಖದ ಸೇವೆಯಿಂದ ಏಳು ವರ್ಷಗಳಲ್ಲಿ ಆರನೇ ಶಾಖೆ ತೆರೆಯಲು ಸಾಧ್ಯವಾಯಿತು. ಸಂಸ್ಥೆಯು ಆರೋಗ್ಯ, ಶಿಕ್ಷಣ, ಸೈನ್ಯ ದ ಕುರಿತು ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಸೊಸೈಟಿಯು ಆರಂಭದ ವರ್ಷದಿಂದಲೂ ನಿವ್ವಳ ಲಾಭ…

Read More

ಮಂಗಳೂರು: ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಸೆ.8ರಂದು ಬೆಳಗ್ಗೆ 9.30ಕ್ಕೆ ಕೊಟ್ಟಾರಚೌಕಿಯ ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಕೋ ಆಪರೇಟಿವ್ ಸೊಸೈಟಿಯ ಪಾಲ್ಕೆ ಬಾಬುರಾಯ ಆಚಾರ್ಯ ಸಭಾಂಗಣದಲ್ಲಿ ಭಾಷಣ ಸ್ಪರ್ಧೆ ಆಯೋಜಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಸಂಸ್ಥೆಯ ಸಂಸ್ಥಾಪಕರಾದ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯರ ಜೀವನ ಮತ್ತು ಮೌಲ್ಯಗಳು ಎನ್ನುವ ವಿಚಾರದಲ್ಲಿ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ವಿಭಾಗ ಹಾಗೂ ಮುಕ್ತ ವಿಭಾಗದಲ್ಲಿ ಸಾರ್ವಜನಿಕರಿಗೆ ಸ್ಪರ್ಧೆ ನಡೆಯಲಿದೆ. ಭಾಷಣದ ಅವಧಿ 3 ನಿಮಿಷವಾಗಿದ್ದು, ಭಾಷಣ ಸ್ವಯಂ ರಚಿತವಾಗಿರಬೇಕು. ನೋಂದಣಿಗೆ ಸೆ.5 ಅಂತಿಮ ದಿನವಾಗಿದ್ದು ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ. ನೋಂದಾಯಿಸಿದ ಮೊದಲ 25 ಮಂದಿಗೆ ಪ್ರಥಮ ಆದ್ಯತೆಯಾಗಿದ್ದು, ಪ್ರಥಮ 5 ಸಾವಿರ ರೂ.ಮತ್ತು ಸ್ಮರಣಿಕೆ, ದ್ವಿತೀಯ 3 ಸಾವಿರ ರೂ.ಮತ್ತು ಸ್ಮರಣಿಕೆ, ತೃತೀಯ 2 ಸಾವಿರ ರೂ. ಮತ್ತು ಸ್ಮರಣಿಕೆ ಇರಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Read More

ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಮೂಡುಬಿದಿರೆಯ ಕನ್ನಡ ಭವನದಲ್ಲಿ ಸುಭಾಶ್ಚಂದ್ರ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಜನ್ಯ ಡಿ. ಶೆಟ್ಟಿ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಇವರು, 2025-26ನೇ ಸಾಲಿನಲ್ಲಿ ಸಂಘವು ₹81.68 ಕೋಟಿ ವಹಿವಾಟು ನಡೆಸಿದ್ದು, ₹57.09 ಲಕ್ಷ ಲಾಭ ಗಳಿಸಿದೆ. ಪ್ರಸ್ತುತ ₹33.47 ಲಕ್ಷ ಪಾಲು ಬಂಡವಾಳ ಹೊಂದಿದ್ದು, ಒಟ್ಟು 3608 ಸದಸ್ಯರನ್ನು ಹೊಂದಿದೆ.ಒಟ್ಟು ₹10.99 ಕೋಟಿ ಠೇವಣಿ ಸಂಗ್ರಹವಾಗಿದ್ದು, ₹ 8.76 ಕೋಟಿ ಸಾಲ ವಿತರಿಸಲಾಗಿದೆ. ಸಾಲ ವಸೂಲಾತಿ ಪ್ರಮಾಣ 98.94%ರಷ್ಟಿದ್ದು, ಈ ಸಾಲಿನಲ್ಲಿಯೂ ಸಂಘಕ್ಕೆ ಆಡಿಟ್ ವರ್ಗಿಕರಣದಲ್ಲಿ ಎ ದರ್ಜೆ ದೊರೆತಿದೆ. ಸದಸ್ಯರಿಗೆ ಶೇ.12 ಡಿವಿಡೆಂಡ್ ನೀಡುತ್ತಾ ಬರುತ್ತಿದ್ದೇವೆ ಎಂದು ಹೇಳಿದರು. ಸಹಕಾರಿಯು 1 ಕೋಟಿ 11 ಲಕ್ಷ ವೆಚ್ಚದ ಸ್ವಂತ ಸುಸಜ್ಜಿತ ಹವಾನಿಯಂತ್ರಿತ ಕಚೇರಿಯನ್ನು ನಿರ್ಮಾಣ ಮಾಡಿರುವುದು ಬಹಳ…

Read More

ಹಳೆಯಂಗಡಿ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ವಾರ್ಷಿಕ ಮಹಾಸಬೆಯಲ್ಲಿ ಘೋಷಿಸಿದಂತೆ, ಸಹಕಾರಿ ದಿಗ್ಗಜ ದಿವಂಗತ ಎಚ್ ನಾರಾಯಣ ಸನಿಲ್ ಮರಣೋತ್ತರ ಸಹಾಯ ನಿಧಿಯನ್ನು ಸ್ಥಾಪಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಈ ನಿಧಿಯ ಅನ್ವಯ ಸೊಸೈಟಿಯಲ್ಲಿ ಸದಸ್ಯರಾಗಿದ್ದ ವ್ಯಕ್ತಿಗಳು ಮರಣ ಹೊಂದಿದ್ದಲ್ಲಿ ಅವರ ವಾರಿಸುದಾರರಿಗೆ ಮೃತರ ಮೃತದೇಹ ಸಂಸ್ಕಾರಕ್ಕೆ ರೂಪಾಯಿ 10,000/- ಮೊತ್ತವನ್ನು ಸಹಾಯರೂಪವಾಗಿ ನೀಡಲಾಗುವುದು ಎಂದು ಸೊಸೈಟಿಯ ಅಧ್ಯಕ್ಷರಾದ ಎಚ್ ವಸಂತ ಬರ್ನಾಡ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಳೆಯಂಗಡಿಯ ಎಚ್ ನಾರಾಯಣ ಸನಿಲ್ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀಡಿದ ಸಹಕಾರಿ ಸೇವೆಯನ್ನು ಅಜರಾಮರವಾಗಿ ಇರಿಸುವ ಉದ್ದೇಶದಿಂದ ಈ ಉತ್ಕೃಷ್ಟ ಯೋಜನೆಗೆ ಇವರ ಹೆಸರನ್ನು ನೀಡಲಾಗಿದ್ದು, ನಾರಾಯಣ ಸನಿಲ್ ಅವರ ಆದರ್ಶಗಳು ಮುಂದಿನ ಪೀಳಿಗೆಗೂ ಅನುಕರಣವಾಗಲಿ ಎಂದು ಈ ಹೆಸರನ್ನು ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

Read More

29.50 ಕೋಟಿ ರೂ. ಒಟ್ಟು ವ್ಯವಹಾರ; 8ನೇ ವಾರ್ಷಿಕ ಮಹಾಸಭೆಯಲ್ಲಿ ಶೇ.10ರಷ್ಟು ಲಾಭಾಂಶ ಘೋಷಣೆ ರಾಯಚೂರು: ರಾಯಚೂರು ನಗರದ ಮಾಣಿಕ ಪ್ರಭು ಲೇಔಟ್‌ನಲ್ಲಿರುವ ಮಾಣಿಕ ಪ್ರಭು‌ ಅಂಧ ಮಕ್ಕಳ ಶಾಲೆಯಲ್ಲಿ ವೀರಶೈವ ವಿಕಾಸ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ 8ನೇ ವಾರ್ಷಿಕ ಸರ್ವ ಸದಸ್ಯರ ಮಹಾಸಭೆ ಅಧ್ಯಕ್ಷರಾದ ಪ್ರಭುದೇವರು ಹೆಚ್.ಎಂ. ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು. https://chat.whatsapp.com/FCEnlTkAKCC0MGPhXtX4i4 ಸಹಕಾರಿ ಪಿತಾಮಹ ಸಿದ್ದನಗೌಡ ಸಣ್ಣ ರಾಮನಗೌಡ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮತ್ತು ಅಂಧ ಮಕ್ಕಳ‌ ಶಾಲೆಯ ವಿದ್ಯಾರ್ಥಿಗಳ ಪ್ರಾಥನೆ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಾಸಭೆಯಲ್ಲಿ ಸಂಸ್ಥೆಯ ವಾರ್ಷಿಕ ಆರ್ಥಿಕ ಪ್ರಗತಿಯ ವಿವರಗಳನ್ನು ಮಂಡಿಸಲಾಗಿದ್ದು, ಸಹಕಾರಿಯು ಪ್ರಸಕ್ತ ಸಾಲಿನಲ್ಲಿ 26 ಲಕ್ಷ 90 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯ ಒಟ್ಟು ವ್ಯವಹಾರ 29 ಕೋಟಿ 50 ಲಕ್ಷ ರೂ. ತಲುಪಿದೆ. ಸಹಕಾರಿಯ ಠೇವಣಿ 16 ಕೋಟಿ 37 ಲಕ್ಷ ರೂ. ಆಗಿದ್ದು, ಸದಸ್ಯರಿಗೆ ನೀಡಿರುವ ಸಾಲದ ಮೊತ್ತ…

Read More

ಮೂಡುಬಿದಿರೆ: ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ಮೂಡುಬಿದಿರೆ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ಉಚಿತ ವೈದ್ಯಕೀಯ ಶಿಬಿರವು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೊಡಂಗಲ್ಲು ರಾಣೆಯಾರ್ ಸಭಾಭವನದಲ್ಲಿ ಭಾನುವಾರ ನಡೆಯಿತು. https://chat.whatsapp.com/FCEnlTkAKCC0MGPhXtX4i4 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್‌ ಜನಸ್ನೇಹಿ ಸೇವೆ ನೀಡಿ ಅಲ್ಪಾವಧಿಯಲ್ಲೇ ಪ್ರಗತಿ ಸಾಧಿಸಿದ ಪ್ರಿಯದರ್ಶಿನಿ ಸೊಸೈಟಿ ಸಾಮಾಜಿಕ ಸೇವೆಗಳಲ್ಲೂ ತೊಡಗಿಸಿಕೊಂಡಿರುವುದು ಶ್ಲಾಘನಾರ್ಹ ಕಾರ್ಯ. ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದರು. ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡು ಮಾತನಾಡಿ, ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ತನ್ನ ಲಾಭಾಂಶದಲ್ಲಿ ಜನಪರ ಸೇವೆ ಮಾಡುತ್ತಾ ಬಂದಿದೆ. ಮೂಡುಬಿದಿರೆ ಶಾಖೆಯು ಉತ್ತಮ ಅಭಿವೃದ್ಧಿ ಕಾಣುತ್ತಿದ್ದು ಸೊಸೈಟಿಯ ಐದನೇ ಶಾಖೆ ಶೀಘ್ರದಲ್ಲಿ ಉಡುಪಿಯಲ್ಲಿ ಆರಂಭವಾಗಲಿದೆ ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಡಾ.ಆಶೀರ್ವಾದ್, ದೇವಾಡಿಗರ ಸುಧಾರಕರ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ, ಪುರಸಭೆ ಮಾಜಿ ಸದಸ್ಯರಾದ ಕೊರಗಪ್ಪ, ರೂಪಾ ಸಂತೋಷ್ ಶೆಟ್ಟಿ, ಯುವವಾಹಿನಿ ಅಧ್ಯಕ್ಷ…

Read More