Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ನಾಯಕತ್ವ ಅಭಿವೃದ್ದಿ ತರಬೇತಿ, ಅಧ್ಯಯನ ಪ್ರವಾಸ
    News

    ನಾಯಕತ್ವ ಅಭಿವೃದ್ದಿ ತರಬೇತಿ, ಅಧ್ಯಯನ ಪ್ರವಾಸ

    adminBy adminMarch 25, 2025

    ಶಿಕಾರಿಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಕಾರ್ಯಕ್ರಮ

    ಶಿವಮೊಗ್ಗ: ನ್ಯಾಶನಲ್‌ ಸೆಂಟರ್‌ ಫಾರ್‌ ಕೋ ಆಪರೇಟಿವ್‌ ಎಜುಕೇಶನ್‌(ಎನ್‌ಸಿಸಿಇ), ತೋಟಗಾರಿಕಾ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಶಿಕಾರಿಪುರ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘ ಶಿಕಾರಿಪುರ ಇವರ ಸಂಯುಕ್ತ ಆಶ್ರಯದಲ್ಲಿ ಶಿಕಾರಿಪುರ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮತ್ತು ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಎರಡು ದಿನಗಳ ನಾಯಕತ್ವ ಅಭಿವೃದ್ದಿ ತರಬೇತಿ ಹಾಗೂ ಒಂದು ದಿನದ ಅಧ್ಯಯನ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

    https://chat.whatsapp.com/EbVKVnWB6rlHT1mWtsgbch
    ಶಿಕಾರಿಪುರ ಅರ್ಬನ್‌ ಬ್ಯಾಂಕ್‌ನ ರಜತ ಭವನದಲ್ಲಿ ಹಮ್ಮಿಕೊಂಡ ತರಬೇತಿ ಶಿಬಿರವನ್ನು ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ, ಸಹಕಾರ ರತ್ನ ಡಾ.ಬಿ.ಡಿ.ಭೂಕಾಂತ್‌ ಉದ್ಘಾಟಿಸಿದರು. ತೋಟಗಾರಿಕಾ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಅಧ್ಯಕ್ಷ ಅಧ್ಯಕ್ಷ ಸಂಗಪ್ಪ ಎಚ್‌ ಅಧ್ಯಕ್ಷತೆ ವಹಿಸಿದ್ದರು.

    ಶಿವಮೊಗ್ಗ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್‌ ಕಲ್ಮನೆ, ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಂ.ಬಿ ಚೆನ್ನವೀರಪ್ಪ, ನಿರ್ದೇಶಕ ಡಿ.ಎಲ್‌ ಬಸವರಾಜ್‌, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಉಪಾಧ್ಯಕ್ಷೆ ಶಾಂತಲಾ ಭೂಕಾಂತ್, ನಿರ್ದೇಶಕರಾದ ಮಂಗಳಾ ವಿಶ್ವೇಶ್ವರಯ್ಯ, ಕವಿತಾ ಸುರೇಶ್, ಶಶಿಕಲಾ ರುದ್ರೇಶ್, ಶಿವಮ್ಮ ಬಸವರಾಜಪ್ಪ, ಕರ್ನಾಟಕ ರಾಜ್ಯ ಚಲನಚಿತ್ರ & ಲಲಿತಕಲಾ ಮಹಾಮಂಡಳ ನಿರ್ದೇಶಕರಾದ ಮೀನಾಕ್ಷಿ ಚಂದ್ರಪ್ಪ, ಲಲಿತಮ್ಮ ಶಿವಪ್ಪ, ಕರ್ನಾಟಕ ರಾಜ್ಯ ಪರಿಸರ, ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ.ಲೋಕೇಶ್ವರ, ಟಿ.ಎ.ಪಿ.ಸಿ.ಎಂ.ಎಸ್, ಶಿಕಾರಿಪುರ ಅಧ್ಯಕ್ಷ ಸುಧೀರ್‌, ಶಿಕಾರಿಪುರ ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಲೋಹಿತ್ ಕುಮಾರ್, ಶಿಕಾರಿಪುರ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಮಲ್ಲಣ್ಣಾರ್ಯ ಹೊನ್ನಶೆಟ್ಟರ್, ಮ್ಯಾಮ್ಕೋಸ್‌ ಶಿವಮೊಗ್ಗ ನಿರ್ದೇಶಕ ವೀರೇಶ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ತರಬೇತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳಾ ಸಹಕಾರ ಶಿಕ್ಷಣ ಅಭಿವೃದ್ಧಿ ಅಧಿಕಾರಿ ಅನಿತಾ ಎ.ಜೆ ಭಾಗವಹಿಸಿದ್ದು, ಸಹಕಾರ ಕ್ಷೇತ್ರದಲ್ಲಿ ಮಾರುಕಟ್ಟೆ ಯೋಜನೆ ಮತ್ತು ಹಣಕಾಸು ವ್ಯವಸ್ಥೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಹಣಕಾಸು ಮತ್ತು ವ್ಯಾಪಾರ ಅಭಿವೃದ್ಧಿ ಯೋಜನೆ ಕುರಿತು ಶ್ರೀಶ ಕೆ.ಎಂ ಉಪನ್ಯಾಸ ನೀಡಿದರು. ಆಧುನಿಕ ಕೃಷಿ ಪದ್ಧತಿ ಕುರಿತು ಸಂಜನಾ ಗೊಂದಿ ಉಪನ್ಯಾಸ ನೀಡಿದರು. ಆಧುನಿಕ ಹೈನುಗಾರಿಕೆ ಪದ್ಧತಿ ಕುರಿತು ಪಶು ವೈದ್ಯಾಧಿಕಾರಿ ಸುನೀಲ್‌ ಕುಮಾರ್‌ ಕೆ.ಎಂ ಉಪನ್ಯಾಸ ನೀಡಿದರು.


    ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಅಗಡಿ ಅಶೋಕ್‌ ಸಮಾರೋಪ ಭಾಷಣ ಮಾಡಿದರು. ಶಿಕಾರಿಪುರ ಶ್ರೀ ಬಸವೇಶ್ವರ ಸಹಕಾರ ಒಕ್ಕೂಟದ ಉಪಾಧ್ಯಕ್ಷೆ ಶಶಿಕಲಾ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘದ ಅಧ್ಯಕ್ಷ ನಾಗರಾಜ ಜಿ.ಎಂ, ಉಪಾಧ್ಯಕ್ಷ ಪರಶುರಾಮ ಚೌಟಗಿ, ಸಾಗರ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಸತೀಶ್‌ ಕುಮಾರ್‌, ಕರ್ನಾಟಕ ರಾಜ್ಯ ಪರಿಸರ, ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಸಂಘದ ಉಪಾದ್ಯಕ್ಷ ದೇವರಾಜ್‌ ಬಿ.ಸಿ., ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ನಾಗರಾಜ, ಕರ್ನಾಟಕ ರಾಜ್ಯ ಜಾನಪದ ಕಲಾವಿದರ ಸಹಕಾರ ಸಂಘದ ಉಪಾಧ್ಯಕ್ಷ ಪರಶುರಾಮ ಚೌಟಗಿ, ಶಿವಮೊಗ್ಗ ಜಿಲ್ಲಾ ಸಹಕಾರ ಮಾರಾಟ ಒಕ್ಕೂಟದ ಉಪಾಧ್ಯಕ್ಷ ಸಿ.ಪಿ ಹೆಗ್ಗಡೆ, ನಿರ್ದೇಶಕರಾದ ಬಿ.ಕಿರಣಕಾಂತ್‌, ಚನ್ನಬಸಪ್ಪ, ರುದ್ರಗೌಡ್ರು, ಡಿಐಎಸ್‌ಎಂಎಸ್‌ ನಿರ್ದೇಶಕರಾದ ಬಿ.ಕೆ ಗುರುರಾಜ್‌, ಲತಾ ರವಿಕುಮಾರ್‌, ಮೀನಾಕ್ಷಿ ಬಸವರಾಜ, ಶಿವಮೊಗ್ಗ ಜಿಲ್ಲಾ ಹಾಪ್‌ಕಾಮ್ಸ್‌ ನಿರ್ದೇಶಕರಾದ ಶಾರದಮ್ಮ ನರಸಿಂಹ ಮೂರ್ತಿ, ಕರ್ನಾಟಕ ತೋಟಗಾರಿಕಾ ಬೆಳೆಗಾರರ ಸಹಕಾರ ಸಂಘದ ಉಪಾಧ್ಯಕ್ಷ ಪಿ.ದೊಡ್ಡಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೀತಾ ಸತೀಶ ಕಾರ್ಯಕ್ರಮ ನಿರೂಪಿಸಿದರು. ಶಾಂತಾ ಚಂದ್ರು ಸ್ವಾಗತಿಸಿದರು. ಆಶಾ ಷಣ್ಮುಕಪ್ಪ ವಂದಿಸಿದರು.
    ತರಬೇತಿ ಕಾರ್ಯಕ್ರಮದಲ್ಲಿ ೧೦೦ಕ್ಕೂ ಅಧಿಕ ಸಹಕಾರಿಗಳು ಭಾಗವಹಿಸಿದ್ದರು. ಶಿರಸಿಯ ತೋಟಗಾರಿಕಾ ಸೇಲ್ಸ್‌ ಸೊಸೈಟಿ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬೈರಂಬೆ ಇಲ್ಲಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಾಯಿತು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Banking Cooperative Cooperative Department Karnataka Rajya Parisara mattu Pravaasodyama abhivruddhi sahakara Sangha Shikaripura NCCE Shikaripura Shree Basaveshwara Sahakara Okkuta Shree Basaveshwara Sahakara Okkuta Shikaripura Sirigandha Mahila Pattina Sahakara Sangha Shikaripura
    Previous Articleಬಡವರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದ ಸೈಬರ್ ವಂಚಕರ ಬಂಧನ
    Next Article ಜನರ ಆರೋಗ್ಯ ಕಾಳಜಿಗಾಗಿ ಆತ್ಮಶಕ್ತಿ ಸಹಕಾರಿ ಸಂಘ ನಿರಂತರ ಆರೋಗ್ಯ ಶಿಬಿರ

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.