Author: admin

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ 43ನೇ ಘಟಿಕೋತ್ಸವ ಮಾರ್ಚ್‌ 29ರಂದು ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ ನಡೆಯಲಿದ್ದು ಈ ವೇಳೆ ಸಹಕಾರ ರತ್ನ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುವುದು. https://chat.whatsapp.com/EbVKVnWB6rlHT1mWtsgbch ಕೊಣಾಜೆಯ ಮಂಗಳೂರು ವಿವಿ ಆಡಳಿತ ಸೌಧದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿವಿ ಕುಲಪತಿ ಪ್ರೊ.ಧರ್ಮ ಈ ಬಗ್ಗೆ ಮಾಹಿತಿ ನೀಡಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ಉದ್ಯಮಿಗಳಾದ ರೋಹನ್‌ ಮೊಂತೇರೊ ಹಾಗೂ ಕನ್ಯಾನ ಸದಾಶಿವ ಶೆಟ್ಟಿ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ ಎಂದು ಪ್ರಕಟಿಸಿದರು. ಘಟಿಕೋತ್ಸವದಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಉಪಾಧ್ಯಕ್ಷ ಹಾಗೂ ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಎನ್.ರಾಜಶೇಖರನ್ ಪಿಳ್ಳೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರಚಂದ್ ಗೆಹ್ಲೋಟ್‌ ಅಧ್ಯಕ್ಷತೆ ವಹಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು. ಸಹಕಾರ ಕ್ಷೇತ್ರದಲ್ಲಿ ಸುಮಾರು 40…

Read More

ಸಹಕಾರಿ ಸಚಿವ ಅಮಿತ್‌ ಷಾ ಸುಳಿವು ನವದೆಹಲಿ: ಕೇಂದ್ರ ಸರ್ಕಾರವು ಶೀಘ್ರದಲ್ಲೇ ಓಲಾ, ಊಬರ್‌ನಂತೆ ಕೋ ಆಪರೇಟಿವ್‌ ಮಾದರಿಯಲ್ಲಿ ದೇಶಾದ್ಯಂತ ಟ್ಯಾಕ್ಸಿ ಸೇವೆ ಪ್ರಾರಂಭಿಸಲಿದೆ ಎಂದು ಕೇಂದ್ರ ಸಹಜಕಾರ ಸಚಿವ ಅಮಿತ್‌ ಷಾ ಗುರುವಾರ ಸಂಸತ್‌ನಲ್ಲಿ ಘೋಷಿಸಿದ್ದಾರೆ. ಉಬರ್ ಮತ್ತು ಓಲಾಗೆ ಪರ್ಯಾಯವಾಗಿ ಸಹಕಾರಿ ಆಧಾರಿತ ವ್ಯವಸ್ತೆಯನ್ನು ಸರ್ಕಾರ ಪ್ರಾರಂಭಿಸಲಿದೆ. ಪ್ರಧಾನಿ ನರೇಂದ್ರ ಮೋದಿಯವರ ‘ಸಹಕಾರ ಸೇ ಸಮೃದ್ಧಿ’ (ಸಹಕಾರದ ಮೂಲಕ ಸಮೃದ್ಧಿ) ಎಂಬ ದೃಷ್ಟಿಕೋನ ಕೇವಲ ಘೋಷಣೆಯಾಗಿ ಉಳಿದಿಲ್ಲ. ಅದನ್ನು ಒಂದೊಂದಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಕಳೆದ ಮೂರುವರೆ ವರ್ಷಗಳಲ್ಲಿ, ಸಹಕಾರ ಸಚಿವಾಲಯವು ಅದನ್ನು ಸಹಕಾರದಿಂದ ಸಮೃದ್ಧಿ ಎಂಬ ಧ್ಯೇಯವಾಕ್ಯವನ್ನು ನನಸಾಗಿಸಲು ಅವಿಶ್ರಾಂತವಾಗಿ ಶ್ರಮಿಸಿದೆ ಎಂದು ಹೇಳಿದರು. https://chat.whatsapp.com/EbVKVnWB6rlHT1mWtsgbch ಮುಂಬರುವ ದಿನಗಳಲ್ಲಿ, ದ್ವಿಚಕ್ರ ವಾಹನ ಟ್ಯಾಕ್ಸಿಗಳು, ಆಟೋರಿಕ್ಷಾಗಳು ಮತ್ತು ನಾಲ್ಕು ಚಕ್ರಗಳ ವಾಹನಗಳನ್ನು ಒಳಗೊಂಡಂತೆ ದೊಡ್ಡ ಪ್ರಮಾಣದ ಸಹಕಾರಿ ಟ್ಯಾಕ್ಸಿ ಸೇವೆಯನ್ನು ಪರಿಚಯಿಸಲಾಗುವುದು ಎಂದು ಹೇಳಿದ ಅಮಿತ್‌ ಷಾ, ಖಾಸಗಿ ರೈಡ್-ಹೇಲಿಂಗ್ ಕಂಪನಿಗಳಿಗಿಂತ ಭಿನ್ನವಾಗಿ, ಲಾಭವು ಮಾಲೀಕರಿಗೆ ಹೋಗುತ್ತದೆ, ಈ ಮಾದರಿಯ…

Read More

ಶಿವಮೊಗ್ಗ: ಶಿಕಾರಿಪುರ ತಾಲೂಕಿನ ಸಹಕಾರಿ ಧುರೀಣ, ಜಾನಪದ ಕಲಾವಿದ, ಶಿಕಾರಿಪುರ ಹೊಸಮೇದಾರಕೇರಿ ಶ್ರೀ ಕನಕ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸಿ.ಆರ್‌ ಪರಶುರಾಮ್‌ ಚೌಟಗಿ ಅವರಿಗೆ ಕೆಂಗಲ್‌ ಹನುಮಂತಯ್ಯ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ವೇಜನ ಆರ್ಟ್‌ ಮತ್ತು ಕಲ್ಚರಲ್‌ ಟ್ರಸ್ಟ್‌ ವತಿಯಿಂದ ನಡೆದ ಸಮಾರಂಭದಲ್ಲಿ ಪರಶುರಾಮ್‌ ಚೌಟಗಿ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಯಿತು. ಶಿವಮೊಗ್ಗ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌, ಗ್ರಾಮ ಪಂಚಾಯತ್‌ ಸೂಗೂರು, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಶಿವಮೊಗ್ಗ, ಪತಂಜಲಿ ಕರ್ನಾಟಕ ಜಾನಪದ ಕಲಾಕೇಂದ್ರ ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ಸೂಗೂರು, ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟ ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವಸಹಾಯ ಸಂಘಗಳ ಒಕ್ಕೂಟ, ಪತಂಜಲಿ ಸೂಗೂರು ಶಾಖೆ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಸಮಸ್ತ ಗ್ರಾಮಸ್ಥರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಾನಪದ ಕಲಾಮೇಳದಲ್ಲಿ ಜಾನಪದ…

Read More

ಬೆಂಗಳೂರು: ನಂದಿನಿ ಪ್ಯಾಕೆಟ್ ಹಾಲಿನ ದರವನ್ನು ರಾಜ್ಯ ಸರ್ಕಾರ ಪ್ರತಿ ಲೀಟರ್‌ಗೆ 4 ರೂಪಾಯಿ ಹೆಚ್ಚಳ ಮಾಡಿದ್ದು, ರಾಜ್ಯ ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ. ನಂದಿನಿ ಹಾಲಿನ ದರ ಹೆಚ್ಚಿಸಿ ಇನ್ನೂ ವರ್ಷವಾಗಿಲ್ಲ. ಆಗಲೇ ದರ ಏರಿಕೆಗೆ ಪ್ರಸ್ತಾಪ ಬಂದಿತ್ತು. ಕೆಎಂಎಫ್ ಅಧಿಕಾರಿಗಳ ಜೊತೆ​ ಮೂರು ದಿನಗಳ ಹಿಂದೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಲಿನ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಆದರೆ ಇದೀಗ ನಂದಿನ ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. https://chat.whatsapp.com/EbVKVnWB6rlHT1mWtsgbch ಬೆಲೆ ಹೆಚ್ಚಳದ ಬಳಿಕ ನೀಲಿ‌ ಪ್ಯಾಕೆಟ್ ಹಾಲು – 44 ರೂ. ನಿಂದ 48 ರೂ., ಆರೆಂಜ್ ಪ್ಯಾಕೆಟ್ ಹಾಲು – 54 ರೂ‌. ನಿಂದ 58 ರೂ., ಸಮೃದ್ಧಿ ಹಾಲಿನ‌ ಪ್ಯಾಕೆಟ್ 56 ರೂ. ನಿಂದ 60 ರೂ., ಗ್ರೀನ್ ಸ್ಪೇಷಲ್ 54 ರೂ. ನಿಂದ 58 ರೂ., ನಾರ್ಮಲ್ ಗ್ರೀನ್ 52 ರೂ. ನಿಂದ 56 ರೂ. ಆಗಲಿದೆ.…

Read More

ನವದೆಹಲಿ: ದೇಶದಲ್ಲಿ 8.32 ಲಕ್ಷ ನೋಂದಾಯಿತ ಸಹಕಾರ ಸಂಘಗಳ ಪೈಕಿ 45,811 ಸಹಕಾರ ಸಂಘಗಳು ದಿವಾಳಿ ಹಂತದಲ್ಲಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು. https://chat.whatsapp.com/EbVKVnWB6rlHT1mWtsgbch ರಾಷ್ಟ್ರೀಯ ಸಹಕಾರಿ ದತ್ತಸಂಚಯದ ಪ್ರಕಾರ, 6.37 ಲಕ್ಷ ಸಂಘಗಳು ಸಹಕಾರಿ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರೆ, 1.50 ಲಕ್ಷಕ್ಕೂ ಹೆಚ್ಚು ಸಂಘಗಳು ಕಾರ್ಯನಿರ್ವಹಿಸುತ್ತಿಲ್ಲ. 2021ರ ಜುಲೈನಲ್ಲಿ ಸಹಕಾರ ಸಚಿವಾಲಯ ಸ್ಥಾಪನೆಯಾದ ಬಳಿಕ ಸಹಕಾರಿ ವಲಯವನ್ನು ಬಲಪಡಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಬಜೆಟ್ ಹಂಚಿಕೆಯಲ್ಲೂ ಹೆಚ್ಚಳವಾಗಿದೆ ಎಂದು ಅಂಕಿ ಅಂಶಗಳ ಸಹಿತ ಅಮಿತ್‌ ಷಾ ರಾಜ್ಯಸಭೆಯ ಮುಂದಿಟ್ಟರು. ಕೇಂದ್ರ ಸರ್ಕಾರದ ನಿರಂತರ ಬೆಂಬಲ ಮತ್ತು ಸುಧಾರಣಾ ನೀತಿಗಳ ಮೂಲಕ ಸಹಕಾರಿ ವಲಯವನ್ನು ಪುನರುಜ್ಜೀವನಗೊಳಿಸುವ ಗುರಿ ಹೊಂದಲಾಗಿದೆ ಎಂದು ಅಮಿತ್‌ ಷಾ ಹೇಳಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಸಹಕಾರಿ ಸಂಸ್ಥೆಗಳ ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕೆ ದೇಶದಲ್ಲೇ ಮೊದಲ ಸಲ ಜಾರಿಗೆ  ನವದೆಹಲಿ: ಇನ್ಮುಂದೆ ಸಹಕಾರಿ ಕ್ಷೇತ್ರದಲ್ಲೂ ರ್ಯಾಂಕಿಂಗ್‌(Ranking) ಸಿಸ್ಟಮ್‌ ಜಾರಿಗೆ ಬರಲಿದೆ. ಸಹಕಾರಿ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ವ್ಯವಸ್ಥಿತವಾಗಿ ಮೌಲ್ಯಮಾಪನ ಮಾಡುವ ಗುರಿ ಇದ್ದು, ಇದಕ್ಕಾಗಿ ದೇಶದಲ್ಲೇ ಮೊದಲ ಸಲ ಸಹಕಾರಿ ರ್ಯಾಂಕಿಂಗ್‌ ವ್ಯವಸ್ಥೆಯನ್ನು ಪ್ರಾರಂಭಿಸುವುದಾಗಿ ಕೇಂದ್ರ ಸಹಕಾರಿ ಸಚಿವ ಅಮಿತ್‌ ಷಾ ಘೋಷಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳು (PACS), ಡೈರಿ, ಮೀನುಗಾರಿಕೆ, ನಗರ ಸಹಕಾರಿ ಸಂಸ್ಥೆಗಳು, ವಸತಿ ಸಾಲ ಮತ್ತು ಖಾದಿ ಮತ್ತು ಗ್ರಾಮ ಕೈಗಾರಿಕಾ ಸಮಿತಿಗಳಲ್ಲಿ ಈ ರ್ಯಾಂಕಿಂಗ್‌ ನಿಯಮ ಜಾರಿಗೆ ತರುವ ಸುಳಿವು ನೀಡಿದ್ದಾರೆ. ರ್ಯಾಂಕಿಂಗ್‌ ಸಿಸ್ಟಮ್‌ ಮೂಲಕ ತಮ್ಮ ಕ್ಷೇತ್ರಗಳಲ್ಲಿ ಶ್ರೇಷ್ಠತೆ ಸಾಧಿಸುವ ಸಹಕಾರಿ ಸಂಸ್ಥೆಗಳನ್ನು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳೊಂದಿಗೆ ಗುರುತಿಸಲಾಗುತ್ತದೆ. ಹೆಚ್ಚುವರಿಯಾಗಿ, ಶ್ರೇಯಾಂಕಗಳು ಸಹಕಾರಿ ಸಂಸ್ಥೆಗಳಿಗೆ ಸಹಕಾರಿ ಬ್ಯಾಂಕ್‌ಗಳಿಂದ ಹೆಚ್ಚು ಸಾಲಗಳನ್ನು ಪರಿಣಾಮಕಾರಿಯಾಗಿ ಪಡೆಯಲು ಸಹಾಯ ಮಾಡುತ್ತದೆ. ಸಹಕಾರಿ ಸಚಿವಾಲಯದ ನಿರಂತರ ಪ್ರಯತ್ನಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ‘ಸಹಕಾರದಿಂದ…

Read More

ಕೇಂದ್ರ ಸಹಕಾರ ಸಚಿವ ಅಮಿತ್‌ ಷಾ ಘೋಷಣೆ ನವದೆಹಲಿ: ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ವಿಮಾ ಸೌಲಭ್ಯ ಒದಗಿಸಲು ಸರ್ಕಾರದಿಂದಲೇ ಕೋ ಆಪರೇಟಿವ್‌ ವಿಮಾ ಕಂಪನಿ ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಷಾ ಲೋಕಸಭೆಯಲ್ಲಿ ಘೋಷಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಹಕಾರಿ ಕ್ಷೇತ್ರದ ವಲಯದೊಳಗೆ ವಿಮಾ ಸೇವೆಗಳನ್ನು ಸುಗಮಗೊಳಿಸಲು ಸಹಕಾರಿ ವಿಮಾ ಕಂಪನಿಯ ಸ್ಥಾಪನೆಯಿಂದ ಲಕ್ಷಾಂತರ ಜನರಿಗೆ ಉಪಯೋಗವಾಗಲಿದೆ. ಪ್ರಸ್ತಾಪಿತ ಹೊಸ ಸಹಕಲಾರಿ ವಿಮಾ ಕಂಪನಿಯು ಸಹಕಾರಿ ಸಂಸ್ಥೆಗಳಿಗೆ ಸೂಕ್ತವಾದ ವಿಮಾ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಉತ್ತಮ ರಿಸ್ಕ್‌ ಕವರೇಜ್‌ ಮತ್ತು ಸಿಬ್ಬಂದಿಗಳಿಗೆ ಆರ್ಥಿಕ ಭದ್ರತೆಯನ್ನು ಇದು ಖಚಿತಪಡಿಸುತ್ತದೆ ಎಂದು ಅಮಿತ್‌ ಷಾ ತಿಳಿಸಿದರು. ಪ್ರಸ್ತಾಪಿತ ಸಹಕಾರಿ ವಿಮಾ ಕಂಪನಿಯು ಖಾಸಗಿ ವಲಯದ ವಿಮಾ ಕ್ಷೇತ್ರದವರ ಜೊತೆ ಸ್ಪರ್ಧೆ ನೀಡಲಿದೆ ಮತ್ತು ಈ ಉದ್ಯಮದಲ್ಲಿ ಪ್ರಮುಖ ಕಂಪನಿಯಾಗಿ ಹೊರಹೊಮ್ಮುವ ನಿರೀಕ್ಷೆಯಿದೆ ಎಂದು ಅಮಿತ್‌ ಷಾ ಹೇಳಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ:…

Read More

ಭಾರತದ ಮೊತ್ತಮೊದಲ ಸಹಕಾರಿ ವಿವಿ ಸ್ಥಾಪನೆಗೆ ಸಂಸತ್‌ ಅಸ್ತು ನವದೆಹಲಿ: ಭಾರತದ ಮೊದಲ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಯ ನಿಟ್ಟಿನಲ್ಲಿ ಬುಧವಾರ ಲೋಕಸಭೆಯಲ್ಲಿ ತ್ರಿಭುವನ್‌ ಸಹಕಾರಿ ವಿಶ್ವವಿದ್ಯಾಲಯ ಮಸೂದೆ 2025ನ್ನು ಅಂಗೀಕರಿಸಲಾಗಿದೆ. ಗುಜರಾತ್‌ನಲ್ಲಿ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‌ಮೆಂಟ್ ಆನಂದ್ (ಐಆರ್‌ಎಂಎ) ಅನ್ನು ವಿಶ್ವವಿದ್ಯಾಲಯವಾಗಿ ಸ್ಥಾಪಿಸುವ ಗುರಿಯನ್ನು ಹೊಂದಿರುವ “ತ್ರಿಭುವನ್” ಸಹಕಾರಿ ವಿಶ್ವವಿದ್ಯಾಲಯ ಮಸೂದೆಯು ಅಂಗೀಕಾರವಾಗುವುದರೊಂದಿಗೆ ದೇಶದ ಮೊದಲ ಸಹಕಾರಿ ವಿಶ್ವವಿದ್ಯಾಲಯ ಸ್ಥಾಪನೆಗೆ ಅಡಿಗಲ್ಲು ಹಾಕಿದಂತಾಗಿದೆ. ಬುಧವಾರ ಸಂಜೆ ಮಸೂದೆಯ ಅಂಗೀಕಾರವನ್ನು ಘೋಷಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಇದು ಭಾರತದ ಸಹಕಾರಿ ಕ್ಷೇತ್ರದಲ್ಲಿ ಪ್ರಮುಖ ಸಾಧನೆ ಎಂದು ಅಭಿಪ್ರಾಯಪಟ್ಟರು. https://chat.whatsapp.com/EbVKVnWB6rlHT1mWtsgbch ಇದು ಗ್ರಾಮೀಣ ಆರ್ಥಿಕತೆ, ಸ್ವ-ಉದ್ಯೋಗ ಮತ್ತು ಸಣ್ಣ ಉದ್ಯಮಗಳನ್ನು ಬಲಪಡಿಸುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಮಸೂದೆಯ ಚರ್ಚೆಯ ಸಂದರ್ಭದಲ್ಲಿ, ಮಸೂದೆ ಅಂಗೀಕಾರವಾದ ನಂತರ, “ಇದು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುತ್ತದೆ, ಸ್ವ-ಉದ್ಯೋಗ ಮತ್ತು ಸಣ್ಣ ಉದ್ಯಮಗಳು ಅಭಿವೃದ್ಧಿಗೊಳ್ಳುತ್ತದೆ, ಸಾಮಾಜಿಕ ಸೇರ್ಪಡೆಯೂ ಹೆಚ್ಚಾಗುತ್ತದೆ ಮತ್ತು ಸಂಶೋಧನೆಯಲ್ಲಿ ಹೊಸ…

Read More

ಲೋಕಸಭೆಯಲ್ಲಿ ಸಹಕಾರ ಸಚಿವ ಅಮಿತ್‌ ಷಾ ಮಾಹಿತಿ ನವದೆಹಲಿ: ಕೇಂದ್ರ ಸರ್ಕಾರವು ಸಹಕಾರಿ ಚಳುವಳಿಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಆರಂಭಿಸಿದ ಪ್ರಯತ್ನಗಳಿಂದಾಗಿ ಕಳೆದ ಜನವರಿ ತಿಂಗಳ ಅಂತ್ಯಕ್ಕೆ 12,957 ಹೊಸ ಸಹಕಾರ ಸಂಸ್ಥೆಗಳು ನೋಂದಣಿಯಾಗಿವೆ. ಕೇಂದ್ರ ಸರ್ಕಾರ ಸಹಕಾರ ಕ್ಷೇತ್ರದ ವ್ಯಾಪ್ತಿಯನ್ನು ತಳಮಟ್ಟಕ್ಕೆ ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಈ ಉಪಕ್ರಮದ ಭಾಗವಾಗಿ 2023ರ ಫೆಬ್ರವರಿ 15ರಂದು ಗ್ರಾಮಗಳು ಮತ್ತು ಪಂಚಾಯತ್‌ಗಳಲ್ಲಿ ಹೊಸ ಬಹೂಪಯೋಗಿ ಪ್ರಾಥಮಿಕ ಕೃಷಿ ಸಾಲ ಸಂಘಗಳು (M-PACS), ಡೈರಿ ಸಹಕಾರ ಸಂಘಗಳು ಮತ್ತು ಮೀನುಗಾರಿಕೆ ಸಹಕಾರ ಸಂಘಗಳನ್ನು ಸ್ಥಾಪಿಸಲು ಸಮಗ್ರ ಯೋಜನೆಯನ್ನು ಅನುಮೋದಿಸಲಾಯಿತು ಎಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಷಾ ಹೇಳಿದರು. https://chat.whatsapp.com/EbVKVnWB6rlHT1mWtsgbch ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅಮಿತ್‌ ಷಾ, ಸರ್ಕಾರವು ಸಹಕಾರಿ ಚಳುವಳಿಯನ್ನು ಬಲಪಡಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿರುವ ಬಗ್ಗೆ ಮಾಹಿತಿ ನೀಡಿದರು. ಈ ಐದು ವರ್ಷಗಳ ಯೋಜನೆಯು ಡೈರಿ ಮೂಲಸೌಕರ್ಯ ಅಭಿವೃದ್ಧಿ ನಿಧಿ (DIDF), ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ (NPDD) ಮತ್ತು ಪ್ರಧಾನಮಂತ್ರಿ…

Read More

ಉಚಿತ ನೇತ್ರ ತಪಾಸಣೆ, ದಂತ ತಪಾಸಣೆ ಚಿಕಿತ್ಸಾ ಶಿಬಿರದಲ್ಲಿ ವೀಣಾ ಮಂಗಳ ಶ್ಲಾಘನೆ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಕೆ.ವಿ.ಕೆ. ಸೇವಾ ಸಮಿತಿ ಕಸಿಹಿತ್ಲು ಜಪ್ಪಿನಮೊಗರು, ಲಯನ್ಸ್ ಕ್ಲಬ್ ಕುಡ್ಲ, ಲಯನ್ಸ್ ಕ್ಲಬ್ ಮಂಗಳೂರು, ಪಂಪ್‌ವೆಲ್, ಕಲ್ಪವೃಕ್ಷ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಜಂಟಿ ಆಶ್ರಯದಲ್ಲಿ ಸಮುದಾಯ ದಂತ ಆರೋಗ್ಯ ವಿಭಾಗ ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು ಇವರ ನುರಿತ ತಜ್ಞ ವೈದ್ಯರ ತಂಡದ ನೆರವಿನಿಂದ ಉಚಿತ ದಂತ ತಪಾಸಣೆ ಮತ್ತು ನೇತ್ರ ತಪಾಸಣಾ ಶಿಬಿರ ಕಸಿಹಿತ್ಲು ಕೆ.ವಿ.ಕೆ ಮೈದಾನದಲ್ಲಿ ಜರುಗಿತು. https://chat.whatsapp.com/EbVKVnWB6rlHT1mWtsgbch ನಿಕಟಪೂರ್ವ ಕಾರ್ಪೋರೇಟರ್, ಕೆ.ವಿ.ಕೆ. ಸೇವಾ ಸಮಿತಿ ಅಧ್ಯಕ್ಷೆ ವೀಣಾ ಮಂಗಳ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಜನರ ಆರೋಗ್ಯದ ಕಾಳಜಿಗಾಗಿ ನಿರಂತರ ಆರೋಗ್ಯ ಶಿಬಿರ ಆಯೋಜಿಸುತ್ತಾ ಬರುತ್ತಿರುವುದು…

Read More