ಬ್ಯಾಂಕ್ ಕೇವಲ ವ್ಯಾವಹಾರಿಕ ಕ್ಷೇತ್ರವಾಗದೆ ಸಾಮಾಜಿಕ ಕಾರ್ಯದಲ್ಲೂ ಭಾಗಿಯಾಗಿರುವುದು ಶ್ಲಾಘನೀಯ: ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿಪ್ರಾಯ
ಮಂಗಳೂರು: ತಾನು ಬದುಕುವುದರ ಜೊತೆಗೆ ಮತ್ತೊಬ್ಬರಿಗೂ ಬದುಕು ಕಲ್ಪಿಸುವ ವ್ಯವಸ್ಥೆ ಸಮಾಜದಲ್ಲಿ ಬರಬೇಕು. ಬ್ಯಾಂಕ್‌ಗಳು ಕೇವಲ ವ್ಯಾವಹಾರಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗದೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಳ್ಳಬೇಕು. ಎಸ್.ಕೆ ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯು ಈ ಧ್ಯೇಯದಂತೆ ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟು ಬದುಕು ಕಲ್ಪಿಸಿಕೊಟ್ಟಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
https://chat.whatsapp.com/EbVKVnWB6rlHT1mWtsgbch
ಕಿನ್ನಿಗೋಳಿ ಉಲ್ಲಂಜೆಯ ವೀಣಾ ಆಚಾರ್ಯ ಎಂಬುವವರಿಗೆ ಎಸ್.ಕೆ.ಗೋಲ್ಡ್‌ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ಹಮ್ಮಿಕೊಂಡ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ನಿರ್ಮಾಣವಾದ ನೂತನ ಮನೆಯನ್ನು ಮನೆಯವರಿಗೆ ಸ್ತಾಂತರಿಸಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಫಾಲ್ಕೆ ಬಾಬುರಾಯ ಆಚಾರ್ಯ ಅವರು ಅಂದು ಬ್ಯಾಂಕ್ ಸ್ಟಾಪಿಸಿ ದೊಡ್ಡ ಸಾಧನೆ ಮಾಡಿದ್ದು, ಇಂದು ಪ್ರತಿಷ್ಠಿತ ಬ್ಯಾಂಕ್ ಆಗಿ ಮುಂದುವರಿಯುತ್ತಿದೆ ಎಂದು ಹೇಳಿದರು.
ಸೊಸೈಟಿಯ ಅಧ್ಯಕ್ಷ ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯು ಜನಪರ ಕಾಳಜಿಯ ದೃಷ್ಟಿಯಲ್ಲಿ ವಜ್ರ ಮಹೋತ್ಸವದ ಪ್ರಯುಕ್ತ 51 ಜನಪರ ಕಾರ್ಯಕ್ರಮ ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲೂ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ, ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ್ ಆಚಾರ್ಯ ಸುರಗಿರಿ, ಸಂಸ್ಥೆಯ ನಿರ್ದೇಶಕರಾದ ವೈ. ವಿಶ್ವಜ್ಞಮೂರ್ತಿ, ಕೆ.ಯಜ್ಞೇಶ್ವರ ಆಚಾರ್ಯ, ಜಯ ಆಚಾರ್, ಕೆ.ಶಶಿಕಾಂತ ಆಚಾರ್ಯ, ಮಲ್ಲಪ್ಪ ಎನ್.ಪತ್ತಾರ್, ರೋಹಿಣಿ ಎಂ.ಪಿ., ಜ್ಯೋತಿ ಎಂ.ಎ. ರಮೇಶ್ ರಾವ್ ಯು., ಕೆ.ಪ್ರಕಾಶ್ ಆಚಾರ್ಯ, ಮಂಜುನಾಥ ಆಚಾರ್ಯ, ಚಂದ್ರಶೇಖರ್ ಎ.ಎಸ್., ಕಿನ್ನಿಗೋಳಿ ಶಾಖಾಧಿಕಾರಿ ವನಮಾಲಾ ಮತ್ತಿತರರು ಉಪಸ್ಥಿತರಿದ್ದರು.
ಗುತ್ತಿಗೆದಾರ ಜನಾರ್ದನ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ನೂತನ ಮನೆಯ ವಾಸ್ತು ಮತ್ತು ಉಸ್ತುವಾರಿಯನ್ನು ಮಂಜುನಾಥ ಆಚಾರ್ಯ ನಿರ್ವಹಿಸಿದ್ದರು. ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷ್ಯ ಆನಂದ ಆಚಾರ್ಯ ಸ್ವಾಗತಿಸಿ, ನಿರ್ದೇಶಕರಾದ ಕೆ.ಪ್ರಕಾಶ್ ಆಚಾರ್ಯ ವಂದಿಸಿದರು. ಶ್ರೀಕಾಂತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com