Author: admin

ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ಭಾಗದಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪರೇಟಿವ್‌ ಕ್ರೆಡಿಟ್ ಸೊಸೈಟಿಯು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ 45.35 ಕೋಟಿ ರೂ. ಲಾಭ ಗಳಿಸಿದೆ. https://chat.whatsapp.com/EbVKVnWB6rlHT1mWtsgbch ಬೀರೇಶ್ವರ ಸಹಕಾರಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಕೆಲಸ ಆರಂಭಿಸಿ ವರ್ಷದಿಂದ ವರ್ಷಕ್ಕೆ ಸದೃಢವಾಗಿ ಬೆಳೆಯುತ್ತಿದೆ. ಅಂತಾರಾಜ್ಯ ಕಾಯ್ದೆಯಡಿ ಕರ್ನಾಟಕದಲ್ಲಿ 176, ಮಹಾರಾಷ್ಟ್ರದಲ್ಲಿ 46 ಹಾಗೂ ಗೋವಾದಲ್ಲಿ ನಾಲ್ಕು ಒಟ್ಟು ಸೇರಿ 226 ಶಾಖೆಗಳನ್ನು ಹೊಂದಿದೆ. ಲಾಭಾಂಶದಲ್ಲಿ ಕಳೆದ ವರ್ಷಕ್ಕಿಂತ 4.79 ಕೋಟಿ ರೂ. ಹೆಚ್ಚಳವಾಗಿದೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಬೀರೇಶ್ವರ ಕೋ ಆಪರೇಟಿವ್‌ ಸೊಸೈಟಿಯಲ್ಲಿ 4,08,233 ಸದಸ್ಯರು, 34,92,16,400 ರೂ. ಷೇರು ಬಂಡವಾಳ, 4338.58 ಕೋಟಿ ರೂ. ಠೇವಣಿ ಸಂಗ್ರಹ, 5030.90 ಕೋಟಿ ರೂ. ದುಡಿಯುವ ಬಂಡವಾಳ ಇದೆ. ಎಸ್‌ಎಂಎಸ್ ಸೇವೆ, ಕಿರು ಸಾಲ ಯೋಜನೆ, ವೆಸ್ಟರ್ನ್ ಯೂನಿಯನ್ ಮನಿ ಟ್ರಾನ್ಸ್‌ಫರ್‌, ಎಕ್ಸ್‌ಪ್ರೆಸ್ ಮನಿ ಟ್ರಾನ್ಸ್‌ಫರ್,…

Read More

ಬೆಂಗಳೂರು: ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 2024-25ರ ಆರ್ಥಿಕ ವರ್ಷದಲ್ಲಿ 86.94 ಕೋಟಿ ರೂ.ಗಳ ಲಾಭ ಗಳಿಸಿದೆ. ಬ್ಯಾಂಕ್‌ನ ನಿವ್ವಳ ಅನುತ್ಪಾದಕ ಸಾಲಗಳು ಶೂನ್ಯವಾಗಿವೆ. ಬ್ಯಾಂಕ್‌ನ ಒಟ್ಟು ವಹಿವಾಟು 3540.24 ಕೋಟಿ ರೂ. ಮೀರಿದ್ದು, ಪ್ರಸಕ್ತ 2024-25ರ ಸಾಲಿನಲ್ಲಿ ಆದಾಯ ತೆರಿಗೆ ಪೂರ್ವ 64.50 ಕೋಟಿ ರೂ. ಲಾಭ ಗಳಿಸಿದೆ ಮತ್ತು ತೆರಿಗೆ ನಂತರ 29.03 ಕೋಟಿ ನಿವ್ವಳ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅವಲಹಳ್ಳಿ ಆರ್‌.ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. https://chat.whatsapp.com/EbVKVnWB6rlHT1mWtsgbch ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 1907ರ ಏಪ್ರಿಲ್ 6ರಂದು ಆರಂಭಗೊಂಡಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ 118 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಾ ಬಂದಿದೆ. ಬ್ಯಾಂಕ್ ರಾಜ್ಯಾದ್ಯಂತ ಕ್ಷೇತ್ರವ್ಯಾಪ್ತಿ ಹೊಂದಿದ್ದು, ಬೆಂಗಳೂರಿನಲ್ಲಿ 20, ಮೈಸೂರು ಮತ್ತು ರಾಮನಗರದಲ್ಲಿ ತಲಾ ಒಂದು ಸೇರಿ ಒಟ್ಟು 22 ಶಾಖೆಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ 2779.00 ಕೋಟಿ ರೂ.ನಷ್ಟಿದ್ದು, 2158.77 ಕೋಟಿ ರೂ. ಠೇವಣಿ ಸಂಗ್ರಹ…

Read More

ದೇಶದಲ್ಲಿ 2,02,521 ಸಂಘಟಿತ ಡೈರಿ ಸಹಕಾರ ಸಂಘಗಳು, ದಿನಕ್ಕೆ 60,654 ಸಾವಿರ ಕೆಜಿ ಹಾಲು ಸಂಗ್ರಹ: ರಾಜ್ಯಸಭೆಯಲ್ಲಿ ಅಮಿತ್‌ ಷಾ ಹೇಳಿಕೆ ನವದೆಹಲಿ: ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಒದಗಿಸಿದ ಮಾಹಿತಿಯ ಪ್ರಕಾರ 2023-24ರ ಸಾಲಿನಲ್ಲಿ ಭಾರತದಲ್ಲಿ 2,02,521 ಸಂಘಟಿತ ಡೈರಿ ಸಹಕಾರ ಸಂಘಗಳಿದ್ದು, ದಿನಕ್ಕೆ ಒಟ್ಟು 60,654 ಸಾವಿರ ಕೆಜಿಯಷ್ಟು ಹಾಲು ಸಂಗ್ರಹಿಸಲಾಗುತ್ತಿದೆ. https://chat.whatsapp.com/EbVKVnWB6rlHT1mWtsgbch ‘ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಕಾಯ್ದೆ, 1987’ರ ಅಡಿಯಲ್ಲಿ ಸ್ಥಾಪಿಸಲಾದ ಎನ್‌ಡಿಡಿಬಿ ರಾಷ್ಟ್ರೀಯ ಮಟ್ಟದ ಪ್ರಮುಖ ಸಂಸ್ಥೆಯಾಗಿದೆ. ರಾಷ್ಟ್ರವ್ಯಾಪಿ ಡೈರಿ ಮತ್ತು ಹಾಲು ಉತ್ಪನ್ನಗಳಿಗೆ ಸಂಬಂಧಿತ ಕೈಗಾರಿಕೆಗಳ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಉತ್ತೇಜಿಸುವುದು, ಯೋಜಿಸುವುದು ಮತ್ತು ಸಂಘಟಿಸುವಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಷಾ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದರು. ಎನ್‌ಡಿಡಿಬಿಯು ಡೈರಿ ವಲಯದಲ್ಲಿ ಸಹಕಾರಿ ಕಾರ್ಯತಂತ್ರಗಳನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುತ್ತದೆ ಮತ್ತು ಸಹಕಾರಿಗೆ ಸಂಬಂಧಿಸಿದ ಆದೇಶಗಳನ್ನು ಕಾರ್ಯಗತಗೊಳಿಸಲು ಅಗತ್ಯ…

Read More

ಗುರುಪುರ: ಗುರುಪುರ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ ಓಂಪ್ರಕಾಶ್ ಶೆಟ್ಟಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉದಯ ಭಟ್ ಆಯ್ಕೆಯಾಗಿದ್ದಾರೆ. https://chat.whatsapp.com/EbVKVnWB6rlHT1mWtsgbch ನ್ಯಾಯಾಲಯದ ಆದೇಶದಂತೆ ರಿಟರ್ನಿಂಗ್‌ ಅಧಿಕಾರಿ ಎನ್‌.ಜೆ ಗೋಪಾಲ್‌ ಫಲಿತಾಂಶ ಘೋಷಣೆ ಮಾಡಿದರು. ಎಪ್ರಿಲ್‌ 2ರಂದು ಒಟ್ಟು ಸದಸ್ಯರ ಪೈಕಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆಯಿತು. ನೂತನ ಸದಸ್ಯರಾಗಿ ಪದ್ಮನಾಭ ಆಳ್ವ ಕೆ., ದಿನೇಶ್ ಜೆ.ಕರ್ಕೇರ, ಶೀನ ಕೋಟ್ಯಾನ್ ಜಿ, ಕಿಶೋರ್ ಕುಮಾರ್, ಸಚಿನ್ ಕುಮಾರ್ ಅಡಪ, ನಳಿನಾಕ್ಷಿ, ಲತಾ ಆರ್.ಶೆಟ್ಟಿ, ನಾಗಪ್ಪ ಬಿ., ರಾಜೇಶ್, ಶ್ರೀನಿವಾಸ ಸುವರ್ಣ ಹಾಗೂ ಸಂಜಯ ಅತಿಕಾರಿ ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಸಂಘದ ಅಧ್ಯಕ್ಷ ಜಿ.ವೆಂಕಟೇಶ್ ಭಾಸ್ಕರ್ ಶೆಣೈ ಮಾಹಿತಿ ಗಂಗೊಳ್ಳಿ: ಗಂಗೊಳ್ಳಿ ಟೌನ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ 2024-25ನೇ ಸಾಲಿನಲ್ಲಿ 677 ಕೋಟಿ ರೂ. ವ್ಯವಹಾರ ನಡೆಸಿದ್ದು 1.14 ಕೋಟಿ ರೂ. ಲಾಭ ಗಳಿಸಿದೆ. ತನ್ಮೂಲಕ ನಿರಂತರ 4ನೇ ವರ್ಷ 1 ಕೋಟಿ ರೂ.ಗೂ ಅಧಿಕ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಜಿ.ವೆಂಕಟೇಶ್ ಭಾಸ್ಕರ್ ಶೆಣೈ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಂಘದ ವಾರ್ಷಿಕ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ಶೇ.17 ಏರಿಕೆ ಕಂಡಿದೆ. ಮೂರು ಶಾಖೆಗಳನ್ನು ಹೊಂದಿರುವ ಸಂಘವು ವರ್ಷಾಂತ್ಯಕ್ಕೆ 85.56 ಕೋಟಿ ರೂ. ಠೇವಣಿ, 82 ಕೋಟಿ ರೂ. ಸದಸ್ಯರ ಸಾಲ, 2.66 ಕೋಟಿ ರೂ. ಪಾಲು ಬಂಡವಾಳ, ರೂ.5.96 ಕೋಟಿ ಲಾಭದಿಂದ ವಿಂಗಡಿಸಿದ ನಿಧಿಗಳು ರೂ.24.53 ಕೋಟಿ ಸಹಕಾರಿ ಬ್ಯಾಂಕ್‌ಗಳಲ್ಲಿ ಹೂಡಿಕೆ ಹೊಂದಿದ್ದು, ವರ್ಷಾಂತ್ಯಕ್ಕೆ 100 ಕೋಟಿ ದುಡಿಯುವ ಬಂಡವಾಳ ಹೊಂದಿರುವ ಉಡುಪಿ ಜಿಲ್ಲೆಯ ಪ್ರಥಮ ಸೌಹಾರ್ದ ಸಹಕಾರಿ…

Read More

ಸಹಕಾರ ವಲಯದ ಅಭಿವೃದ್ಧಿಗೆ ಇದೊಂದು ಐತಿಹಾಸಿಕ ಹೆಜ್ಜೆ: ಸಹಕಾರ ಸಚಿವ ಅಮಿತ್ ಷಾ  ನವದೆಹಲಿ: ಲೋಕಸಭೆಯಲ್ಲಿ ಮಾರ್ಚ್ 26ರಂದು ಅನುಮೋದನೆಗೊಂಡಿದ್ದ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಮಸೂದೆ -2025ನ್ನು ರಾಜ್ಯಸಭೆಯಲ್ಲೂ ಅಂಗೀಕರಿಸಲಾಗಿದೆ. ಬುಧವಾರ ರಾಜ್ಯಸಭೆಯಲ್ಲಿ ಈ ಮಸೂದೆ ಅಂಗೀಕಾರಗೊಂಡಿದ್ದು ಇದು ಸಹಕಾರಿ ವಲಯದ ಅಭಿವೃದ್ಧಿಗೆ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಬಣ್ಣಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ರಾಜ್ಯಸಭೆಯಲ್ಲಿ ಈ ಮಸೂದೆಯ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ರಾಜ್ಯ ಸಚಿವ ಮುರಳೀಧರ್ ಮೊಹೋಲ್, 2027ರ ವೇಳೆಗೆ ಭಾರತವನ್ನು ಪ್ರಪಂಚದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಬಿಚ್ಚಿಟ್ಟರು. ಸಹಕಾರ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶದಲ್ಲಿ ಬಲವಾದ ಗ್ರಾಮೀಣ ಆರ್ಥಿಕತೆಯು ಪ್ರಮುಖ ಪಾತ್ರ ವಹಿಸುತ್ತದೆ. ಜನಸಂಖ್ಯೆಯ 50%ಕ್ಕಿಂತ ಹೆಚ್ಚು ಜನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ದೇಶವು 30 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಸುಮಾರು ಎಂಟು ಲಕ್ಷ ಸಹಕಾರಿ ಸಂಘಗಳನ್ನು ಹೊಂದಿವೆ. ಪ್ರತಿಯೊಂದು ಕೃಷಿ ಕುಟುಂಬವು ಸಹಕಾರಿ ವಲಯದಲ್ಲಿ ಕನಿಷ್ಠ ಒಬ್ಬ ಸದಸ್ಯರನ್ನು…

Read More

ವರದಿ ವರ್ಷ ರೂ.17366.68 ಕೋಟಿ ರೂ. ಒಟ್ಟು ವ್ಯವಹಾರ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಮಾಹಿತಿ ಮಂಗಳೂರು: ಬ್ಯಾಂಕಿಂಗ್ ಸೇವೆಯಲ್ಲಿ ದೇಶಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್) ಅಭಿವೃದ್ಧಿಯ ವಿಷಯದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆರ್ಥಿಕ ವರ್ಷದಲ್ಲಿ 110.40 ಕೋಟಿ ರೂ. ಲಾಭ ಗಳಿಸಿದೆ. ಸಹಕಾರಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ 111 ವರ್ಷಗಳ ಸಾರ್ಥಕ ಸೇವೆ ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವರದಿ ವರ್ಷದಲ್ಲಿ ಅಮೋಘ ಸಾಧನೆ ಮಾಡಿದ್ದು, 31-03-2025ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ರೂ. 110.40 ಕೋಟಿ ಲಾಭ ಗಳಿಸುವ ಮೂಲಕ ಕಳೆದ ವರ್ಷದ ಲಾಭ (ರೂ.79.09 ಕೋಟಿ) ಕ್ಕಿಂತ ಶೇಕಡಾ 39.59 ಏರಿಕೆ ಕಂಡಿದೆ. ಇದು ಎಸ್‌ಸಿಡಿಸಿಸಿ ಬ್ಯಾಂಕ್‌ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌ ರಾಜೇಂದ್ರ ಕುಮಾರ್‌ ಹೇಳಿದರು. https://chat.whatsapp.com/EbVKVnWB6rlHT1mWtsgbch ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು…

Read More

ಮಂಗಳೂರು: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ 673.52 ಕೋಟಿ. ರೂ. ವ್ಯವಹಾರ ನಡೆಸಿದ್ದು, 5.50 ಕೋಟಿ ರೂ. ಲಾಭ ಗಳಿಸಿದೆ. ವಾರ್ಷಿಕ ವರ್ಷದಲ್ಲಿ ಶೇ.21ರಷ್ಟು ವೃದ್ಧಿಯಾಗಿದೆ ಎಂದು ಸಂಘದ ಅಧ್ಯಕ್ಷ ಎ.ಸುರೇಶ ರೈ ತಿಳಿಸಿದ್ದಾರೆ. ಸಂಘದ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ಶೇ.22 ಏರಿಕೆ ಕಂಡಿದೆ. 23 ಶಾಖೆಗಳ ಮೂಲಕ 366.55 ಕೋಟಿ ರೂ. ಠೇವಣಿ ಸಂಗ್ರಹಿಸಿ, 306.97 ಕೋಟಿ ರೂ. ಸಾಲ ಮತ್ತು ಮುಂಗಡಗಳೊಂದಿಗೆ, ಪಾಲು ಬಂಡವಾಳ 2.29 ಕೋಟಿ ರೂ, ನಿಧಿಗಳು 15.64 ಕೋಟಿ ರೂ. ಮತ್ತು ದುಡಿಯುವ ಬಂಡವಾಳ 384.50 ಕೋಟಿ ರೂ. ಹೊಂದಿದೆ ಎಂದು ತಿಳಿಸಿದರು. https://chat.whatsapp.com/EbVKVnWB6rlHT1mWtsgbch ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದ, ಸಾಧ್ವಿ ಮಾತಾನಂದಮಯಿ ಅವರ ಮಾರ್ಗದರ್ಶನದೊಂದಿಗೆ 2011ರಲ್ಲಿ ಸಂಘವು ಕಾರ್ಯಾರಂಭ ಮಾಡಿದ್ದು, ಪ್ರಸಕ್ತ ಎಲ್ಲಾ ಶಾಖೆಗಳನ್ನು ಗಣಕೀಕರಣ ಮಾಡಿದ್ದು, ಕೋರ್ ಸಿಸ್ಟಂ ಸಾಫ್ಟ್‌ವೇರ್‌ ಅಳವಡಿಸಿದೆ. ಪ್ರತಿವರ್ಷವೂ ಶಾಸನಬದ್ಧ…

Read More

ಭೋಪಾಲ್‌: ಸಹಕಾರಿ ಸಂಘಗಳ ನೋಂದಣಿ ಪ್ರಕ್ರಿಯೆಯನ್ನು ಸರಳ ಮತ್ತು ತ್ವರಿತಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಮಧ್ಯಪ್ರದೇಶ ಸರ್ಕಾರವು ಸಹಕಾರಿ ಸಂಸ್ಥೆಗಳ ನೋಂದಣಿ ಅವಧಿಯನ್ನು 90 ದಿನಗಳಿಂದ 30 ದಿನಗಳಿಗೆ ಇಳಿಸಿದೆ. https://chat.whatsapp.com/EbVKVnWB6rlHT1mWtsgbch ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಸಹಕಾರಿ ಕಾಯ್ದೆಯಲ್ಲಿ ಈ ಮಹತ್ವದ ಬದಲಾವಣೆಯನ್ನು ಘೋಷಿಸಿದ್ದು, ಇದರಿಂದ ಹೊಸ ಸಹಕಾರಿ ಸಂಘಗಳ ಸ್ಥಾಪನೆಗೆ ಸಾಕಷ್ಟು ಬಲ ಬರಲಿದೆ. ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಗುರಿಯನ್ನು ಈ ತಿದ್ದುಪಡಿ ಹೊಂದಿದ್ದು, ಇದು ಹೊಸ ಮತ್ತು ಅಸ್ತಿತ್ವದಲ್ಲಿರುವ ಗುಂಪುಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಕಾರಣವಾಗಲಿದೆ. ನೋಂದಣಿ ಪ್ರಕ್ರಿಯೆಯ ಕಾರ್ಯವಿಧಾನವನ್ನು ಸುವ್ಯವಸ್ಥಿತಗೊಳಿಸುವ ಮೂಲಕ, ಗ್ರಾಮೀಣ ಅಭಿವೃದ್ಧಿ ಮತ್ತು ಆರ್ಥಿಕ ಸಬಲೀಕರಣಕ್ಕೆ ನಿರ್ಣಾಯಕವಾದ ಸಹಕಾರಿ ಸಂಸ್ಥೆಗಳ ಬೆಳವಣಿಗೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಹಳೆಯಂಗಡಿ: ಸದಸ್ಯರ ಪ್ರೋತ್ಸಾಹ, ಗ್ರಾಹಕರ ಸಹಕಾರ, ಆಡಳಿತ ವರ್ಗದವರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯಶ್ರಮತೆಯಿಂದಾಗಿ 2024-25ನೇ ಸಾಲಿನಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ 349.77 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ಸೊಸೈಟಿ ಅಧ್ಯಕ್ಷ ಎಚ್‌.ವಸಂತ ಬೆರ್ನಾಡ್‌ ಹೇಳಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಂಸ್ಥೆಯ ಅವಲೋಕನ ಸಭೆಯಲ್ಲಿ ಮಾಹಿತಿ ನೀಡಿದ ಅವರು, 2021 ರಲ್ಲಿ ಪ್ರಾರಂಭವಾದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಈಗಾಗಲೇ ಮೂರು ಶಾಖೆಯನ್ನು ಹೊಂದಿದ್ದು, ವರದಿ ಸಾಲಿನಲ್ಲಿ 349.77 ಕೋಟಿ ರೂ. ವ್ಯವಹಾರ ದಾಖಲಿಸಿದೆ. ಕಳೆದ ಸಾಲಿನ ವ್ಯವಹಾರವನ್ನು ತುಲನೆ ಮಾಡಿದರೆ ಶೇ.70.45 ಏರಿಕೆ ದಾಖಲಿಸಿದೆ. ಪ್ರಸ್ತುತ 29.36 ಕೋಟಿ ರೂ. ಠೇವಣಿ, 24.74 ಕೋಟಿ ರೂ. ಸಾಲ ಮತ್ತು ಮುಂಗಡಗಳೊಂದಿಗೆ, ರೂ. 96.44 ಲಕ್ಷ ಪಾಲು ಬಂಡವಾಳ, 57.05 ಲಕ್ಷ ನಿಧಿಗಳು, 30.90 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 2024-25ನೇ ಸಾಲಿನಲ್ಲಿ ಉತ್ತಮ ಲಾಭಾಂಶ ಗಳಿಸಿದ್ದು, ಸದಸ್ಯರಿಗೆ ಉತ್ತಮ ರೀತಿಯ ಪಾಲು ಮುನಾಫೆಯನ್ನು ಹಂಚುವ ಗುರಿ ಹೊಂದಿದೆ…

Read More