Author: admin

ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ, ಸಾಧಕರಿಗೆ ಸನ್ಮಾನ ಮೂಲ್ಕಿ: ಪ್ರತಿಷ್ಠಿತ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ 2024 -25ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯು ಶನಿವಾರ ನಡೆಯಿತು. https://chat.whatsapp.com/EbVKVnWB6rlHT1mWtsgbch ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಗೆ ಗ್ರಾಹಕರು, ಸದಸ್ಯರು ಹಾಗೂ ನಿರ್ದೇಶಕರ ಸಹಕಾರ ಕಾರಣವಾಗಿದ್ದು, ಲಾಭಾಂಶದಲ್ಲಿ ಶೇ.8 ಡಿವಿಡೆಂಡ್ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಖೆಯ ಅಭಿವೃದ್ಧಿಗೆ ಮತ್ತಷ್ಟು ಸಹಕಾರ ಅಗತ್ಯ ಎಂದರು. ಮುಖ್ಯ ಅತಿಥಿಗಳಾಗಿ ಸೊಸೈಟಿಯ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪಂಜ, ನಿರ್ದೇಶಕರಾದ ಡಾ|ಗಣೇಶ್ ಅಮೀನ್ ಸಂಕಮಾರ್, ಧನಂಜಯ ಮಟ್ಟು, ಗೌತಮ್ ಜೈನ್, ಶರತ್ ಶೆಟ್ಟಿ ಪಂಚವಟಿ, ಉಮಾನಾಥ್ ಜೆ.ಶೆಟ್ಟಿಗಾರ್, ಜೈ ಕೃಷ್ಣ ಕೋಟ್ಯಾನ್, ಗಣೇಶ್ ಪ್ರಸಾದ್ ದೇವಾಡಿಗ, ಧನರಾಜ್ ಕೋಟ್ಯಾನ್, ಮಿರ್ಜಾ ಅಹ್ಮದ್, ಶೆರಿಲ್ ಆಯೋನ ಐಮನ್, ಹರೀಶ್ ಎನ್.ಪುತ್ರನ್, ನವೀನ್ ಸಾಲ್ಯಾನ್ ಪಂಜ, ಸಂದೀಪ್, ವಿಜಯಕುಮಾರ್ ಸನಿಲ್, ತನುಜಾ ಶೆಟ್ಟಿ…

Read More

ಬೆಳ್ಮಣ್: ಎಂಸಿಸಿ ಬ್ಯಾಂಕ್ ಲಿಮಿಟೆಡ್ ನ ಗ್ರಾಹಕ ಸೇವೆ ಮತ್ತು ಬ್ಯಾಂಕಿಂಗ್ ಶ್ರೇಷ್ಟತೆಯ ಪ್ರಯಾಣದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಶನಿವಾರ ಬೆಳ್ಮಣ್ ಶಾಖೆಯಲ್ಲಿ ತನ್ನ 9ನೇ ಎಟಿಎಂ ಅನಾವರಣಗೊಳಿಸಿತು. https://chat.whatsapp.com/EbVKVnWB6rlHT1mWtsgbch ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಎಟಿಎಂ ಅನ್ನು ಬೆಳ್ಮಣ್ ನ ಮಾನ್ಯ ಡೆವಲಪರ್ಸ್ ಮತ್ತು ಹೋಟೆಲ್ ಸೂರಜ್ ಇನ್‌ನ ಮಾಲೀಕ ಶೋಧನ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು. ಬೆಳ್ಮಣ್ ಸೇಂಟ್ ಜೋಸೆಫ್ ಚರ್ಚ್ ಧರ್ಮಗುರು ರೆವೆರೆಂಡ್ ಫಾದರ್ ಫ್ರೆಡ್ರಿಕ್ ಮಸ್ಕರೇನ್ಹಸ್ ಎಟಿಎಂ ಅನ್ನು ಆಶೀರ್ವಚಿಸಿ ಶಾಖೆ ಮತ್ತು ಅದರ ಗ್ರಾಹಕರಿಗೆ ಅನುಗ್ರಹ ಮತ್ತು ಸಮೃದ್ಧಿ ಬಯಸಿದರು. ಫ್ರೆಡ್ರಿಕ್ ವಿನ್ಸೆಂಟ್ ಅಂದ್ರಾದೆಯವರು ಎಟಿಎಂನಿoದ ಮೊದಲ ನಗದು ಹಿಂಪಡೆಯುವಿಕೆ ಪಡೆದರು. ಮುಖ್ಯ ಅತಿಥಿಗಳಾಗಿ ಫ್ರಾನ್ಸಿಸ್ ಡಿಸೋಜ, ಸೇಂಟ್ ಜೋಸೆಫ್ ಅರ್ಥ್ ಮೂವರ್ಸ್ ಮತ್ತು ಸೇಂಟ್ ಜೋಸೆಫ್ ಫುಯೆಲ್ಸ್ ಮಾಲೀಕ ಡೊಮಿನಿಕ್ ಆಂದ್ರಾದೆ, ಸೇಂಟ್ ಜೋಸೆಫ್ ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಎಂಸಿಸಿ ಬ್ಯಾಂಕ್ ಬೆಳ್ಮಣ್ ಶಾಖೆಯ…

Read More

ಮಂಗಳೂರು: ದಿವ್ಯಜ್ಯೋತಿ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ., ಪಂಪ್‌ವೆಲ್ ಮಂಗಳೂರು ಇವರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಮಂಗಳೂರು, ಮಂಗಳಾದೇವಿ ಮತ್ತು ಜಪ್ಪಿನಮೊಗರು ಗ್ರಾಮ ಯುವಕ ಮಂಡಲ ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ ಹಾಗೂ ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ , ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯ ತಂಡದವರಿಂದ ಉಚಿತ ನೇತ್ರ ತಪಾಸಣೆ, ದಂತ ಚಿಕಿತ್ಸೆ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣೆ ದಿನಾಂಕ ಆಗಸ್ಟ್‌ 10ರಂದು ಪೂರ್ವಾಹ್ನ 9.30 ರಿಂದ ಅಪರಾಹ್ನ 12.30ರ ವರೆಗೆ ಲಯನ್ಸ್ ಚೈಲ್ಡ್ ಕೇರ್ ಸೆಂಟರ್ ಜಪ್ಪಿನಮೊಗರು ಇಲ್ಲಿ ಆಯೋಜಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಈ ಶಿಬಿರದಲ್ಲಿ ಕಣ್ಣಿನ ತಪಾಸಣೆ , ಅಗತ್ಯವುಳ್ಳವರಿಗೆ ಉಚಿತ ಕನ್ನಡಕ ವಿತರಣೆ, ಮಧುಮೇಹ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ಸಾಮಾನ್ಯ ವೈದ್ಯಕೀಯ ತಪಾಸಣೆ, ಹಲ್ಲುಗಳ ಶುಚಿಗೊಳಿಸುವಿಕೆ , ರೋಗಗ್ರಸ್ಥ ಹಲ್ಲುಗಳನ್ನು ಕೀಳುವುದು, ಉಚಿತ ಔಷಧ ವಿತರಣೆಯ ಸೇವೆಗಳು ಲಭ್ಯವಿದ್ದು…

Read More

ಮಂಗಳೂರು: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಪ್ರಾಯೋಜಕತ್ವದಲ್ಲಿ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸಹಭಾಗಿತ್ವದಲ್ಲಿ ಮಂಗಳೂರಿನ ಕುದ್ಮುಲ್‌ ರಂಗರಾವ್ ಪುರಭವನದ ಮುಂಭಾಗದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ ನಾಮಕರಣದ ಫಲಕ ಅನಾವರಣ ಮತ್ತು ಅಭಿನಂದನಾ ಸಮಾರಂಭ ಆ.10ರಂದು ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಬೆಳಗ್ಗೆ 9.30ಕ್ಕೆ ಸ್ಪೀಕರ್ ಯು.ಟಿ. ಖಾದ‌ರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್ ನಾಮಫಲಕ ಅನಾವರಣ ಮಾಡುವರು. ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘದ ಕೋರಿಕೆಯಂತೆ ರಾಜ್ಯ ಸರಕಾರ ಮಂಗಳೂರು ಪುರಭವನದ ಮುಂಭಾಗದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ತೆರಳುವ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪ ರಸ್ತೆ ಎಂದು ನಾಮಕರಣ ಮಾಡಿ ಆದೇಶಿಸಿದೆ ಎಂದು ಮಾತೃಸಂಘದ ಪ್ರಕಟಣೆ ತಿಳಿಸಿದೆ. ಬೆಳಗ್ಗೆ 10.30ಕ್ಕೆ ಪೊಲೀಸ್‌ ಲೇನ್ ನಾಸಿಕ್ ಬಿ.ಎಚ್.…

Read More

ಮಂಗಳೂರು: ಸಹಕಾರ ಮಾಣಿಕ್ಯ ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿ ವತಿಯಿಂದ ಆಗಸ್ಟ್‌ 24ರಂದು ಬೆಳಗ್ಗೆ 11ಕ್ಕೆ ಸಂಘದ ಸ್ಥಾಪಕಾಧ್ಯಕ್ಷ ದಿ.ಕೆ.ಬಿ ಜಯಪಾಲ ಶೆಟ್ಟಿ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಮಂಗಳೂರಿನ ಬಂಟ್ಸ್‌ಹಾಸ್ಟೆಲ್‌ನಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ಶ್ರೀಮತಿ ಗೀತಾ ಎಸ್‌.ಎಂ ಶೆಟ್ಟಿ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು 2024-25ನೇ ಸಾಲಿನಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿರುವ ಸಂಘದ ಸಿಬ್ಬಂದಿಗಳ ಹಾಗೂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ನಿಟ್ಟೆ ಡೀಮ್ಡ್‌ ಯೂನಿವರ್ಸಿಟಿಯ ವೈಸ್‌ ಚಾನ್ಸಲರ್‌ ಪ್ರೊ.ಡಾ.ಎಂ.ಎಸ್‌ ಮೂಡಿತ್ತಾಯ ಕಾರ್ಯಕ್ರಮ ಉದ್ಘಾಟಿಸುವರು. ಶ್ರೀ ರಾಮಕೃಷ್ಣ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷರಾದ ಕೆ.ಜೈರಾಜ್‌ ಬಿ.ರೈ ಅಧ್ಯಕ್ಷತೆ ವಹಿಸುವರು. ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ಎಚ್‌.ಎನ್‌ ರಮೇಶ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಸಂಘದ ಉಪಾಧ್ಯಕ್ಷರಾದ ಲಕ್ಷ್ಮೀ ಜಯಪಾಲ ಶೆಟ್ಟಿ, ಆಡಳಿತ ಮಂಡಳಿ ನಿರ್ದೇಶಕರಾದ ಎ.ರತ್ನಕಾಂತಿ ಶೆಟ್ಟಿ, ಕೆ.ಸೀತಾರಾಮ ರೈ ಸವಣೂರು, ಡಾ.ಕೆ.ಸುಭಾಶ್ಚಂದ್ರ ಶೆಟ್ಟಿ, ಪಿ.ಶಿವರಾಮ ಅಡ್ಯಂತಾಯ, ಸಿಎ…

Read More

ಮಂಗಳೂರು: ರಾಜ್ಯದಲ್ಲಿ ನಿರಂತರ ಸುರಿಯುತ್ತಿರುವ ಮಳೆಯುಂದಾಗಿ ಅಡಿಕೆ ಬೆಳೆ ಭಾಗಶಃ ನಾಶವಾಗಿದ್ದು, ಮಳೆ ಇನ್ನಷ್ಟು ಮುಂದುವರಿದರೆ ಹೆಚ್ಚಿನ ಬೆಳೆ ನಾಶವಾಗಲಿದೆ. ಭಾರಿ ಮಳೆಯಿಂದ ನಾಶವಾಗಿರುವ ಅಡಿಕೆ ಬೆಳೆಯ ನಾಶದ ಪ್ರಮಾಣದ ಬಗ್ಗೆ ಸಮೀಕ್ಷೆ ನಡೆಸಿ, ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ ಮನವಿ ಮಾಡಿದ್ದಾರೆ. https://chat.whatsapp.com/EbVKVnWB6rlHT1mWtsgbch ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಾಡಿಕೆಗಿಂತಲೂ ಜಾಸ್ತಿ ಮಳೆ ಸುರಿಯುತ್ತಿದೆ. ಈಗಾಗಲೇ ಎರಡು ಬಾರಿ ಔಷಧ ಸಿಂಪಡಿಸಿದರೂ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕೊಳೆರೋಗದಿಂದ ಅರ್ಧದಷ್ಟು ಬೆಳೆ ನಾಶವಾಗಿದೆ. ಸರಕಾರ ಕೂಡಲೇ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಶೇ. 5.5 ಮುಂದುವರಿಕೆ: ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರ ಪ್ರಕಟಣೆ ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಸಂಜಯ್ ಮಲ್ಹೋತ್ರಾ ಪ್ರಸಕ್ತ ಆರ್ಥಿಕ ವರ್ಷದ ಮೂರನೇ ದ್ವೈಮಾಸಿಕ ಆರ್ಥಿಕ ನೀತಿಯನ್ನು ಘೋಷಿಸಿದ್ದು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ, ಶೇ.5.5 ಅನ್ನೇ ಮುಂದುವರಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಆರು ಸದಸ್ಯರ ಹಣಕಾಸು ಸಮಿತಿ ಆರ್ಥಿಕ ವರ್ಷ 2026ರ ಮೂರನೇ ದ್ವೈಮಾಸಿಕ ನೀತಿಯನ್ನು ಪ್ರಕಟಿಸಿದೆ. ಭಾರತದ ಆಮದುಗಳ ಮೇಲೆ ಶೇ.25ರಷ್ಟು ಅಮೆರಿಕಾದ ಸುಂಕದ ನಿರ್ಧಾರ, ಆಗಸ್ಟ್ ಏಳರಿಂದ ಅನ್ವಯವಾಗುವಂತೆ ಜಾರಿಗೆ ಬರಲಿದೆ. ರಷ್ಯಾ ಜೊತೆಗಿನ ವ್ಯವಹಾರ ಮುಂದುವರಿಸಿಕೊಂಡು ಹೋಗುವ ಭಾರತದ ನಿರ್ಧಾರದಿಂದಾಗಿ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರೆಪೋ ದರ ಶೇ. 5.5ರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ. ಟ್ರಂಪ್ ಹೇರಿದ ಸುಂಕ ಮತ್ತು ಹಣದುಬ್ಬರದ ಕಾರಣಗಳಿಂದ ರೆಪೋ ದರದಲ್ಲಿ ಬದಲಾವಣೆ ತರುವ ಮುನ್ಸೂಚನೆಯನ್ನು ಸಂಜಯ್ ಮಲ್ಹೋತ್ರಾ ನೀಡಿದ್ದರು. ಜೂನ್ ತಿಂಗಳಲ್ಲಿ ಐವತ್ತು…

Read More

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಬಳಿಕ ವಾಟ್ಸ್ಯಾಪ್‌ ಮೇಲೂ ವಂಚಕರ ಕಣ್ಣು..! ಮಂಗಳೂರು: ಯಾರ್ಯಾರದ್ದೋ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಖಾತೆಗಳನ್ನು ನಕಲಿಯಾಗಿ ಸೃಷ್ಟಿಸಿ ಪರಿಚಯಸ್ಥರಲ್ಲಿ ಹಣದ ಬೇಡಿಕೆ ಇಡುತ್ತಿದ್ದ ವಂಚಕರ ಜಾಲ ಇದೀಗ ವಾಟ್ಸ್ಯಾಪ್‌ ಮೇಲೂ ಕಣ್ಣು ಹಾಕಿದೆ. ವಾಟ್ಸ್ಯಾಪ್‌ ನಂಬರ್‌ ಅನ್ನೇ ಹೈಜಾಕ್ ಮಾಡಿ ಅದರಿಂದ ಸಂದೇಶ ಕಳುಹಿಸಿ ಹಣ ಪೀಕಿಸಲು ತಂತ್ರ ಹೂಡಿದ ಘಟನೆ ಮಂಗಳವಾರ ಪುತ್ತೂರಿನಲ್ಲಿ ವರದಿಯಾಗಿದೆ. https://chat.whatsapp.com/EbVKVnWB6rlHT1mWtsgbch ಪತ್ರಿಕಾ ಸಂಸ್ಥೆಯೊಂದರ ಉದ್ಯೋಗಿಯ ವಾಟ್ಸ್ಯಾಪ್‌ ಖಾತೆಯನ್ನು ಹ್ಯಾಕ್ ಮಾಡಿದ ಸೈಬರ್ ವಂಚಕರು ಅವರ ಸಂಪರ್ಕ ಪಟ್ಟಿಯಲ್ಲಿದ್ದ ಅವರ ಸ್ನೇಹಿತರಿಗೆ ತುರ್ತು ಸಂದೇಶ ರವಾನಿಸಿ ತಾನು ಕಷ್ಟದಲ್ಲಿದ್ದು, ಯುಪಿಐ ನಂಬರ್‌ ಸ್ಟ್ರಕ್‌ ಆಗಿದೆ ಎಂದು ನಂಬಿಸುವಂತೆ ಸಂದೇಶ ಕಳುಹಿಸಿ ಹಣ ನೀಡುವಂತೆ ಕೋರಿದ್ದರು. ಆ ಉದ್ಯೋಗಿಯ ಸಂಪರ್ಕದಲ್ಲಿದ್ದ 100ಕ್ಕೂ ಅಧಿಕ ಮಂದಿಗೆ ಈ ಸಂದೇಶ ರವಾನೆ ಆಗಿದ್ದು ಈ ಸಮಯದಲ್ಲಿ ವಂಚನೆಗೆ ಒಳಗಾದ ವ್ಯಕ್ತಿಯ ಮೊಬೈಲ್ ಕಾರ್ಯನಿರ್ವಹಣೆಯೂ ಕೆಲವು ಗಂಟೆ ಕಾಲ ಕಾರ್ಯಾಚರಣೆಯನ್ನೇ ನಿಲ್ಲಿಸಿತ್ತು. ವಾಟ್ಸ್ಯಾಪ್‌ ನಂಬರ್‌ ಹ್ಯಾಕ್ ಮಾಡಿ ಅವರದೇ ನಂಬರ್‌ನಲ್ಲಿ…

Read More

ಕಾರ್ಕಳ: ಸೂರ್ಯ ಸೌಹಾರ್ದ ಕೋ-ಆಪರೇಟಿವ್‌ ಸೊಸೈಟಿ ಹೆಬ್ರಿ ಇದರ ನೂತನ ಕಾರ್ಕಳ ಶಾಖೆ ಹಾಗೂ ಆಡಳಿತ ಕಚೇರಿಯ ಉದ್ಘಾಟನಾ ಸಮಾರಂಭ ಆಗಸ್ಟ್‌ 17 ಭಾನುವಾರ ಬೆಳಗ್ಗೆ 10 ಗಂಟೆಗೆ ಫಾರ್ಮನ್ ಲೋಟಸ್ ಕಾಂಪ್ಲೆಕ್ಸ್, ಜೋಡುರಸ್ತೆ ಕಾರ್ಕಳ ಇಲ್ಲಿ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಹೋಟೆಲ್‌ ಉಷಾದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಸುನೀಲ್ ಕುಮಾರ್ ಉದ್ಘಾಟಿಸುವರು. ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ ದೀಪ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯ ನಿರ್ದೇಶಕ ಮಂಜುನಾಥ ಎಸ್‌.ಕೆ, ಕರ್ನಾಟಕ ರಾಜ್ಯ ತೂಕ ಮತ್ತು ಅಳತೆಗಾರರ ಪರವಾನಗಿದಾರರ ಸಂಘದ ಉಪಾಧ್ಯಕ್ಷ, ಸೂರ್ಯ ಸ್ಕೇಲ್‌ನ ಸೋಮಶೇಖರ ಬಿ.ವಿ ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಅಂಪಾರು, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿಯ ಮಾಜಿ ವತ್ತಿಪರ ನಿರ್ದೇಶಕ ಬೋಳ ಸದಾಶಿವ ಶೆಟ್ಟಿ, ಉಡುಪಿ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್‌ ಬಿ.ಎಸ್‌, ಹೆಬ್ರಿ ವ್ಯವಸಾಯ ಸೇವಾ…

Read More

ನವದೆಹಲಿ: ಕರ್ನಾಟಕದಲ್ಲಿರುವ 6,291 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ 125 ಸಂಘಗಳು ದಿವಾಳಿಯಾಗಿದ್ದು, ಅವುಗಳನ್ನು ಮುಚ್ಚುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ಅವರು ಮಂಗಳವಾರ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ. https://chat.whatsapp.com/EbVKVnWB6rlHT1mWtsgbch ಮುಚ್ಚುವ ಹಂತದಲ್ಲಿರುವ 125 ಸಹಕಾರ ಸಂಘಗಳ ಪೈಕಿ ಅತೀ ಹೆಚ್ಚು 28 ಸಂಘಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿವೆ. ಹಾಸನದಲ್ಲಿ 13 ಸಂಘಗಳು, 12 ಸಂಘಗಳು ಬೆಳಗಾವಿಯಲ್ಲಿ ಇವೆ. ರಾಜ್ಯದ 6,291 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ 64 ಸಂಘಗಳು ಈಗ ಕಾರ್ಯಾಚರಿಸುತ್ತಿಲ್ಲ ಎಂದು ಅಮಿತ್ ಷಾ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತಾ ಹೇಳಿದರು. ಕಳೆದ ಐದು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ 428 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೋಂದಣಿ ಆಗಿದೆ. ಈ ಪೈಕಿ 187 ಸಂಘಗಳು ಬೆಳಗಾವಿಯೊಂದರಲ್ಲೇ ನೋಂದಣಿ ಆಗಿದೆ ಎಂದು ಅವರು ಲೋಕಸಭೆಯಲ್ಲಿ ರಾಯಚೂರು ಸಂಸದ ಕುಮಾರ ನಾಯಕ ಕೇಳಿದ ಪ್ರಶ್ನೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.…

Read More