ನವದೆಹಲಿ: ಲಂಡನ್‌ನ ಸೆಂಟ್ರಲ್ ಬ್ಯಾಂಕಿಂಗ್ ಡಿಜಿಟಲ್ ಉಪಕ್ರಮಗಳಿಗಾಗಿ ಕೊಡಮಾಡುವ ಡಿಜಿಟಲ್ ಟ್ರಾನ್ಸ್‌ಫಾರ್ಮೇಷನ್ ಪ್ರಶಸ್ತಿ 2025 ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಗೆದ್ದಿಕೊಂಡಿದೆ.
https://chat.whatsapp.com/EbVKVnWB6rlHT1mWtsgbch
ಜನವರಿ 2023ರಲ್ಲಿ ಆರ್‌ಬಿಐ ಪ್ರಾರಂಭಿಸಿದ ಸಾರಥಿ ಮತ್ತು ಪ್ರವಾಹ್ ಎಂಬ ಡಿಜಿಟಲ್ ವ್ಯವಸ್ಥೆಯು ಆರ್‌ಬಿಐನ ಆಂತರಿಕ ಕಾರ್ಯಪ್ರವಾಹಗಳನ್ನು ಡಿಜಿಟಲೀಕರಣಗೊಳಿಸಿತು. ದಾಖಲೆ ಸಂಗ್ರಹ, ದಾಖಲೆ ನಿರ್ವಹಣೆ ಮತ್ತು ಡೇಟಾ ವಿಶ್ಲೇಷಣೆಯನ್ನು ಈ ವ್ಯವಸ್ಥೆಗಳ ಮೂಲಕ ಹೆಚ್ಚಿಸಿತು. 2024ರ ಮೇ ತಿಂಗಳಲ್ಲಿ ಇದು ಬಾಹ್ಯ ಬಳಕೆದಾರರಿಗಾಗಿ ನಿಯಂತ್ರಕ ಅಪ್ಲಿಕೇಶನ್‌ಗಳನ್ನು ವ್ಯವಸ್ಥಿತಗೊಳಿಸಿತು. ಸಲ್ಲಿಕೆಗಳನ್ನು ಸಾರಥಿ ವ್ಯವಸ್ಥೆಯಲ್ಲಿ ಸಂಯೋಜಿಸಿತು. ಈ ಪ್ರಶಸ್ತಿಯು ಸಾರಥಿ ವ್ಯವಸ್ಥೆಯ ಮೂಲಕ ವ್ಯಾಪಕ ತರಬೇತಿ ಮತ್ತು ಹಿರಿಯ ನೋಡಲ್ ಅಧಿಕಾರಿಗಳು ಮತ್ತು ಸಾರಥಿ ಮಿತ್ರರಿಂದ ಬೆಂಬಲ ಒಳಗೊಂಡಂತೆ ಆರ್‌ಬಿಐನ ಸಹಯೋಗದ ಪ್ರಯತ್ನಗಳನ್ನು ಗುರುತಿಸಿ ಡಿಜಿಟಲ್ ಕಾರ್ಯಾಚರಣೆಗಳಿಗೆ ಸುಗಮ ಪರಿವರ್ತನೆಯನ್ನು ಖಚಿತಪಡಿಸುತ್ತದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com