ನವದೆಹಲಿ: ಮಹತ್ವದ ನಿರ್ಧಾರವೊಂದರಲ್ಲಿ ಎರಡು ದಶಕಗಳ ಬಳಿಕ ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಹೊಸ ಪರವಾನಗಿ ನೀಡುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಸಜ್ಜಾಗಿದೆ. ಪಟ್ಟಣ ಸಹಕಾರಿ ಬ್ಯಾಂಕಿಂಗ್ ವಲಯದ ಚಟುವಟಿಕೆಗಳನ್ನು ಉತ್ತೇಜಿಸಲು ಕಡಿಮೆ ಬಂಡವಾಳದ ಅವಶ್ಯಕತೆಯ ಬಗ್ಗೆ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಕಾರಣ ಆರ್‌ಬಿಐ ಈ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ಹೇಳಿವೆ.
https://chat.whatsapp.com/FCEnlTkAKCC0MGPhXtX4i4
ವರದಿಯೊಂದರ ಪ್ರಕಾರ ಆರ್‌ಬಿಐ 2004ರಲ್ಲಿ ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಪರವಾನಗಿ ನೀಡುವುದನ್ನು ಸ್ಥಗಿತಗೊಳಿಸಿತ್ತು. ಇದೀಗ ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಹೊಸ ಪರವಾನಗಿಗಳನ್ನು ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡುವ ನಿರೀಕ್ಷೆಯಿದೆ. ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಪರವಾನಗಿ ನೀಡುವುದನ್ನು ಪುನರಾರಂಭಿಸಬೇಕೇ, ಬೇಡವೇ ಎಂಬ ಬಗ್ಗೆ ಪ್ರತಿಕ್ರಿಯೆ ಕೋರಿ ಆರ್‌ಬಿಐ ಜನವರಿಯಲ್ಲಿ ಮಾಹಿತಿ ಕೇಳಿತ್ತು. 2004ರಿಂದ ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ನಿಯಂತ್ರಕ ಮೇಲ್ವಿಚಾರಣೆ ಮತ್ತು ಮೇಲ್ವಿಚಾರಣಾ ಮಾನದಂಡಗಳು ಗಮನಾರ್ಹವಾಗಿ ಸುಧಾರಿಸಿದ್ದು, ಆರ್‌ಬಿಐ ಈ ವಲಯದಲ್ಲಿ ಪರವಾನಗಿ ನೀಡುವ ಬಗ್ಗೆ ಮುಂದಾಗಿದೆ ಎನ್ನಲಾಗಿದೆ. ಮೇಲ್ವಿಚಾರಣಾ ಕಾರ್ಯವಿಧಾನಗಳು, ಹೆಚ್ಚುವರಿ ಹಣಕಾಸು ಸೇರ್ಪಡೆ, ಸಹಕಾರಿ ಬ್ಯಾಂಕುಗಳ ಸುಧಾರಿತ ಆರ್ಥಿಕ ಬಂಡವಾಳ, ತಂತ್ರಜ್ಞಾನ ಮತ್ತು ಜ್ಞಾನ ಹಂಚಿಕೆಯಂತಹ ಕ್ಷೇತ್ರಗಳಲ್ಲಿ ವಲಯಕ್ಕೆ ಅಂಬ್ರೆಲಾ ಸಂಘಟನೆಯಿಂದ ಬೆಂಬಲಗಳು ಇಂಥ ಕ್ರಮಗಳಿಂದ ಆರ್‌ಬಿಐ ಪಟ್ಟಣ ಸಹಕಾರಿ ಬ್ಯಾಂಕುಗಳಿಗೆ ಮತ್ತೊಮ್ಮೆ ಪರವಾನಗಿ ನೀಡುವುದರ ಬಗ್ಗೆ ಯೋಜಿಸಿದೆ ಎಂದು ಹೇಳಲಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com

