Author: admin

ಮುಂದಿನ ಹತ್ತು ವರ್ಷಗಳ ಗುರಿ, ಆಶಾವಾದ, ಪ್ರಗತಿಯತ್ತ ದೃಢ ನಿಶ್ಚಯ ಇರಲಿ: ಬಿಷಪ್‌ ಜೆರಾಲ್ಡ್‌ ಐಸಾಕ್‌ ಲೋಬೋ ಸಲಹೆ ಮಂಗಳೂರು: ಬ್ಯಾಂಕಿಂಗ್‌ನಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಲು ಮತ್ತು ಮುಂದಿನ ಹಂತದ ಬೆಳವಣಿಗೆಗೆ ವಿಚಾರ, ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು, ಎಂಸಿಸಿ ಬ್ಯಾಂಕ್ ಮಂಗಳೂರಿನಲ್ಲಿ “ಐಡಿಯಾ ಸಮ್ಮಿತ್ 2025” (IDEA SUMMIT -2025) ಅನ್ನು ಆಯೋಜಿಸಿತ್ತು. ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೋ ಅಧ್ಯಕ್ಷತೆ ವಹಿಸಿದ್ದರು. ಹೆಸರಾಂತ ಎನ್‌ಆರ್‌ಐ ಉದ್ಯಮಿ, ದಾನಿ ಮೈಕಲ್ ಡಿಸೋಜ, ಎನ್‌ಐಟಿಕೆ ಸುರತ್ಕಲ್‌ನ ನಿವೃತ್ತ ಪ್ರಾಧ್ಯಾಪಕರು (HAG) ಪ್ರೊ.ಡಾ|ಅಲೋಶಿಯಸ್ ಸಿಕ್ವೇರ, ಆರ್‌ಎಂಸಿಆರ್ & ಕಂ. ಪಾಲುದಾರರಾದ ಸಿಎ ಮ್ಯಾಕ್ಸಿಮ್ ಎಂ.ಫೆರ್ನಾಂಡಿಸ್, ಚಾರ್ಟರ್ಡ್ ಅಕೌಂಟೆಂಟ್, ಆರ್ಬಿಟ್ರೇಟರ್, ಅತಿಥಿ ಪ್ರಾಧ್ಯಾಪಕ ಪ್ರೊ. ಸಿಎ ಲಾಯ್ನಲ್ ಅರಾನ್ಹಾ ಮತ್ತು ಅನುಭವಿ ಬ್ಯಾಂಕರ್ ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರದ ಮಾಜಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಅಲೆನ್ ಸಿ.ಪಿರೇರ ಉಪಸ್ಥಿತರಿದ್ದರು. https://chat.whatsapp.com/EbVKVnWB6rlHT1mWtsgbch ಕಳೆದ ಏಳು ವರ್ಷಗಳಲ್ಲಿ ಎಂಸಿಸಿ ಬ್ಯಾಂಕ್‌ನ ಗಮನಾರ್ಹ…

Read More

ಶ್ರೀ ಪೂರ್ಣಾನಂದ ಸಹಕಾರಿಯ ಬಿಜೈ ಶಾಖೆ ಸ್ಥಳಾಂತರ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಭರವಸೆ ಮಂಗಳೂರು: ಸಹಕಾರಿ ಕಾಯಿದೆ ನಿಯಮಾವಳಿ ಪ್ರಕಾರ ಸಹಕಾರಿ ಸಂಸ್ಥೆಗಳಿಗೆ ನಾಮನಿರ್ದೇಶನ ಸದಸ್ಯತ್ವ  ತಪ್ಪು. ಈ ತರದ ನಾಮನಿರ್ದೇಶಿತ  ಸದಸ್ಯರಾದವರಿಗೆ ಮತದಾನ ಹಕ್ಕು ಕೂಡ ಇಲ್ಲ. ಹಾಗಾಗಿ ಈ ಕ್ರಮವನ್ನು  ಕೈಬಿಡುವಂತೆ ವಿಧಾನಸಭೆಯಲ್ಲಿ ಸರಕಾರವನ್ನು  ಆಗ್ರಹಿಸುವುದಾಗಿ ಶಾಸಕ ವೇದವ್ಯಾಸ ಕಾಮತ್ ಭರವಸೆ ನೀಡಿದ್ದಾರೆ. https://chat.whatsapp.com/EbVKVnWB6rlHT1mWtsgbch ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಬಿಜೈ  ಶಾಖಾ ಸ್ಥಳಾಂತರ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ನಿರ್ದೇಶಕಿ ಭಾರತಿ ಭಟ್ ಮುಂದಿಟ್ಟ ಮನವಿಗೆ ಪ್ರತಿಯಾಗಿ ಮೇಲಿನ ಆಶ್ವಾಸನೆ ನೀಡಿದರು. ಪ್ರತಿಯೊಂದು ಹಳ್ಳಿಗೂ ಒಂದು ಸೊಸೈಟಿ ಬೇಕೆಂಬ ಕೇಂದ್ರ ಸರಕಾರದ ಆಶಯದ ಹಿಂದೆ ಅರ್ಥವಿದೆ. ಜನರಲ್ಲಿ ಉಳಿತಾಯ ಪ್ರವೃತ್ತಿ ಗಟ್ಟಿ ಮಾಡುವ ಸಹಕಾರಿ ಸಂಸ್ಥೆಗಳ ಆರಂಭದ ಹಿಂದೆ  ತಾಯಂದಿರ ಉಳಿತಾಯ ಪ್ರವೃತ್ತಿಯ ಸೊಗಡಿದೆ, ಸ್ಫೂರ್ತಿಯಿದೆ ಎಂದರು. ಆರ್ಥಿಕ ಸುರಕ್ಷೆ…

Read More

ದೇಶದ ಜಿಡಿಪಿ ಪಾಲು ಮೂರು ಪಟ್ಟು ಹೆಚ್ಚಳ, 50 ಕೋಟಿ ಸಕ್ರಿಯ ಸದಸ್ಯರ ಸಂಯೋಜನೆ ಸಹಕಾರಿ ವಲಯದ ಪುನರುಜ್ಜೀವನದ ಗುರಿ ಸಹಕಾರಕ್ಕೆ ಭವಿಷ್ಯವಿಲ್ಲ ಎಂಬ ಕಾಲವೊಂದಿತ್ತು; ಆದರೆ ಈಗ ಸಹಕಾರವೇ ಭವಿಷ್ಯ ಎಂಬಂತಾಗಿದೆ: ಅಮಿತ್‌ ಷಾ ಮಾರ್ಮಿಕ ನುಡಿ ನವದೆಹಲಿ: ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಸಹಕಾರಿ ನೀತಿ -2025ನ್ನು ಗುರುವಾರ ಸಂಜೆ ದೆಹಲಿಯ ಉರ್ಜಾ ಭವನದಲ್ಲಿ ಕೇಂದ್ರ ಸಹಕಾರ ಸಚಿವ ಅಮಿತ್‌ ಷಾ ಅನಾವರಣ ಮಾಡಿದ್ದು ಸಹಕಾರಿ ವಲಯದ ಪುನರುಜ್ಜೀವನದ ಗುರಿ ಹೊಂದಲಾಗಿದೆ. 2034ರ ವೇಳೆಗೆ ದೇಶದ ಜಿಡಿಪಿಗೆ ಸಹಕಾರ ವಲಯದ ಪಾಲನ್ನು ಮೂರು ಪಟ್ಟು ಹೆಚ್ಚಿಸುವ ಗುರಿ ಹೊಂದಿರುವ ದೂರದೃಷ್ಟಿಯ ಸಹಕಾರ ನೀತಿಯನ್ನು ಅನಾವರಣ ಮಾಡಿದ ಬಳಿಕ ಮಾತನಾಡಿದ ಸಚಿವರು ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಕಟಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch 2025ರ ವೇಳೆಗೆ ದೇಶದ ಜಿಡಿಪಿಗೆ ಸಹಕಾರ ವಲಯದ ಕೊಡುಗೆಯನ್ನು ಮೂರು ಪಟ್ಟು ಹೆಚ್ಚಿಸುವುದು ಮತ್ತು ೫೦ ಕೋಟಿ ಸಕ್ರಿಯ ಸದಸ್ಯರನ್ನು ಸಹಕಾರ ಕ್ಷೇತ್ರದಲ್ಲಿ ಸಂಯೋಜಿಸುವ ಎಂಬ ಮಹತ್ವಾಕಾಂಕ್ಷೆಯ ಗುರಿ ಹೊಂದಲಾಗಿದೆ. ಸಹಕಾರಿ ಸಂಸ್ಥೆಗಳಿಗೆ…

Read More

ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ಮೌಲ್ಯದ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರಗಳ ವಿತರಣೆ ಉಡುಪಿ: ಇಲ್ಲಿನ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಉಡುಪಿ ಜಿಲ್ಲೆಯ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಶೈಕ್ಷಣಿಕ ಪರಿಕರ, ಪ್ರತಿಭಾ ಪುರಸ್ಕಾರ, ಸಸಿ ವಿತರಣಾ ಸಮಾರಂಭ ಉಡುಪಿ ಅಜ್ಜರಕಾಡು ಪುರಭವನದಲ್ಲಿ ಇತ್ತೀಚೆಗೆ ಜರಗಿತು. https://chat.whatsapp.com/EbVKVnWB6rlHT1mWtsgbch ಉಡುಪಿ ತಹಸೀಲ್ದಾರ್ ಪಿ.ಗುರುರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ.ಆರ್ ಮಾತನಾಡಿದರು. ಉಡುಪಿ ನಗರ ಸಭೆ ಪರಿಸರ ಅಭಿಯಂತರ ರವಿಪ್ರಕಾಶ್, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್, ಸೊಸೈಟಿಯ ಉಪಾಧ್ಯಕ್ಷರಾದ ಜಾರ್ಜ್ ಸ್ಯಾಮ್ಯುಯೆಲ್, ನಿರ್ದೇಶಕರಾದ ಪುರುಷೋತ್ತಮ ಪಿ.ಶೆಟ್ಟಿ, ಜಯಾ ಶೆಟ್ಟಿ, ಸದಾಶಿವ ನಾಯ್ಕ್, ಎಲ್.ಉಮಾನಾಥ, ವಿನಯ ಕುಮಾರ್ ಟಿ.ಎ, ಅಬ್ದುಲ್ ರಜಾಕ್ ಉಪಸ್ಥಿತರಿದ್ದರು. ಅಂತಾರಾಷ್ಟ್ರೀಯ ಸಹಕಾರ ವರ್ಷ 2025 ಅಂಗವಾಗಿ “ಏಕ್ ಪೇಡ್ ಮಾ ಕೆ ನಾಮ್” ಧ್ಯೇಯವಾಕ್ಯದಡಿ ಗಿಡ ನೆಡುವ ಸಂಕಲ್ಪ, ಹಸಿರು ಪರಿಸರ…

Read More

ಕಾರವಾರ: ದಿವಾಳಿ ಸ್ಥಿತಿಯಲ್ಲಿರುವ ಕಾರವಾರ ಅರ್ಬನ್ ಸಹಕಾರ ಬ್ಯಾಂಕಿನ ಪರವಾನಗಿಯನ್ನು ರದ್ದುಗೊಳಿಸಿರುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಗುರುವಾರ ಹೇಳಿದೆ. ಆರ್‌ಬಿಐನ ಈ ಕ್ರಮದಿಂದ ಇಂದಿನಿಂದ ಜಾರಿಗೆ ಬರುವಂತೆ ಬ್ಯಾಂಕಿಂಗ್ ವ್ಯವಹಾರವನ್ನು ಮುಕ್ತಾಯಗೊಳಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಕಾರವಾರ ಅರ್ಬನ್ ಸಹಕಾರ ಬ್ಯಾಂಕ್ ಅನ್ನು ಬಂದ್ ಮಾಡಲು ಮತ್ತು ಬ್ಯಾಂಕ್‌ಗೆ ಲಿಕ್ವಿಡೇಟರ್ (ಒಂದು ಕಂಪನಿಯ ದಿವಾಳಿತನ ಅಥವಾ ಮುಚ್ಚುವಿಕೆ ಪ್ರಕ್ರಿಯೆಯಲ್ಲಿ ತೊಡಗಿರುವ ವ್ಯಕ್ತಿ ಅಥವಾ ಸಂಸ್ಥೆ) ನೇಮಿಸಲು ಆದೇಶ ನೀಡುವಂತೆ ಕರ್ನಾಟಕ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಕೋರಲಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ದಿವಾಳಿಯಾದ ಮೇಲೆ ಪ್ರತಿಯೊಬ್ಬ ಠೇವಣಿದಾರರು, ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ ರೂ. 5 ಲಕ್ಷದವರೆಗೆ ಠೇವಣಿ ವಿಮೆ ಹಣ ಪಡೆಯಲು ಅರ್ಹರಾಗಿರುತ್ತಾರೆ. ಬ್ಯಾಂಕ್ ಸಲ್ಲಿಸಿದ ಮಾಹಿತಿಯ ಪ್ರಕಾರ ಶೇ.92.9ರಷ್ಟು ಠೇವಣಿದಾರರು ಡಿಐಸಿಜಿಸಿಯಿಂದ ಸಂಪೂರ್ಣ ಠೇವಣಿ ಹಣ ಪಡೆಯಲು ಅರ್ಹರಾಗಿದ್ದಾರೆ ಎಂದು ಆರ್‌ಬಿಐ ತಿಳಿಸಿದೆ. ಡಿಐಸಿಜಿಸಿ ಈಗಾಗಲೇ ಒಟ್ಟು ವಿಮೆ ಠೇವಣಿಗಳಲ್ಲಿ ರೂ. 37.79 ಕೋಟಿ ಪಾವತಿಸಿರುವ ವಿವರ ನೀಡಿರುವ…

Read More

ದೇಶಾದ್ಯಂತ ಬೃಹತ್‌ ಪ್ರಮಾಣದಲ್ಲಿ ಸಹಕಾರಿ ಪುನರುಜ್ಜೀವನ ಪ್ರಕ್ರಿಯೆ: ಲೋಕಸಭೆಯಲ್ಲಿ ಸಚಿವ ಅಮಿತ್‌ ಷಾ ಮಾಹಿತಿ  ನವದೆಹಲಿ: ದೇಶಾದ್ಯಂತ ಬೃಹತ್‌ ಮಟ್ಟದಲ್ಲಿ ಸಹಕಾರಿ ಪುನರುಜ್ಜೀವನ ಪ್ರಕ್ರಿಯೆ ನಡೆಯುತ್ತಿದ್ದು, ಇದರ ಭಾಗವಾಗಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ ದೇಶದ ಎಲ್ಲ ಗ್ರಾಮ ಮತ್ತು ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಹಕಾರಿ ಸಂಘಗಳ ರಚನೆಯಾಗಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಷಾ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಲೋಕಸಭೆಯಲ್ಲಿ ಬುಧವಾರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, ಸಹಕಾರಿ ಚಳವಳಿಯನ್ನು ಬಲಪಡಿಸಲು ಮತ್ತು ಅದರ ವ್ಯಾಪ್ತಿಯನ್ನು ಇನ್ನೂ ತಳಮಟ್ಟಕ್ಕೆ ವಿಸ್ತರಿಸಲು ಸರ್ಕಾರ ಸಮಗ್ರ ಯೋಜನೆಯೊಂದನ್ನು ಅನುಮೋದಿಸಿದೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪ್ರತಿಯೊಂದು ಪಂಚಾಯಿತಿ ಮತ್ತು ಗ್ರಾಮವನ್ನು ಒಳಗೊಂಡು ಡೈರಿ ಮತ್ತು ಮೀನುಗಾರಿಕಾ ಸಹಕಾರಿ ಸಂಘಗಳೊಂದಿಗೆ ಎರಡು ಲಕ್ಷ ಹೊಸ ಬಹೂಪಯೋಗಿ ಪ್ರಾಥಮಿಕ ಕೃಷಿ ಸಾಲ ಸಂಘಗಳನ್ನು (PACS) ರಚಿಸುವುದು ಈ ದೃಷ್ಟಿಕೋನದ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು. ಈ ಮಹತ್ವಾಕಾಂಕ್ಷೆಯ ವಿಸ್ತರಣೆಯನ್ನು ನಬಾರ್ಡ್, ಎನ್‌ಡಿಡಿಬಿ, ಎನ್‌ಎಫ್‌ಡಿಬಿ ಮತ್ತು…

Read More

ನಕಲಿ ಚಿನ್ನ ಅಡವಿಟ್ಟು ಹಣ ಹೊಡೆಯಲು ವಂಚಕರ ಕುತಂತ್ರ ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನಕಲಿ ಚಿನ್ನ ಅಡವಿಟ್ಟು ಹಣ ಲಪಟಾಯಿಸಲು ಕುತಂತ್ರ ನಡೆಸಿರುವ ವಂಚಕರು ಸಹಕಾರಿ ಸಂಘವೊಂದರಲ್ಲಿ ಸಿಕ್ಕಿ ಬಿದ್ದಿದ್ದಾರೆ. https://chat.whatsapp.com/EbVKVnWB6rlHT1mWtsgbch ಪ್ರತಿಷ್ಠಿತ  ಸಹಕಾರಿ ಸಂಘವೊಂದಕ್ಕೆ ಆಗಮಿಸಿದ್ದವರು ನಕಲಿ ಬಂಗಾರ ಅಡವಿಡಲು ತಂತ್ರ ಹೂಡಿದ್ದರು. ಸೊಸೈಟಿಯ ಸಿಬ್ಬಂದಿಗಳು ಬಂಗಾರ ಪರಿಶೀಲಿಸಿದಾಗ ಅದು ನಕಲಿ ಎಂದು ತಿಳಿದಿದೆ. ಕೆಲವರು ನಕಲಿ ಚಿನ್ನ ಅಡವಿಟ್ಟು ಎಲ್ಲಾ ಕಡೆ ಹೋಗಿ ಸಾಲ ಕೇಳುತಿದ್ದಾರೆ. ಈ ಹಿಂದೆಯೂ ಇದೇ ರೀತಿ ಅಡವಿಡಲು ಬಂದಿದ್ದರು ಎಂದು ತಿಳಿದುಬಂದಿದೆ. ನಕಲಿ ಚಿನ್ನ ಅಡವಿಟ್ಟು ಮೋಸ ಮಾಡುವ ಗ್ಯಾಂಗ್ ಸಕ್ರಿಯವಾಗಿದ್ದು ಅವರ ಬಗ್ಗೆ ಬಳಿಕ ಪೊಲೀಸ್ ಕಮಿಷನರ್ ಅವರ ಕಚೇರಿಗೆ ಮಾಹಿತಿ ನೀಡಲಾಗಿದ್ದು ತಕ್ಷಣ ಪೊಲೀಸರು ಕಾರ್ಯಾಚರಣೆಗೆ ಇಳಿದು ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ನಕಲಿ ಚಿನ್ನ ಅಡವಿಟ್ಟು ಮೋಸ ಮಾಡುವ ಗ್ಯಾಂಗ್ ಬಗ್ಗೆ ಸೊಸೈಟಿಗಳ ಸಿಬ್ಬಂದಿಗಳು ಪರಸ್ಪರ ಮಾಹಿತಿ ಹಂಚಿಕೊಂಡು ಸಹಕಾರ ನೀಡುವಂತೆ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್…

Read More

ಮುಂದಿನ ಎರಡು ದಶಕಗಳವರೆಗೆ ಭಾರತದಲ್ಲಿ ಸಹಕಾರಿ ಚಳವಳಿಯ ದಿಕ್ಕು ರೂಪಿಸುವ ನಿರೀಕ್ಷೆ  ನವದೆಹಲಿ: ಜುಲೈ 24ರಂದು ನವದೆಹಲಿಯ ಅಟಲ್ ಅಕ್ಷಯ್ ಉರ್ಜಾ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಷಾ ಅವರು, ಬಹುನಿರೀಕ್ಷಿತ ರಾಷ್ಟ್ರೀಯ ಸಹಕಾರ ನೀತಿ -2025 ಅನ್ನು ಅನಾವರಣಗೊಳಿಸಲಿದ್ದಾರೆ. ಹಲವಾರು ತಿಂಗಳುಗಳಿಂದ ರಚನಾ ಪ್ರಕ್ರಿಯೆಯಲ್ಲಿದ್ದ ಈ ನೀತಿಯು 2025ರಿಂದ 2045ರವರೆಗೆ ಮುಂದಿನ ಎರಡು ದಶಕಗಳವರೆಗೆ ಭಾರತದಲ್ಲಿ ಸಹಕಾರಿ ಚಳವಳಿಯ ದಿಕ್ಕನ್ನು ರೂಪಿಸಲಿದೆ. https://chat.whatsapp.com/EbVKVnWB6rlHT1mWtsgbch ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರಾಷ್ಟ್ರೀಯ ಸಹಕಾರಿ ಈ ನೀತಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ಭಾರತದ ವಿಶಾಲ ಸಹಕಾರ ವ್ಯವಸ್ಥೆಯನ್ನು ಆಧುನೀಕರಿಸುವ ಮತ್ತು ಚೈತನ್ಯಗೊಳಿಸುವ ಗುರಿಯನ್ನು ಇದು ಹೊಂದಿದೆ. 2047ರ ವಿಕಸಿತ ಭಾರತ್‌ನ ವಿಶಾಲ ರಾಷ್ಟ್ರೀಯ ಗುರಿಯೊಂದಿಗೆ ಹೊಂದಿಕೆಯಾಗುವ “ಸಹಕಾರದಿಂದ ಸಮೃದ್ಧಿ” (ಸಹಕಾರದ ಮೂಲಕ ಸಮೃದ್ಧಿ) ಎಂಬ ಸರ್ಕಾರದ ದೃಷ್ಟಿಕೋನವು ಇದರ ಮೂಲತತ್ವವಾಗಿದೆ. ಹೊಸ ನೀತಿಯು ಸಹಕಾರಿ ವಲಯದಲ್ಲಿ, ವಿಶೇಷವಾಗಿ ತಳಮಟ್ಟದಲ್ಲಿ ಸಾಂಸ್ಥಿಕ ಸುಧಾರಣೆ ಮತ್ತು ಸಾಮರ್ಥ್ಯ ವೃದ್ಧಿಗೆ ನೀಲಿನಕ್ಷೆಯಾಗಿ ಕಾರ್ಯನಿರ್ವಹಿಸುವ…

Read More

ಮಂಗಳೂರು: ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಬಿಜೈ ಶಾಖೆಯು ಬಿಜೈ ಚರ್ಚ್‌ ಮುಂಭಾಗದ ಮಂಗಳೂರು ಮಹಾನಗರ ಪಾಲಿಕೆ ಸಂಕೀರ್ಣದ ಒಂದನೇ ಮಹಡಿಗೆ ಸ್ಥಳಾಂತರಗೊಳ್ಳುತ್ತಿದ್ದು ಸ್ಥಳಾಂತರ ಸಮಾರಂಭ ಜುಲೈ 27ರ ಭಾನುವಾರ ಬೆಳಗ್ಗೆ 10ಕ್ಕೆ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಶಾಸಕ ಡಿ.ವೇದವ್ಯಾಸ ಕಾಮತ್‌ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಕರ್ನಾಟಕ ರಾಜ್ಯ ಕುಡಾಳ್ ದೇಶಸ್ಥ ಆದ್ಯಗೌಡ್ ಬ್ರಾಹ್ಮಣ ಮಹಾಮಂಡಲದ ಅಧ್ಯಕ್ಷ ಮಹೇಶ್‌ ಠಾಕೂರ್‌ ದೀಪ ಪ್ವಜ್ವಲನೆ ಮಾಡಲಿದ್ದಾರೆ. ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಭಟ್, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ದ.ಕ. ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಭಾಸ್ಕರ್ ದೇವಸ್ಯ, ಉದ್ಯಮಿ ಪ್ರವೀಣ್‌ ಎಸ್‌.ದರ್ಬೆ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿವೃತ್ತ ಸಹಾಯಕ ಮಹಾಪ್ರಬಂಧಕರಾದ ಜೆಸಿಂತಾ ಮಾರ್ಟಿಸ್,…

Read More

ಮಂಗಳೂರು: ಆಟಿ ತಿಂಗಳಲ್ಲಿ ತುಳು ಜನರು ಆಚರಣೆ ಮಾಡುವ ಆಟಿಡೊಂಜಿ ದಿನವನ್ನು “ಆಟಿದ ಪೊಲಬು” ಎಂಬ ಹೆಸರಿನಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಮಂಗಳೂರಿನ ಪ್ರಧಾನ ಕಛೇರಿ ಪಡೀಲ್‌ನ “ಆತ್ಮಶಕ್ತಿ ಸೌಧ”ದಲ್ಲಿ ಆಚರಿಸಲಾಯಿತು. https://chat.whatsapp.com/EbVKVnWB6rlHT1mWtsgbch ದೈವಾರಾಧಕ ಪೂವಪ್ಪ ಪೂಜಾರಿಯವರು ಹಿಂಗಾರ ಅರಳಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಈ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಪೂವಪ್ಪ ಪೂಜಾರಿ, ನಾಟಿ ವೈದ್ಯ ತಿಲಕ್‌ರಾಜ್ ಹಾಗೂ ಕಾಸರಗೋಡಿನ ಪೆರಿಯದ ಕೇರಳ ಕೇಂದ್ರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಚೇತನ್ ಮುಂಡಾಜೆ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಪ್ರಾಧ್ಯಾಪಕ ಚೇತನ್ ಮುಂಡಾಜೆ ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ದೈವಾರಾಧಕರು ಹಾಗೂ ನಾಟಿ ವೈದ್ಯರನ್ನು ಸನ್ಮಾನಿಸುವ ಮೂಲಕ ತುಳುನಾಡಿನ ಸಂಸ್ಕೃತಿ ಹಾಗೂ ಭಾಷೆಯನ್ನು ಬೆಳೆಸುವ ಕೆಲಸ ಮಾಡುತ್ತಿದೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ರವರ ನೇತೃತ್ವದಲ್ಲಿ “ಆಟಿದ ಪೊಲಬು” ವಿಶಿಷ್ಟ ಕಾರ್ಯಕ್ರಮ ಆಯೋಜಿಸಿ, ತುಳುನಾಡಿನ ಸಾಂಪ್ರದಾಯಿಕ ಶೈಲಿಯಲ್ಲಿ ವೇದಿಕೆ ನಿರ್ಮಾಣ ಮಾಡಿರುವುದು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದೆ” ಎಂದರು. ನಾಟಿ ವೈದ್ಯರಾದ ತಿಲಕ್‌ರಾಜ್…

Read More