ಶೂನ್ಯ ಕಸದ ಅಡುಗೆ ಮನೆ ನಿರ್ವಹಣೆಯ ಬಗ್ಗೆ ಅನುಭವ ಹಂಚಿಕೊಂಡ ಡಾ.ತೇಜಸ್ವಿನಿ ಅನಂತ್ ಕುಮಾರ್
ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ (ಕೆಎಸ್‌ಎಸ್‌ಎಫ್‌ಸಿಎಲ್) ವತಿಯಿಂದ ಅಂತಾರಾಷ್ಟ್ರೀಯ ಇತ್ತೀಚೆಗೆ ಮಹಿಳಾ ದಿನ ಆಚರಿಸಲಾಯಿತು. ವಿವಿಧ ಸೌಹಾರ್ದ ಸಹಕಾರಿ ಸಂಸ್ಥೆಗಳ 135 ಮಹಿಳೆಯರು ಭಾಗವಹಿಸಿದ್ದರು.
https://chat.whatsapp.com/EbVKVnWB6rlHT1mWtsgbch
ಅದಮ್ಯ ಚೇತನ ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ಮತ್ತು ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಒಂದು ದಶಕಕ್ಕೂ ಹೆಚ್ಚು ಕಾಲ ತ್ಯಾಜ್ಯವನ್ನು ಪರ್ಯಾಯ ಇಂಧನದ ಮೂಲವಾಗಿ ಬ್ರಿಕೆಟ್ ಆಗಿ ಪರಿವರ್ತಿಸುವ ಮೂಲಕ ಶೂನ್ಯ-ಕಸ ಅಡುಗೆ ಮನೆಯನ್ನು ನಿರ್ವಹಿಸುವ ರೀತಿಯ ಅನುಭವ ಹಂಚಿಕೊಂಡರು. ಬದಲಾವಣೆಯು ಮನೆಯಿಂದಲೇ ಪ್ರಾರಂಭವಾಗಬೇಕು ಎಂಬ ಅಂಶವನ್ನು ವಿವರಿಸಿ ಅದರ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ಲಿಮಿಟೆಡ್ ಅಧ್ಯಕ್ಷ ಜಿ.ನಂಜನ ಗೌಡ ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ಕೃಷಿ ನಿರ್ದೇಶಕಿ ಮತ್ತು ಪಶುಸಂಗೋಪನಾ ಆಯುಕ್ತೆ ಶ್ರೀರೂಪಾ ಮುಖ್ಯ ಅತಿಥಿಯಾಗಿದ್ದರು.
ವಿವಿಧ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳಿಗಾಗಿ ಐವರು ಮಹಿಳೆಯರನ್ನು ಸನ್ಮಾನಿಸಲಾಯಿತು. ಸಹಕಾರಿ ಕ್ಷೇತ್ರದ ಸಾಧನೆಗಾಗಿ ನಾಗಮಣಿ, ಸಾಮಾಜಿಕ ಕಾರ್ಯಗಳಲ್ಲಿ ಸುಶೀಲಮ್ಮ, ಕಲಾ ಕ್ಷೇತ್ರದಲ್ಲಿ ದಿವ್ಯಶ್ರೀ, ಆರೋಗ್ಯ ಸೇವೆಗಾಗಿ ಅಲಿಬಿನಾ ಶಂಕರ್ ಮತ್ತು ಸೇವಾ ಕ್ಷೇತ್ರದಲ್ಲಿನ ಸಮರ್ಪಣೆಗಾಗಿ ಮೇಘನಾ ಜೋಯಿಶ್ ಅವರನ್ನು ಸನ್ಮಾನಿಸಲಾಯಿತು. ಅಧಿವೇಶನದಲ್ಲಿ ಸರ್ಕಾರಿ ಯೋಜನೆಗಳು ಮತ್ತು ಮಹಿಳೆಯರಿಗೆ ಸಾಮಾಜಿಕ-ಆರ್ಥಿಕ ಸಬಲೀಕರಣ ಅವಕಾಶಗಳ ಕುರಿತು ಸಂವಾದ, ಚರ್ಚೆ ನಡೆಯಿತು. ಕರ್ನಾಟಕ ರಾಜ್ಯ ಸೌಹಾರ್ದ ಫೆಡರಲ್ ಕೋಆಪರೇಟಿವ್ ನಿರ್ದೇಶಕಿ ಭಾರತಿ ಜಿ. ಭಟ್ ಅಧ್ಯಕ್ಷತೆ ವಹಿಸಿದ್ದರು, ಡಾ.ಮೀನಾಕ್ಷಿ ಖಾಂಡಿ ಮಠ, ಸೌಮ್ಯ ಮತ್ತು ಮಾನಸ ಕೃಷ್ಣಪ್ಪ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಸಮಾರೋಪದಲ್ಲಿ ಸಹಕಾರಿ ಸಂಘಗಳ ಉಪ ನಿಬಂಧಕಿ ಗಗನಾ ಕೆ, ಕೆಎಸ್‌ಎಸ್‌ಎಫ್‌ಸಿಎಲ್ ನಿರ್ದೇಶಕಿ ಶೈಲಜಾ ಥಪಲಿ ಮುಖ್ಯ ಅತಿಥಿಗಳಾಗಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com