ಮಹಾರಾಷ್ಟ್ರದ ಮರಾಠವಾಢ ಡೈರಿ ಮುಂದಿನ ಐದು ವರ್ಷಗಳಲ್ಲಿ ಹಾಲು ಖರೀದಿ ಪ್ರಮಾಣ 11 ಲಕ್ಷ ಕಿಲೋಗ್ರಾಂಗಳಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆ
ಮುಂಬೈ : ಮಹಿಳೆಯರದೇ ನೇತೃತ್ವದಲ್ಲಿ ಹೊಸದಾಗಿ ಆರಂಭಿಸಲಾಗಿರುವ ಮರಾಠವಾಢ ಹಾಲು ಉತ್ಪಾದಕ ಸಂಸ್ಥೆ (ಎಂಪಿಒ) ಮುಂದಿನ ಐದು ವರ್ಷಗಳಲ್ಲಿ ತನ್ನ ದೈನಂದಿನ ಹಾಲು ಖರೀದಿ ಪ್ರಮಾಣವನ್ನು 11 ಲಕ್ಷ ಕಿಲೋಗ್ರಾಂಗಳಿಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದ್ದು, ವಾರ್ಷಿಕ ರೂ. 1,800 ಕೋಟಿ ವಹಿವಾಟು ಸಾಧಿಸುವ ಗುರಿ ಇಟ್ಟುಕೊಂಡಿದೆ.
https://chat.whatsapp.com/EbVKVnWB6rlHT1mWtsgbch
ಈ ಉಪಕ್ರಮ ವಿದರ್ಭ ಮತ್ತು ಮರಾಠವಾಡ ಡೈರಿ ಅಭಿವೃದ್ಧಿ ಯೋಜನೆಯ (ವಿಎಂಡಿಡಿಪಿ) ಅಧೀನದಲ್ಲಿ ನಡೆಯುತ್ತಿದೆ. 2013ರಲ್ಲಿ ಎನ್‌ಡಿಡಿಬಿ ಮತ್ತು ಮಹಾರಾಷ್ಟ್ರ ಸರ್ಕಾರ ಬರಪೀಡಿತ ಪ್ರದೇಶಗಳಾದ ವಿದರ್ಭ ಮತ್ತು ಮರಾಠವಾಡಾದಲ್ಲಿ ಡೈರಿ ಅಭಿವೃದ್ಧಿ ಪ್ರಾರಂಭಿಸಲು ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದವು. ರೈತರಿಗೆ ಪರ್ಯಾಯ, ದೀರ್ಘಕಾಲೀನ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದು ಇದರ ಗುರಿಯಾಗಿತ್ತು. ಈ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಕೃಷಿಗಿಂತ ಹೈನುಗಾರಿಕೆ ಹೆಚ್ಚು ಸ್ಥಿರ ಆದಾಯದ ಮೂಲವನ್ನು ಒದಗಿಸುತ್ತದೆಯಾದ್ದರಿಂದ ಈ ನಿಟ್ಟಿನಲ್ಲಿ ಕೆಲಸಗಳು ಆರಂಭವಾಗಿತ್ತು. ಎನ್‌ಡಿಡಿಬಿಯ ಅಂಗಸಂಸ್ಥೆ ಮದರ್ ಡೈರಿಗೆ ವಿಎಂಡಿಡಿಪಿ ಅಡಿಯಲ್ಲಿ ಹಾಲು ಉತ್ಪಾದಕರಿಗೆ ಮಾರುಕಟ್ಟೆ ಪ್ರವೇಶ ಒದಗಿಸುವ ಜವಾಬ್ದಾರಿ ನೀಡಲಾಯಿತು. 2016ರಲ್ಲಿ ಈ ಯೋಜನೆ ಆರಂಭಗೊಂಡು ಈಗ ಹತ್ತು ಜಿಲ್ಲೆಗಳಾದ ಅಕೋಲಾ, ಅಮರಾವತಿ, ವಾರ್ಧಾ, ನಾಗ್ಪುರ, ಚಂದ್ರಾಪುರ ಮತ್ತು ವಿದರ್ಭದ ಬುಲ್ಧಾನ, ಜೊತೆಗೆ ಮರಾಠವಾಡದ ನಾಂದೇಡ್, ಉಸ್ಮಾನಾಬಾದ್, ಲಾತೂರ್ ಮತ್ತು ಜಲ್ನಾದಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಈ ಯೋಜನೆಯ ಮೂಲಕ ಸುಮಾರು 35,000 ರೈತರಿಂದ ಪ್ರತಿದಿನ 4 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ಸ್ಥಾಪಿಸಲಾದ 2,500 ಮಿಲ್ಕ್ ಪೂಲಿಂಗ್ ಪಾಯಿಂಟ್‌ಗಳಿಂದ ಹಾಲು ಸಂಗ್ರಹಿಸಲಾಗುತ್ತದೆ.
ಈ ಪ್ರದೇಶಗಳಲ್ಲಿ ಡೈರಿ ಕ್ಷೇತ್ರದ ಬೆಳವಣಿಗೆಯ ಸಾಮರ್ಥ್ಯವನ್ನು ಗುರುತಿಸಿ, ಮಹಿಳಾ ಒಡೆತನದ ಮರಾಠವಾಢ ಹಾಲು ಉತ್ಪಾದಕ ಸಂಸ್ಥೆಯನ್ನು ಜನವರಿ 9, 2025ರಂದು ಸ್ಥಾಪಿಸಲಾಯಿತು. ನಾಗ್ಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಈ ಸಂಸ್ಥೆ ವಿದರ್ಭ ಮತ್ತು ಮರಾಠವಾಡದ 6,000 ಹಳ್ಳಿಗಳಲ್ಲಿ ವ್ಯಾಪ್ತಿ ವಿಸ್ತರಿಸುವ ಗುರಿಯನ್ನು ಹೊಂದಿದ್ದು, 1.85 ಲಕ್ಷ ಮಹಿಳಾ ಡೈರಿ ರೈತರನ್ನು ಸದಸ್ಯರನ್ನಾಗಿ ದಾಖಲಿಸಿದೆ. ರೈತ ಒಡೆತನದ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವಲ್ಲಿ ವ್ಯಾಪಕ ಅನುಭವ ಹೊಂದಿರುವ ಎನ್‌ಡಿಡಿಬಿಯ ಲಾಭರಹಿತ ಅಂಗಸಂಸ್ಥೆ ಡೈರಿ ಸರ್ವೀಸಸ್ (ಎನ್‌ಡಿಎಸ್) ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತದೆ.
ಮರಾಠವಾಢ ಹಾಲು ಉತ್ಪಾದಕ ಸಂಸ್ಥೆ ಎಲ್ಲ ಗ್ರಾಮಗಳಲ್ಲಿ ಸ್ವಯಂಚಾಲಿತ, ಪಾರದರ್ಶಕ ಹಾಲು ಸಂಗ್ರಹಣಾ ವ್ಯವಸ್ಥೆ ಜಾರಿಗೆ ತರಲು ಯೋಜಿಸಿದ್ದು, ಇದು ಸದಸ್ಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪಾವತಿ ಮಾಡುತ್ತದೆ. ಇದಲ್ಲದೆ ಹೈನುಗಾರರಿಗೆ ತಾಂತ್ರಿಕ ಸೇವೆಗಳನ್ನು ಒದಗಿಸುತ್ತದೆ. ಇದರಲ್ಲಿ ಗುಣಮಟ್ಟದ ಮೇವು ಪೂರೈಕೆ ಮತ್ತು ಮೇವನ್ನು ಮನೆ ಬಾಗಿಲಿಗೆ ತಲುಪಿಸುವ ಕ್ರಮವೂ ಸೇರಿದೆ. ಈ ಪ್ರಯತ್ನಗಳ ಮೂಲಕ ಮಹಾರಾಷ್ಟ್ರದಲ್ಲಿ ಮರಾಠವಾಢ ಹಾಲು ಉತ್ಪಾದಕ ಸಂಸ್ತೆಯು ಹೈನುಗಾರಿಕೆಯಲ್ಲಿ ಕ್ರಾಂತಿ ಮಾಡಲು ಸಜ್ಜಾಗಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com