Author: admin
ನೋಂದಣಿ ಮತ್ತು ಮುದ್ರಾಂಕ ಆಯುಕ್ತ ದಯಾನಂದ್ ಸ್ಪಷ್ಟನೆ ಬೆಂಗಳೂರು: ರಾಜ್ಯದಲ್ಲಿ ನೋಂದಣಿ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ನೋಂದಣಿ ಮತ್ತು ಮುದ್ರಾಂಕಗಳ ಆಯುಕ್ತ ಕೆ.ಎ. ದಯಾನಂದ್ ಸ್ಪಷ್ಟನೆ ನೀಡಿದ್ದಾರೆ. ನೋಂದಣಿ ಕಾಯ್ದೆ 1908ರ ನಿಯಮ 22B ತಿದ್ದುಪಡಿ ವಿರೋಧಿಸಿ ಸೋಮವಾರ ರಾಜ್ಯದ ಐದಾರು ಉಪ ನೋಂದಣಾಧಿಕಾರಿಗಳು ಕೆಲಕಾಲ ನೋಂದಣಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು. ಅವರೊಂದಿಗೆ ಉನ್ನತ ಮಟ್ಟದ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಸಮಸ್ಯೆಯ ಬಗ್ಗೆ ಚರ್ಚಿಸಿದ್ದಾರೆ. ಪ್ರತಿಭಟನೆಗೆ ಮುಂದಾದವರ ಮನವೊಲಿಸಲಾಗಿದ್ದು, ನೋಂದಣಿ ಕಾರ್ಯ ಎಂದಿನಂತೆ ಮುಂದುವರಿಸಲು ಕ್ರಮ ವಹಿಸಲಾಗಿದೆ ಎಂದು ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ. ಈಗ ನೋಂದಣಿ ಮಾಡಿಸಿಕೊಳ್ಳಲು ಯಾವುದೇ ಸಮಸ್ಯೆ ಇಲ್ಲ. ಯಾರು ಬೇಕಾದರೂ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಆಯುಕ್ತ ದಯಾನಂದ್ ಮಾಹಿತಿ ನೀಡಿದ್ದಾರೆ. https://chat.whatsapp.com/Ge11n7QCiMj5QyPvCc0H19 ರಾಜ್ಯದ ಉಪನೋಂದಣಿ ಕಚೇರಿಗಳಲ್ಲಿ ಸ್ಥಿರಾಸ್ತಿ ನೋಂದಣಿಗೆ ಡಿಜಿಟಲ್ ಖಾತಾ ಕಡ್ಡಾಯಗೊಳಿಸಿದ್ದರಿಂದ ಜನರಿಗೆ ಸಮಸ್ಯೆ ಎದುರಾಗಿತ್ತು. ಅಧಿನಿಯಮ ಜಾರಿಗೆ ತಂದ ಬಳಿಕ ರಿಜಿಸ್ಟ್ರೇಷನ್ ಪಡೆಯಬೇಕಾದ ದಾಖಲೆಗಳ ಅಸ್ಪಷ್ಟತೆಯಿಂದ ಸಬ್‌ರಿಜಿಸ್ಟ್ರಾರ್ ದಸ್ತಾವೇಜು ನೋಂದಣಿ…
ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಪ್ರಣವ ಸೌಹಾರ್ದದ ಅಧ್ಯಕ್ಷ ಜಿ.ಆರ್ ಪ್ರಸಾದ್ ಆಯ್ಕೆ
ಮಂಗಳೂರು: ಸಹಕಾರಿ ಕ್ಷೇತ್ರದ ರಾಷ್ಟ್ರಮಟ್ಟದ ಸಹಕಾರಿ ಸಂಘಟನೆ ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ನೂತನ ಅಧ್ಯಕ್ಷರಾಗಿ ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್ ಪ್ರಸಾದ್ ಆಯ್ಕೆಯಾಗಿದ್ದಾರೆ. https://chat.whatsapp.com/Ge11n7QCiMj5QyPvCc0H19 ಪ್ರಧಾನ ಕಾರ್ಯದರ್ಶಿಯಾಗಿ ಬಿಲ್ಡಿಂಗ್ ಸೊಸೈಟಿ ನಿರ್ದೇಶಕ ಚರಣರಾಜ್ ಅವರನ್ನು ಆರಿಸಲಾಗಿದೆ. ಸಂಘಟನಾ ಕಾರ್ಯದರ್ಶಿಯಾಗಿ ಸ್ವಸ್ತಿಕ್ ಸೌಹಾರ್ದದ ಅಧ್ಯಕ್ಷ ವಲ್ಸರಾಜ್, ಉಪಾಧ್ಯಕ್ಷರಾಗಿ ಕರಾವಳಿ ಸೊಸೈಟಿಯ ಅಧ್ಯಕ್ಷ ವೆಂಕಟೇಶ್, ಶ್ರೀಶಾ ಸೌಹಾರ್ದದ ಅಧ್ಯಕ್ಷ ಎಂ.ಎಸ್.ಗುರುರಾಜ, ಚೀರುಂಬ ಸೊಸೈಟಿಯ ಉಪಾಧ್ಯಕ್ಷೆ ಶಾಂತಾ ಆರ್, ದ.ಕ. ಜಿಲ್ಲಾ ಕೋಳಿ ಸಾಕಾಣಿಕದಾರರ ಸಂಘದ ನಿರ್ದೇಶಕಿ ಸುಜಯ ಹೇಮಚಂದ್ರ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಸಫಲ ಸೌಹಾರ್ದ ಅಧ್ಯಕ್ಷ ಸಂಜೀವ ಅಡ್ಯಾರ್, ಮಹಿಳಾ ಪ್ರಮುಖರಾಗಿ ಜನತಾ ಬಜಾರ್ ನಿರ್ದೇಶಕಿ ಮದಲಾಕ್ಷಿ ರೈ, ಸಹ ಪ್ರಮುಖರಾಗಿ ಬಿಲ್ಡಿಂಗ್ ಸೊಸೈಟಿಯ ಉಪಾಧ್ಯಕ್ಷೆ ಪ್ರಭಾಮಾಲಿನಿ ನಿಯುಕ್ತಿಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಪ್ರಣವ ಸೌಹಾರ್ದದ ನಿರ್ದೇಶಕ ಸೋಮಪ್ಪ ನಾಯ್ಕ್ ಆಯ್ಕೆಯಾಗಿದ್ದಾರೆ. ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನದಾಸ ನಾಯಕ್, ರಾಜ್ಯ ಸಂಘಟನಾ ಕಾರ್ಯದರ್ಶಿ ಮಂಜುನಾಥ, ನಿಕಟಪೂರ್ವ ಅಧ್ಯಕ್ಷ ಗಣೇಶ್…
ಶಿಕಾರಿಪುರ: ಇಲ್ಲಿನ ಶ್ರೀಕಂತ್ತೆ ಸಿದ್ದೇಶ್ವರ ನಿಲಯ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಸಪ್ತಗಿರಿ ಮಹಿಳಾ ಗೃಹ ಕೈಗಾರಿಕಾ ಪತ್ತಿನ ಸಹಕಾರ ಸಂಘ, ಶಿಕಾರಿಪುರ ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘ ಸಂಯುಕ್ತ ಆಶ್ರಯದಲ್ಲಿ ಶಿಕಾರಿಪುರ ತಾಲೂಕಿನ ಆಯ್ದ ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಮತ್ತು ಮಹಿಳಾ ಸಹಕಾರ ಸಂಘಗಳ ಮಹಿಳಾ ನಿರ್ದೇಶಕರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಯಿತು. https://chat.whatsapp.com/Ge11n7QCiMj5QyPvCc0H19 ಸಪ್ತಗಿರಿ ಮಹಿಳಾ ಗೃಹ ಕೈಗಾರಿಕಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಗಾಯತ್ರಿ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕಾರಿಪುರ ಪುರಸಭಾ ಅಧ್ಯಕ್ಷೆ ಶೈಲಾ ಯೋಗೀಶ್ ಮಡ್ಡಿ ಕಾರ್ಯಕ್ರಮ ಉದ್ಘಾಟಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯ ವೀರೇಶ್ ಎನ್.ವಿಶೇಷ ಆಹ್ವಾನಿತರಾಗಿದ್ದರು. ಪುರಸಭಾ ಉಪಾಧ್ಯಕ್ಷೆ ರೂಪಾ ಮಂಜುನಾಥ್ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಉಪಾಧ್ಯಕ್ಷೆ ಶಾಂತಲಾ ಭೂಕಾಂತ್ ಹಾಗೂ ಸಹಕಾರ ರತ್ನ ಪುರಸ್ಕೃತ ಡಾಕ್ಟರ್…
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾಹಿತಿ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪ್ರತಿ ಶಾಖೆಯಲ್ಲೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಇರುವಂತೆ ಭದ್ರತೆಯ ನಿಟ್ಟಿನಲ್ಲಿ ಅಲಾರಮ್ ವ್ಯವಸ್ಥೆ ಇದ್ದು, ಎಸ್‌ಎಂಎಸ್ ಹಾಗೂ ದೂರವಾಣಿ ಕರೆಯ ಮೂಲಕ ಎಚ್ಚರಿಕೆ ನೀಡುವ ನೂತನ ವ್ಯವಸ್ಥೆ ಇದೆ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಹೇಳಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮುಡಿಪು ಶಾಖೆಯ ಎಂಟನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಗ್ರಾಹಕರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶಿವರಾಮ್ ಬಿ, ಎಂ.ಶಂಕರ್ ಭಟ್, ಸುಂದರ್ ಪೂಜಾರಿ, ಗುರುವಪ್ಪ ಪೂಜಾರಿ, ಶಶಿಕಲಾ ಎಂ ಮತ್ತು ಅಮೀನಾ ದೀಪ ಪ್ರಜ್ವಲನೆ ಮಾಡಿ ಉದ್ಟಾಟಿಸಿದರು. https://chat.whatsapp.com/Ge11n7QCiMj5QyPvCc0H19 ಸಂಘದ ಸದಸ್ಯ ಶಿವರಾಮ್ ಬಿ ಮಾತನಾಡಿ ಸಂಘದ ಬೆಳವಣಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ದಕ್ಷಿಣ ಕನ್ನಡದಲ್ಲಿ ಮಾತ್ರವಲ್ಲದೆ ಸಂಘದ ಶಾಖೆಗಳು ಕರ್ನಾಟಕದಾದ್ಯಂತ ಪ್ರಾರಂಭವಾಗಲಿ ಎಂದು ಶುಭ ಹಾರೈಸಿದರು. ಸಂಘದ ಸದಸ್ಯ ಮುರಳಿಧರ್…
ಶಿಕಾರಿಪುರ: ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಬೆಂಗಳೂರು ಮಹಿಳಾ ಪದವೀಧರ ಸಹಕಾರ ಸಂಘ ಶಿಕಾರಿಪುರ ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘ ಶಿಕಾರಿಪುರ ಇವರ ಸಂಯುಕ್ತ ಆಶ್ರಯದಲ್ಲಿ ಶಿಕಾರಿಪುರ ತಾಲೂಕಿನ ಮಹಿಳಾ ಪದವೀಧರರಿಗೆ ಮತ್ತು ಸಹಕಾರ ಸಂಘಗಳ ಮಹಿಳಾ ನಿರ್ದೇಶಕರಿಗೆ ಒಂದು ದಿನದ ವಿಶೇಷ ಸಹಕಾರ ತರಬೇತಿ ಕಾರ್ಯಕ್ರಮವನ್ನು ಶಿಕಾರಿಪುರದ ಬನಸಿರಿ ಸಭಾಂಗಣದಲ್ಲಿ ಮಂಗಳ ವಿಶ್ವೇಶ್ವರಯ್ಯ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಸಲಾಯಿತು. https://chat.whatsapp.com/Ge11n7QCiMj5QyPvCc0H19 ಸಹಕಾರಿ ಅಭಿವೃದ್ಧಿ ಅಧಿಕಾರಿ ಅರವಿಂದ್ ಯುಎನ್ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಲದ ಅಧ್ಯಕ್ಷ ಡಾಕ್ಟರ್ ಬಿ.ಡಿ ಭೂಕಾಂತ್, ಕರ್ನಾಟಕ ರಾಜ್ಯ ಸಹಕಾರ ಮಹಿಳಾ ಮಹಾಮಂಡಳದ ಉಪಾಧ್ಯಕ್ಷೆ ಶಾಂತಲಾ ಭೂಕಾಂತ್, ನಿರ್ದೇಶಕರಾದ ಕವಿತಾ ಸುರೇಶ್, ಶಶಿಕಲಾ ರುದ್ರೇಶ್, ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿಎಲ್ ಬಸವರಾಜ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಮಮತಾ ಚಂದ್ರಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಸುಧೀರ್ ಎ.ಬಿ, ಶಿಕಾರಿಪುರ ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘದ ಅಧ್ಯಕ್ಷ ಎಂ.ಮೌನೇಶ್ವರಪ್ಪ, ಚಲನಚಿತ್ರ ಮಹಾಮಂಡಳ…
ನಾಟೆಕಲ್ ಶಾಖೆಯ ಐದನೇ ವಾರ್ಷಿಕೋತ್ಸವದಲ್ಲಿ ಸೂರ್ಯಕಾಂತ್ ಅಭಿಪ್ರಾಯ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘವು ಕೊರೊನಾ ಅಲೆಯ ಸಂದರ್ಭ ಗ್ರಾಹಕರಿಗೆ ಕಡಿಮೆ ಬಡ್ದಿ ದರದಲ್ಲಿ ಚಿನ್ನಾಭರಣ ಸಾಲ ಸೌಲಭ್ಯ ನೀಡಿದ್ದು, ಇದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗಿದೆ. ಅಂತಹ ಮಾದರಿಯಲ್ಲೇ ಸಂಘದ ಸದಸ್ಯರಿಗೆ ಕಡಿಮೆ ಬಡ್ದಿ ದರದಲ್ಲಿ ಗೃಹ ನಿರ್ಮಾಣ ಸಾಲ ಹಾಗೂ ಇತರ ಸಾಲ ಸೌಲಭ್ಯ ಯೋಜನೆಗಳನ್ನು ರೂಪಿಸಿ, ಜನರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಸಂಘದ ಸದಸ್ಯ ಸೂರ್ಯಕಾಂತ್ ಆಶಿಸಿದರು. https://chat.whatsapp.com/Ge11n7QCiMj5QyPvCc0H19 ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಾಟೆಕಲ್ ಶಾಖೆಯ ಐದನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಗ್ರಾಹಕರ ಸಭೆಯಲ್ಲಿ ಅವರು ಅಭಿಪ್ರಾಯ ವ್ಯಕ್ತಡಿಸಿದರು. ಕಾರ್ಯಕ್ರಮವನ್ನು ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ, ಸಂಘದ ಸದಸ್ಯರಾದ ಪ್ರಕಾಶ್ ಆಚಾರ್ಯ, ಹಸೈನಾರ್ ಹಾಗೂ ಜಯಪ್ರಸಾದ್ ಉದ್ಟಾಟಿಸಿದರು. ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸರೋಜಿನಿ ಮಾತನಾಡಿ ಸಂಘವು ನಮ್ಮ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದು, ಇದರಿಂದ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರಿಕರಿಗೆ ಪ್ರಯೋಜನಕಾರಿಯಾಗಿದೆ.…
ಬಂಟ್ವಾಳ: ಬಂಟ್ವಾಳ ಸಾರ್ವಜನಿಕ ಉದ್ಯೋಗಸ್ಥರ ಸಹಕಾರ ಸಂಘದ ಮೂರನೇ ನೂತನ ಶಾಖೆ ವಿಟ್ಲ -ಮಂಗಳೂರು ರಸ್ತೆ ಬಳಿಯ ಮಂಗಳಪದವಿನಲ್ಲಿ ನವಂಬರ್ 2ರಂದು ಉದ್ಘಾಟನೆಯಾಗಲಿದೆ. https://chat.whatsapp.com/Ge11n7QCiMj5QyPvCc0H19 ಬೆಳಗ್ಗೆ 9.30ಕ್ಕೆ ಉದ್ಘಾಟನೆ ನಡೆಯಲಿದ್ದು 10ಕ್ಕೆ ಮಂಗಳಪದವು ಶಾಖೆಯ ಆವರಣದಲ್ಲಿ ಸಂಘದ ಅಧ್ಯಕ್ಷ ಕೆ.ಜಯಂತ ನಾಯಕ್ ಪಾಣೆಮಂಗಳೂರು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಬಿ.ರಮಾನಾಥ ರೈ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ವಿಟ್ಲ ಶೋಕಮಾತಾ ದೇವಾಲಯದ ಧರ್ಮಗುರು ರೆ|ಫಾ|ಮೈಕೆಲ್ ರೋಡ್ರಿಗಸ್ ಆಡಳಿತ ಮಂಡಳಿ ಕೊಠಡಿ ಉದ್ಘಾಟಿಸುವರು. ಸಹಕಾರ ಸಂಘಗಳ ಸಹಾಯಕ ಉಪನಿಬಂಧಕ ಸುಧೀರ್ ಕುಮಾರ್ ಜೆ ಶಾಖೆಯ ಗಣಕೀಕರಣ ವ್ಯವಸ್ಥೆ ಉದ್ಘಾಟಿಸಲಿದ್ದಾರೆ. ವೀರಕಂಭ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಲಲಿತಾ ನಾಯ್ಕ ನೂತನ ಠೇವಣಿ ಪತ್ರ ಬಿಡುಗಡೆ ಮಾಡುವರು. ಕೆಲಿಂಜ ಉಳ್ಳಾಲ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಂಗಳಪದವು…
ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರಿ ಸಂಘದ ಯೋಜನೆ ಅದ್ಭುತ ಸ್ಪಂದನೆ ಕಾರ್ಕಳ: ವರಮಹಾಲಕ್ಷ್ಮಿ ಹಬ್ಬ ಹಾಗೂ ಗಣೇಶ ಚತುರ್ಥಿ ಅಂಗವಾಗಿ ಆಗಸ್ಟ್ 16ರಿಂದ ಸೆಪ್ಟೆಂಬರ್ 16ರವರೆಗೆ ವಿಶೇಷ ಠೇವಣಿ ಯೋಜನೆ ಹಮ್ಮಿಕೊಂಡಿದ್ದ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರಿ ಸಂಘದ ಯೋಜನೆಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಂಘವು ಒಂದೇ ತಿಂಗಳಲ್ಲಿ 2.76 ಕೋಟಿ ರೂ. ಸಂಗ್ರಹ ಮಾಡಿದೆ. https://chat.whatsapp.com/Ge11n7QCiMj5QyPvCc0H19 ಇಲ್ಲಿನ ಜೋಡುರಸ್ತೆಯಲ್ಲಿ ಕೇಂದ್ರ ಕಚೇರಿ ಹೊಂದಿ, ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ಧೇಶ ಸಹಕಾರಿ ಸಂಘವು 2001 ರಲ್ಲಿ ಆರಂಭವಾಗಿದ್ದು, ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ಸಂಘದ ಮೇಲೆ ಗ್ರಾಹಕರು ವಿಶೇಷ ವಿಶ್ವಾಸ ಇರಿಸಿರುವುದರಿಂದ ಪ್ರತಿವರ್ಷವೂ ಠೇವಣಿಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಸಂಘವು 2023-24ನೇ ಆರ್ಥಿಕ ವರ್ಷದಲ್ಲಿ ರೂ. 147 ಕೋಟಿ ವ್ಯವಹಾರ ನಡೆಸಿ ರೂ. 55.46 ಲಕ್ಷ ನಿವ್ವಳ ಲಾಭ ಗಳಿಸಿದೆ. ವಾರ್ಷಿಕ ಸಾಲಿನ ಅಂತ್ಯಕ್ಕೆ ಸಂಘವು ರೂ.30.55 ಲಕ್ಷ ಪಾಲು ಬಂಡವಾಳ ಹೊಂದಿದ್ದು ರೂ.…
ಹಿರೇಕೆರೂರು: ಶ್ರೀ ರಾಮಾಯಣ ಮಹಾಕಾವ್ಯ ಬರೆದ ವಾಲ್ಮೀಕಿ ರತ್ನಾಕರ ಎಂಬ ಹೆಸರಿನಿಂದ ಕಾಡಿನ ದಾರಿಯಲ್ಲಿ ಬರುವವರನ್ನು ಅಡ್ಡಗಟ್ಟಿ ಬೆದರಿಸುತ್ತಿದ್ದ. ಅಂಥ ರತ್ನಾಕರನಿಗೆ ಸಪ್ತ ಋಷಿಗಳ ದರುಶನವಾಗಿ ಮನಸ್ಸು ಪರಿವರ್ತನೆಯಾಗಿ ಮಹಾಮಾನವತಾವಾದಿಯಾಗಲು ಹಂಬಲಿಸಿ ತಪಸ್ಸು ಕೈಗೊಂಡು ತಪಸ್ಸಿನಲ್ಲಿಯೇ ಲೀನವಾದಾಗ ಅವರ ಸುತ್ತಲೂ ಹುತ್ತ ಬೆಳೆದು ಮತ್ತೆ ಸಪ್ತ ಋಷಿಗಳಿಂದಲೇ ತಪಸ್ಸಿನಿಂದ ಜಾಗೃತನಾಗಿ ಇಂದ್ರನಿಂದ ಪ್ರೇರೇಪಿತನಾಗಿ ರಾಮಾಯಣ ಮಹಾಕಾವ್ಯ ಮಹರ್ಷಿ ವಾಲ್ಮೀಕಿಯಾದ. ಮನುಷ್ಯ ಜೀವನದಲ್ಲಿ ತಪ್ಪು ಮಾಡುವುದು ಸಹಜ, ಮುಂದೆ ಅದನ್ನು ತಿದ್ದಿಕೊಂಡು ಪರಿವರ್ತನೆಯಾಗಿ ಮಹಾ ಮಾನವನಾಗುವುದೇ ಮನುಷ್ಯನ ಧ್ಯೇಯವಾಗಬೇಕು ಎಂಬುದನ್ನು ಮಹಾತಪಸ್ವಿ ವಾಲ್ಮೀಕಿ ಜೀವನದಿಂದ ನಾವೆಲ್ಲರೂ ಕಲಿಯಬೇಕು ಎಂದು ಇಲ್ಲಿನ ಸಹಕಾರಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ ಹೇಳಿದರು. https://chat.whatsapp.com/Ge11n7QCiMj5QyPvCc0H19 ಹಿರೇಕೆರೂರು ಸಹಕಾರಿ ವಿದ್ಯಾಸಂಸ್ಥೆಯ ಬಿ.ಆರ್.ತಂಬಾಕದ ಪ್ರಥಮದರ್ಜೆ ಮಹಾವಿದ್ಯಾಲಯ, ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಎಸ್.ಎಸ್.ಪಾಟೀಲ ಪಿಹೆಚ್.ಡಿ ಸಂಶೋಧನಾ ಕೇಂದ್ರದಲ್ಲಿ ಗುರುವಾರ ಮಹಾತಪಸ್ವಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ರಾಮಚಂದ್ರ, ಸೀತೆ, ಲಕ್ಷ್ಮಣ, ರಾವಣ, ಕುಂಭಕರ್ಣ, ಶೂರ್ಪನಖಿ ಈ ಮಹಾಕಾವ್ಯದಲ್ಲಿ ಪ್ರತಿಯೊಂದು ಪಾತ್ರಗಳೂ…
ಗುಜರಾತ್‌ನಲ್ಲಿ ರಾಜ್ಯದಲ್ಲೇ ಪ್ರಥಮ ಮಾರ್ಕೆಟ್ ಕಾರ್ಯಾರಂಭ ಅಹ್ಮದಾಬಾದ್: ಗುಜರಾತ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ -ಗುಜ್ಕೋಮಸೋಲ್ ನೇತೃತ್ವದಲ್ಲಿ ಗುಜರಾತ್‌ನ ಪ್ರಥಮ ಕೋಆಪರೇಟಿವ್ ಸೂಪರ್ ಮಾರ್ಕೆಟ್ ಗುಜ್ಕೋ ಮಾಲ್ ಅಹ್ಮದಾಬಾದ್‌ನಲ್ಲಿ ಸೋಮವಾರ ಕಾರ್ಯಾರಂಭ ಮಾಡಿದೆ. ಭಾರತದ ಕೋಆಪರೇಟಿವ್ ವಲಯದ ಪ್ರಮುಖರಲ್ಲೊಬ್ಬರಾದ ಫೆಡರೇಷನ್‌ನ ಅಧ್ಯಕ್ಷ ದಿಲೀಪ್ ಸಾಂಘನಿ ನೇತೃತ್ವದಲ್ಲಿ ಇದು ಕಾರ್ಯಾಚರಿಸಲಿದೆ. https://chat.whatsapp.com/Ge11n7QCiMj5QyPvCc0H19 ಉದ್ಘಾಟನಾ ಸಮಾರಂಭದಲ್ಲಿ ಗುಜರಾತ್ ರಾಜ್ಯ ಕೋಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಅಜಯ್ ಪಟೇಲ್ ಸೇರಿದಂತೆ ಹಲವಾರು ಪ್ರಮುಖರು ಭಾಗವಹಿಸಿದ್ದರು. ದೇಶದ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹಮ್ಮಿಕೊಂಡಿದ್ದ ವಿಕಾಸ್ ಸಪ್ತಾಹಕ್ಕೆ 23 ವರ್ಷಗಳು ಸಂದ ಕಾಲದಲ್ಲೇ ಈ ಮಾಲ್ ಉದ್ಘಾಟನೆಯಾಗಿರುವುದು ವಿಶೇಷ. ರಾಜ್ಯದ ರೈತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಹಾಗೂ ಸಾವಯವ ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಈ ಸೂಪರ್‌ಮಾರ್ಕೆಟ್ ಸಹಕಾರಿಯಾಗಲಿದೆ. ಗುಜ್ಕೋ ಮಾಲ್ ಸೂಪರ್ ಮಾರ್ಕೆಟ್ ನೇರವಾಗಿ ರೈತರ ಜೊತೆ ವ್ಯವಹಾರ ಮಾಡಲಿದ್ದು ಅವರಿಗೆ ಹೆಚ್ಚಿನ ನೆರವು ಒದಗಿಸುವ ಉದ್ದೇಶ ಹೊಂದಿದೆ. ಉದ್ಘಾಟನಾ…
