ಮಂಗಳೂರು: ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿ ಮುಂದಿನ ಐದು ವರ್ಷಗಳ ಅವಧಿಗೆ ಜಿ.ಆರ್ ಪ್ರಸಾದ್ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
https://chat.whatsapp.com/Ge11n7QCiMj5QyPvCc0H19
ಪ್ರಣವ ಸೌಹಾರ್ದ ಸಹಕಾರಿಯ ಸ್ಥಾಪಕ ಅಧ್ಯಕ್ಷರೂ ಆಗಿರುವ ಜಿ.ಆರ್ ಪ್ರಸಾದ್ ಅವರು ಕಳೆದೊಂದು ದಶಕದಲ್ಲಿ ಪ್ರಣವ ಸಂಸ್ಥೆಯ ಉತ್ತಮ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದರು. ಪ್ರಸಕ್ತ ಸಹಕಾರ ಭಾರತಿ ಮಂಗಳೂರು ಮಹಾನಗರದ ಅಧ್ಯಕ್ಷರೂ ಆಗಿದ್ದು ಸಾವಯವ ಕೃಷಿಕ ಗ್ರಾಹಕರ ಬಳಗ ಮಂಗಳೂರು ಇದರ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸುತ್ತಿದ್ದಾರೆ.
ಆಡಳಿತ ಮಂಡಳಿಯಲ್ಲಿ ಉಪಾಧ್ಯಕ್ಷರಾಗಿ ಜಿ.ಪ್ರಶಾಂತ್ ಪೈ ಮತ್ತು ನಿರ್ದೇಶಕರಾಗಿ ಸೋಮಪ್ಪ ನಾಯ್ಕ್ , ದಯಾಸಾಗರ ಪೂಂಜಾ, ರವೀಂದ್ರನಾಥ್ ಪಿ., ಎಚ್.ಸುಬ್ರಹ್ಮಣ್ಯ ಭಟ್, ರವಿಶಂಕರ್ ಪಿ.ಎನ್, ಪದ್ಮರಾಜ್ ಬಲ್ಲಾಳ್, ಜಯಲಕ್ಷ್ಮಿ ಚಂದ್ರಹಾಸ್, ಮೀರಾ ಕರ್ಕೇರ , ಭಗವಾನ್‌ದಾಸ್ ಅಡ್ಯಂತಾಯ, ಡಾ.ಶ್ಯಾಮ್ ಪ್ರಸಾದ್ ಶೆಟ್ಟಿ, ಪ್ರೊಫೆಸರ್ ವೆಂಕಟೇಶ್ವರ, ಜಗದೀಶ್ ಶೆಟ್ಟಿ ಬಿಜೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವೃತ್ತಿಪರ ನಿರ್ದೇಶಕರಾಗಿ ಸಿಎ ಮಮತಾ ರಾವ್, ಅಡ್ವೊಕೇಟ್ ಸತೀಶ್ ಕುಮಾರ್ ಭಟ್ ಮತ್ತು ಕ್ರಿಯಾತ್ಮಕ ನಿರ್ದೇಶಕರಾಗಿ ಕೃಷ್ಣ ಕಾಮತ್ ನಿಯುಕ್ತಿಗೊಂಡಿದ್ದಾರೆ. ಚುನಾವಣೆ ಪ್ರಕ್ರಿಯೆಯನ್ನು ಲೆಕ್ಕ ಪರಿಶೋಧನಾ ಇಲಾಖೆಯ ಅಧಿಕಾರಿ ನವೀನ್ ಕುಮಾರ್ ಎಂ.ಎಸ್ ನಡೆಸಿಕೊಟ್ಟರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com