ಡಿಜಿಟಲ್ ಫೈನಾನ್ಸ್ ಮೋಸದ ಬಗ್ಗೆ ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಆತಂಕ
ನವದೆಹಲಿ: ಡಿಜಿಟಲ್ ಫೈನಾನ್ಸ್ ವ್ಯವಸ್ಥೆಯಿಂದ ಉಂಟಾಗುತ್ತಿರುವ ಸೈಬರ್ ವಂಚನೆ ಹಾಗೂ ಹಣಕಾಸಿನ ಮೋಸಗಳ ಬಗ್ಗೆ ಕೇಂದ್ರ ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಆತಂಕ ವ್ಯಕ್ತಪಡಿಸಿದೆ. ಸೈಬರ್ ಕ್ರೈಂನಿಂದ ಕೋ ಆಪರೇಟಿವ್ ಸೊಸೈಟಿಗಳು, ವ್ಯಾಪಾರಿಗಳು, ಮಾರಾಟಗಾರರು, ಸಣ್ಣ ಪ್ರಮಾಣದ ಹಣಕಾಸು ಸಂಸ್ಥೆಗಳು ಹಲವಾರು ಸವಾಲುಗಳನ್ನು ಎದುರಿಸುತ್ತಿವೆ ಎಂದು ಹಣಕಾಸು ಸಂಸದೀಯ ಸ್ಥಾಯಿ ಸಮಿತಿ ಕೇಂದ್ರ ಸರ್ಕಾರದ ಗಮನ ಸೆಳೆದಿದೆ.
https://chat.whatsapp.com/Ge11n7QCiMj5QyPvCc0H19
ಸ್ಥಾಯಿ ಸಮಿತಿ ಅಧ್ಯಕ್ಷ ಭತೃಹರಿ ಮಹ್ತಾಬ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಗಳಾಗಿದ್ದು, ಸೈಬರ್ ಕ್ರೈಂನಿಂದ ಕೋ ಆಪರೇಟಿವ್ ಸೊಸೈಟಿಗಳು ಹೆಚ್ಚಿನ ಆತಂಕ ಎದುರಿಸುತ್ತಿವೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಾಣಿಜ್ಯ ಬ್ಯಾಂಕುಗಳಿಗೆ ಹೋಲಿಸಿದರೆ ಸಹಕಾರಿ ಸಂಘಗಳೇ ಸೈಬರ್ ವಂಚನೆಯ ಜಾಲಕ್ಕೆ ಹೆಚ್ಚಾಗಿ ಸಿಲುಕುತ್ತಿವೆ, ದುರ್ಬಲ ಸೈಬರ್ ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳ ನಿಧಾನಗತಿಯ ಅನುಷ್ಠಾನಗಳಿಂದಾಗಿ ಕೋ ಆಪರೇಟಿವ್ ಸೊಸೈಟಿಗಳು ಈ ವಂಚನಾ ಜಾಲಕ್ಕೆ ಸಿಲುಕುತ್ತಿವೆ ಎಂದೂ ಅಭಿಪ್ರಾಯ ವ್ಯಕ್ತವಾಗಿವೆ. ಸೈಬರ್ ಕ್ರೈಂನಂಥ ವಂಚನಾ ಜಾಲದಿಂದ ಪಾರಾಗಲು ಕೋ ಆಪರೇಟಿವ್ ಸೊಸೈಟಿಗಳು ಗರಿಷ್ಠ ಭದ್ರತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸಮಿತಿ ಸಲಹೆ ನೀಡಿದೆ.
ಸೈಬರ್ ಕ್ರೈಂನಂಥ ದುಷ್ಕೃತ್ಯಗಳಿಂದ ಬಚಾವಾಗಲು ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ನಬಾರ್ಡ್ ಕೋ ಆಪರೇಟಿವ್ ಸೊಸೈಟಿಗಳಿಗೆ ಹಲವಾರು ವಿಧಾನಗಳನ್ನು ಸೂಚಿಸಿವೆ. ಸೊಸೈಟಿಗಳಲ್ಲಿ ಸೈಬರ್ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಪ್ರಾರಂಭಿಸಿವೆ. 2019ರ ಡಿಸೆಂಬರ್‌ನಲ್ಲಿ ಪರಿಚಯಿಸಲಾದ ಗ್ರೇಡೆಡ್ ಸೈಬರ್ ಸೆಕ್ಯುರಿಟಿ ಫ್ರೇಮ್‌ವರ್ಕ್, ಎಂಡ್‌ಪಾಯಿಂಟ್‌ಗಳು, ಸರ್ವರ್‌ಗಳು ಮತ್ತು ನೆಟ್‌ವರ್ಕ್ ಸಾಧನಗಳಿಗೆ ಮಾಲ್‌ವೇರ್ ವಿರೋಧಿ ರಕ್ಷಣೆ ಸೇರಿದಂತೆ ಬೇಸ್‌ಲೈನ್ ಸೈಬರ್ ಭದ್ರತಾ ನಿಯಂತ್ರಣಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿವೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com