ಸಾಧನಾ ಪಥದಲ್ಲಿ ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ
ಗಂಗೊಳ್ಳಿ: ಆರು ಕೋಟಿ ಮೀಸಲು ನಿಧಿಯೊಂದಿಗೆ ಆರಂಭಿಸಿ 100 ಕೋಟಿ ರೂ. ದುಡಿಯುವ ಬಂಡವಾಳ ಸಾಧಿಸಿದ ಉಡುಪಿ ಜಿಲ್ಲೆಯ ಮೊತ್ತಮೊದಲ ಸೌಹಾರ್ದ ಸಹಕಾರಿ ಸಂಘವೆಂಬ ಗೌರವಕ್ಕೆ ಗಂಗೊಳ್ಳಿ ಟೌನ್ ಸೌಹಾರ್ದ ಕೋಆಪರೇಟಿವ್ ಸೊಸೈಟಿ ಲಿಮಿಟೆಡ್ ಪಾತ್ರವಾಗಿದೆ.
1920ರಲ್ಲಿ ಪ್ರಾರಂಭವಾದ ಗಂಗೊಳ್ಳಿ ಟೌನ್ ಸೌಹಾರ್ದ ಕೋಆಪರೇಟಿವ್ ಸೊಸೈಟಿ ಪ್ರಸಕ್ತ 101 ಕೋಟಿ ರೂ. ದುಡಿಯುವ ಬಂಡವಾಳವನ್ನು ದಾಖಲಿಸಿದ್ದು, ಉಡುಪಿ ಜಿಲ್ಲೆಯಲ್ಲಿ 100 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ ಮೊದಲ ಸೌಹಾರ್ದ ಸಹಕಾರಿ ಸಂಘವೆಂಬ ಗೌರವ ಪಡೆದುಕೊಂಡಿದೆ.
https://chat.whatsapp.com/Ge11n7QCiMj5QyPvCc0H19
23 ಸೆಂಟ್ಸ್ ಸ್ವಂತ ನಿವೇಶನದಲ್ಲಿ ಪ್ರಧಾನ ಕಚೇರಿ, ಗಂಗೊಳ್ಳಿ ಶಾಖೆ ಹಾಗೂ ಸಭಾಭವನವನ್ನು ಹೊಂದಿರುವ ಸುಸಜ್ಜಿತ ಕಟ್ಟಡವನ್ನು ಹೊಂದಿ ಕೋಟೇಶ್ವರ ಹಾಗೂ ಉಪ್ಪುಂದದಲ್ಲಿ ಶಾಖೆಗಳನ್ನು ಹೊಂದಿರುವ ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯು, ಚಿನ್ನಾಭರಣ ಸಾಲ, ಮೊಬೈಲ್ ಮೂಲಕ ಪಿಗ್ಮಿ ಸಂಗ್ರಹ, ಕೋರ್ ಬ್ಯಾಂಕಿಂಗ್, ಸಂಪೂರ್ಣ ಗಣಕೀಕೃತ ಲೆಕ್ಕಪತ್ರ, ಸನ್ನದು ಲೆಕ್ಕ ಪರಿಶೋಧಕರಿಂದ ಆಂತರಿಕ ಲೆಕ್ಕ ಪರಿಶೋಧನೆ, ವೃತ್ತಿಪರ ಕಾರ್ಯನಿರ್ವಹಣೆ, ಕಳೆದ 25 ವರ್ಷಗಳಿಂದ ನಿರಂತರ ಲಾಭ ಗಳಿಕೆ, ಕಳೆದ ಮೂರು ವರ್ಷಗಳಿಂದ 1 ಕೋಟಿಗೂ ಮಿಕ್ಕಿ ನಿವ್ವಳ ಲಾಭ ಪಡೆಯುತ್ತ ಬಂದಿರುವುದು ಸಂಸ್ಥೆಯ ವಿಶೇಷ ಸಾಧನೆಗಳಲ್ಲಿ ಕೆಲವು ಎನಿಸಿವೆ.
ರಾಜ್ಯಮಟ್ಟದ ಅತ್ಯುತ್ತಮ ಸಹಕಾರ ಸಂಘ ಪ್ರಶಸ್ತಿ, ಅಧ್ಯಕ್ಷರಿಗೆ ರಾಜ್ಯಮಟ್ಟದ ಶ್ರೇಷ್ಠ ಸಹಕಾರಿ ಪ್ರಶಸ್ತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಅತ್ಯುತ್ತಮ ಕಾರ್ಯನಿರ್ವಾಹಕ ಗೌರವ ದೊರಕಿರುವುದು ಸಂಘದ ಸಾಧನೆಗೆ ಹಿಡಿದ ಕೈಗನ್ನಡಿ. ವೈದ್ಯರ ದಿನಾಚರಣೆ, ಶಿಕ್ಷಕರ ದಿನಾಚರಣೆ, ಅಂಚೆ ದಿನಾಚರಣೆ, ಮಹಿಳಾ ದಿನಾಚರಣೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸಮಾಜದ ಸಕಲ ವರ್ಗದ ಜನರ ಸೇವೆಯನ್ನೂ ಗುರುತಿಸಿ ಗೌರವಿಸಲಾಗಿದೆ. ಸಂಘವು ಕಳೆದ 17 ವರ್ಷಗಳಿಂದ ಸಂಸ್ಥಾಪಕರನ್ನು ಸ್ಮರಿಸುವ ಜೊತೆಗೆ ಸಹಕಾರವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 40ಕ್ಕೂ ಅಧಿಕ ಗಣ್ಯರನ್ನು ಗುರುತಿಸಿ ಗೌರವಿಸಿದೆ.
ಸಂಸ್ಥೆಯ ಸಹಭಾಗಿತ್ವದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ, ರಕ್ತದಾನ ಶಿಬಿರ, ಉಚಿತ ನೇತ್ರ ಚಿಕಿತ್ಸಾ ಶಿಬಿರಗಳು, ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಬೀದಿದೀಪಗಳ ನಿರ್ವಹಣೆ ಸಂಘದ ಸೇವಾ ಕಾರ್ಯಗಳಲ್ಲಿ ಪ್ರಮುಖವಾದವು. ಶಿಕ್ಷಣ ಕ್ಷೇತ್ರಕ್ಕೆ ಸಂಘದ ಸೇವೆ ನಿರಂತರ. ಪ್ರತಿ ಸಾಲಿನಲ್ಲಿ ಕಾರ್ಯವ್ಯಾಪ್ತಿಯ ಶಾಲಾ-ಕಾಲೇಜಿಗಳ ಪ್ರತಿಭಾನ್ವಿತ ವಿಧ್ಯಾರ್ಥಿಗಳನ್ನು, ಉತ್ತಮ ಶಿಕ್ಷಕರನ್ನು ಗುರುತಿಸಿ ಗೌರವಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ಪರೀಕ್ಷೆ ಎದುರಿಸುವ ಕಲೆ, ಪರೀಕ್ಷಾ ಸಿದ್ದತೆ, ಸಮಯ ಪಾಲನೆ ಮುಂತಾದ ಶಿಬಿರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ಹೊಂದಿದೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com