ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಜರುಗಿತು.
https://chat.whatsapp.com/Ge11n7QCiMj5QyPvCc0H19
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಗೌರವ ಉಪಸ್ಥಿತಿಯಲ್ಲಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ ಅವರು 2025ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಕ್ಷೇತ್ರದ ಮ್ಯಾನೇಜರ್ ಜೆ.ಕಿಶೋರ್ ಮಜಿಲ, ಟ್ರಸ್ಟಿಗಳಾದ ವಾಮನ್ ಪೂಜಾರಿ, ವಿಠ್ಠಲ ಪೂಜಾರಿ , ದಿವರಾಜ್ , ದಿನೇಶ್ ಅಂಚನ್ , ಜಗದೀಪ್ ಸುವರ್ಣ, ಚಂದ್ರನಾಥ್ ಅತ್ತಾವರ್ ಹಾಗೂ ಮಾಜಿ ಟ್ರಸ್ಟಿ ಮೋಹನ್ ನೆಕ್ಕರೆಮಾರ್, ಮ.ನ.ಪಾ ಸದಸ್ಯ ಸಂದೀಪ್ ಗರೋಡಿ, ಮತ್ತು ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ಸಂಘದ ನಿರ್ದೆಶಕರಾದ ದಿವಾಕರ್ ಬಿ.ಪಿ., ಗೋಪಾಲ್ ಎಂ, ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಮತ್ತಿತರರು ಉಪಸ್ಥಿತರಿದ್ದರು.