ದೇಶದಲ್ಲಿದೆ 6.21 ಲಕ್ಷ ಸಹಕಾರ ಸಂಘಗಳು, 28 ಕೋಟಿ ಸದಸ್ಯರು
ನವದೆಹಲಿ: ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ಅನ್ವಯ ದೇಶದ ಜನಸಂಖ್ಯೆಯ ಶೇ.20ರಷ್ಟು ಜನ ಸಹಕಾರಿ ಸಂಸ್ಥೆಗಳ ಸದಸ್ಯರಾಗಿದ್ದಾರೆ.
ರಾಜ್ಯಸಭೆಯಲ್ಲಿ ಅಂಕಿ -ಅಂಶಗಳ ದಾಖಲೆ ಪ್ರಸ್ತುತಪಡಿಸಿ ಮಾತನಾಡಿದ ಸಹಕಾರ ಸಚಿವ ಅಮಿತ್ ಷಾ, ದೇಶದಲ್ಲಿ 6,21,514 ಕೋ ಆಪರೇಟಿವ್ ಸೊಸೈಟಿಗಳು ಕಾರ್ಯನಿರ್ವಹಿಸುತ್ತಿದ್ದು, 28,69,74,425 ಸಕ್ರಿಯ ಸದಸ್ಯರು ಇದ್ದಾರೆ ಎಂದು ಮಾಹಿತಿ ನೀಡಿದರು.
https://chat.whatsapp.com/Ge11n7QCiMj5QyPvCc0H19
ಅಂಕಿ ಅಂಶಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಹಕಾರ ಸಂಘಗಳಿದ್ದು ಅಲ್ಲಿ ಪ್ರಸಕ್ತ 2,15,316 ಸೊಸೈಟಿಗಳು ಕಾರ್ಯನಿರ್ವಹಿಸುತ್ತಿವೆ. ಮಹಾರಾಷ್ಟ್ರದಲ್ಲಿ 7,96,65,337 ಜನ ಕೋ ಆಪರೇಟಿವ್ ಸೊಸೈಟಿಯ ಸದಸ್ಯರಿದ್ದು ಇದು ದೇಶದಲ್ಲೇ ರಾಜ್ಯವೊಂದರಲ್ಲಿ ಕೋ ಆಪರೇಟಿವ್ ಸದಸ್ಯತ್ವದ ಅತಿ ಹೆಚ್ಚು ಸಂಖ್ಯೆ. ಮಹಾರಾಷ್ಟ್ರದ ಈ ಅಂಕಿ ಅಂಶಗಳು ಅಲ್ಲಿನ ಸಹಕಾರ ಕ್ಷೇತ್ರದ ಶ್ರೀಮಂತ ಇತಿಹಾಸ ಮತ್ತು ಸಹಕಾರಿ ಚಳುವಳಿಗಳಲ್ಲಿ, ವಿಶೇಷವಾಗಿ ಕೃಷಿ, ಡೈರಿ ಮತ್ತು ಗ್ರಾಮೀಣ ಬ್ಯಾಂಕಿಂಗ್‌ನಂತಹ ಕ್ಷೇತ್ರಗಳಲ್ಲಿ ಬಲವಾದ ಸಾಂಸ್ಥಿಕ ಚೌಕಟ್ಟನ್ನು ಪ್ರತಿಬಿಂಬಿಸುತ್ತದೆ. ಅಲ್ಲದೆ ಸಹಕಾರ ಕ್ಷೇತ್ರದ ಬೇರು ಆಳವಾಗಿ ಬೇರೂರಿರುವ ಸಂಕೇತವೂ ಇದಾಗಿದ್ದು, ಗ್ರಾಮೀಣ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಯನ್ನೂ ಇದು ಸಂಕೇತಿಸುತ್ತದೆ.
ಸಹಕಾರ ಕ್ಷೇತ್ರದಲ್ಲಿ ಇನ್ನೊಂದು ಪ್ರಮುಖ ರಾಜ್ಯ ಗುಜರಾತ್‌ನಲ್ಲಿ 76,061 ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 1,79,93,157 ಸದಸ್ಯರಿದ್ದಾರೆ. ಅಮುಲ್‌ನಂಥ ಅದ್ಭುತ ಸಹಕಾರಿ ಯಶೋಗಾಥೆ ಹೊಂದಿರುವ ಗುಜರಾತ್ ರಾಜ್ಯ ಡೈರಿ ಸಹಕಾರಿ ಸಂಘಗಳಿಗೆ ಭದ್ರ ಬುನಾದಿ ಹಾಕಿಕೊಟ್ಟಿದೆ. ಇಲ್ಲಿನ ಸಹಕಾರ ವಲಯದ ಚಟುವಟಿಕೆಯಿಂದ ರೈತರು, ಸಣ್ಣ ಕೈಗಾರಿಕೆಗಳು ಹಾಗೂ ಗ್ರಾಮೀಣ ಭಾಗದ ಜನರ ಉನ್ನತಿಗೆ ಕೊಡುಗೆ ನೀಡಿವೆ.
38,828 ಕೋ ಆಪರೇಟಿವ್ ಸೊಸೈಟಿಗಳಿರುವ ಕರ್ನಾಟಕದಲ್ಲಿ ರಾಷ್ಟ್ರೀಯ ಸಹಕಾರಿ ಡೇಟಾಬೇಸ್ ಅಂಕಿ ಅಂಶಗಳ ಪ್ರಕಾರ ಇಲ್ಲಿನ ಸಹಕಾರಿ ಸದಸ್ಯರ ಸಂಖ್ಯೆ 2,36,76,736. ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರವು ವೈವಿಧ್ಯಮಯವಾಗಿದದ್ದು, ಸಾಲ ನೀಡುವ ಸಂಘಗಳು, ಕೃಷಿ ಮಾರುಕಟ್ಟೆ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆಯನ್ನು ಒಳಗೊಂಡಿದೆ. ಇದು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಒದಗಿಸುವುದರೊಂದಿಗೆ ರಾಜ್ಯದ ಗ್ರಾಮೀಣ ಆರ್ಥಿಕತೆ ಬಲಪಡಿಸಲು ಸಹಾಯ ಮಾಡಿದೆ. ಕೇರಳದಲ್ಲಿ ಕೇವಲ 7,076 ಸೊಸೈಟಿಗಳಿದ್ದರೂ ಸದಸ್ಯರ ಸಂಖ್ಯೆಯಲ್ಲಿ ಕರ್ನಾಟಕವನ್ನೂ ಮೀರಿಸಿದೆ. ಇಲ್ಲಿನ ಸಹಕಾರಿ ಸಕ್ರಿಯ ಸದಸ್ಯರ ಸಂಖ್ಯೆ 2,94,72,329. ಇದು ಕೇರಳದಲ್ಲಿ ಸಹಕಾರ ಸಂಘಗಳ ಬಗ್ಗೆ ಜನ ಇಟ್ಟಿರುವ ನಂಬಿಕೆ ಮತ್ತು ಕೋ ಆಪರೇಟಿವ್ ಸೊಸೈಟಿಗಳಲ್ಲಿ ತೊಡಗಿಕೊಂಡಿರುವ ರೀತಿಯನ್ನು ಪ್ರತಿಧ್ವನಿಸುತ್ತದೆ. ಸಂಖ್ಯೆಗೆ ಹೋಲಿಸಿದರೆ ಹೆಚ್ಚಿನ ಸದಸ್ಯತ್ವವು ಸಹಕಾರ ಕ್ಷೇತ್ರದಲ್ಲಿ ಜನಸಂಖ್ಯೆಯ ಸಾಮೂಹಿಕ ಭಾಗವಹಿಸುವಿಕೆಯನ್ನು ತೋರಿಸುತ್ತದೆ.
ದೇಶದ ಪ್ರಮುಖ ರಾಜ್ಯಗಳಲ್ಲೊಂದಾದ ಉತ್ತರ ಪ್ರದೇಶದಲ್ಲಿ 19,587 ಸೊಸೈಟಿಗಳಿದ್ದು, 1,86,72,654 ಸದಸ್ಯರಿದ್ದಾರೆ. ಇದು ಆ ರಾಜ್ಯದಲ್ಲಿ ಗ್ರಾಮೀಣ ಮತ್ತು ಕೃಷಿ ಚಟುವಟಿಕೆಗಳು ಹಬ್ಬಿರುವ ಸಂಕೇತ.ವನ್ನು ಪ್ರತಿನಿಧಿಸುತ್ತಿದೆ. ಬಿಹಾರದಲ್ಲಿ 16,475 ಸೊಸೈಟಿಗಳಿದ್ದು, 1,53,81,807 ಸದಸ್ಯರಿದ್ದಾರೆ. ಗ್ರಾಮೀಣ ಭಾಗದ ಜನ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೀತಿಯನ್ನು ಇದು ತೋರಿಸುತ್ತದೆ.
ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ಮತ್ತು ಅಂಡಮಾನ್ ನಿಕೋಬಾರ್‌ನಲ್ಲಿ ಅತಿ ಕಡಿಮೆ ಸಂಖ್ಯೆಯ ಕೋ ಆಪರೇಟಿವ್ ಸೊಸೈಟಿಗಳಿವೆ. ಲಕ್ವದ್ವೀಪದಲ್ಲಿ ಕೇವಲ 30 ಸೊಸೈಟಿಗಳಿದ್ದು, 79,091 ಸದಸ್ಯರಿದ್ದಾರೆ. ಅಂಡಮಾನ್ ನಿಕೋಬಾರ್‌ನಲ್ಲಿ 1,210 ಸೊಸೈಟಿಗಳಿದ್ದು, 73,182 ಸದಸ್ಯರಿದ್ದಾರೆ. ಲಕ್ಷದ್ವೀಪದಲ್ಲಿ ಕಡಿಮೆ ಸೊಸೈಟಿಗಳಿದ್ದರೂ ಅಂಡಮಾನ್‌ಗಿಂತ ಹೆಚ್ಚು ಸದಸ್ಯರಿರುವುದು ವಿಶೇಷ.
ರಾಜ್ಯ/ಕೇಂದ್ರಾಡಳಿತ ಪ್ರದೇಶ ಸೊಸೈಟಿಗಳು ಸದಸ್ಯರು
ಮಹಾರಾಷ್ಟ್ರ 2,15,316 7,96,65,337
ಗುಜರಾತ್ 76,061 1,79,93,157
ತೆಲಂಗಾಣ 48,380 1,26,00,316
ಕರ್ನಾಟಕ 38,828 2,36,76,736
ಮಧ್ಯಪ್ರದೇಶ 26,502 90,89,058
ರಾಜಸ್ಥಾನ 23,446 81,93,080
ಪಶ್ಚಿಮ ಬಂಗಾಳ 22,798 87,67,584
ತಮಿಳುನಾಡು 20,409 2,09,10,509
ಉತ್ತರಪ್ರದೇಶ 19,587 1,86,72,654
ಬಿಹಾರ 16,475 1,53,81,807
ಹರಿಯಾಣ 14,321 42,44,007
ಆಂಧ್ರಪ್ರದೇಶ 12,464 71,77,162
ಪಂಜಾಬ್ 11,288 28,00,520
ಛತ್ತೀಸ್‌ಗಢ 9,350 52,20,978
ಜಮ್ಮು ಕಾಶ್ಮೀರ 8,225 4,15,488
ಜಾರ್ಖಂಡ್ 7,386 20,03,947
ಕೇರಳ 7,076 2,94,72,329
ಒಡೀಶಾ 7,007 94,57,901
ಅಸ್ಸಾಂ 6,186 31,57,415
ಮಣಿಪುರ 5,111 4,36,510
ಹಿಮಾಚಲ ಪ್ರದೇಶ 4,333 16,79,309
ಉತ್ತರಾಖಂಡ 3,753 16,33,172
ಗೋವಾ 2,748 13,96,468
ಮೇಘಾಲಯ 2,615 2,35,249
ನಾಗಾಲ್ಯಾಂಡ್ 2,194 94,752
ದೆಹಲಿ 1,936 12,66,480
ತ್ರಿಪುರ 1,893 5,13,711
ಸಿಕ್ಕಿಂ 1,617 75,146
ಅಂಡಮಾನ್ ನಿಕೋಬಾರ್ 1,210 73,182
ಮಿಜೋರಾಮ್ 1,062 45,052
ಅರುಣಾಚಲ ಪ್ರದೇಶ 761 38,928
ಪುದುಚೇರಿ 428 4,14,316
ದಾದ್ರಾ ನಗರ್‌ಹವೇಲಿ, ದಮನ್ ದಿಯು 363 46,543
ಚಂಡೀಗಢ 196 24,067
ಲಡಾಖ್ 159 22,464
ಲಕ್ಷದ್ವೀಪ 30 79,091
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com