Author: admin

ರಾಜ್ಯಸಭೆಯಲ್ಲಿ ಸಹಕಾರ ಸಚಿವ ಅಮಿತ್‌ ಶಾ ಮಾಹಿತಿ ನವದೆಹಲಿ: ಪ್ರಸ್ತಾಪಿತ ರಾಷ್ಟ್ರೀಯ ಸಹಕಾರಿ ನೀತಿಯ ಕರಡು ಸಿದ್ಧಪಡಿಸಲಾಗಿದ್ದು ಅದು ಅಂತಿಮ ಹಂತದಲ್ಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದಾರೆ. “ಸಹಕಾರ್ ಸೇ ಸಮೃದ್ಧಿ” (ಸಹಕಾರದಿಂದ ಸಮೃದ್ಧಿ) ಎಂಬ ದೃಷ್ಟಿಕೋನದಲ್ಲಿ ಸಹಕಾರಿ ವಲಯವನ್ನು ಬಲಪಡಿಸುವ ಗುರಿಯನ್ನು ಈ ನೀತಿ ಹೊಂದಿರಲಿದೆ ಎಂದು ಅಮಿತ್‌ ಶಾ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ರಾಷ್ಟ್ರೀಯ ಸಹಕಾರಿ ನೀತಿಯ ಕರಡು ಸಿದ್ಧಪಡಿಸಲು ಅಧ್ಯಯನ ನಡೆಸಲು ಸರ್ಕಾರವು ಸೆಪ್ಟೆಂಬರ್ 2, 2022ರಂದು ಸುರೇಶ್ ಪ್ರಭು ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ಸಮಿತಿಯನ್ನು ರಚಿಸಿತ್ತು. ಸಮಿತಿಯು ಸಹಕಾರಿ ವಲಯದ ತಜ್ಞರು, ರಾಷ್ಟ್ರೀಯ, ರಾಜ್ಯ, ಜಿಲ್ಲಾ ಮತ್ತು ಪ್ರಾಥಮಿಕ ಹಂತದ ಸಹಕಾರಿ ಸಂಘಗಳ ಪ್ರತಿನಿಧಿಗಳು ಹಾಗೂ ಸಹಕಾರ ಸಚಿವಾಲಯ ಮತ್ತು ವಿವಿಧ ಕೇಂದ್ರ ಸಚಿವಾಲಯಗಳ ಅಧಿಕಾರಿಗಳನ್ನು ಒಳಗೊಂಡಿದೆ. ನೀತಿ ನಿರೂಪಣಾ ಪ್ರಕ್ರಿಯೆಯ ಭಾಗವಾಗಿ, ಸಮಿತಿಯು 17 ಸಭೆಗಳನ್ನು ನಡೆಸಿ ದೇಶಾದ್ಯಂತ ನಾಲ್ಕು ಪ್ರಾದೇಶಿಕ ಕಾರ್ಯಾಗಾರಗಳನ್ನು ನಡೆಸಿ ಪಾಲುದಾರರಿಂದ…

Read More

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಬಜ್ಪೆ ಶಾಖೆಯ 11ನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸದಸ್ಯ ಪ್ರದೀಪ್ ಕುಮಾರ್ ಸುವರ್ಣ ಹಾಗೂ ಗೋಪಾಲ್ ಅಮೀನ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರದೀಪ್ ಕುಮಾರ್ ಸುವರ್ಣ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸ್ಥಳೀಯ ಸಿಬ್ಬಂದಿಗಳ ಕೊರತೆ ಇರುವುದರಿಂದ ನಾವು ಅಲ್ಲಿ ತೆರಳದೆ ಸಹಕಾರಿ ಸಂಸ್ಥೆಗಳತ್ತ ಆಕರ್ಷಿತರಾಗುತ್ತಿದ್ದೇವೆ. ಅದರಲ್ಲೂ ಆತ್ಮಶಕ್ತಿಯ ಸಿಬ್ಬಂದಿಗಳು ಎಟಿಎಂಗಿಂತಲೂ ಅತಿ ವೇಗದಲ್ಲಿ ಸೇವೆ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆತ್ಮಶಕ್ತಿಯ ಸಹಕಾರಿ ತನ್ನ ಸ್ವಂತ ಅಪ್ಲಿಕೇಶನ್ ಮಾಡುವ ಮೂಲಕ ಇನ್ನೂ ಹೆಚ್ಚಿನ ಗುಣಮಟ್ಟದ ಸೇವೆ ನೀಡುವಂತಾಗಲಿ” ಎಂದು ಶುಭ ಹಾರೈಸಿದರು. https://chat.whatsapp.com/EbVKVnWB6rlHT1mWtsgbch ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ “ಬಜ್ಪೆ ಶಾಖೆ ಆರಂಭಗೊಂಡು ೧೧ ವರ್ಷಗಳ ಈ ಸಂದರ್ಭ ಗ್ರಾಹಕರ ಸಭೆ ಆಯೋಜಿಸಿದ್ದೇವೆ. ೧೧ ವರ್ಷಗಳಿಂದ ಎಲ್ಲಾ ವರ್ಗದ ಗ್ರಾಹಕರು ಸಹಕರಿಸುತ್ತ ಶಾಖೆಯು ಉತ್ತಮ…

Read More

ಮುಂದಿನ ವಾರ್ಷಿಕ ಮಹಾಸಭೆಯಲ್ಲಿ ನಿರ್ಧಾರ: ಯೂನಿಯನ್‌ ಅಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು ಹೇಳಿಕೆ ಮಂಗಳೂರು: ಜಿಲ್ಲಾ ಸಹಕಾರಿ ಯೂನಿಯನ್‌ ಸದಸ್ಯತ್ವ ಪಡೆದ ಸಂಘಗಳಿಗೆ ಡಿವಿಡೆಂಡ್‌ ನೀಡುವ ಬಗ್ಗೆ ಜಿಲ್ಲಾ ಸಹಕಾರಿ ಯೂನಿಯನ್‌ನ ಮುಂದಿನ ವಾರ್ಷಿಕ ಮಹಾಸಭೆಯಲ್ಲಿ ನಿರ್ಧರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದ.ಕ. ಜಿಲ್ಲಾ ಸಹಕಾರ ಯೂನಿಯನ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಹಕಾರ ಇಲಾಖೆ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪಂಜ ಇವರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳಿಗೆ ಜರುಗಿದ ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. https://chat.whatsapp.com/EbVKVnWB6rlHT1mWtsgbch ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಪ್ರಗತಿಪಥದಲ್ಲಿ ಮುನ್ನಡೆಯಲು ಸಂಘದ ನಿರ್ದೇಶಕರು ಮತ್ತು ಸಿಬ್ಬಂದಿಗಳ ಪಾತ್ರ ಪ್ರಮುಖವಾಗಿರುತ್ತದೆ. ಸಹಕಾರ ಕಾಯ್ದೆ ನಿಯಮಗಳ…

Read More

ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳಿಗೆ ವಿನಾಯಿತಿ ಬೆಂಗಳೂರು: ದುಬಾರಿ ಬಡ್ಡಿಗೆ ಸಾಲ ನೀಡಿ ಜನರನ್ನು ಶೋಷಿಸುತ್ತಿದೆ ಎಂಬ ಆರೋಪ ಹೊತ್ತಿರುವ ಮೈಕ್ರೋ ಫೈನಾನ್ಸ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾನೂನು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ವಿಧೇಯಕ 2025 ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಅನಧಿಕೃತ ಫೈನಾನ್ಸ್ ಸಂಸ್ಥೆಗಳಿಗೆ 10 ವರ್ಷ ಕಠಿಣ ಜೈಲು, 5 ಲಕ್ಷ ರೂ. ದಂಡ, ಕಪ್ಪುಹಣಕ್ಕೆ ಕಡಿವಾಣ ಹಾಗೂ ಲೇವಾದೇವಿ ಮಾಫಿಯಾಗಳಿಂದ ಸಾಲ ಪಡೆದವರಿಗೆ ಉಂಟಾಗುವ ಕಿರುಕುಳ ತಪ್ಪಿಸುವ ನಿಟ್ಟಿನಲ್ಲಿ ಈ ವಿಧೇಯಕ ಅಂಗೀಕರಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ ಈ ವಿಧೇಯಕಕ್ಕೆ ಸುದೀರ್ಘ ಚರ್ಚೆಯ ಬಳಿಕ ಪ್ರತಿಪಕ್ಷಗಳ ಸಲಹೆ ಹಾಗೂ ಸಹಮತದಿಂದ ಅನುಮೋದನೆ ಸಿಕ್ಕಿದೆ. ವಿಧೇಯಕ ಮಂಡಿಸಿ ಮಾತನಾಡಿದ ಎಚ್.ಕೆ ಪಾಟೀಲ್, ಕಿರು ಸಾಲ, ಸಣ್ಣ ಸಾಲ, ಖಾಸಗಿ ಹಣಕಾಸು ಮತ್ತು ಇತರೆ ಅನಿಯಂತ್ರಿತ ಲೇವಾದೇವಿದಾರರಿಂದ ಸಾಲ ಪಡೆದವರಿಗೆ ಉಂಟಾಗುವ…

Read More

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್‌ ಅಧ್ಯಕ್ಷತೆಯಲ್ಲಿ “ಆತ್ಮಸಮ್ಮಾನ” ಕಾರ್ಯಕ್ರಮ ಆಯೋಜಿಸಲಾಗಿತ್ತು. https://chat.whatsapp.com/EbVKVnWB6rlHT1mWtsgbch ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕ ಮಹಿಳೆಯರಾದ ಶಿಕ್ಷಕರು ಮತ್ತು ಸಮಾಜ ಸೇವಕರಾದ ಕೆ.ಎ ರೋಹಿಣಿ ಹಾಗೂ ಪ್ರಾಧ್ಯಾಪಕರು ಮತ್ತು ಹಾಸ್ಯ ಸಾಹಿತಿಗಾರರಾದ ಭುವನೇಶ್ವರಿ ಹೆಗಡೆ ಇವರನ್ನು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಎ ರೋಹಿಣಿ, ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತಗೊಳಿಸಬಾರದು. ಹೆಣ್ಣು ಸಹನಾಮಯಿ. ಮನೆ, ಕುಟುಂಬ, ಕಚೇರಿ, ಮಕ್ಕಳು, ಕೆಲಸ ಹೀಗೆ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ಹೆಣ್ಣಿನ ಶಕ್ತಿಗೆ ಅದರದ್ದೇ ಆದ ಮಹತ್ವವಿದೆ. ಹೆಣ್ಣು ಮಕ್ಕಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಹೆಚ್ಚಿನ ಕಡೆ ಕೆಲಸಕ್ಕೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಪ್ರಾಶಸ್ತ್ಯ ಸಿಗುತ್ತಿದೆ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಕೇವಲ ಬ್ಯಾಂಕಿಂಗ್ ಸೇವೆಗೆ ಸೀಮಿತವಾಗಿರದೇ ಇತರ ಸಮಾಜಮುಖಿ ಚಟುವಟಿಕೆಗಳನ್ನು ವರ್ಷಂಪ್ರತಿ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ” ಎಂದರು. ಭುವನೇಶ್ವರಿ ಹೆಗಡೆ ಮಾತನಾಡಿ,…

Read More

ಮಂಗಳೂರು: ಮಂಗಳೂರು ಸೌಹಾರ್ದ ಸಹಕಾರಿ ಸಂಘದ ವಾರ್ಷಿಕೋತ್ಸವ ಅಂಗವಾಗಿ ಮಂಗಳೂರು ಸ್ಟೋರ್ (ಶಾಂತಿನಗರ ಜಪ್ಪು) ಸಭಾಂಗಣದಲ್ಲಿ ಭಾನುವಾರ ಉಚಿತ ಕಣ್ಣು ಪರೀಕ್ಷೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು. ಮಾಜಿ ಸಚಿವ ಕೃಷ್ಣ ಜೆ ಪಾಲೇಮಾರ್ ಉದ್ಘಾಟಿಸಿದರು. ಪದ್ಮಶ್ರೀ ಪ್ರಶಸ್ತಿ ವಿಜೇತ ಹರೇಕಳ ಹಾಜಬ್ಬ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. https://chat.whatsapp.com/EbVKVnWB6rlHT1mWtsgbch ಪ್ರಸಾದ್ ನೇತ್ರಾಲಯದ ಡಾ|ಸುಯೋಗ್ ಎಂ.ಎಸ್ ಶುಭ ಹಾರೈಸಿ ಮಾತನಾಡಿ, ಮಂಗಳೂರು ಸೌಹಾರ್ದ ಸಹಕಾರಿಯ ಜನಪರ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಧಾನ ಪರಿಷತ್‌ ಸದಸ್ಯ ಐವನ್ ಡಿಸೋಜ, ಮಹಿಳಾ ತಜ್ಞೆ ಡಾ.ಕವಿತಾ ಡಿಸೋಜ ಭಾಗವಹಿಸಿ ಶುಭಹಾರೈಸಿದರು. ಧನ್ವೀ ರಾವ್ ಪ್ರಾರ್ಥನೆ ಮಾಡಿದರು. ಸಂಸ್ಥೆಯ ಅಧ್ಯಕ್ಷ ಕೆ.ಭಾಸ್ಕರ್‌ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಉಪಾಧ್ಯಕ್ಷ ಭವಾನಿಶಂಕರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಚಂದ್ರಕಾ ಡಿ.ರಾವ್ ಮತ್ತು ವಸಂತ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಎ.ಕೃಷ್ಣಭಟ್, ಲತಾ ಆಳ್ವ, ಸುಂದರ ಸಾಲ್ಯಾನ್, ರವೀಂದ್ರ ಬೇಕಲ್, ಪೂರ್ಣಿಮಾ ಬಿ.ರಾವ್, ಪ್ರದೀಪ ಬೇಕಲ್, ಸತೀಶ್…

Read More

ಸಹಕಾರಿ ಶಿಕ್ಷಣದ ಜತೆಗೆ ಅಪ್‌ಡೇಟ್ ತುಂಬಾ ಮುಖ್ಯ: ನನ್ಯ ಅಚ್ಚುತ ಮೂಡೆತ್ತಾಯ ಅಭಿಪ್ರಾಯ ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಸಹಕಾರ ಇಲಾಖೆ ದ.ಕ ಜಿಲ್ಲೆ ಇವರ ಸಹಕಾರದೊಂದಿಗೆ ದ.ಕ ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೂತನವಾಗಿ ಆಯ್ಕೆಯಾದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಗೆ ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಿವಸದನ ಸಭಾಂಗಣದಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಕಾರ್ಯಕ್ರಮ ಉದ್ಘಾಟಿಸಿದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಮಾತನಾಡಿ, ಜಿಲ್ಲಾಮಟ್ಟದ ತರಬೇತಿ ಕಾರ್ಯಕ್ರಮ ಹೆಚ್ಚಾಗಿ ಮಂಗಳೂರಿನಲ್ಲಿ ನಡೆಯುತ್ತಿತ್ತು. ಅದರೆ ಈ ಬಾರಿ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಯೂನಿಯನ್‌ನ ಜಿಲ್ಲಾಧ್ಯಕ್ಷರಾದ ಬಳಿಕ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಹಳ್ಳಿಗೆ ತರುವ…

Read More

ಜನರ ಪ್ರೀತಿ, ವಿಶ್ವಾಸ ಗಳಿಸಿ ವ್ಯವಹಾರ ಮಾಡಿದರೆ ಯಶಸ್ಸು: ಕಟೀಲು ವೆಂಕಟರಮಣ ಆಸ್ರಣ್ಣ ಬಂಟ್ವಾಳ: ಬಿ.ಸಿ.ರೋಡು ವಿವೇಕನಗರದ ಶಕ್ತಿ ಕಾಂಪೌಂಡ್‌ನ ಒಂದನೇ ಮಹಡಿಯಲ್ಲಿ ಗುರುವಾರ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋಆಪರೇಟಿವ್ ಸೊಸೈಟಿ ಶುಭಾರಂಭಗೊಂಡಿತು. ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ ದೀಪ ಪ್ರಜ್ವಲನಗೊಳಿಸಿ ಆಶೀರ್ವಚನ ನೀಡಿ ಜನರ ಪ್ರೀತಿ, ವಿಶ್ವಾಸ ಗಳಿಸಿ ವ್ಯವಹಾರ ಮಾಡಿದರೆ ಯಶಸ್ಸು ಸಾಧ್ಯ ಎಂದು ಹೇಳಿದರು. https://chat.whatsapp.com/EbVKVnWB6rlHT1mWtsgbch ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಶುಭ ಹಾರೈಸಿದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕಿ ಭಾರತಿ ಜಿ.ಭಟ್ ಮಾತನಾಡಿ, ಮಹಿಳೆಯೊಬ್ಬರು ಸೊಸೈಟಿ ಅಧ್ಯಕ್ಷೆಯಾಗಿರುವುದು ಸಂತಸದ ವಿಷಯ, ಸಹಕಾರ ಮನೋಭಾವನೆಯಿಂದ ಮುನ್ನಡೆಯಿರಿ ಎಂದು ಸಲಹೆ ನೀಡಿದರು. ಭದ್ರತಾ ಕೊಠಡಿ ಉದ್ಘಾಟಿಸಿ ಮಾತನಾಡಿದ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಮೈಸೂರು ಪ್ರಾಂತ ಅಧಿಕಾರಿ ಗುರುಪ್ರಸಾದ್ ಬಂಗೇರ, ಸಹಕಾರ ಕ್ಷೇತ್ರದಲ್ಲಿ ಅನುಭವ ಹೊಂದಿದವರು ಮಾಡಿರುವ ಸಹಕಾರ ಸಂಸ್ಥೆ ಯಶಸ್ವಿಯಾಗಲಿ ಎಂದರು. ಸಹಕಾರಿ ನಾಮಫಲಕವನ್ನು ಪುತ್ತೂರು ಮಾಜಿ ಪುರಸಭಾಧ್ಯಕ್ಷ…

Read More

ಸಹಕಾರ  ಸಚಿವ ಅಮಿತ್‌ ಷಾ ಮುಂದಾಳತ್ವದಲ್ಲಿ ಉನ್ನತ ಮಟ್ಟದ ಸಭೆ ನವದೆಹಲಿ: ಸಹಕಾರದಿಂದ ಸಮೃದ್ಧಿ ಎಂಬ ಪರಿಕಲ್ಪನೆಯ ಮೂಲಕ ಸಹಕಾರಿ ಸಂಸ್ಥೆಗಳಲ್ಲಿ ಯುವಕರು ಮತ್ತು ಮಹಿಳೆಯರು ಭಾಗವಹಿಸುವುದನ್ನು ಹೆಚ್ಚಿಸಲು ಸಹಕಾರ ಸಚಿವಾಲಯವು ಮಹತ್ವದ ಉಪಕ್ರಮಗಳನ್ನು ತೆಗೆದುಕೊಂಡಿರುವ ಬಗ್ಗೆ ಪರಿಶೀಲಿಸಲು ಗುರುವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಹಕಾರ ಸಚಿವ ಅಮಿತ್‌ ಷಾ ಮುಂದಾಳತ್ವದಲ್ಲಿ ಸಭೆ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಭೆಯಲ್ಲಿ ಸಹಕಾರ ಸಚಿವಾಲಯದ ಕಾರ್ಯದರ್ಶಿ ಡಾ.ಆಶಿಶ್ ಕುಮಾರ್ ಭೂತಾನಿ, ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ, ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ -2 ಶಕ್ತಿಕಾಂತ ದಾಸ್, ಪ್ರಧಾನಿಯವರ ಸಲಹೆಗಾರ ಅಮಿತ್ ಖರೆ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಭಾರತದ ಸಹಕಾರಿ ವಲಯವನ್ನು ವಿಸ್ತರಿಸಲು ಜಾಗತಿಕ ಸಹಕಾರಿ ಸಂಸ್ಥೆಗಳೊಂದಿಗೆ ಸಹಕರಿಸುವ ಮಹತ್ವದ ಬಗ್ಗೆ ಒತ್ತಿ ಹೇಳಿದರು. ಸಹಕಾರಿ ಜಾಲಗಳ ಮೂಲಕ ಸಾವಯವ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವುದು, ರಫ್ತು ಮಾರುಕಟ್ಟೆಗಳನ್ನು ಅನ್ವೇಷಿಸುವುದು ಮತ್ತು ಕೃಷಿ ಪದ್ಧತಿಗಳನ್ನು ಸುಧಾರಿಸಲು…

Read More

ಬೆಳ್ತಂಗಡಿ: ಬೆಳ್ತಂಗಡಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ನಿವೃತ್ತ ಡಿಎಫ್ಒ, ಕುಕ್ಕಿನಡ್ಕ ಮನೆತನದ ಹಿರಿಯರಾದ ಎನ್.ಪದ್ಮನಾಭ ಮಾಣಿಂಜ (87) ವಯೋ ಸಹಜ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ನಿಧನ ಹೊಂದಿದರು. https://chat.whatsapp.com/EbVKVnWB6rlHT1mWtsgbch ಪದ್ಮನಾಭ ಮಾಣಿಂಜ ಅವರು ಮಾಜಿ ಶಾಸಕ ದಿ.ಕೆ.ವಸಂತ ಬಂಗೇರ ಅವರ ನಿಕಟವರ್ತಿಯಾಗಿದ್ದು, ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದ ಬೆಳವಣಿಗೆಯಲ್ಲಿ ಇವರಿಬ್ಬರ ಪಾತ್ರ ಪ್ರಮುಖವಾಗಿತ್ತು. ಗುರುದೇವ ಸಹಕಾರ ಸಂಘವನ್ನು ಆರ್ಥಿಕವಾಗಿ ಬಲಿಷ್ಠ ಸಹಕಾರ ಸಂಘವಾಗಿಸುವ ಜತೆಗೆ ಜಿಲ್ಲೆ ಹೊರೆ ಜಿಲ್ಲೆಗಳಲ್ಲೂ ಶಾಖೆಗಳನ್ನು ತೆರೆಯುವ ಮೂಲಕ ಬಿಲ್ಲವ ಸಮುದಾಯದಲ್ಲಿ ಮೇರು ನಾಯಕರಾಗಿ ಬೆಳೆದಿದ್ದರು. ಕೆ.ವಸಂತ ಬಂಗೇರರೊಂದಿಗೆ ಉತ್ತಮ ಸಂಬಂಧ ಹೊಂದಿದ ಇವರು, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಸಂಘದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಿದ್ದರು. ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಪ್ರಗತಿಯ ಹಿಂದೆ ಪದ್ಮನಾಭ ಮಾಣಿಂಜರವರ ದೂರದೃಷ್ಟಿ ಚಿಂತನೆ ಮಹತ್ತರವಾದದು. ಉಜಿರೆ ರಬ್ಬ‌ರ್ ಸೊಸೈಟಿಯ ಉಪಾಧ್ಯಕ್ಷ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸರಳ,…

Read More