ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ರೋಟರಿ ಕ್ಲಬ್ ಕಾಪು ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ದೇರಳಕಟ್ಟೆ ಹಾಗೂ ಸಮುದಾಯ ದಂತ ವಿಭಾಗ , ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ ಇವರ ನುರಿತ ತಜ್ಞ ವೈದ್ಯರ ತಂಡದೊಂದಿಗೆ ಉಚಿತ ವೈದ್ಯಕೀಯ, ನೇತ್ರ ತಪಾಸಣೆ ಮತ್ತು ದಂತ ತಪಾಸಣೆ ಶಿಬಿರ ಡಿಸೆಂಬರ್ 22ರಂದು ಬೆಳಗ್ಗೆ 9.30ರಿಂದ ಅಪರಾಹ್ನ 12.30ರವರೆಗೆ ನೆಲಮಹಡಿ, ವಿವೇಕ್ ಕಾಂಪ್ಲೆಕ್ಸ್, ಹೊಸ ಮಾರಿಗುಡಿ ಹತ್ತಿರ, ಕಾಪು (ಸಂಘದ ವಠಾರ) ಇಲ್ಲಿ ನಡೆಯಲಿದೆ.
https://chat.whatsapp.com/Ge11n7QCiMj5QyPvCc0H19
ಈ ವೈದ್ಯಕೀಯ ಶಿಬಿರದಲ್ಲಿ ಕಣ್ಣಿನ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಉಚಿತ ಕನ್ನಡಕ ವಿತರಣೆ, ಮಧುಮೇಹ ತಪಾಸಣೆ, ಬಿ.ಪಿ ತಪಾಸಣೆ, ಸಾಮಾನ್ಯ ವೈದ್ಯಕೀಯ ತಪಾಸಣೆ, ಕಿವಿ, ಮೂಗು ಮತ್ತು ಗಂಟಲು ತಪಾಸಣೆ, ಎಲುಬು ಮತ್ತು ಕೀಲು ತಪಾಸಣೆ, ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು, ರೋಗಗ್ರಸ್ಥ ಹಲ್ಲುಗಳನ್ನು ಕೀಳುವುದು, ಹಲ್ಲುಗಳನ್ನು ಶುಚಿ ಮಾಡುವುದು, ಉಚಿತ ಔಷದಾಲಯ, ಹೆಚ್ಚಿನ ಚಿಕಿತ್ಸೆಗೆ ಹಸಿರು ಕಾರ್ಡ್ ನೀಡುವುದು ಹಾಗೂ ವೈದ್ಯಕೀಯ ಸೇವೆಗಳು ಲಭ್ಯವಿರುತ್ತದೆ. ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆಯಬೇಕೆಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.