Author: admin
ಮಂಗಳೂರಿನಲ್ಲಿ ನವಂಬರ್ 16ರಂದು ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ ಸಹಕಾರ ಜಾಥಾದಲ್ಲಿ 32 ಟ್ಯಾಬ್ಲೋಗಳು ಭಾಗಿ, ಕರಾವಳಿ ಉತ್ಸವ ಮೈದಾನದಲ್ಲಿ ಅದ್ದೂರಿ ಕಾರ್ಯಕ್ರಮ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಮಾಹಿತಿ ಮಂಗಳೂರು: ಈ ಬಾರಿಯ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಕರಾವಳಿ ಭಾಗದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಪರಂಪರೆಗೆ ನಾಂದಿ ಹಾಕಲಾಗಿದ್ದು ಉಭಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳಿಗೆ ಸಹಕಾರ ಮಾಣಿಕ್ಯ ಪ್ರಶಸ್ತಿ ನೀಡಲಾಗುತ್ತಿದೆ. ಸೋಮವಾರ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ..ಎನ್ ರಾಜೇಂದ್ರ ಕುಮಾರ್ ಈ ಮಾಹಿತಿ ನೀಡಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಗುರುತಿಸುವ ಉದ್ದೇಶದಿಂದ 2024ನೇ ಸಾಲಿನಿಂದ ಅಖಿಲ ಭಾರತ ಸಹಕಾರ ಸಪ್ತಾಹದ ಸಂಭ್ರಮ ಆಚರಣೆಯ ಸಂದರ್ಭ “ಸಹಕಾರ ಮಾಣಿಕ್ಯ” ಪ್ರಶಸ್ತಿ ನೀಡಲುನಿರ್ಧರಿಸಲಾಗಿದೆ. ಉಭಯ ಜಿಲ್ಲೆಗಳಿಂದ ತಲಾ ಒಂದರಂತೆ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹಾಗೂ ಕ್ರೆಡಿಟ್ ಕೋ-ಆಪರೇಟಿವ್…
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮೂಲ್ಕಿ ಶಾಖೆಯ ಆರೋಗ್ಯ ಶಿಬಿರದಲ್ಲಿ ಡಾ.ರೇಖಾ ಪಿ.ಶೆಣೈ ಅಭಿಪ್ರಾಯ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದೊಂದಿಗೆ ನಿರಂತರ ಆರೋಗ್ಯ ಶಿಬಿರ ನಡೆಸುತ್ತಿದ್ದು ಇಂಥ ಶಿಬಿರದಲ್ಲಿ ಶಿಬಿರಾರ್ಥಿಗಳು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಕೊಂಡು ಸದುಪಯೋಗ ಪಡೆದುಕೊಳ್ಳುತ್ತಿರುವುದು ಸಂತೋಷದ ವಿಷಯ. ಯಾವುದೇ ರೋಗವನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವುದು ಉತ್ತಮ. ಜನ ಕೆಲಸದ ಒತ್ತಡದ ಸಮಯದಲ್ಲಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಲ್ಲಿ ಎಡವುತ್ತಾರೆ. ಅಂಥ ಸಂದರ್ಭಗಳಲ್ಲಿ ಇಂತಹ ಶಿಬಿರಗಳನ್ನು ರಜಾ ದಿನಗಳಲ್ಲಿ ಆಯೋಜಿಸುತ್ತಿರುವುದರಿಂದ ಜನರಿಗೆ ತುಂಬ ಉಪಯೋಗವಾಗುತ್ತಿದೆ ಎಂದು ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ಮುಖ್ಯಸ್ಥೆ ಡಾ| ರೇಖಾ ಪಿ.ಶೆಣೈ ಹೇಳಿದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮೂಲ್ಕಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಲಯನ್ಸ್ ಕ್ಲಬ್ ಮೂಲ್ಕಿ, ಎಂಜೆ.ಎಫ್ ಲಿಯೋ ಕ್ಲಬ್ ಮೂಲ್ಕಿ, ಲಯನ್ಸ್ ಕ್ಲಬ್ ಬಪ್ಪನಾಡು ಇನ್‌ಸ್ಪೈರ್ ಇವರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ…
ಮಂಗಳೂರು: ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅಭ್ಯಾಸವರ್ಗ ನವಂಬರ್ 16ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30ರ ತನಕ ಪಾಂಡೇಶ್ವರದ ವಾರಣಾಸಿ ಟವರ್ಸ್‌ನಲ್ಲಿರುವ ಕ್ಯಾಂಪ್ಕೊ ಸಭಾಂಗಣದಲ್ಲಿ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗೀಯ ಕಾರ್ಯವಾಹ ಡಾ.ವಾದಿರಾಜ್, ಸಹಕಾರ ಭಾರತಿಯ ದಕ್ಷಿಣ ಮಧ್ಯ ಕ್ರೇತ್ರೀಯ ಸಂಪರ್ಕ ಪ್ರಮುಖ್, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರಿನ ಉಪ ಪೊಲೀಸ್ ಆಯುಕ್ತ ದಿನೇಶ್ ಕುಮಾರ್ ಬಿ.ಪಿ ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಇತರ ಕ್ಷೇತ್ರಗಳಲ್ಲಿ ಸೈಬರ್ ಅಪರಾಧ ಬಗ್ಗೆ ಮಂಜಾಗ್ರತೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಸೆಲ್ಕೋದ ಡೆಪ್ಯುಟಿ ಜನರಲ್ ಮ್ಯಾನೇಜರ್ ಗುರುಪ್ರಕಾಶ್ ಶೆಟ್ಟಿ ಪ್ರಧಾನಮಂತ್ರಿ ಸೌರ ವಿದ್ಯುತ್ ಯೋಜನೆ -ಮನೆಗಳಲ್ಲಿ ಸಮಗ್ರ ಸೌರ ವಿದ್ಯುತ್ ಉಪಯೋಗ- ಸಹಕಾರಿಗಳ ಪಾತ್ರ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಸಹಕಾರ ಭಾರತಿಯ ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷ ಜಿ.ಆರ್ ಪ್ರಸಾದ್, ಪ್ರಧಾಣ…
ಶಿಕಾರಿಪುರ: ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ, ಜಿಲ್ಲಾ ಮಹಿಳಾ ಜವಳಿ ಉತ್ಪತ್ತಿ ಮತ್ತು ಮಾರಾಟ ಸಹಕಾರ ಸಂಘ ಶಿಕಾರಿಪುರ, ಬಸವೇಶ್ವರ ಸಹಕಾರ ಒಕ್ಕೂಟ ಸಂಘ ಶಿಕಾರಿಪುರ ಇವರ ಸಹಯೋಗದಲ್ಲಿ ಶಿಕಾರಿಪುರ ತಾಲೂಕಿನ ಚುನಾವಣೆ ನಡೆಯುವ ಚುನಾವಣಾಧಿಕಾರಿಗಳಿಗೆ ಮತ್ತು ಕಾರ್ಯದರ್ಶಿಯವರಿಗೆ ಚುನಾವಣೆಗೆ ಸಂಬಂಧಿಸಿದ ಒಂದು ದಿನದ ತರಬೇತಿ ಕಾರ್ಯಕ್ರಮ ಶಿಕಾರಿಪುರದ ಬನಸಿರಿ ಸಭಾಂಗಣದಲ್ಲಿ ಲತಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/Ge11n7QCiMj5QyPvCc0H19 ಕನ್ನಡ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಕನ್ನಡ ಧ್ವಜಾರೋಹಣ ಕಾರ್ಯಕ್ರಮವನ್ನು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ನಡೆಸಿಕೊಟ್ಟರು. ಕರ್ನಾಟಕ ರಾಜ್ಯ ತೋಟಗಾರಿಕಾ ಮಹಾಮಂಡಳ ಅಧ್ಯಕ್ಷ ಡಾ.ಬಿ.ಡಿ ಭೂಕಾಂತ್ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಉಪಾಧ್ಯಕ್ಷೆ ಶಾಂತಲಾ ಭೂಕಾಂತ್, ನಿರ್ದೇಶಕರಾದ ಕವಿತಾ ಸುರೇಶ್, ಶಶಿಕಲಾ ರುದ್ರೇಶ್, ಶಿವಮ್ಮ ಬಸವರಾಜ್, ಮಂಗಳ ವಿಶ್ವೇಶ್ವರಯ್ಯ, ಬಸವೇಶ್ವರ ಸಹಕಾರಿ ಒಕ್ಕೂಟ ಅಧ್ಯಕ್ಷ ಮೌನೇಶ್ವರಪ್ಪ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕಿ ಮಮತಾ ಚಂದ್ರಕುಮಾರ್, ನಾಗರಾಜಪ್ಪ, ಶಾಂತಮ್ಮ ಶಾಂತಕುಮಾರ್…
ಸಾಗರ: ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ, ಶ್ರೀ ಶಾಂತೇಶ್ವರಿ ಮಹಿಳಾ ಪತ್ತಿನ ಸಹಕಾರ ಸಂಘ ಶಿಕಾರಿಪುರ, ಶ್ರೀ ಬಸವೇಶ್ವರ ಸಹಕಾರ ಒಕ್ಕೂಟ ಸಂಘ ಶಿಕಾರಿಪುರ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಗರ ಉಪ ವಿಭಾಗದ ಪತ್ತಿನ ಮತ್ತು ವಿವಿಧೋದ್ದೇಶ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಶಿಕಾರಿಪುರದ ಶ್ರೀ ಕಂತೆ ಸಿದ್ದೇಶ್ವರ ಸಭಾಂಗಣದಲ್ಲಿ ನೇತ್ರಾ ದೇವರಾಜ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು. https://chat.whatsapp.com/Ge11n7QCiMj5QyPvCc0H19 ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ.ರಾಜು ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ತೋಟಗಾರಿಕಾ ಮಹಾಮಂಡಳದ ಅಧ್ಯಕ್ಷ ಬಿ.ಡಿ.ಭೂಕಾಂತ, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳದ ಉಪಾಧ್ಯಕ್ಷೆ ಶಾಂತಲಾ ಭೂಕಾಂತ್, ನಿರ್ದೇಶಕರಾದ ಶಿವಮ್ಮ ಬಸವರಾಜಪ್ಪ, ಕವಿತಾ ಸುರೇಶ್, ಶಶಿಕಲಾ ರುದ್ರೇಶ್, ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಡಿ.ಎಲ್. ಬಸವರಾಜ್, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕೆ.ಜಿ. ಮಮತಾ ಚಂದ್ರಕುಮಾರ್, ಶಿವಮೊಗ್ಗ ಜಿಲ್ಲಾ ಸಹಕಾರ…
ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ವಿನೂತನ ಯೋಜನೆ ನವಂಬರ್ 9ರ ಶನಿವಾರ ಸಮಾರಂಭ ಮಂಗಳೂರು: ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ರಿಯಾಶೀಲವಾಗಿರುವ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಮತ್ತೊಂದು ವಿನೂತನ ಯೋಜನೆ ತಯಾರಾಗಿದ್ದು 50 ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ಗ್ರಂಥಾಲಯಕ್ಕೆ 5000 ಪುಸ್ತಕಗಳ ವಿತರಿಸುವ ಕಾರ್ಯಕ್ರಮ ನವಂಬರ್ 9ರಂದು ಶನಿವಾರ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 ಮಂಗಳೂರಿನ ಶ್ರೀನಿವಾಸ ಹೋಟೆಲ್ ಸಭಾಂಗಣದಲ್ಲಿ ನ.9ರಂದು ಮಧ್ಯಾಹ್ನ 3.30ಕ್ಕೆ ಕಾರ್ಯಕ್ರಮ ನಡೆಯಲಿದ್ದು ಮಂಗಳೂರಿನ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಮಹಾರಾಜ್ ಉಪಸ್ಥಿತರಿರುವರು. ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹೊ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕಿ ಭಾರತಿ ಜಿ.ಭಟ್, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ್ ಬಿ.ಎಸ್ ಭಾಗವಹಿಸುವರು. ಶ್ರೀಶಾ ಸೌಹಾರ್ದ ಕೋ…
ನವದೆಹಲಿ: ಕೇಂದ್ರ ಸಹಕಾರ ಸಚಿವಾಲಯದ ಸಲಹಾ ಸಮಿತಿಯನ್ನು ಕೇಂದ್ರ ಸರ್ಕಾರವು ರಚಿಸಿದ್ದು ಉಭಯ ಸದನಗಳ ಸದಸ್ಯರು ಇದರಲ್ಲಿ ಒಳಗೊಂಡಿದ್ದಾರೆ. ಬಿಜೆಪಿಯ ಝಾನ್ಸಿ ಲೋಕಸಭಾ ಕ್ಷೇತ್ರದ ಸಂಸದ ಅನುರಾಗ್ ಶರ್ಮ ಕಳೆದ ಬಾರಿಯ ತಂಡದಲ್ಲಿದ್ದ ಏಕೈಕ ಸದಸ್ಯರಾಗಿ ಉಳಿದುಕೊಂಡಿದ್ದಾರೆ. https://chat.whatsapp.com/Ge11n7QCiMj5QyPvCc0H19 2019ರ ಅಕ್ಟೋಬರ್ 23ರಂದು ಈ ಹಿಂದಿನ ಸಮಿತಿ ರಚಿಸಲಾಗಿದ್ದು ಅದರಲ್ಲಿ 20 ಲೋಕಸಭಾ ಸದಸ್ಯರು ಮತ್ತು 8 ರಾಜ್ಯಸಭಾ ಸದಸ್ಯರಿದ್ದರು. ಈ ಬಾರಿ ರಚಿಸಲಾಗಿರುವ ತಂಡದಲ್ಲಿ 9 ಲೋಕಸಭಾ ಸದಸ್ಯರು ಮತ್ತು 4 ರಾಜ್ಯಸಭಾ ಸದಸ್ಯರಿದ್ದಾರೆ. ಸಮಿತಿಯಲ್ಲಿ ಹೊಸಬರನ್ನು ಸೇರ್ಪೆಡೆ ಮಾಡುವ ಉದ್ದೇಶದಿಂದ ಹೊಸ ಸದಸ್ಯರನ್ನು ಸೇರಿಸಲಾಗಿದ್ದು ಉತ್ತರ ಪ್ರದೇಶದ ಬೃಜ್‌ಭೂಷಣ್ ಸಿಂಗ್ ಅವರ ಪುತ್ರ ಕರಣ್ ಭೂಷಣ್ ಸಿಂಗ್(ಬಿಜೆಪಿ), ಮಧ್ಯಪ್ರದೇಶದ ಶಿವಮಂಗಲ್ ಸಿಂಗ್ ತೋಮರ್(ಬಿಜೆಪಿ), ಮಹಾರಾಷ್ಟ್ರದ ಧಾರಯಶೀಲ್ ಮೋಹಿತೆ ಪಾಟೀಲ್(ಎನ್‌ಸಿಪಿ -ಶರದ್ ಪವಾರ್ ಬಣ), ಕರ್ನಾಟಕದ ಶ್ರೇಯಸ್ ಎಂ.ಪಟೇಲ್(ಕಾಂಗ್ರೆಸ್), ತೆಲಂಗಾಣದ ಸುರೇಶ್ ಕುಮಾರ್ ಶೇಟ್ಕರ್(ಕಾಂಗ್ರೆಸ್), ಉತ್ತರ ಪ್ರದೇಶದ ಅನುರಾಗ್ ಶರ್ಮ(ಬಿಜೆಪಿ), ಗುಜರಾತ್‌ನ ಪೂನಂಬೆನ್ ಮೇಡಮ್(ಬಿಜೆಪಿ), ಗುಜರಾಥ್‌ನ ದಭಿ ಭರತ್‌ಸಿಂಹಜಿ(ಕಾಂಗ್ರೆಸ್), ಮಹಾರಾಷ್ಟ್ರದ…
ಮಂಗಳೂರು: 71ನೇ ಅಖಿಲ ಭಾರತ ಸಹಕಾರ ಸಪ್ತಾಹವು ‘ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳ ಪಾತ್ರ’ ಎಂಬ ಧ್ಯೇಯದೊಂದಿಗೆ ನವಂಬರ್ 14ರಿಂದ 20ರವರೆಗೆ ದೇಶಾದ್ಯಂತ ನಡೆಯಲಿದ್ದು, ಮಂಗಳೂರಿನಲ್ಲಿ ನ.16ರಂದು ‘ಉದ್ಯಮಶೀಲತೆ, ಉದ್ಯೋಗ ಮತ್ತು ಕೌಶಲಾಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ವಿಷಯದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ನಡೆಯಲಿದೆ. ಸೋಮವಾರ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ನಡೆದ ಸಹಕಾರ ಸಪ್ತಾಹದ ಪೂರ್ವಭಾವಿ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಲು ತಯಾರಿ ನಡೆದಿದೆ. ಆ ಮೂಲಕ ಸಹಕಾರ ಕ್ಷೇತ್ರದ ಸಾಧನೆಗಳನ್ನು ಸಾರ್ವಜನಿಕರ ಗಮನಕ್ಕೆ ತರುವುದು ಅಗತ್ಯವಾಗಿದ್ದು ಇದರ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದರು. https://chat.whatsapp.com/Ge11n7QCiMj5QyPvCc0H19 ಮೈಸೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿ ಪಿ ಮಾತನಾಡಿ, ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ ಇಡೀ ರಾಜ್ಯದಲ್ಲೇ ಮಾದರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದು ಶ್ಲಾಘನೀಯ ಸಂಗತಿ ಎಂದರು.…
ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ – ಈ ಬಾರಿಯ ಧ್ಯೇಯವಾಕ್ಯ ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನೇತೃತ್ವದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಯು ನವಂಬರ್ 14ರಿಂದ 20ರ ತನಕ ನಡೆಯಲಿದೆ. ರಾಜ್ಯಮಟ್ಟದಲ್ಲಿ ಏಳು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ವಿವಿಧ ಮಹಾಮಂಡಲಗಳ ನೇತೃತ್ವದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಬಾರಿ ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ಧ್ಯೇಯವಾಕ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 ನವಂಬರ್ 14ರಂದು ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು ಕೆಎಂಎಫ್ ನೇತೃತ್ವದಲ್ಲಿ ಸಹಕಾರ ಸಚಿವಾಲಯದ ನೂತನ ಪ್ರಯತ್ನಗಳ ಮೂಲಕ ಸಹಕಾರ ಚಳುವಳಿಯನ್ನು ಬಲಪಡಿಸುವುದು ಎಂಬ ವಿಷಯದಲ್ಲಿ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ನವಂಬರ್ 15ರಂದು ಚಿತ್ರದುರ್ಗದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಎಣ್ಣೆಬೀಜ ಬೆಳೆಗಾರರ ಮಹಾಮಂಡಳ ಮತ್ತು ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು…
2024-25ನೇ ಸಾಲಿನ ಎರಡು ಲಕ್ಷ ರೂ.ಗಳ ವಿದ್ಯಾರ್ಥಿವೇತನಕ್ಕೆ ಮಾದರಿ ಪರೀಕ್ಷೆ ಸಿಂಧನೂರು: ಇಲ್ಲಿನ ಆಕ್ಸ್‌ಫರ್ಡ್ ಸೌಹಾರ್ದ ಸಂಘದ ವತಿಯಿಂದ ನೀಡಲಾಗುವ ಎರಡು ಲಕ್ಷ ರೂ.ಗಳ ವಿದ್ಯಾರ್ಥಿವೇತನದ ಪೋಸ್ಟರ್ ಬಡುಗಡೆ ಕಾರ್ಯಕ್ರಮ ಶುಕ್ರವಾರ ಸಂಘದ ಲಕ್ಷ್ಮೀಪೂಜೆ ಸಂದರ್ಭದಲ್ಲಿ ನಡೆಯಿತು.https://chat.whatsapp.com/Ge11n7QCiMj5QyPvCc0H19 ಶುಕ್ರವಾರ ಸಹಕಾರಿಯ ಕಚೇರಿಯಲ್ಲಿ ಲಕ್ಷ್ಮೀದೇವಿ ಪೂಜಾ ಕಾರ್ಯಕ್ರಮ ನಡೆದ ಬಳಿ, ದೀಪಾವಳಿಯು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಭರವಸೆ ಮತ್ತು ನಾಳೆಯ ಹೊಸ ಕನಸುಗಳ ಈಡೇರಿಕೆಗೆ ನೆರವಾಗಲು 2024-25ನೇ ಸಾಲಿನ ಎರಡು ಲಕ್ಷ ರೂ.ಗಳ ಆಕ್ಸ್‌ಫರ್ಡ್ ವಿದ್ಯಾರ್ಥಿವೇತನದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆಕ್ಸ್‌ಫರ್ಡ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎನ್.ಸತ್ಯನಾರಾಯಣ ಶ್ರೇಷ್ಠಿ, ನಿರ್ದೇಶಕರಾದ ಪ್ರವೀಣ ಸೋಲಂಕಿ, ನಾಗರಾಜ್ ಗುಪ್ತ, ಬಸವರಾಜ್ ಪಾಟೀಲ್, ಮುಖ್ಯ ಕಾರ್ಯನಿರ್ವಾಹಕ ವಿಶ್ವನಾಥ ಕುಲಕರ್ಣಿ, ಸಿಬ್ಬಂದಿ ವರ್ಗ ಮೊದಲಾದವರು ಉಪಸ್ಥಿತರಿದ್ದರು. 2024-25ನೇ ಸಾಲಿನ ವಿದ್ಯಾರ್ಥಿವೇತನದ ವಿವರ: ಆಕ್ಸ್‌ಫರ್ಡ್ ಸೌಹಾರ್ದ ಸಹಕಾರಿ ಸಂಘದಿಂದ ಪ್ರಸಕ್ತ ಎರಡನೇ ವರ್ಷ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಎರಡು ಸಾವಿರ ರೂ.ಗಳ ವಾರ್ಷಿಕ ವಿದ್ಯಾರ್ಥಿವೇತನ ನೀಡಲಾಗುತ್ತಿದ್ದು, ಪಿಯುಸಿ, ಪದವಿ ಮತ್ತು…
