Author: admin

ಮಂಗಳೂರು: ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ಅಭ್ಯಾಸ ವರ್ಗ ಜನವರಿ 18ರಂದು ಶನಿವಾರ ನಂತೂರು ಸಮೀಪದ ಪದುವಾ ಶಾಲೆಯ ಪಕ್ಕದ ಸಿಒಡಿಪಿ ಸಭಾಂಗಣದಲ್ಲಿ ಬೆಳಗ್ಗೆ 9.30ರಿಂದ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 ಸಹಕಾರ ಭಾರತಿಯ ಮಹಾನಗರ ಜಿಲ್ಲಾಧ್ಯಕ್ಷ ಜಿ.ಆರ್‌.ಪ್ರಸಾದ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗ್ಗೆ 10.15ರಿಂದ ಸಹಕಾರ ಭಾರತಿ ಧ್ಯೇಯೋದ್ದೇಶಗಳು ಎಂಬ ವಿಷಯದ ಬಗ್ಗೆ ಸಹಕಾರ ಭಾರತಿಯ ರಾಜ್ಯ ಕಾರ್ಯದರ್ಶಿ ನರಸಿಂಹ ಕಾಮತ್‌ ವಿಷಯ ಮಂಡಿಸಲಿದ್ದಾರೆ. 11ರಿಂದ ಮಧ್ಯಾಹ್ನ 1 ಗಂಟೆಯ ತನಕ ಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ -ರಾಷ್ಟ್ರೀಕರಣ, ಬಲವರ್ಧನೆ ಕ್ರಮಗಳು, ಭಾರತದ ಆರ್ಥಿಕ ವ್ಯವಸ್ಥೆಗೆ ಸಹಕಾರ ಕ್ಷೇತ್ರದ ಕೊಡುಗೆ ಈ ವಿಷಯದ ಬಗ್ಗೆ ನಬಾರ್ಡ್‌ನ ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ ಗುಂಡೂರಾವ್‌ ವಿಷಯ ಮಂಡಿಸಲಿದ್ದಾರೆ. ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ಉಪಾಧ್ಯಕ್ಷರಾದ ವೆಂಕಟೇಶ್‌, ಸುಜಯ ಹೇಮಚಂದ್ರ, ಗುರುರಾಜ್‌ ರಾವ್‌, ಪ್ರಧಾನ ಕಾರ್ಯದರ್ಶಿ ಚರಣರಾಜ್‌, ಕೋಶಾಧಿಕಾರಿ ಸಂಜೀವ ಅಡ್ಯಾರ್‌, ಸಂಘಟನಾ ಕಾರ್ಯದರ್ಶೀ ವಲ್ಸರಾಜ್‌, ಮಹಿಳಾ ಪ್ರಮುಖ್‌ ಮದಲಾಕ್ಷಿ ರೈ, ಕಾರ್ಯದರ್ಶಿ ಸೋಮಪ್ಪ ನಾಯ್ಕ್‌…

Read More

ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೊಟ್ಟಾರ ಶಾಖೆಯ ದ್ವಿತೀಯ ವಾರ್ಷಿಕೋತ್ಸವ ಪ್ರಯುಕ್ತ ಗ್ರಾಹಕರ ಸಭೆ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಕೊಟ್ಟಾರ ಶಾಖೆಯಲ್ಲಿ ಜರಗಿತು. ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಜಯರಾಮ ಕಾರಂದೂರು, ಸದಾಶಿವ ಎನ್, ಭಾಸ್ಕರ ಬಿ, ಅಶ್ವಿನ್ ಕುಮಾರ್, ಎಚ್.ಜನಾರ್ಧನ ಗಡಿಯಾರ್, ರಮಣಿ ಕೆ, ನಿಶಾ ವಿಶ್ವನಾಥ ಹಾಗೂ ಜ್ಯೋತಿ ವಿ.ಸುವರ್ಣ ಉದ್ಟಾಟಿಸಿದರು. https://chat.whatsapp.com/Ge11n7QCiMj5QyPvCc0H19 ಶಾಖೆಯ ಸಲಹಾ ಸಮಿತಿ ಸದಸ್ಯ ಜಯರಾಮ್ ಕಾರಂದೂರ್ ಮಾತನಾಡಿ, ಶಾಖೆಯ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾದ ಗ್ರಾಹಕರ ಸಭೆಗೆ ಸಂತಸ ವ್ಯಕ್ತಪಡಿಸಿ, ಸಂಘವು ಪ್ರತಿಯೊಂದು ಗ್ರಾಹಕರ ಮನೆಗೆ ಕ್ಯಾಲೆಂಡರ್ ನೀಡುತ್ತಿರುವುದರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಂಘದ ಗ್ರಾಹಕ ಉಮ್ಮಪ್ಪ ಪೂಜಾರಿ ಪಿ. ಹಾಗೂ ಪ್ರತಿಭಾ ಎಸ್ ಸಂಘದ ಶಾಖೆಗಳು ಉತ್ತಮ ಸೇವೆ ನೀಡುತ್ತಿರುವ ಬಗ್ಗೆ ಹಾಗೂ ಇನ್ನೂ ನೂತನ ಶಾಖೆಗಳು ಹೆಚ್ಚಿನ ಸಂಖ್ಯೆಯಲ್ಲಿ ಆರಂಭಗೊಳ್ಳಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ…

Read More

ಮಂಗಳೂರು: ಶತಮಾನೋತ್ಸವ ಸಂಭ್ರಮದಲ್ಲಿರುವ ಪ್ರತಿಷ್ಠಿತ ಶ್ರೀ ಗೋಕರ್ಣನಾಥ ಕೋಆಪರೇಟಿವ್ ಬ್ಯಾಂಕ್‌ನ ನಿರ್ದೇಶಕರ ಆಯ್ಕೆ ಭಾನುವಾರ ನಡೆದಿದೆ. https://chat.whatsapp.com/Ge11n7QCiMj5QyPvCc0H19 ಭಾನುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮಂಗಳೂರು ಕಂದಾಯ ಸ್ಥಾನದಿಂದ ಯೋಗೀಶ್‌ ಕೋಟ್ಯಾನ್‌, ಉಡುಪಿ ಕಂದಾಯ ಸ್ಥಾನದಿಂದ ಅನಿಲ್‌ ಕುಮಾರ್‌, ಕಾರ್ಕಳ ಕಂದಾಯ ಸ್ಥಾನದಿಂದ ಪ್ರಕಾಶ್‌, ಬಂಟ್ವಾಳ ಕಂದಾಯ ಸ್ಥಾನದಿಂದ ಜಗದೀಶ್‌ ಎನ್‌, ಬೆಳ್ತಂಗಡಿ ಕಂದಾಯ ಸ್ಥಾನದಿಂದ ರಮೇಶ್‌ ಬಂಗೇರ, ಇತರೆ ಸಾಮಾನ್ಯ ಸ್ಥಾನದಿಂದ ಜಯರಾಮ್‌ ಕಾರಂದೂರು, ಜಯರಾಮ್‌ ಪೂಜಾರಿ, ರಾಜೇಶ್‌ ಕುಮಾರ್‌ ಜಿ.ಸುವರ್ಣ, ಹರೀಶ್‌ ಪೂಜಾರಿ ಕೆ, ಅನುಸೂಚಿತ ಜಾತಿ ಮೀಸಲು ಸ್ಥಾನದಿಂದ ಚಂದ್ರಾವತಿ, ಅನುಸೂಚಿತ ಪಂಗಡ ಮೀಸಲು ಸ್ಥಾನದಿಂದ ಶಂಕರ ನಾಯ್ಕ್‌, ಹಿಂದುಳಿದ ವರ್ಗ ಎ ಮೀಸಲು ಸ್ಥಾನದಿಂದ ಚಂದ್ರಶೇಖರ್‌ ಕುಮಾರ್‌, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನದಿಂದ ನಾಗರಾಜ, ಮಹಿಳಾ ಮೀಸಲು ಸ್ಥಾನದಿಂದ ಆಶಾಲತಾ ಮತ್ತು ಗಾಯತ್ರಿ ಗಣೇಶ್‌ ವಿಜಯಿಯಾಗಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕುಪ್ಪ ಪೂಜಾರಿ ಮತ್ತು ಕೇಶವ ಪುತ್ತೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ನಿಮ್ಮ ಸಂಸ್ಥೆಗಳ…

Read More

ಮಂಗಳೂರು: ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಅವರು ನಿಧನರಾಗಿದ್ದಾರೆ. ಶುಕ್ರವಾರ ರಾತ್ರಿ ಕಾವೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದರು. https://chat.whatsapp.com/Ge11n7QCiMj5QyPvCc0H19 ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಎರಡು ಅವಧಿಗೆ ಅಧ್ಯಕ್ಷರಾಗಿದ್ದ ಹರೀಶ್ಚಂದ್ರ ಅವರು ಪರಿಸರದ ಯಾವುದೇ ಧಾರ್ಮಿಕ, ಸಾಮಾಜಿಕ ಸೇವಾ ಕಾರ್ಯಗಳಿಗೆ ತಮ್ಮಿಂದಾದ ಸಹಕಾರ ನೀಡುತ್ತಿದ್ದರು. ಹಲವಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸುತ್ತಿದ್ದು ಪರಿಸರದಲ್ಲಿ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ಹರಿಶ್ಚಂದ್ರ ಅವರ ನಿಧನಕ್ಕೆ ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಉಡುಪಿ: ಗಂಗೊಳ್ಳಿ ಟೌನ್‌ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯ ಸಂಸ್ಥಾಪಕರ ದಿನಾಚರಣೆ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆಯ 25ನೇ ವರ್ಷದ ಪ್ರಾರಂಭೋತ್ಸವ ಕಾರ್ಯಕ್ರಮ ಜನವರಿ 12ರಂದು ಬೆಳಗ್ಗೆ 11ಕ್ಕೆ ಗಂಗೊಳ್ಳಿ ಪೇಟೆ ಶ್ರೀ ವಿಠ್ಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದ ಶ್ರೀ ವೀರ ವಿಠಲ ಸಭಾಗೃಹದಲ್ಲಿ ನಡೆಯಲಿದೆ. https://chat.whatsapp.com/Ge11n7QCiMj5QyPvCc0H19 ಗಂಗೊಳ್ಳಿ ಟೌನ್‌ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯ ನಿರ್ದೇಶಕ ಎಚ್‌.ಗಣೇಶ್‌ ಕಾಮತ್‌ ಉದ್ಘಾಟಿಸಲಿದ್ದಾರೆ. ಗಂಗೊಳ್ಳಿ ಟೌನ್‌ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಜಿ.ವೆಂಕಟೇಶ್‌ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಹಕಾರಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಹಕಾರಿ ನಿಯಮಿತದ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್‌ ಬಂಗೇರ, ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್‌., ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್‌ ಜಿ.ಸಾಲಿಯಾನ್‌, ಗಂಗೊಳ್ಳಿ ಸೇವಾ ಸಹಕಾರಿ…

Read More

ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ ದೆಹಲಿ: ಆದಾಯ ತೆರಿಗೆಯನ್ನು ಸಲ್ಲಿಸುವ ನಿಯಮಗಳನ್ನು ಸರಳಗೊಳಿಸಲು ಕೇಂದ್ರ ಸರಕಾರ ಮುಂದಾಗಿದ್ದು, ತನ್ಮೂಲಕ ತೆರಿಗೆದಾರರಿಗೆ ಕಾನೂನು ಅನುಸರಿಸುವುದನ್ನು ಸುಲಭಗೊಳಿಸಲು ಮತ್ತು ಭಾರೀ ಮೊತ್ತದ ತೆರಿಗೆ ವಿವಾದಗಳನ್ನು ಕಡಿಮೆ ಮಾಡಲು ಸರಕಾರ ಆಸಕ್ತಿ ವಹಿಸಿದೆ. ಈ ಸಂಬಂಧ 1961ರ ಆದಾಯ ತೆರಿಗೆ ಕಾಯಿದೆಗೆ ಬದಲಾವಣೆಗಳನ್ನು ತರಲು ಚಿಂತನೆ ನಡೆದಿದೆ ಎನ್ನಲಾಗಿದ್ದು, ಫೆಬ್ರವರಿಯಲ್ಲಿ ಮಂಡಿಸಲಾಗುವ ಕೇಂದ್ರ ಬಜೆಟ್‌ನಲ್ಲಿಇದನ್ನು ಘೋಷಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ತೆರಿಗೆ ರಿಟರ್ನ್ಸ್‌ ಸುಲಭ ಮಾಡಲು ಚಿಂತೆನ ನಡೆಸಿರುವ ಹಿನ್ನೆಲೆಯಲ್ಲಿ 1961ರ ಆದಾಯ ತೆರಿಗೆ ಕಾಯಿದೆಗೆ ತರಲು ಉದ್ದೇಶಿಸಿರುವ ಬದಲಾವಣೆಗಳನ್ನು ಅಂತಿಮಗೊಳಿಸಲಾಗುತ್ತಿದೆ. ಜನವರಿ ಮಧ್ಯದಲ್ಲಿ ಇದನ್ನು ಸಮಾಲೋಚನೆಗಾಗಿ ಸಾರ್ವಜನಿಕರಿಗೆ ಬಿಡುಗಡೆ ಮಾಡಲಾಗುತ್ತದೆ. ನಂತರ ಇದು ಜಾರಿಯಾಗಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಇದನ್ನು ಪ್ರಕಟಿಸುವ ಸಾಧ್ಯತೆ ಇದೆ. https://chat.whatsapp.com/Ge11n7QCiMj5QyPvCc0H19 ಸರಕಾರ ನಿಯಮಗಳಲ್ಲಿ ಮಾಡಲು ಉದ್ದೇಶಿಸಿರುವ ಬದಲಾವಣೆಗಳಲ್ಲಿ ಭಾಷೆಯನ್ನು ಸರಳಗೊಳಿಸುವುದು, ಸೂತ್ರಗಳು ಮತ್ತು…

Read More

ಮಂಡ್ಯ: ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ಉದ್ಘಾಟನೆ ಮತ್ತು ಜಿಲ್ಲಾ ಸೌಹಾರ್ದ ಸಹಕಾರಿ ಸಮ್ಮೇಳನ ಜನವರಿ 11ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ರೈತ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ಬಿ.ಟಿ.ಗುರುರಾಜ್, ಮಂಡ್ಯ ಜಿಲ್ಲೆಯಲ್ಲಿ 32 ಸೌಹಾರ್ದ ಸಹಕಾರ ಸಂಸ್ಥೆಗಳು ನೋಂದಣಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಸಹಕಾರ ಸಂಸ್ಥೆಗಳು ಒಟ್ಟುಗೂಡಿ ಜಿಲ್ಲಾ ಸೌಹಾರ್ದ ಸಹಕಾರಿ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. https://chat.whatsapp.com/Ge11n7QCiMj5QyPvCc0H19 ರಾಜ್ಯದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಉದ್ಘಾಟಿಸಲಿದ್ದು, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಆಶಯ ಮಾತನಾಡಲಿದ್ದಾರೆ. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಗಮದ ಅಧ್ಯಕ್ಷ ಜಿ.ನಂಜನಗೌಡ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು, ಶಾಸಕ ರವಿಕುಮಾರ್‌ ಗೌಡ ಸಹಕಾರಿ ಕ್ಯಾಲೆಂಡರ್ ಬಿಡುಗಡೆ ಮಾಡುವರು, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸಹಕಾರಿಗಳಿಗೆ ಸನ್ಮಾನ ಮಾಡುವರು. ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್ ನಾಗಭೂಷಣ್ ವಿಮೆ ಅನುಷ್ಠಾನ ಮಾಡಲಿದ್ದಾರೆ. ಒಕ್ಕೂಟದ ಅಧ್ಯಕ್ಷ ಬಿ.ಟಿ.ಗುರುರಾಜ್ ಕಾರ್ಯಕ್ರಮದ ಅಧ್ಯಕ್ಷತೆ…

Read More

ಮಂಗಳೂರು: ಸಫಲ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಗುರುಪುರ-ಕೈಕಂಬ ಇದರ ಅಧ್ಯಕ್ಷರಾಗಿ ಸಂಜೀವ ಅಡ್ಯಾರ್‌ ಪುನರಾಯ್ಕೆಯಾಗಿದ್ದಾರೆ. https://chat.whatsapp.com/Ge11n7QCiMj5QyPvCc0H19 2025-2030ನೇ ಸಾಲಿಗೆ ನಡೆದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಸಂಜೀವ ಅಡ್ಯಾರ್, ಉಪಾಧ್ಯಕ್ಷರಾಗಿ ಪ್ರೇಮಾನಂದ ಎ. ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾಗಿ ಜಯರಾಮ್ ಅಡ್ಯಾರ್, ಮಾಧವ ಸುವರ್ಣ ಎ., ಮಾಧವ ಮಾವೆ, ಭಾಸ್ಕರ್ ಸಪಲಿಗ, ಮಹಾಬಲ ಅಡ್ಯಾ‌ರ್, ಅನಿಲ್ ಕುಮಾರ್ ಅತ್ತಾವರ, ವೆಂಕಟೇಶ್ ಎಂ., ಹರಿದಾಸ್ ಯು, ಮೋನಪ್ಪ ಸಪಲಿಗ, ತಿರುಮಲೇಶ್ ಸಪಲಿಗ, ಮೋಹಿನಿ ಎಚ್., ಸತ್ಯಪ್ರಭಾ ಮತ್ತು ಅನಿತಾ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಪ್ರಕ್ರಿಯೆಯನ್ನು ಲೆಕ್ಕಪರಿಶೋಧನಾ ಇಲಾಖೆಯ ಪ್ರಥಮದರ್ಜೆ ಗುಮಾಸ್ತ ನವೀನ್ ಕುಮಾರ್ ಎಂ.ಎಸ್‌ ನಿರ್ವಹಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸಹಕಾರ ಸಂಘಗಳಿಗೆ ಮಾರ್ಗದರ್ಶನ ನೀಡುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನ ನೂತನ ಅಧ್ಯಕ್ಷ ಆಯ್ಕೆಗೊಂಡಿರುವ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ಉಪಾಧ್ಯಕ್ಷ ನೀಲಯ ಎಂ.ಅಗರಿ ಅವರನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಭಿನಂದಿಸಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್‌ನ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಡಾ.ಎಂ.ಎನ್. ರಾಜೇಂದ್ರ ಕುಮಾರ್, ಸಹಕಾರ ಕ್ಷೇತ್ರದಲ್ಲಿ ಶಿಕ್ಷಣ, ತರಬೇತಿ ಹಾಗೂ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್, ನೂತನ ಅಧ್ಯಕ್ಷ ಶಶಿಕುಮಾರ್ ರೈ ಸಾರಥ್ಯದಲ್ಲಿ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿ ರಾಜ್ಯದ ಇತರ ಜಿಲ್ಲಾ ಸಹಕಾರಿ ಯೂನಿಯನ್‌ಗಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು. https://chat.whatsapp.com/Ge11n7QCiMj5QyPvCc0H19 ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ರೈ, ಜಿಲ್ಲಾಮಟ್ಟದ ಸಹಕಾರಿ ಸಂಸ್ಥೆಯೊಂದನ್ನು…

Read More

ಸಮಷ್ಟಿ ಸೌಹಾರ್ದ ಸಹಕಾರಿ ಸಂಘದ ನೂತನ ಪ್ರಧಾನ ಕಚೇರಿ ಉದ್ಘಾಟಿಸಿ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಹೇಳಿಕೆ ಮೂಡುಬಿದಿರೆ: ಸಮಷ್ಟಿಯಿಂದಲೇ ಸೌಹಾರ್ದ ಎಂದು ನಂಬಿ ಅದರಂತೆ ನಡೆಯುವ ಸಮಷ್ಟಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಅಮೃತ್ ರೈ, ಪ್ರೀತಿ ವಿಶ್ವಾಸದಿಂದಲೇ ಸಂಸ್ಥೆಯನ್ನು ಪ್ರಗತಿಯ ಉತ್ತುಂಗಕ್ಕೆ ತಂದಿದ್ದಾರೆ. ಗ್ರಾಹಕರ ಅವಶ್ಯಕತೆಗೆ ಪೂರಕವಾಗಿ ಸ್ಪಂದಿಸುವ ಈ ಸಂಸ್ಥೆ ಗ್ರಾಹಕರು ಆರ್ಥಿಕವಾಗಿ ಸದೃಢವಾಗುವುದಕ್ಕೆ ವಿಶೇಷ ಕೊಡುಗೆ ನೀಡಿದೆ. ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರ ಜೊತೆಗೆ, ಲಾಭಧಾಯಕವಾಗಿ ಬೆಳೆಯುತ್ತಿರುವುದು ಸಂಸ್ಥೆಯ ಗುಣಮಟ್ಟವನ್ನು ತಿಳಿಸುತ್ತದೆ ಎಂದು ಕರ್ನಾಟಕ ರಾಜ್ಯ ಕ್ವಾರಿ ಮತ್ತು ಕ್ರಶರ್‌ ಅಸೋಶಿಯೇಶನ್‌ ಅಧ್ಯಕ್ಷ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು. ಮೂಡುಬಿದಿರೆಯ ಹೃದಯಭಾಗದಲ್ಲಿರುವ ಕ್ರಿಸ್ಟಲ್ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ಸಮಷ್ಟಿ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಶಾಖೆಯ ನೂತನ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. https://chat.whatsapp.com/Ge11n7QCiMj5QyPvCc0H19 ಸಂಸ್ಥೆಯ ಪ್ರಗತಿಗೆ ಪೂರಕ ಸಹಕಾರ ನೀಡುತ್ತ ಬಂದಿರುವ ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರ ನಿಯಮಿತದ ಮೈಸೂರು ಪ್ರಾತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ ಹಾಗೂ ದಕ್ಷಿಣ…

Read More