ಮಂಗಳೂರು: 113 ವರ್ಷಗಳ ಇತಿಹಾಸವಿರುವ ಎಂ.ಸಿ.ಸಿ. ಬ್ಯಾಂಕಿನ 19ನೇ ಶಾಖೆ ಮಾರ್ಚ್ 2ರಂದು ಬೆಳ್ಮಣ್ ಮುಖ್ಯರಸ್ತೆಯ ಎಲ್ವಿನ್ ಟವರ್ಸ್‌ನ ನೆಲಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ಶಾಖೆಯ ಉದ್ಘಾಟನೆಯ ಕಾರ್ಯಕ್ರಮ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆಯಲ್ಲಿ ನಡೆಯಲಿದೆ. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಶಾಖೆಯ ಉದ್ಘಾಟನೆ ಮಾಡಲಿದ್ದಾರೆ. ಸಂತ ಜೋಸೆಫ್ ಚರ್ಚ್, ಬೆಳ್ಮಣ್ ಇದರ ಧರ್ಮಗುರು ವಂ. ಫಾ| ಫ್ರೆಡ್ರಿಕ್ ಮಸ್ಕರೇನ್ಹಸ್ ಆಶಿರ್ವಚನ ನೀಡುವರು. ದಾಯ್ಜಿವಲ್ಡ್ ಮೀಡಿಯಾದ ಸಂಸ್ಥಾಪಕ ವಾಲ್ಟರ್ ನಂದಳಿಕೆ ಮುಖ್ಯ ಅತಿಥಿಯಾಗಿದ್ದು, ಬೆಳ್ಮಣ್ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಮೇಶ್ವರಿ ಎಮ್. ಶೆಟ್ಟಿ ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸುವರು.
https://chat.whatsapp.com/EbVKVnWB6rlHT1mWtsgbch
ಪ್ರಸ್ತುತ ಎಂ.ಸಿ.ಸಿ ಬ್ಯಾಂಕ್ ಸುಸಜ್ಜಿತ ಆಡಳಿತ ಕಛೇರಿ ಮತ್ತು ಸಂಸ್ಥಾಪಕರ ಶಾಖೆ ಹಂಪನಕಟ್ಟ, ಅಶೋಕನಗರ, ಕಂಕನಾಡಿ, ಕುಲಶೇಕರ, ಮೋರ್ಗನ್ಸ್‌ಗೇಟ್, ಮೂಡಬಿದ್ರಿ, ಶಿರ್ವ, ಬಜಪೆ, ಕಿನ್ನಿಗೋಳಿ, ಸುರತ್ಕಲ್, ಉಳ್ಳಾಲ, ಉಡುಪಿ, ಕುಂದಾಪುರ, ಪುತ್ತೂರು, ಬಿ.ಸಿ.ರೋಡ್, ಕಾರ್ಕಳ, ಬ್ರಹ್ಮಾವರ ಮತ್ತು ಬೆಳ್ತಂಗಡಿ ಹೀಗೆ 18 ಶಾಖೆಗಳನ್ನು ಹೊಂದಿರುತ್ತದೆ.
ಬ್ಯಾಂಕಿನ ಆಡಳಿತ ಮಂಡಳಿ
ಪ್ರಸ್ತುತ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷ ಹಾಗೂ ಜೆರಾಲ್ಡ್ ಡಿಸಿಲ್ವ ಉಪಾಧಕ್ಷರಾಗಿದ್ದು, ಆಂಡ್ರೂ ಡಿಸೋಜ, ಅನಿಲ್ ಪತ್ರಾವೊ, ಡಾ|ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್‌ರೊಯ್ ಕ್ರಾಸ್ಟೊ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೇರೊ, ಜೆ.ಪಿ.ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜ, ನಿರ್ದೇಶಕರಾಗಿದ್ದು, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ ವೃತ್ತಿಪರ ನಿರ್ದೇಶಕರಾಗಿದ್ದಾರೆ. ಫೆಲಿಕ್ಸ್ ಡಿಕ್ರುಜ್, ಆಲ್ವಿನ್ ಮೊಂತೇರೊ ಹಾಗೂ ಶರ್ಮಿಳಾ ಮಿನೇಜಸ್ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಿರುತ್ತಾರೆ. ಸುನಿಲ್ ಮಿನೇಜಸ್ ಮಹಾಪ್ರಬಂಧಕರಾಗಿದ್ದು, ಒಟ್ಟು 185 ಸಿಬ್ಬಂದಿಗಳು ಆಡಳಿತ ಕಛೇರಿ ಮತ್ತು ಶಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com