Top News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಪೆಟ್ರೋಲ್‌ನೊಂದಿಗೆ ಎಥೆನಾಲ್‌ ಮಿಶ್ರಣ ಸಂಬಂಧಿಸಿ ಸಮಿತಿ ರಚನೆ
    News

    ಪೆಟ್ರೋಲ್‌ನೊಂದಿಗೆ ಎಥೆನಾಲ್‌ ಮಿಶ್ರಣ ಸಂಬಂಧಿಸಿ ಸಮಿತಿ ರಚನೆ

    adminBy adminFebruary 27, 2025

    ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಹೇಳಿಕೆ

    ಗುವಾಹಟಿ: ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಲ್ಲಿ ಸ್ವಾವಲಂಬನೆ ಸಾಧಿಸುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಭಾರತ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯತತ್ಪರವಾಗಿದೆ. ಈ ವಿಷಯದಲ್ಲಿ ಪೆಟ್ರೋಲ್‌ನೊಂದಿಗೆ ಶೇ.20ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಎಥೆನಾಲ್‌ ಮಿಶ್ರಣ ಸಂಬಂಧ ನೀತಿ ಆಯೋಗದ ಅಧೀನದಲ್ಲಿ ಸಮಿತಿ ರಚಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ.

    https://chat.whatsapp.com/EbVKVnWB6rlHT1mWtsgbch

    ಅಸ್ಸಾಂನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಅವರು, 2026ರೊಳಗೆ ಶೇ.20ರಷ್ಟು ಎಥೆನಾಲ್‌ ಮಿಶ್ರಣದ ಗುರಿ ನಿಗದಿಯಾಗಿತ್ತು. ಈಗಾಗಲೇ ಶೇ.19.6ರಷ್ಟು ಗುರಿ ಸಾಧನೆಯಾಗಿದೆ. ಮುಂದಿನ ತಿಂಗಳು ನಿಗದಿತ ಗುರಿ ಪೂರ್ಣಗೊಳ್ಳಲಿದೆ. ಹೀಗಾಗಿ ಈಗ ನಮ್ಮ ಗುರಿ ಶೇ.20ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್‌ ಮಿಶ್ರಣ ಮಾಡುವ ಕಡೆಗಿದೆ. ಪೆಟ್ರೋಲ್‌ ಜೊತೆ ಹೆಚ್ಚಿನ ಪ್ರಮಾಣದಲ್ಲಿ ಜೈವಿಕ ಇಂಧನ ಮಿಶ್ರಣ ಮಾಡುವುದರ ಬಗ್ಗೆ ನಾವು ಕಾರ್ಯತತ್ಪರವಾಗಿದ್ದೇವೆ. ಈ ನಿಟ್ಟಿನಲ್ಲಿ ಸಮಿತಿ ಗಮನ ಹರಿಸಲಿದೆ ಎಂದು ಹೇಳಿದರು.

    ದೇಶದ ಎಥೆನಾಲ್‌ ಮಿಶ್ರಣ ಸಾಮರ್ಥ್ಯ 1,700 ಕೋಟಿ ಲೀಟರ್‌ ಆಗಿದೆ. ಈ ಪೈಕಿ ಈಗಾಗಲೇ ಪೆಟ್ರೋಲ್‌ನೊಂದಿಗೆ 1,500 ಕೋಟಿ ಲೀಟರ್‌ ಮಿಶ್ರಣ ಮಾಡಲಾಗುತ್ತಿದೆ. ಭಾರತ ವಾರ್ಷಿಕವಾಗಿ ವಿದೇಶಗಳಿಂದ ತೈಲ ಆಮದಿಗೆ 13 ಲಕ್ಷ ಕೋಟಿ ರೂ.  ವ್ಯಯಿಸುತ್ತದೆ. ಕಚ್ಚಾತೈಲ ಆಮದು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಸಿರು ಹೈಡ್ರೋಜನ್‌ ಉತ್ಪಾದನೆಯತ್ತ ದೃಷ್ಟಿ ನೆಟ್ಟಿದೆ ಎಂದರು. ಪ್ರಸ್ತುತ ಹಸಿರು ಹೈಡ್ರೋಜನ್‌ ಬೆಲೆಯು ಕೆಜಿಗೆ 390 ರೂ. ಇದೆ. ಒಂದೊಮ್ಮೆ ಈ ದರ ಅರ್ಧದಷ್ಟು ತಗ್ಗಿದರೆ ಇಂಧನ ವಲಯದಲ್ಲಿ ಹೊಸ ಕ್ರಾಂತಿಯಾಗಲಿದೆ. ಸಾಂಪ್ರದಾಯಿಕ ಇಂಧನ ಬಳಕೆಯ ಬದಲು ನಾವು ಹಸಿರು ಹೈಡ್ರೋಜನ್‌ ಬಳಕೆಯತ್ತ ಗಮನ ಹರಿಸಿದ್ದೇವೆ. ವಿಶ್ವದ ಪ್ರತಿ ದೇಶವೂ ನವೀಕರಿಸಬಹುದಾದ ಇಂಧನ ಉತ್ಪಾದನೆಯತ್ತ ಗಮನ ಕೇಂದ್ರೀಕರಿಸುತ್ತಿದೆ. ಇಂಧನ ವಲಯದಲ್ಲಿ ಎದುರಾಗುತ್ತಿರುವ ಸವಾಲುಗಳು ಮತ್ತು ಆರ್ಥಿಕತೆ ಬೆಳವಣಿಗೆ ದೃಷ್ಟಿಯಿಂದ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚು ಒತ್ತು ನೀಡುವ ಅಗತ್ಯವಿದೆ ಎಂದು ಹೇಳಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    ಇಮೇಲ್: sahakaraspandana@gmail.com

    Hardeep Singh Puri henal Investors Conference Petrolium Spandana
    Previous Articleಶಿಕಾರಿಪುರ ಸಿರಿಗಂಧ ಮಹಿಳಾ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆ
    Next Article ಮಾರ್ಚ್‌ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

    Related Posts

    News

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025
    News

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025
    News

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Add A Comment

    Leave A Reply Cancel Reply

    https://www.youtube.com/watch?v=_NK5IdvdV7E
    https://www.youtube.com/watch?v=DKXuwVhZPGA

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    https://www.youtube.com/watch?v=4MXVgp0wfP4
    https://www.youtube.com/watch?v=CWhi20oYsrc
    https://www.youtube.com/watch?v=mqot4bOMPpI
    Top Post

    ಕಾವಳಮೂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪದ್ಮಶೇಖರ ಜೈನ್‌ ಅವಿರೋಧ ಪುನರಾಯ್ಕೆ

    May 31, 2025

    ಸಹಕಾರ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ರಮಣ್ ಕುಮಾರ್ ನೇಮಕ

    May 30, 2025

    ಸಹಕಾರ ಸಂಘಗಳಿಂದ ದೇಶದ ಆರ್ಥಿಕತೆ ಬಲಿಷ್ಠ

    May 29, 2025
    Facebook Twitter YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.