Author: admin
ನವದೆಹಲಿ: ಸಹಕಾರ ಸಚಿವಾಲಯದ ಮಹತ್ವಾಕಾಂಕ್ಷೆಯ ಯೋಜನೆ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯ ಭೂಮಿಪೂಜೆ ಸಮಾರಂಭ ಆಗಸ್ಟ್ ತಿಂಗಳಲ್ಲಿ ಗುಜರಾತ್‌ನ ಆನಂದ್‌ನಲ್ಲಿ ನಡೆಯಲಿದೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಷಾ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದಲ್ಲಿ ಈ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ತ್ರಿಭುವನ್ ಸಹಕಾರಿ ವಿವಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ, ಇದು ಭಾರತದ ಸಹಕಾರಿ ಶಿಕ್ಷಣ ಕ್ಷೇತ್ರದಲ್ಲಿ ಒಂದು ಐತಿಹಾಸಿಕ ಕ್ಷಣವಾಗಲಿದೆ ಎಂದು ತಿಳಿಸಿದ್ದಾರೆ. ಸಹಕಾರ ಸಚಿವಾಲಯವು ಈಗಾಗಲೇ ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಮೊದಲ ಆಡಳಿತ ಮಂಡಳಿಯನ್ನು ರಚಿಸಿದ್ದು, ಈ ಮಂಡಳಿಯು ಕೇಂದ್ರ ಸಚಿವಾಲಯಗಳು, ರಾಜ್ಯ ಸರ್ಕಾರಗಳು ಮತ್ತು ದೇಶಾದ್ಯಂತದ ಪ್ರಮುಖ ಸಹಕಾರಿ ಸಂಸ್ಥೆಗಳ ಹಿರಿಯ ಅಧಿಕಾರಿಗಳನ್ನು ಒಳಗೊಂಡಿದೆ. ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯವು ಸಹಕಾರಿ ಶಿಕ್ಷಣ, ಸಂಶೋಧನೆ ಮತ್ತು ತರಬೇತಿಗೆ ಮಾತ್ರ ಮೀಸಲಾಗಿರುವ ಭಾರತದ ಮೊದಲ ಸಂಸ್ಥೆಯಾಗಲಿದೆ. ಭಾರತದ ಸಹಕಾರಿ ಚಳವಳಿಯನ್ನು ಪುನರುಜ್ಜೀವನಗೊಳಿಸುವ ಸರ್ಕಾರದ ಧ್ಯೇಯಕ್ಕೆ ಅನುಗುಣವಾಗಿ ಸಹಕಾರಿ ಜ್ಞಾನ ಮತ್ತು ಸಾಮರ್ಥ್ಯ…
ನವದೆಹಲಿ: ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ಯುದ್ಧ ಸ್ಥಿತಿ ಭಾರತೀಯ ಅಕ್ಕಿ ರಫ್ತುದಾರರನ್ನು ಸಂಕಷ್ಟಕ್ಕೆ ತಳ್ಳಿದೆ. ಈ ಎರಡು ದೇಶಗಳ ನಡುವಿನ ಸಂಘರ್ಷದಿಂದ ಭಾರತದ ಬಂದರುಗಳಲ್ಲಿ ಸುಮಾರು 1,00,000 ಟನ್ ಬಾಸ್ಮತಿ ಅಕ್ಕಿ ರಫ್ತಾಗದೆ ಸಿಲುಕಿಕೊಂಡಿದೆ ಎಂದು ಭಾರತೀಯ ಅಕ್ಕಿ ರಫ್ತುದಾರರ ಸಂಘ (AIREA) ತಿಳಿಸಿದೆ. ಸೌದಿ ಅರೇಬಿಯಾ ನಂತರ ಇರಾನ್, ಭಾರತದ ಬಾಸ್ಮತಿ ಅಕ್ಕಿಯ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು ಎರಡು ದೇಶಗಳ ಡುವೆ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಹಡಗುಗಳು ಮತ್ತು ವಿಮೆ ಲಭ್ಯವಿಲ್ಲದ ಕಾರಣ ಈ ಪರಿಸ್ಥಿತಿ ಉಂಟಾಗಿದೆ. https://chat.whatsapp.com/EbVKVnWB6rlHT1mWtsgbch ಭಾರತದಿಂದ ಇರಾನ್‌ಗೆ ರಫ್ತಾಗುವ ಬಾಸ್ಮತಿ ಅಕ್ಕಿಯಲ್ಲಿ ಶೇಕಡಾ 18ರಿಂದ 20ರಷ್ಟು ಅಕ್ಕಿ ಬಂದರುಗಳಲ್ಲೇ ಸಿಲುಕಿಕೊಂಡಿದೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷ ಸತೀಶ್ ಗೋಯಲ್ ಹೇಳಿದ್ದಾರೆ. ಗುಜರಾತ್‌ನ ಕಾಂಡ್ಲಾ ಮತ್ತು ಮುಂಡ್ರಾ ಬಂದರುಗಳಲ್ಲಿ ಅಕ್ಕಿ ತುಂಬಿದ ಹಡಗುಗಳು ಲಂಗರು ಹಾಕಿವೆ. ಸದ್ಯದ ಸ್ಥಿತಿಯಲ್ಲಿ ಇರಾನ್‌ಗೆ ಹಡಗುಗಳು ಹೋಗಲು ಸಾಧ್ಯವಿಲ್ಲ. ವಿಮಾ ಕಂಪನಿಗಳು ಕೂಡ ಹಡಗುಗಳಿಗೆ ವಿಮೆ ನೀಡಲು ತಯಾರಿಲ್ಲ. ಏಕೆಂದರೆ, ವಿಮಾ…
ಉಳ್ಳಾಲ: ದ.ಕ. ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಕಿನ್ಯಾ ಗ್ರಾಮದ ಮಿನಾದಿ ಶಾಲೆಯ 110 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. https://chat.whatsapp.com/EbVKVnWB6rlHT1mWtsgbch ಕೋಟೆಕಾರು ಬ್ಯಾಂಕ್ ನಿರ್ದೇಶಕಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುರೇಖಾ ಚಂದ್ರಹಾಸ್ ಮಾತನಾಡಿ, ಕೋಟೆಕಾರು ವ್ಯವಸಾಯ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮುತುವರ್ಜಿ ವಹಿಸಿ ಐದು ವರ್ಷಗಳಿಂದ ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಬ್ಯಾಂಕ್ ವತಿಯಿಂದ ಕಲಿಯುವ ಸಾಮಗ್ರಿಗಳ ವಿತರಣೆ ಮಾಡಲಾಗಿದೆ. ಅಂಗ್ಲಮಾಧ್ಯಮ ಶಿಕ್ಷಣಕ್ಕೆ ಮಾರು ಹೋಗುತ್ತಿರುವ ಈಗಿನ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವ ಉದ್ದೇಶದಿಂದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಈ ಸೇವೆ ಒದಗಿಸುತ್ತಿದೆ. ಹೆತ್ತವರು ಮಕ್ಕಳಿಗೆ ಅಸ್ತಿ ಮಾಡದಿದ್ದರೂ ಪರವಾಗಿಲ್ಲ, ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿಸಿ ಎಂದು ಆಶಯ ವ್ಯಕ್ತಪಡಿಸಿದರು. ಕಿನ್ಯಾ ಗ್ರಾಮ…
11 ದಿನಗಳಲ್ಲಿ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 4 ಶಾಖೆ, 2 ವಿಸ್ತರಣಾ ಕೌಂಟರ್ಗಳು ಕಾರ್ಯಾರಂಭ
ಮಂಗಳೂರು; ಇಲ್ಲಿನ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ತನ್ನ ಕಾರ್ಯಯೋಜನೆ ʼವಿಷನ್ 2025′ ಅನ್ವಯ ಹೊಸ 30 ಶಾಖೆ ತೆರೆಯುವ ನಿಟ್ಟಿನಲ್ಲಿ ಜೂನ್ 8ರಿಂದ 18ರವರೆಗೆ 4 ಹೊಸ ಶಾಖೆ ಮತ್ತು 2 ವಿಸ್ತರಣಾ ಕೌಂಟರ್‌ಗಳನ್ನು ತೆರೆದು ಅಪೂರ್ವ ಸಾಧನೆ ಮಾಡಿದೆ. https://chat.whatsapp.com/EbVKVnWB6rlHT1mWtsgbch ಈ ಹಿಂದೆ 2021ನೇ ಸಾಲಿನ ನವೆಂಬರ್‌ನ 7 ದಿನಗಳ ಅವಧಿಯಲ್ಲಿ 5 ನೂತನ ಶಾಖೆಗಳನ್ನು ಆರಂಭಿಸಿತ್ತು. ಸೊಸೈಟಿಯು ತನ್ನ 26ನೇ ಶಾಖೆಯನ್ನು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ, 27ನೇ ಶಾಖೆಯನ್ನು ಕಡಬ ತಾಲೂಕಿನ ಸವಣೂರಿನಲ್ಲಿ ಜೂನ್ 8ರಂದು ಪ್ರಾರಂಭಿಸಿತು. 28ನೇ ಶಾಖೆಯು ಉಡುಪಿ ತಾಲೂಕಿನ ಹಿರಿಯಡ್ಕದಲ್ಲಿ ಜೂನ್ 9ರಂದು ಮತ್ತು ಜೂನ್ 12ರಂದು ಸಂಘದ ಮಂಗಳೂರು ಶಾಖೆಯ ವಿಸ್ತರಣಾ ಕೌಂಟರ್ ಕದ್ರಿ ಕಂಬಳ ರಸ್ತೆಯಲ್ಲಿನ ಸಂಘದ ಕೇಂದ್ರ ಕಚೇರಿಯ ನೂತನ ಕಟ್ಟಡದಲ್ಲಿ ಆರಂಭಗೊಂಡಿತ್ತು. ಇನ್ನೊಂದು ವಿಸ್ತರಣಾ ಕೌಂಟರ್ ಕಾರ್ಕಳದ ಕುಂಟಾಡಿಯಲ್ಲಿ ಜೂನ್ 15ರಂದು ಕಾರ್ಕಳದ ಕುಂಟಾಡಿಯಲ್ಲಿ ರಕ್ತೇಶ್ವರಿ ದೈವಸ್ಥಾನದ ಕಟ್ಟಡದಲ್ಲಿ ಕಾರ್ಯಾರಂಭಿಸಿದರೆ, 29ನೇ ಶಾಖೆ ಪಡೀಲ್‌ನಲ್ಲಿ…
ಉಡುಪಿ: ಇಲ್ಲಿನ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಬ್ಯಾಂಕಿನ ಸದಸ್ಯರ ಮಕ್ಕಳು 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.90, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.85 ಹಾಗೂ 2023-2024ನೇ ಸಾಲಿನ ಅಂತಿಮ ಪದವಿಯಲ್ಲಿ ಶೇ.75 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಶೇ.70 ಅಂಕ ಗಳಿಸಿದ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಎಂದು ಬ್ಯಾಂಕಿನ ಅಧ್ಯಕ್ಷ ಶಾಸಕ ಯಶಪಾಲ್ ಎ.ಸುವರ್ಣ ತಿಳಿಸಿದ್ದಾರೆ. ಇತರ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95, ದ್ವಿತೀಯ ಪಿಯುಸಿ ಶೇ.90 2023-24ರ ಪದವಿಯಲ್ಲಿ ಶೇ.80 ಮತ್ತು ಸ್ನಾತಕೋತ್ತರ ಪದವಿಯಲ್ಲಿ ಶೇ.75 ಅಂಕ ಪಡೆದಿರಬೇಕು. ಅರ್ಜಿಗಳು ಬ್ಯಾಂಕಿನ ಎಲ್ಲ ಶಾಖೆ ಹಾಗೂ ಅಧಿಕೃತ ವೆಬ್ ಸೈಟ್ www.mahalakshmi coopbank.com <http://www.mahalakshmicoop bank.com ನಲ್ಲಿ ಲಭ್ಯವಿದೆ. ಜುಲೈ 19ರಂದು ಅರ್ಜಿ ಸಲ್ಲಿಸಲು ಕಡೇ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್:…
ಕಲಬುರಗಿ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ರಾಜ್ಯಾಧ್ಯಕ್ಷ ನಂಜುಂಡ ಸ್ವಾಮಿ ಇವರು ಜೂನ್ 12ರಂದು ಕಲಬುರಗಿ ಬ್ರಹ್ಮಪುರ ಕೊಂಡೇದಗಲ್ಲಿಯ ಆದಿಶಕ್ತಿ ಸೌಹಾರ್ದ ಸಹಕಾರಿ ಸಂಘಕ್ಕೆ ಭೇಟಿ ನೀಡಿದರು. https://chat.whatsapp.com/EbVKVnWB6rlHT1mWtsgbch ಈ ಸಂದರ್ಭದಲ್ಲಿ ಸಹಕಾರಿಯ ನಿರ್ದೇಶಕರಾದ ರಮೇಶ ಹೊಸಪೇಟಿ, ಸುಧಾ ಮೂಕಿ, ಬಸಮ್ಮ ಹಿರೇಮಠ, ನಿಜಲಿಂಗಪ್ಪ ಪಾಟೀಲ, ಮಲ್ಲಿನಾಥ ಪಾಟೀಲ, ಸೂರ್ಯಕಾಂತ ಹೊಸಪೇಟೆ, ಶರಣು ಕಲಶೆಟ್ಟಿ, ಬಾಲಚಂದ್ರ ನೆಲ್ಲೂರ ಮತ್ತು ಬಸವರಾಜ ಅಷ್ಟಗಿ ಉಪಸ್ಥಿತರಿದ್ದರು. ಅಧ್ಯಕ್ಷರು ಸಂಸ್ಥೆಯ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ಚಿತ್ತಣ್ಣನ ಕ್ರಿಯಾಶೀಲ ನಾಯಕತ್ವ, ಬದ್ಧತೆಯ ನುರಿತ ಸಿಬ್ಬಂದಿ, ಉತ್ತಮ ಆಡಳಿತ ಮಂಡಳಿಯಿಂದಾಗಿ ಆತ್ಮಶಕ್ತಿ ಸಹಕಾರಿ ಅಸಾಮಾನ್ಯ ಸಾಧನೆ
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸುರತ್ಕಲ್ ಸ್ಥಳಾಂತರಿತ ಶಾಖೆಗೆ ಚಾಲನೆ ನೀಡಿ ಗಣ್ಯರ ಅಭಿಪ್ರಾಯ ಸುರತ್ಕಲ್: ಸುರತ್ಕಲ್ ಪೂರ್ವ ಆರ್ಕೇಡ್‌ನಲ್ಲಿ 2013ರಿಂದ ಕಾರ್ಯಾಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆಯನ್ನು ಶುಕ್ರವಾರ ಸುರತ್ಕಲ್ ಮುಖ್ಯ ರಸ್ತೆಯಲ್ಲಿರುವ ವಿಜಯ್ ಮಹಲ್ ಕಾಂಪ್ಲೆಕ್ಸ್‌ನ ಸುಸಜ್ಜಿತ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಗೊಳಿಸಲಾಯಿತು. https://chat.whatsapp.com/EbVKVnWB6rlHT1mWtsgbch ಕಂಕನಾಡಿ ಗರಡಿ ಶ್ರೀ ಬ್ರಹ್ಮಬೈದರ್ಕಳ ಗರೋಡಿ ಕ್ಷೇತ್ರದ ಅಧ್ಯಕ್ಷ ಕೆ.ಚಿತ್ತರಂಜನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುರತ್ಕಲ್ ಶಾಖೆ ಸುಸಜ್ಜಿತ ಸ್ಥಳಕ್ಕೆ ಸ್ಥಳಾಂತರ ಆಗಿರುವುದು ತುಂಬ ಸಂತೋಷದ ವಿಷಯ. ನಮ್ಮದೇ ಸೊಸೈಟಿ ಆಗಬೇಕೆಂಬ ನಮ್ಮ ಮಹದಾಸೆಗೆ ಆತ್ಮಶಕ್ತಿ ಸಹಕಾರಿ ಶಕ್ತಿ ನೀಡಿದೆ. ಈ ಸಂಸ್ಥೆಯು ಇಷ್ಟು ವೇಗವಾಗಿ 33 ಶಾಖೆಗಳನ್ನು ಮಾಡಿರುವುದು ಅಸಾಮಾನ್ಯ ಸಾಧನೆ. ಇದರಲ್ಲಿ ಚಿತ್ತರಂಜನ್ ಬೋಳಾರ್ ಅವರ ಕ್ರಿಯಾಶೀಲ ನಾಯಕತ್ವ, ಎಲ್ಲ ಸಿಬ್ಬಂದಿಗಳ ಅವಿರತವಾದ ಶ್ರಮ ಮತ್ತು ಆಡಳಿತ ಮಂಡಳಿಯವರ ಸಹಕಾರ ಇದೆ ಎಂದು ಶ್ಲಾಘಿಸಿದರು. ಗಣಕೀಕೃತ ವ್ಯವಸ್ಥೆಗೆ ಚಾಲನೆ ನೀಡಿದ ಮಾತನಾಡಿದ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ,…
ಉಡುಪಿ: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಹಾಗೂ ಸಾಮಾನ್ಯ ಸೇವಾ ಕೇಂದ್ರ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯದ ಸೌಹಾರ್ದ ಸಹಕಾರಿಗಳ ಸಾಮಾನ್ಯ ಸೇವಾ ಕೇಂದ್ರಗಳ ಉದ್ಘಾಟನಾ ಸಮಾರಂಭ ಜೂನ್ 23ರಂದು ಬೆಳಗ್ಗೆ 10.30ಕ್ಕೆ ಉಡುಪಿಯ ಹೋಟೆಲ್ ಡಯಾನಾದಲ್ಲಿ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಉಡುಪಿಯ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಸಿಎ ಬಿ.ನಂಜನಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಸಿಇಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾದ ಸ್ಟೇಟ್ ಹೆಡ್ ಶಕೀಬ್ ಅಹ್ಮದ್, ಬಿ2ಸಿ ಹೆಡ್ ರಜತ್ ಟಿ.ಕೆ, ಸಹಕಾರ ಸಂಘಗಳ ಉಡುಪಿ ಜಿಲ್ಲಾ ಉಪನಿಬಂಧಕಿ ಲಾವಣ್ಯ ಕೆ.ಸಿ.ಎಸ್, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಮಂಜುನಾಥ ಎಸ್.ಕೆ, ಭಾರತಿ ಜಿ.ಭಟ್, ಸೌಹಾರ್ದ ಸಹಕಾರಿಗಳ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಪಿ.ಜಗನ್ನಾಥ ಶೆಟ್ಟಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಪಾಧ್ಯಕ್ಷ ಎ.ಆರ್.ಪ್ರಸನ್ನ ಕುಮಾರ್, ವ್ಯವಸ್ಥಾಪಕ…
ಹಿರೇಕೆರೂರ: ಹಿರೇಕೆರೂರ ತಾಲೂಕ ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಅಧೀನ ಶಾಲಾ ಕಾಲೇಜುಗಳ ಸಹಯೋಗದಲ್ಲಿ ಜೂನ್ 21ರಂದು ಬೆಳಗ್ಗೆ 9.45ಕ್ಕೆ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಹಿರೇಕೆರೂರ ಸಿ.ಇ.ಎಸ್.ಕ್ಯಾಂಪಸ್‌ನಲ್ಲಿ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಶಾಸಕ ಯು.ಬಿ.ಬಣಕಾರ ಉದ್ಘಾಟಿಸಲಿದ್ದಾರೆ. ಹಿರೇಕೆರೂರ ಹೆಚ್.ಟಿ.ವಿ.ಎಸ್.ಎಸ್.ಬಿ ಅಧ್ಯಕ್ಷ ಎಸ್.ಬಿ.ತಿಪ್ಪಣ್ಣನವರ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರೇಕೆರೂರ ಹೆಚ್.ಟಿ.ವಿ.ಎಸ್.ಎಸ್.ಲಿ ಗೌರವ ಕಾರ್ಯದರ್ಶಿ ಎಸ್.ಎಸ್.ಪಾಟೀಲ, ತಹಶೀಲ್ದಾರ್ ಪ್ರಭಾಕರ ಹೆಚ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಶ್ರೀಧರ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಹಿರೇಕೆರೂರ ಹೆಚ್.ಟಿ.ವಿ.ಎಸ್.ಎಸ್.ಬಿ ಉಪಾಧ್ಯಕ್ಷ ಎಂ.ವಿ.ಹೊಂಬರಡಿ, ಬಿ.ಆರ್.ಟಿ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ.ಬಿ.ತಂಬಾಕದ, ಹೆಚ್.ಟಿ.ವಿ.ಎಸ್.ಎಸ್.ಲಿ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ ಪಾಲ್ಗೊಳ್ಳಲಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com
ಮಂಗಳೂರು: ಸುರತ್ಕಲ್ ಪೂರ್ವ ಆರ್ಕೇಡ್‌ನಲ್ಲಿ 2013ರಿಂದ ಕಾರ್ಯಾಚರಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಶಾಖೆಯು ಸುರತ್ಕಲ್ ಮುಖ್ಯ ರಸ್ತೆಯಲ್ಲಿರುವ ವಿಜಯ್ ಮಹಲ್ ಕಾಂಪ್ಲೆಕ್ಸ್‌ನ ಸುಸಜ್ಜಿತ ಹವಾನಿಯಂತ್ರಿತ ಶಾಖೆಗೆ ಸ್ಥಳಾಂತರಗೊಳ್ಳಲಿದೆ. ಜೂನ್ 20ರಂದು ಶುಕ್ರವಾರ ಬೆಳಗ್ಗೆ 10.30ಕ್ಕೆ ಸ್ಥಳಾಂತರ ಶಾಖೆಯನ್ನು ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ ಅಧ್ಯಕ್ಷರಾದ ಚಿತ್ತರಂಜನ್ ಕೆ. ಉದ್ಘಾಟಿಸಲಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಹಕಾರ ತತ್ವದ ಮೂಲಕ ಜನಸೇವೆಯ ಸದುದ್ದೇಶದ ಧ್ಯೇಯದೊಂದಿಗೆ ಮಂಗಳೂರಿನ ಬೆಂದೂರ್‌ವೆಲ್‌ನಲ್ಲಿ 30.01.2012ರಲ್ಲಿ ಕೇಂದ್ರದ ಮಾಜಿ ವಿತ್ತ ಸಚಿವರಾದ ಬಿ.ಜನಾರ್ದನ ಪೂಜಾರಿಯವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡು, ದಶಮಾನೋತ್ಸವ ಸಂದರ್ಭ ಪಡೀಲ್‌ನಲ್ಲಿ ಸ್ವಂತ ಆಡಳಿತ ಹಾಗೂ ಪ್ರಧಾನ ಕಚೇರಿಯನ್ನು ಹೊಂದಿ, ಕಾರ್ಯನಿರ್ವಹಿಸುತ್ತಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಉನ್ನತ ಸಾಧನೆಯ ಹಾದಿಯಲ್ಲಿದೆ. ದಿನಾಂಕ 17.01.2020ರಂದು ಸ್ವಂತ ನಿವೇಶನದಲ್ಲಿ ಸ್ವಂತ ಕಟ್ಟಡ ಕಾಮಗಾರಿಗೆ ಶಿಲಾನ್ಯಾಸವೂ ಬಿ.ಜನಾರ್ದನ ಪೂಜಾರಿಯವರಿಂದ ನೆರವೇರಿ, 30.01.2022ರಂದು ಲೋಕಾರ್ಪಣೆಗೊಂಡಿದೆ. ಸಂಘದ ದಶಮಾನೋತ್ಸವದ ಸಂದರ್ಭ ಸುಸಜ್ಜಿತವಾದ ಹವಾನಿಯಂತ್ರಿತ ಸ್ವಂತ ಕಟ್ಟಡ ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯ ಏಕಮಾತ್ರ ವಿವಿಧೋದ್ದೇಶ…
