ಮುಂದಿನ ದಿನಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯ: ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಹೇಳಿಕೆ
ಬೆಳ್ಮಣ್: ಎಂಸಿಸಿ ಬ್ಯಾಂಕಿನ ೧೯ನೇ ಶಾಖೆಯು ಬೆಳ್ಮಣ್ ಮುಖ್ಯರಸ್ತೆಯ ಎಲ್ವಿನ್ ಟವರ್ಸ್‌ನ ನೆಲಮಹಡಿಯಲ್ಲಿ ಭಾನುವಾರ ಉದ್ಘಾಟನೆಗೊಂಡಿತು.
ನೂತನ ಶಾಖೆಯನ್ನುವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಉದ್ಘಾಟಿಸಿದರು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ದೀಪ ಬೆಳಗಿಸಿದರು. ಬೆಳ್ಮಣ್ ಸಂತ ಜೋಸೆಫ್ ಚರ್ಚ್‌ನ ಧರ್ಮಗುರು ವಂ.ಫಾ| ಫ್ರೆಡ್ರಿಕ್ ಮಸ್ಕರೇನ್ಹಸ್ ಆಶೀರ್ವದಿಸಿದರು. ಭದ್ರತಾ ಕೊಠಡಿಯನ್ನು ದಾಯ್ಜಿವಲ್ದ್ ಮೀಡಿಯಾ ಸಂಸ್ಥಾಪಕ ವಾಲ್ಟರ್ ನಂದಳಿಕೆ ಉದ್ಘಾಟಿಸಿದರು. ಇ-ಸ್ಟಾಂಪಿಂಗ್ ವ್ಯವಸ್ಥೆಯನ್ನು ಬೆಳ್ಮಣ್ ಗ್ರಾಮ ಪಂಚಾಯತ್ ಅಧಕ್ಷೆ ರಾಮೇಶ್ವರಿ ಎಮ್. ಶೆಟ್ಟಿ ಉದ್ಘಾಟಿಸಿದರು. ಅನಿವಾಸಿ ಭಾರತೀಯ ಉದ್ಯಮಿ ಶ್ರೀ ರೋನ್ ರೊಡ್ರಿಗಸ್ ಉಪಸ್ಥಿತರಿದ್ದರು.
https://chat.whatsapp.com/EbVKVnWB6rlHT1mWtsgbch
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅನಿಲ್ ಲೋಬೊ, ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳನ್ನು ಪರಿಚಯಿಸಲು ಬೆಳ್ಮಣ್ ಪರಿಸರದಲ್ಲಿ ಬ್ಯಾಂಕಿನ ಸಿಬ್ಬಂದಿಗಳು ಭೇಟಿ ಮಾಡಿದ ಸಂದರ್ಭ ಪರಿಸರದ ಜನ ನೀಡಿದ ಸ್ವಾಗತ, ಸಹಕಾರ ಮತ್ತು ಬೆಂಬಲಕ್ಕಾಗಿ ವಂದನೆ ಸಲ್ಲಿಸಿ, ಬೆಳ್ಮಣ್ ಶಾಖೆ ಪ್ರಾರಂಭವಾದ ಒಂದು ವರ್ಷದೊಳಗೆ ಲಾಭ ಗಳಿಸಲು ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಸಹಕಾರ ಮತ್ತು ಬೆಂಬಲ ಕೋರಿದರು. ಇತರ ಖಾಸಗಿ ಮತ್ತು ವಾಣಿಜ್ಯ ಬ್ಯಾಂಕ್‌ಗಳು ನೀಡುವ ಎಲ್ಲಾ ಸೇವೆಗಳನ್ನು ಎಂಸಿಸಿ ಬ್ಯಾಂಕ್ ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ಗೂಗಲ್ ಪೇ ಮತ್ತು ಯುಪಿಐ ಪಾವತಿಗಳಂತಹ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಪರಿಚಯಿಸಲಿದೆ. ಬ್ಯಾಂಕಿನ ಪ್ರಗತಿಯೇ ನಮ್ಮ ಆಡಳಿತ ಮಂಡಳಿಯ ಗುರಿಯಾಗಿದ್ದು, ಯಾವುದೇ ಅಡೆತಡೆಗಳು ಬಂದರೂ ಜಗ್ಗದೆ, ಬಗ್ಗದೆ, ಕುಗ್ಗದೆ ಮತ್ತು ಹಿಂದೆ ನೋಡದೆ ಬ್ಯಾಂಕಿನ ಪ್ರಗತಿಗಾಗಿ ಹಗಲಿರುಳು ದುಡಿಯುವುದು ಮತ್ತು ಮುನ್ನಡೆಯುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ಹೇಳಿದರು.
ಆಶೀರ್ವಚನ ನೀಡಿದ ಫ್ರೆಡ್ರಿಕ್ ಮಸ್ಕರೇನ್ಹಸ್ ಬೆಳ್ಮಣ್‌ನಲ್ಲಿ ನೂತನ ಶಾಖೆ ಆರಂಭಿಸಿ ಗ್ರಾಹಕ ಸ್ನೇಹಿ ವಾತಾವರಣವನ್ನು ಒದಗಿಸಿದ ಬ್ಯಾಂಕಿನ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು. ಐವನ್ ಡಿಸೋಜ ಮಾತನಾಡಿ, ಬ್ಯಾಂಕ್ ವಿಶ್ವಾಸದಿಂದ ನಡೆಯುತ್ತಿದೆ. ಬ್ಯಾಂಕ್ ಕಳೆದ ವರ್ಷಗಳಲ್ಲಿ ಉತ್ತಮ ಪ್ರಗತಿ ಕಂಡಿದೆ, ಮುಂದೆಯೂ ಬ್ಯಾಂಕಿನ ವ್ಯವಹಾರ ವೃದ್ದಿಯಾಗಲಿ ಎಂದು ಹಾರೈಸಿ ಮುಂದಿನ ಎಲ್ಲಾ ಪ್ರಯತ್ನಗಳಿಗೆ ತಮ್ಮ ಸಹಕಾರ ಮತ್ತು ಬೆಂಬಲದ ಭರವಸೆ ನೀಡಿದರು.
ಸಾಧನೆ ಮಾಡಲು ಪರಿಸ್ಥಿತಿಗೆ ಅನುಗುಣವಾಗಿ ಕೆಲಸ
ವಾಲ್ಟರ್ ನಂದಳಿಕೆ ಮಾತನಾಡಿ, ಎಂಸಿಸಿ ಬ್ಯಾಂಕ್ ಒಂದು ನಿರ್ದಿಷ್ಟ ಸಮಾಜದ ಬ್ಯಾಂಕ್ ಆಗಿ ಉಳಿದಿಲ್ಲ, ಅದು ಸಮಾಜದ ಎಲ್ಲಾ ಜನರ ಬ್ಯಾಂಕಾಗಿದೆ. ಬ್ಯಾಂಕಿನ ಅಧ್ಯಕ್ಷರ ಕಾರ್ಯವೈಖರಿಯನ್ನು ಶ್ಲಾಘಿಸುತ್ತಾ, ಮನಸ್ಸಿನ ಬದಲಾವಣೆ ಮತ್ತು ಕೆಲಸದ ಶೈಲಿಯಲ್ಲಿ ಬದಲಾವಣೆ ತಂದರೆ ಮಾತ್ರ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಬದಲಾವಣೆ ಪ್ರಪ್ರಥಮ ಹಂತದಲ್ಲಿ ಕಠಿಣವಾಗಿರುತ್ತದೆ, ಮಧ್ಯದಲ್ಲಿ ಗೊಂದಲಮಯವಾಗುತ್ತದೆ, ಕೊನೆಯಲ್ಲಿ ಅಧ್ಭುತವಾಗುತ್ತದೆ. ಆದ್ದರಿಂದ ಅಪಾರ ಸಾಧನೆ ಮಾಡಲು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುವುದು ಇತ್ತೀಚಿನ ದಿನಗಳಲ್ಲಿ ಅವಶ್ಯಕ. ಬೆಳ್ಮಣ್‌ನ ನಾಗರೀಕರು ತಮ್ಮ ಎಲ್ಲಾ ಬ್ಯಾಂಕಿಂಗ್ ಅವಶ್ಯಕತೆಗಳಿಗಾಗಿ ಶಾಖೆಯನ್ನು ಬಳಸಬೇಕೆಂದು ಕರೆ ನೀಡಿದರು.
ಸಾಮಾಜಿಕ ಕಳಕಳಿಯೊಂದಿಗೆ ಬೆಳ್ಮಣ್ ಪರಿಸರದಲ್ಲಿ ಕಾರ್ಯಾಚರಿಸುತ್ತಿರುವ ಹ್ಯುಮಾನಿಟಿ ಟ್ರಸ್ಟ್ ಮತ್ತು ದೇವ್‌ದಿತಾ ಚಾರಿಟೇಬಲ್ ಆಂಡ್ ವೇಲ್ಫೇರ್ ಟ್ರಸ್ಟ್ ಇದರ ಮುಖ್ಯಸ್ಥರಿಗೆ ಬ್ಯಾಂಕಿನ ದತ್ತ ನಿಧಿಯಿಂದ ಸಹಾಯಧನ ನೀಡಲಾಯಿತು. ಕ್ರಿಸ್‌ಮಸ್ ಸಂದರ್ಭ ಆಯೋಜಿಸಿದ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಮಾಸ್ಟರ್ ಉದ್ಭವ್ ಜಿ.ದೇವಾಡಿಗ, ನವೀನ್ ಶೆಣೈ (ಹ್ಯುಮಾನಿಟಿ ಟ್ರಸ್ಟ್) ಅಕ್ಷತಾ ಪೂಜಾರಿ ಬೋಳ, ಜಿತೇಂದ್ರ ಪುರ್ತಾದೊ, ರೆಮೆಡಿಯ ಡಿಸೋಜ ಇವರನ್ನು ಸನ್ಮಾನಿಸಲಾಯಿತು. ಕಟ್ಟಡ ಮಾಲೀಕ ಎಡ್ವರ್ಡ್ ಮಿಸ್ಕಿತ್ ಮತ್ತು ಇಂಜಿನಿಯರ್ ಕಾರ್ತಿಕ್ ಕಿರಣ್ ಇವರನ್ನು ಸನ್ಮಾನಿಸಲಾಯಿತು. ಶಿರ್ವ ಶಾಖೆಯ ಅತ್ತುತ್ತಮ ಗ್ರಾಹಕ ಫ್ರಾನ್ಸಿಸ್ ಡಿಸೋಜ ಮತ್ತು ನೂತನ ಶಾಖೆಯಲ್ಲಿ ಖಾತೆ ತೆರೆದ ಗ್ರಾಹಕರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಡೇವಿಡ್ ಡಿಸೋಜ, ಅನಿಲ್ ಪತ್ರಾವೊ, ಮೆಲ್ವಿನ್ ವಾಸ್, ರೋಶನ್ ಡಿಸೋಜ, ಡಾ|ಫ್ರೀಡಾ ಡಿಸೋಜ, ಡಾ|ಜೆರಾಲ್ಡ್ ಪಿಂಟೊ, ಎಲ್‌ರೊಯ್ ಕಿರಣ್ ಕ್ರಾಸ್ತೊ, ಜೆ.ಪಿ.ರೊಡ್ರಿಗಸ್, ಸಿ.ಜಿ.ಪಿಂಟೊ, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ಡಾನ್ಹಾ, ಆಲ್ವಿನ್ ಪಿ.ಮೊಂತೇರೊ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರುಜ್, ಮಹಾಪ್ರಬಂಧಕ ಸುನೀಲ್ ಮಿನೇಜಸ್ ಹಾಜರಿದ್ದರು.
ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ ಸ್ವಾಗತಿಸಿ, ಶಾಖಾ ವ್ಯವಸ್ಥಾಪಕಿ ಶೈನಿ ಲಸ್ರಾದೊ ವಂದಿಸಿದರು. ಎಲ್ಸನ್ ಹಿರ್ಗಾನ್ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com