ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ 19 ಒಪ್ಪಂದಗಳಿಗೆ ಸಹಿ
ಭೋಪಾಲ್: ದೇಶದ ಪ್ರಮುಖ ಕಂಪನಿಗಳಲ್ಲೊಂದಾದ ರಿಲಯನ್ಸ್ ಸಹಕಾರಿ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದೆ ಬಂದಿದ್ದು ಹಲವು ಪ್ರಮುಖ ಯೋಜನೆಗಳನ್ನು ಘೋಷಿಸಿದೆ.
ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ (GIS) ಈ ಯೋಜನೆಗಳನ್ನು ಘೋಷಿಸಲಾಗಿದೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಸಹಕಾರಿ ಸಚಿವ ವಿಶ್ವಾಸ್ ಸಾರಂಗ್ ಸಹಕಾರಿ ವಲಯದಲ್ಲಿ 2,305 ಕೋಟಿ ರೂ. ಮೌಲ್ಯದ 19 ಒಪ್ಪಂದಗಳಿಗೆ (MoU) ಸಹಿ ಹಾಕಿದ್ದಾರೆ.
ಪ್ರಮುಖ ಹೂಡಿಕೆದಾರರ ಸಮ್ಮುಖದಲ್ಲಿ ಹಲವು ಉಪಕ್ರಮಗಳಿಗೆ ಸಹಿ ಹಾಕಲಾಗಿದ್ದು ಈ ಒಪ್ಪಂದಗಳು ಆರ್ಥಿಕ ಅಭಿವೃದ್ಧಿಯಲ್ಲಿ ಪರಿವರ್ತನಾತ್ಮಕ ಹೆಜ್ಜೆಯನ್ನು ಇಡಲಿದೆ ಮತ್ತು ಸಹಕಾರಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (CPPP) ಮಾದರಿಗೆ ಇದು ಹೊಸ ದಿಕ್ಕು ತೋರಿಸಲಿದೆ.
https://chat.whatsapp.com/EbVKVnWB6rlHT1mWtsgbch
ಸಹಕಾರಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (CPPP) ಮಾದರಿಯನ್ನು ಪರಚಯಿಸಿದ ಸಚಿವ ವಿಶ್ವಾಸ್ ಸಾರಂಗ್, ಈ ಉಪಕ್ರಮವು ದೇಶಾದ್ಯಂತ ಸಹಕಾರಿ ವಲಯದ ಕಾರ್ಯಚಟುವಟಿಕೆಗಳನ್ನು ಪುನಃರ್ರಚಿಸಲಿದೆ ಎಂದು ಹೇಳಿದರು.
ಕೇಂದ್ರ ಸಹಕಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಿದ್ಧಾರ್ಥ್ ಮಾತನಾಡಿ, ದೇಶಾದ್ಯಂತ ಒಂದು ಲಕ್ಷ ಪ್ರಾಥಮಿಕ ಕೃಷಿ ಸಾಲ ಸಂಘಗಳು (PACS) ಇದ್ದು, 30 ಕೋಟಿಗೂ ಹೆಚ್ಚು ಜನರಿಗೆ ಸೇವೆ ಸಲ್ಲಿಸುತ್ತಿವೆ. PACSಗಳ ಗಣಕೀಕರಣದೊಂದಿಗೆ, ಮುಂದಿನ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲದೊಂದಿಗೆ ಹೊಸ ಮೈಲಿಗಲ್ಲುಗಳನ್ನು ಈ ಪ್ಯಾಕ್ಸ್‌ಗಳು ಸಾಧಿಸಲಿವೆ ಎಂದು ಹೇಳಿದರು.
ಇದೇ ವೇಳೆ ಸಹಕಾರಿ ವಲಯದಲ್ಲಿ ಪ್ರಮುಖ ಹೂಡಿಕೆಗಳನ್ನು ಘೋಷಿಸಿದ ರಿಲಯನ್ಸ್ ಮತ್ತು ಬೈದ್ಯನಾಥ್ ಕಂಪನಿಗಳು ಈ ಯೋಜನೆಯಲ್ಲಿ ತಮ್ಮ ಭಾಗೀದಾರಿಕೆಯನ್ನು ಸಾರಿವೆ.
ರಿಲಯನ್ಸ್‌ನ ಕುಮಾರ್ ಅಭಿಷೇಕ್, ಪ್ರತಿಭಾ ಸಿಂಟೆಕ್ಸ್‌ನ ಶ್ರೇಯಸ್ಕರ್ ಚೌಧರಿ, ಅಗ್ರಿವಿಸ್ತಾದ ರಾಜೀವ್ ಸಿಂಗ್, ಬೈದ್ಯನಾಥ್‌ನ ಅನಿರುದ್ಧ್ ಗೌರ್, ಭಾರತೀಯ ಬೀಜ್‌ನ ಜೆ.ಪಿ. ಸಿಂಗ್, ಮೆಜೆಸ್ಟಿಕ್ ಬಾಸ್ಮತಿಯ ವಿಜ್ಞಾನ್ ಲೋಧಾ, ಆರ್‌ಎಂ ಗ್ರೂಪ್‌ನ ಅನಿಮೇಶ್ ಜೈನ್, ಮಶ್ರೂಮ್ ವರ್ಲ್ಡ್‌ನ ಸಮೀರ್ ಸಾಗರ್, ವೀ ವಿನ್‌ನ ಅಭಿಷೇಕ್ ಗುಪ್ತಾ, ನ್ಯೂಟ್ರಾಲಿಸ್ ಕೃಷಿ ಉತ್ಪಾದಕ ಸಹಕಾರ ಸಂಘದ ಪ್ರದೀಪ್ ದ್ವಿವೇದಿ ಮತ್ತು ಸವಿರ್ ಬಯೋಟೆಕ್‌ನ ಸಂದೀಪ್ ಸುದಾನ್ ಮೊದಲಾದವರು ಭಾಗವಹಿಸಿದ್ದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com