Author: admin

ಬೆಳಗಾವಿ: ಇಲ್ಲಿನ ಅಂಕಲಿ ಗ್ರಾಮದ ಡಾ.ಪ್ರಭಾಕರ ಕೋರೆ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ (ಬಹುರಾಜ್ಯ) 2024-25ನೇ ಸಾಲಿನಲ್ಲಿ 25.30 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ರಾಜ್ಯಾದ್ಯಂತ 55 ಶಾಖೆಗಳನ್ನು ಹೊಂದಿರುವ ಸೊಸೈಟಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.92 ಸಾಲ ವಸೂಲಾತಿ ಮಾಡಿದೆ ಎಂದು ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಲಿ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಂಸ್ಥೆಯು 1989ರಲ್ಲಿ ವಿಜಯಪುರದ ಜ್ಞಾನಯೋಗಾಶ್ರಮದ ಲಿಂಗೈಕ್ಯ ಪರಮಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಮೃತಹಸ್ತದಿಂದ ಪ್ರಾರಂಭವಾಗಿ ಸಂಸ್ಥಾಪಕರಾದ ಡಾ.ಪ್ರಭಾಕರ ಕೋರೆಯವರ ಮಾರ್ಗದರ್ಶನ ಮತ್ತು ಅಮಿತ್‌ ಕೋರೆ ಹಾಗೂ ಪ್ರೀತಿ ದೊಡವಾಡ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಗ್ರಾಮೀಣ ಭಾಗದ ಶಾಖೆಗಳಿಂದ ರೈತಾಪಿ ವರ್ಗದವರಿಗೆ ಆಧುನಿಕ ತಂತ್ರಜ್ಞಾನಗಳ ಮೂಲಕ ತ್ವರಿತ ಸೇವೆಗಳನ್ನು ನೀಡುತ್ತಿದ್ದು, ವರ್ಷಾಂತ್ಯಕ್ಕೆ 97,727 ಸದಸ್ಯರನ್ನು ಹೊಂದಿದೆ. ರೂ.4 ಕೋಟಿಗೂ ಮಿಕ್ಕಿ ಶೇರು ಬಂಡವಾಳ ಹೊಂದಿದ್ದು, 141 ಕೋಟಿಗೂ ಮಿಕ್ಕಿ ನಿಧಿಗಳನ್ನು ಸಂಗ್ರಹಿಸಿ 1511 ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿದೆ. 1064 ಕೋಟಿಗೂ ಅಧಿಕ ಸಾಲ ವಿತರಿಸಿದೆ.…

Read More

ನವದೆಹಲಿ: ಸಾರಿಗೆ ವಲಯದಲ್ಲಿ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸುವ ಗುರಿ ಹೊಂದಿರುವ ಕೇಂದ್ರ ಸಹಕಾರ ಸಚಿವಾಲಯದ “ಸಹಕಾರ್ ಟ್ಯಾಕ್ಸಿ” ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ಕೇಂದ್ರ ಸಹಕಾರ ಸಚಿವಾಲಯದ ಕಾರ್ಯದರ್ಶಿ ಆಶಿಶ್ ಕುಮಾರ್ ಭೂತಾನಿ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಹಕಾರ್‌ ಟ್ಯಾಕ್ಸಿ ಕುರಿತ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್‌ಸಿಡಿಸಿ) ಉಪಕ್ರಮದ ಪರಿಕಲ್ಪನೆ, ಅದರ ಪ್ರಮುಖ ಪಾಲುದಾರರು ಮತ್ತು ಕಾರ್ಯತಂತ್ರದ ಉದ್ದೇಶಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. “ಸಹಕಾರ್ ಟ್ಯಾಕ್ಸಿ” ಯೋಜನೆಯು ಹೇಗೆ ಸಹಕಾರಿ ಸಂಘಗಳನ್ನು ಇನ್ನಷ್ಟು ಬಲಪಡಿಸುವ ಮತ್ತು ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂಬುದನ್ನು ಚರ್ಚಿಸಲಾಯಿತು. ಸಹಕಾರ್ ಟ್ಯಾಕ್ಸಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಂಕಜ್ ಕುಮಾರ್ ಬನ್ಸಾಲ್ ಮತ್ತು ಸಚಿವಾಲಯ ಮತ್ತು ಎನ್‌ಸಿಡಿಸಿ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮೂಲ ಮಟ್ಟದಲ್ಲಿ ಸಮಗ್ರ ಬೆಳವಣಿಗೆ ಉತ್ತೇಜಿಸಲು ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಕಾರಿ ಮಾದರಿಗಳನ್ನು ಬಳಸಿಕೊಳ್ಳುವ ಕುರಿತ ಬದ್ಧತೆಯನ್ನು ಸಚಿವಾಲಯ ಈ ಸಭೆಯಲ್ಲಿ ಬಲವಾಗಿ ಪ್ರತಿಪಾದಿಸಿದೆ.…

Read More

ಮಂಗಳೂರು: ಇಲ್ಲಿನ ಮಂಗಳೂರು ಸೌಹಾರ್ದ ಸಹಕಾರಿ ಸಂಘ ಮತ್ತು ಪ್ರಸಾದ್ ನೇತ್ರಾಲಯ ಜಂಟಿ ಆಶ್ರಯದಲ್ಲಿ ಜರುಗಿದ ಕಣ್ಣಿನ ಉಚಿತ ತಪಾಸಣೆಯ ಪ್ರಯುಕ್ತ ಬುಧವಾರ ಮಂಗಳೂರು ಸ್ಕೋರ್ ಸಭಾಂಗಣದಲ್ಲಿ “ಉಚಿತ ಕನ್ನಡಕ ವಿತರಣೆ” ಕಾರ್ಯಕ್ರಮ ಜರಗಿತು. https://chat.whatsapp.com/EbVKVnWB6rlHT1mWtsgbch ಮಂಗಳೂರು ಸೌಹಾರ್ದ ಸಹಕಾರಿಯ ಅಧ್ಯಕ್ಷ, ಮಾಜಿ ಕಾರ್ಪೊರೇಟರ್‌ ಕೆ.ಭಾಸ್ಕರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ನೇತ್ರಾಲಯದ ನಿರ್ದೇಶಕ ನಾಡೋಜ ಕೃಷ್ಣಪ್ರಸಾದ್ ಕೂಡ್ಲು ಮತ್ತು ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ಮಂಗಳೂರು ಸೌಹಾರ್ದ ಸಹಕಾರಿಯ ನಿರ್ದೇಶಕರಾದ ರವೀಂದ್ರ ಬೇಕಲ್, ಪೂರ್ಣಿಮಾ ಬಿ.ರಾವ್, ಸುಂದರ ಸಾಲ್ಯಾನ್‌, ಕೆ.ರವೀಂದ್ರ ರಾವ್ ಮುಖ್ಯ ಅತಿಥಿಗಳಾಗಿದ್ದರು. ನಾಡೋಜ ಕೃಷ್ಣಪ್ರಸಾದ್ ಕೂಡ್ಲು” ಅವರನ್ನು ಅಭಿನಂದಿಸಲಾಯಿತು. 200 ಕನ್ನಡಕಗಳನ್ನು ವಿತರಿಸಲಾಯಿತು. ಚಂದ್ರಿಕಾ ಡಿ.ರಾವ್, ಇಮ್ರಾನ್ ಎ.ಆರ್, ಮೀನಾ ಟೆಲ್ಲಿಸ್ ಹಾಜರಿದ್ದರು. ಆನಂದ ಸೋನ್ಸ್ , ವಿದ್ಯಾ ಬಾಬುಗುಡ್ಡ, ರೋನಾಲ್ಡ್ ಸಹಕರಿಸಿದರು. ಸದಾಶಿವ ಅಮೀನ್‌, ಸೈಯದ್ ಅಮೀನ್ ವಂದಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 ಇಮೇಲ್: sahakaraspandana@gmail.com

Read More

ನವದೆಹಲಿ: ಪ್ರಸಿದ್ಧ ವಿಧಿವಿಜ್ಞಾನ ತಜ್ಞ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಡಾ.ಜೆ.ಎಂ. ವ್ಯಾಸ್ (ಜಯಂತ್‌ಕುಮಾರ್ ಮಗನ್‌ಲಾಲ್ ವ್ಯಾಸ್ ) ಅವರನ್ನು ತ್ರಿಭುವನ್ ಸಹಕಾರಿ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಗೃಹ ಸಚಿವಾಲಯದ ಅಧೀನದ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ (ಎನ್‌ಎಫ್‌ಎಸ್‌ಯು) ಸ್ಥಾಪಕ ಉಪಕುಲಪತಿಯಾಗಿರುವ ಡಾ.ಜೆ.ಎಂ.ವ್ಯಾಸ್ ಈ ಹೊಸ ಹುದ್ದೆ ವಹಿಸಿಕೊಳ್ಳುವ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಹೊಸ ಮಜಲು ಏರಿದ್ದಾರೆ. ಭಾರತದಲ್ಲಿ ವಿಧಿವಿಜ್ಞಾನ ಮತ್ತು ಶಿಕ್ಷಣದ ಪ್ರವರ್ತಕರೂ ಆಗಿರುವ ಜಯಂತ್‌ಕುಮಾರ್ ಮಗನ್‌ಲಾಲ್ ವ್ಯಾಸ್ ಗುಜರಾತ್‌ ರಾಜ್ಯದ ಗಾಂಧಿನಗರದ ಎನ್‌ಎಫ್‌ಎಸ್‌ಯುನ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. 1993ರಿಂದ 2009ರ ತನಕ ನಿವೃತ್ತರಾಗುವವರೆಗೆ ಗುಜರಾತ್ ರಾಜ್ಯದ ವಿಧಿವಿಜ್ಞಾನ ನಿರ್ದೇಶನಾಲಯದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ಅವರು ಮೂರು ದಶಕಗಳ ಕಾಲ ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದರು. ಡಾ.ವ್ಯಾಸ್ ಅವರು 2009 ರಲ್ಲಿ ಪ್ರಾರಂಭವಾದಾಗಿನಿಂದ 2020ರಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಎಂದು ಮರುನಾಮಕರಣಗೊಳ್ಳುವವರೆಗೆ ಗುಜರಾತ್ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಮಹಾನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ಉಪಕುಲಪತಿಯಾಗಿ ನೇತೃತ್ವ ವಹಿಸಿದ್ದರು.…

Read More

ಶೀಘ್ರದಲ್ಲೇ ಬೈಂದೂರಿನಲ್ಲಿ 20ನೇ ಶಾಖೆ ಕಾರ್ಯಾರಂಭ: ಬ್ಯಾಂಕ್‌ ಅಧ್ಯಕ್ಷ ಅನಿಲ್ ಲೋಬೊ ಘೋಷಣೆ ಮಂಗಳೂರು: 113 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ ಮಾರ್ಚ್‌ 31ಕ್ಕೆ ಕೊನೆಗೊಂಡ ವಿತ್ತೀಯ ವರ್ಷದಲ್ಲಿ ಒಟ್ಟು 13.00 ಕೋಟಿ ರೂಪಾಯಿ ವ್ಯವಹಾರಿಕ ಲಾಭ ಗಳಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಪ್ರಸ್ತುತ ವರ್ಷ 1.30% ಎನ್.ಪಿ.ಎ. ದಾಖಲಿಸಿದೆ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆಯ ಲಾಭ ಮತ್ತು ಕನಿಷ್ಠ ಎನ್.ಪಿ.ಎ. ಜೊತೆಗೆ, 2024–2025ನೇ ವಿತ್ತೀಯ ವರ್ಷದಲ್ಲಿ, ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯ ಶ್ರಮದಿಂದ, ಬ್ಯಾಂಕ್ ಸ್ಥಾಪನೆಯಾದಂದಿನಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದ್ದು, ವಿತ್ತೀಯ ವರ್ಷದಲ್ಲಿ ಬೆಳ್ತಂಗಡಿ ಮತ್ತು ಬೆಳ್ಮಣ್‌ನಲ್ಲಿ ಕ್ರಮವಾಗಿ 18 ಮತ್ತು 19ನೇ ಶಾಖೆಯನ್ನು ತೆರೆಯಲಾಗಿದೆ. ಬೈಂದೂರಿನಲ್ಲಿ…

Read More

ದಾಖಲೆಯ ಗಳಿಕೆ, ವಿಶೇಷ ಸಾಧನೆ: ಬ್ಯಾಂಕ್‌ ಅಧ್ಯಕ್ಷ ಎಚ್‌.ಜಗನ್ನಾಥ ಸಾಲ್ಯಾನ್‌ ಹೇಳಿಕೆ ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಅಭೂತಪೂರ್ವ ಕಾರ್ಯಸಾಧನೆಯೊಂದಿಗೆ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಮುನ್ನಡೆಯುತ್ತಿದ್ದು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ದಾಖಲೆಯ ರೂ. 3.45 ಕೋಟಿಗೂ ಮಿಕ್ಕಿ ಲಾಭ ಗಳಿಸಿ ವಿಶೇಷ ಸಾಧನೆ ಮಾಡಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಎಚ್‌.ಜಗನ್ನಾಥ ಸಾಲ್ಯಾನ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ವಿಟ್ಲದಲ್ಲಿ ಪ್ರಧಾನ ಕಛೇರಿ ಮತ್ತು ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡ್‌ ಹಾಗೂ ಪುತ್ತೂರಿನಲ್ಲಿ ಶಾಖೆಗಳನ್ನು ಹೊಂದಿರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನಲ್ಲಿ ಒಟ್ಟು 8515 ಸದಸ್ಯರಿದ್ದು, ರೂ. 2.82 ಕೋಟಿ ಪಾಲು ಬಂಡವಾಳ ಹೊಂದಿದೆ. ಪ್ರಸಕ್ತ ವರ್ಷ ದಾಖಲೆಯ 950 ಕೋಟಿ ರೂ.ಗಳ ವ್ಯವಹಾರ ದಾಖಲಿಸಿದ್ದು, ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ 259 ಕೋಟಿ ರೂಪಾಯಿ ಹೆಚ್ಚಿನ ವ್ಯವಹಾರ ಮಾಡಿದೆ. ಸ್ಪರ್ಧಾತ್ಮಕ ಯುಗದಲ್ಲಿ ರೂ.134.73 ಕೋಟಿ ರೂಪಾಯಿಗಳ ಠೇವಣಿ ಸಂಗ್ರಹಿಸಿದ್ದು, ಕಳೆದ ಸಾಲಿಗಿಂತ 5.93%ರಷ್ಟು ಹೆಚ್ಚಳವಾಗಿದೆ.…

Read More

ಶೀಘ್ರದಲ್ಲೇ ಬೈಂದೂರಿನಲ್ಲಿ 20ನೇ ಶಾಖೆ ಕಾರ್ಯಾರಂಭ: ಬ್ಯಾಂಕ್‌ ಅಧ್ಯಕ್ಷ ಅನಿಲ್ ಲೋಬೊ ಘೋಷಣೆ ಮಂಗಳೂರು: 113 ವರ್ಷಗಳ ಇತಿಹಾಸವಿರುವ ಎಂಸಿಸಿ ಬ್ಯಾಂಕ್ ಲಿಮಿಟೆಡ್ ಮಾರ್ಚ್‌ 31ಕ್ಕೆ ಕೊನೆಗೊಂಡ ವಿತ್ತೀಯ ವರ್ಷದಲ್ಲಿ ಒಟ್ಟು 13.00 ಕೋಟಿ ರೂಪಾಯಿ ವ್ಯವಹಾರಿಕ ಲಾಭ ಗಳಿಸಿದೆ. ಸತತವಾಗಿ ಎನ್.ಪಿ.ಎ. ಪ್ರಮಾಣವನ್ನು ಕಡಿಮೆಗೊಳಿಸಲು ಬ್ಯಾಂಕ್ ಶ್ರಮಿಸುತ್ತಿದ್ದು, ಪ್ರಸ್ತುತ ವರ್ಷ 1.30% ಎನ್.ಪಿ.ಎ. ದಾಖಲಿಸಿದೆ ಎಂದು ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾಖಲೆಯ ಲಾಭ ಮತ್ತು ಕನಿಷ್ಠ ಎನ್.ಪಿ.ಎ. ಜೊತೆಗೆ, 2024–2025ನೇ ವಿತ್ತೀಯ ವರ್ಷದಲ್ಲಿ, ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ನೇತೃತ್ವದ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯ ಶ್ರಮದಿಂದ, ಬ್ಯಾಂಕ್ ಸ್ಥಾಪನೆಯಾದಂದಿನಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯನ್ನು ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದ್ದು, ವಿತ್ತೀಯ ವರ್ಷದಲ್ಲಿ ಬೆಳ್ತಂಗಡಿ ಮತ್ತು ಬೆಳ್ಮಣ್‌ನಲ್ಲಿ ಕ್ರಮವಾಗಿ 18 ಮತ್ತು 19ನೇ ಶಾಖೆಯನ್ನು ತೆರೆಯಲಾಗಿದೆ. ಬೈಂದೂರಿನಲ್ಲಿ…

Read More

240 ಹೊಸ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಸ್ಥಾಪನೆ: ರಾಷ್ಟ್ರೀಯ ಮಟ್ಟದ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪ ಶಿಲ್ಲಾಂಗ್‌: ದೇಶಾದ್ಯಂತ ಸಹಕಾರಿ ಬ್ಯಾಂಕಿಂಗ್ ಜಾಲವನ್ನು ಮತ್ತಷ್ಟು ಬಲಶಾಲಿಯಾಗಿ ವಿಸ್ತರಿಸುವ ಮತ್ತು ಬ್ಯಾಂಕ್‌ಗಳ ಸೇವೆ ಇಲ್ಲದ ಪ್ರದೇಶಗಳಲ್ಲಿ ಆರ್ಥಿಕ ಸೇರ್ಪಡೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್ ಮತ್ತು ಲಕ್ಷದ್ವೀಪಗಳಲ್ಲಿ ಅಪೆಕ್ಸ್‌ ಸ್ಟೇಟ್‌ ಕೋ ಆಪರೇಟಿವ್‌ ಬ್ಯಾಂಕ್‌ ಸ್ಥಾಪನೆಯ ವಿಚಾರ ಮುನ್ನೆಲೆಗೆ ಬಂದಿದೆ. https://chat.whatsapp.com/EbVKVnWB6rlHT1mWtsgbch ಮೇಘಾಲಯದ ಶಿಲ್ಲಾಂಗ್‌ನಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಪರಿಶೀಲನಾ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆಯಾಗಿದ್ದು, ಎರಡು ಹೊಸ ರಾಜ್ಯ ಸಹಕಾರಿ ಬ್ಯಾಂಕ್‌ಗಳು ಮತ್ತು 240 ಹೊಸ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ (DCC) ಸ್ಥಾಪನೆಯ ಕುರಿತು ಚರ್ಚೆಗಳು ನಡೆದಿವೆ. ಲಡಾಖ್‌ ಮತ್ತು ಲಕ್ಷದ್ವೀಪಗಳಲ್ಲಿ ಪ್ರಸ್ತುತ ಯಾವುದೇ ಪ್ರಾದೇಶಿಕ ಸಹಕಾರಿ ಬ್ಯಾಂಕ್‌ಗಳು ಇಲ್ಲ ಎಂಬ ವಿಷಯ ಚರ್ಚೆಯಾಗಿದ್ದು, ಈ ಪ್ರದೇಶಗಳಲ್ಲಿ ಸಹಕಾರಿ ವಲಯವನ್ನು ಬಲಪಡಿಸಲು ಮತ್ತು ಅಸ್ತಿತ್ವದಲ್ಲಿರುವ ಸಹಕಾರಿ ಸಂಸ್ಥೆಗಳ ಆರ್ಥಿಕ ಅಗತ್ಯಗಳನ್ನು…

Read More

ಮಂಗಳೂರು: ವಜ್ರಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿ 2024-25ನೇ ಸಾಲಿನಲ್ಲಿ 1292.45 ಕೋಟಿ ರೂ. ವ್ಯವಹಾರ ನಡೆಸಿ 6.09 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch 1964ರಲ್ಲಿ ದೇವಮಾನವ ದಿ|ಪಾಲ್ಕೆ ಬಾಬುರಾಯ ಆಚಾರ್ಯರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡ ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿಯು ಒಟ್ಟು 22848 ಸದಸ್ಯ ರಿಂದ 7.03 ಕೋಟಿ ರೂ ಪಾಲು ಬಂಡವಾಳ ಹೊಂದಿದೆ. ಒಟ್ಟು ಠೇವಣಿ 253.86 ಕೋಟಿ ರೂ. ಇದ್ದು, ಸದಸ್ಯ/ಗ್ರಾಹಕರಿಗೆ ಚಿನ್ನಾಭರಣ ಸಾಲ, ಜಾಮೀನು ಸಾಲ, ವಾಹನ ಖರೀದಿ ಸಾಲ, ಆಸ್ತಿ ಅಡವು / ಗೃಹ ನಿರ್ಮಾಣ ಸಾಲ, ಯಂತ್ರೋಪಕರಣ ಸಾಲ, ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ಹಾಗೂ ನಿಬಡ್ಡಿಯಲ್ಲಿ ಸೋಲಾರ್ ಯಂತ್ರೋಪಕರಣ ಸಾಲ ನೀಡುತ್ತಿದ್ದು ವರ್ಷಾಂತ್ಯಕ್ಕೆ ರೂ.240.32 ಕೋಟಿ ಹೊರಬಾಕಿ ಸಾಲ ಇದ್ದು ಡಿಮ್ಯಾಂಡ್ ಮೇಲೆ ಸುಸ್ತಿ ಬಾಕಿ ಪ್ರಮಾಣ ಶೇ.2.76 ಆಗಿರುತ್ತದೆ. ಕಳೆದ ಸಾಲಿನಲ್ಲಿ ಸುಸ್ತಿ ಬಾಕಿ ಶೇ.3.77 ಇದ್ದು ಶೇ.1.01 ಕಡಿಮೆಯಾಗಿರುತ್ತದೆ.…

Read More

ಮಂಗಳೂರು: ವೈಜ್ಞಾನಿಕ ಮಣ್ಣಿನ ವಿಶ್ಲೇಷಣೆಯ ಮೂಲಕ ಉತ್ತಮ ಬೆಳೆ ಇಳುವರಿ ಸಾಧಿಸಲು ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ ಕ್ಯಾಂಪ್ಕೊ ಪುತ್ತೂರು ಶಾಖೆಯಲ್ಲಿ ಮಣ್ಣಿನ ಪರೀಕ್ಷಾ ಘಟಕವನ್ನು ಪ್ರಾರಂಭಿಸಲಾಗಿದ್ದು ಪ್ರಗತಿಪರ ಕೃಷಿಕ ಸುರೇಶ್‌ ಬಲ್ನಾಡು ಶುಕ್ರವಾರ  ಉದ್ಘಾಟಿಸಿದರು. https://chat.whatsapp.com/EbVKVnWB6rlHT1mWtsgbch ಈ ಮಣ್ಣು ಪರೀಕ್ಷಾ ಯಂತ್ರವು ಮಣ್ಣಿನಲ್ಲಿರುವ 12 ಪ್ರಮುಖ ಪೋಷಕಾಂಶಗಳನ್ನು ವಿಶ್ಲೇಷಿಸುವ ಜೊತೆಗೆ ಪೋಷಕಾಂಶಗಳ ನಿರ್ವಹಣೆಗೆ ಸಂಕ್ಷಿಪ್ತ ಶಿಫಾರಸುಗಳನ್ನು ನೀಡುತ್ತದೆ. ರೈತರು ಮಣ್ಣಿನ ಪೋಷಕಾಂಶಗಳ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ನಿಖರವಾದ ಮಣ್ಣಿನ ಪರೀಕ್ಷೆಯ ಮೂಲಕ ಸಮತೋಲಿತ ಪೋಷಕಾಂಶಗಳ ನಿರ್ವಹಣೆ ಮಾಡುವುದು ಅತ್ಯಗತ್ಯ. ಈ ಉತ್ತಮವಾದ ಸೇವೆಯನ್ನು ಕ್ಯಾಂಪ್ಕೊ ಸದಸ್ಯರು ಸದುಪಯೋಗ ಮಾಡಿಕೊಳ್ಳಬೇಕಾಗಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿಯವರು ಮನವಿ ಮಾಡಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ನಿರ್ದೇಶಕ ರಾಘವೇಂದ್ರ ಭಟ್, ಎ.ಆರ್.ಡಿ.ಎಫ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೇಶವ ಭಟ್, ಕ್ಯಾಂಪ್ಕೊ ಸದಸ್ಯರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ…

Read More