ಬೆಂಗಳೂರು: ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 2024-25ರ ಆರ್ಥಿಕ ವರ್ಷದಲ್ಲಿ 86.94 ಕೋಟಿ ರೂ.ಗಳ ಲಾಭ ಗಳಿಸಿದೆ. ಬ್ಯಾಂಕ್‌ನ ನಿವ್ವಳ ಅನುತ್ಪಾದಕ ಸಾಲಗಳು ಶೂನ್ಯವಾಗಿವೆ. ಬ್ಯಾಂಕ್‌ನ ಒಟ್ಟು ವಹಿವಾಟು 3540.24 ಕೋಟಿ ರೂ. ಮೀರಿದ್ದು, ಪ್ರಸಕ್ತ 2024-25ರ ಸಾಲಿನಲ್ಲಿ ಆದಾಯ ತೆರಿಗೆ ಪೂರ್ವ 64.50 ಕೋಟಿ ರೂ. ಲಾಭ ಗಳಿಸಿದೆ ಮತ್ತು ತೆರಿಗೆ ನಂತರ 29.03 ಕೋಟಿ ನಿವ್ವಳ ರೂ. ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅವಲಹಳ್ಳಿ ಆರ್.ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
https://chat.whatsapp.com/EbVKVnWB6rlHT1mWtsgbch
ದಿ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 1907ರ ಏಪ್ರಿಲ್ 6ರಂದು ಆರಂಭಗೊಂಡಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ 118 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಾ ಬಂದಿದೆ. ಬ್ಯಾಂಕ್ ರಾಜ್ಯಾದ್ಯಂತ ಕ್ಷೇತ್ರವ್ಯಾಪ್ತಿ ಹೊಂದಿದ್ದು, ಬೆಂಗಳೂರಿನಲ್ಲಿ 20, ಮೈಸೂರು ಮತ್ತು ರಾಮನಗರದಲ್ಲಿ ತಲಾ ಒಂದು ಸೇರಿ ಒಟ್ಟು 22 ಶಾಖೆಗಳನ್ನು ಹೊಂದಿದೆ ಎಂದು ಅವರು ಹೇಳಿದರು. ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ 2779.00 ಕೋಟಿ ರೂ.ನಷ್ಟಿದ್ದು, 2158.77 ಕೋಟಿ ರೂ. ಠೇವಣಿ ಸಂಗ್ರಹ ಮಾಡಿದೆ. ಬ್ಯಾಂಕಿನ ಆಪದ್ಧನ ನಿಧಿ ಮತ್ತು ಇತರೆ ನಿಧಿಗಳು 524.30 ಕೋಟಿ ರೂ. ಗೂ ಮೀರಿದೆ. 1381.47 ಕೋಟಿ ರೂ.ಗೂ ಅಧಿಕ ಸಾಲ ನೀಡಿದ್ದು, ಬ್ಯಾಂಕಿನ ಷೇರು ಬಂಡವಾಳಗಳು 95.93 ಕೋಟಿಗೂ ರೂ. ಮೀರಿದೆ. 1235.09 ಕೋಟಿ ರೂ. ಸರ್ಕಾರಿ ಸಾಲ ಪತ್ರ ಮತ್ತು ಇತರೆ ಕಡೆ ತೊಡಗಿಸಿದೆ ಎಂದು ತಿಳಿಸಿದರು.
ಬ್ಯಾಂಕು ಷೇರು ಸಂಗ್ರಹದಲ್ಲಿ, ಸ್ವಂತ ನಿಧಿ ಕ್ರೋಡೀಕರಣದಲ್ಲಿ, ಠೇವಣಿ ಸಂಗ್ರಹದಲ್ಲಿ, ಸಾಲ ನೀಡಿಕೆ ಮತ್ತು ಲಾಭ ಗಳಿಕೆಯಲ್ಲಿ ಕರ್ನಾಟಕ ರಾಜ್ಯದ ಎಲ್ಲ ಪಟ್ಟಣ ಸಹಕಾರ ಬ್ಯಾಂಕುಗಳ ಪೈಕಿ ಅಗ್ರಸ್ಥಾನದಲ್ಲಿದೆ ಎಂದು ಚಂದ್ರಪ್ಪ ಮಾಹಿತಿ ನೀಡಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com