ಮಂಗಳೂರು: ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ 2024-25ನೇ ಸಾಲಿನಲ್ಲಿ 673.52 ಕೋಟಿ. ರೂ. ವ್ಯವಹಾರ ನಡೆಸಿದ್ದು, 5.50 ಕೋಟಿ ರೂ. ಲಾಭ ಗಳಿಸಿದೆ. ವಾರ್ಷಿಕ ವರ್ಷದಲ್ಲಿ ಶೇ.21ರಷ್ಟು ವೃದ್ಧಿಯಾಗಿದೆ ಎಂದು ಸಂಘದ ಅಧ್ಯಕ್ಷ ಎ.ಸುರೇಶ ರೈ ತಿಳಿಸಿದ್ದಾರೆ.
ಸಂಘದ ಅವಲೋಕನ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ಶೇ.22 ಏರಿಕೆ ಕಂಡಿದೆ. 23 ಶಾಖೆಗಳ ಮೂಲಕ 366.55 ಕೋಟಿ ರೂ. ಠೇವಣಿ ಸಂಗ್ರಹಿಸಿ, 306.97 ಕೋಟಿ ರೂ. ಸಾಲ ಮತ್ತು ಮುಂಗಡಗಳೊಂದಿಗೆ, ಪಾಲು ಬಂಡವಾಳ 2.29 ಕೋಟಿ ರೂ, ನಿಧಿಗಳು 15.64 ಕೋಟಿ ರೂ. ಮತ್ತು ದುಡಿಯುವ ಬಂಡವಾಳ 384.50 ಕೋಟಿ ರೂ. ಹೊಂದಿದೆ ಎಂದು ತಿಳಿಸಿದರು.
https://chat.whatsapp.com/EbVKVnWB6rlHT1mWtsgbch
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ಆಶೀರ್ವಾದ, ಸಾಧ್ವಿ ಮಾತಾನಂದಮಯಿ ಅವರ ಮಾರ್ಗದರ್ಶನದೊಂದಿಗೆ 2011ರಲ್ಲಿ ಸಂಘವು ಕಾರ್ಯಾರಂಭ ಮಾಡಿದ್ದು, ಪ್ರಸಕ್ತ ಎಲ್ಲಾ ಶಾಖೆಗಳನ್ನು ಗಣಕೀಕರಣ ಮಾಡಿದ್ದು, ಕೋರ್ ಸಿಸ್ಟಂ ಸಾಫ್ಟ್‌ವೇರ್ ಅಳವಡಿಸಿದೆ. ಪ್ರತಿವರ್ಷವೂ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿ ಪಡೆದಿದೆ ಪಡೆದಿದೆ. ಕಳೆದ ವರ್ಷ ಸದಸ್ಯರಿಗೆ ಶೇ.21 ಡಿವಿಡೆಂಡ್ ನೀಡಿದ್ದು ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಮೂರು ವರ್ಷಗಳಿಂದ ಉತ್ತಮ ಸೌಹಾರ್ದ ಸಹಕಾರ ಸಂಘ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ವತಿಯಿಂದ ಉತ್ತಮ ಸೌಹಾರ್ದ ಪ್ರಶಸ್ತಿಯನ್ನು ಪಡೆದಿದೆ ಎಂದು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 7874 ಒಡಿಯೂರು ವಿಕಾಸವಾಹಿನಿ ಸ್ವ-ಸಹಾಯ ಗುಂಪುಗಳಲ್ಲಿ 64,000ಕ್ಕೂ ಅಧಿಕ ಸದಸ್ಯರಿದ್ದಾರೆ. ಇವರು ಉಳಿತಾಯ ಮಾಡಿ ತಮ್ಮ ಅಗತ್ಯಗಳಿಗೆ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸುತ್ತಿದ್ದಾರೆ. ಸಂಘದ ಆಡಳಿತ ಕಚೇರಿ ಮತ್ತು ಪಂಪ್‌ವೆಲ್ ಶಾಖೆಯು ಮಂಗಳೂರಿನ ಪಂಪ್‌ವೆಲ್ ಲೋಟಸ್ ಗ್ಯಾಲಕ್ಸಿಯಲ್ಲಿ ಹವಾನಿಯಂತ್ರಿತ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾರ್ಯಾಚರಿಸುತ್ತಿದೆ. ಸಂಘದ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ ಎಂದು ಸುರೇಶ್ ರೈ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಲಿಂಗಪ್ಪಗೌಡ ಪನೆಯಡ್ಕ, ನಿರ್ದೇಶಕರಾದ ಲೋಕನಾಥ ಶೆಟ್ಟಿ ಮಂಗಳೂರು, ವೇಣುಗೋಪಾಲ ಮಾರ್ಲ, ಸೇರಾಜೆ ಗಣಪತಿ ಭಟ್, ಸಿಇಒ ದಯಾನಂದ ಶೆಟ್ಟಿ ಬಾಕ್ರಬೈಲ್ ಹಾಗೂ ಹಿರಿಯ ಶಾಖಾಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿ ಕೌಶಲ ತರಬೇತಿ
ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತೆ ಹಾಗೂ ಮಣ್ಣಿನ ಫಲವತ್ತತೆ ಕಾಪಾಡುವಂತೆ ರೈತರಿಗೆ ಅವರ ಜಮೀನಿನ ತೋಟದಲ್ಲಿ ಪಾಠ ಎನ್ನುವ ಶೀರ್ಷಿಕೆಯಲ್ಲಿ ಕೃಷಿ ವಿಜ್ಞಾನಿಗಳಿಂದ ತರಬೇತಿ ನೀಡಲಾಗುತ್ತಿದೆ. ಸಂಘದ ಸಿಬಂದಿಯನ್ನು ಕೃಷಿ ವಿಷಯದಲ್ಲಿ ದೇಸಿ ಕೋರ್ಸ್ ಮೂಲಕ ತರಬೇತುಗೊಳಿಸಲಾಗುತ್ತಿದೆ ಎಂದು ಸುರೇಶ್ ರೈ ತಿಳಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com