ಹಳೆಯಂಗಡಿ: ಸದಸ್ಯರ ಪ್ರೋತ್ಸಾಹ, ಗ್ರಾಹಕರ ಸಹಕಾರ, ಆಡಳಿತ ವರ್ಗದವರ ಮಾರ್ಗದರ್ಶನ ಹಾಗೂ ಸಿಬ್ಬಂದಿಗಳ ಕಾರ್ಯಶ್ರಮತೆಯಿಂದಾಗಿ 2024-25ನೇ ಸಾಲಿನಲ್ಲಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಲಿ. ಹಳೆಯಂಗಡಿ 349.77 ಕೋಟಿ ರೂ. ವ್ಯವಹಾರ ನಡೆಸಿದೆ ಎಂದು ಸೊಸೈಟಿ ಅಧ್ಯಕ್ಷ ಎಚ್.ವಸಂತ ಬೆರ್ನಾಡ್ ಹೇಳಿದ್ದಾರೆ.
https://chat.whatsapp.com/EbVKVnWB6rlHT1mWtsgbch
ಸಂಸ್ಥೆಯ ಅವಲೋಕನ ಸಭೆಯಲ್ಲಿ ಮಾಹಿತಿ ನೀಡಿದ ಅವರು, 2021 ರಲ್ಲಿ ಪ್ರಾರಂಭವಾದ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿಯು ಈಗಾಗಲೇ ಮೂರು ಶಾಖೆಯನ್ನು ಹೊಂದಿದ್ದು, ವರದಿ ಸಾಲಿನಲ್ಲಿ 349.77 ಕೋಟಿ ರೂ. ವ್ಯವಹಾರ ದಾಖಲಿಸಿದೆ. ಕಳೆದ ಸಾಲಿನ ವ್ಯವಹಾರವನ್ನು ತುಲನೆ ಮಾಡಿದರೆ ಶೇ.70.45 ಏರಿಕೆ ದಾಖಲಿಸಿದೆ. ಪ್ರಸ್ತುತ 29.36 ಕೋಟಿ ರೂ. ಠೇವಣಿ, 24.74 ಕೋಟಿ ರೂ. ಸಾಲ ಮತ್ತು ಮುಂಗಡಗಳೊಂದಿಗೆ, ರೂ. 96.44 ಲಕ್ಷ ಪಾಲು ಬಂಡವಾಳ, 57.05 ಲಕ್ಷ ನಿಧಿಗಳು, 30.90 ಕೋಟಿ ದುಡಿಯುವ ಬಂಡವಾಳ ಹೊಂದಿದೆ. 2024-25ನೇ ಸಾಲಿನಲ್ಲಿ ಉತ್ತಮ ಲಾಭಾಂಶ ಗಳಿಸಿದ್ದು, ಸದಸ್ಯರಿಗೆ ಉತ್ತಮ ರೀತಿಯ ಪಾಲು ಮುನಾಫೆಯನ್ನು ಹಂಚುವ ಗುರಿ ಹೊಂದಿದೆ ಎಂದು ತಿಳಿಸಿದ್ದಾರೆ.
ಅವಲೋಕನ ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
ಇಮೇಲ್: sahakaraspandana@gmail.com