Author: admin
12% ಡಿವಿಡೆಂಡ್ ವಿತರಣೆ: ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಘೋಷಣೆ ಮಂಗಳೂರು: ಗುರುಪುರ ಕೈಕಂಬದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಫಲ ಸೌಹಾರ್ದ ಸಹಕಾರಿ ಸಂಘವು 82.85 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ 12% ಡಿವಿಡೆಂಡ್ ವಿತರಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಹೇಳಿದರು. https://chat.whatsapp.com/EbVKVnWB6rlHT1mWtsgbch ಗುರುಪುರ ಕೈಕಂಬದ ಮಾತೃಭೂಮಿ ಗ್ರ್ಯಾಂಡ್ ಗ್ಯಾಲಕ್ಸಿಯಲ್ಲಿ ಭಾನುವಾರ ಜರುಗಿದ ಸಂಘದ ಆರನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘವು ಐದು ವರ್ಷಗಳ ಅವಧಿಯಲ್ಲಿ ಐದು ಶಾಖೆಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿದೆ. ಸಂಘದಲ್ಲಿ 3.08 ಕೋಟಿ ಪಾಲು ಬಂಡವಾಳವಿದ್ದು, 29.42 ಕೋಟಿ ರೂ. ಡೆಪಾಸಿಟ್ ಇದೆ. 26.13 ಕೋಟಿ ರೂ. ಸಾಲ ನೀಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ಆನೇಕಲ್ ಗೋಪಾಲ್ ಮತ್ತು ಪುಷ್ಪಾ ಗೋಪಾಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಸಿಬ್ಬಂದಿಗಳಾದ ಸುಕೇಶ್, ಹರ್ಷಿತಾ, ಹಿತಾಕ್ಷಿ, ನಿಶಾ ಪ್ರಾರ್ಥಿಸಿದರು. ನಿರ್ದೇಶಕರಾದ ಮಹಾಬಲ ಅಡ್ಯಾರ್ ಸ್ವಾಗತಿಸಿದರು. ಸಂಘದ ಸಿಇಒ ಪ್ರಮೋದ್ ವಾರ್ಷಿಕ…
ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ 6.09 ಕೋಟಿ ರೂ. ಲಾಭ: ಶೇ.20 ಡಿವಿಡೆಂಡ್ ಘೋಷಣೆ
ಎಸ್‌ಕೆಜಿಐ ಪ್ರಶಸ್ತಿ ಪ್ರದಾನ, ಪಂಚ ಸಾಧಕರಿಗೆ ಗೌರವಾರ್ಪಣೆ ಮಂಗಳೂರು: ಎಸ್.ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2024-2025ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ನಡೆದಿದ್ದು, ಸೊಸೈಟಿಗೆ 6.09 ಕೋಟಿ ರೂ. ಲಾಭ ಬಂದಿದ್ದು, ಶೇ.20 ಡಿವಿಡೆಂಡ್ ಘೋಷಣೆ ಮಾಡಲಾಯಿತು. https://chat.whatsapp.com/EbVKVnWB6rlHT1mWtsgbch ಉರ್ವಸ್ಟೋರ್‌ನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆಯಲ್ಲಿನಡೆದ ಕಾರ್ಯಕ್ರಮದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ವಾರ್ಷಿಕ ವರದಿ ಮಂಡಿಸಿದರು. ವಜ್ರಮಹೋತ್ಸವ ವರ್ಷಾಚರಣೆ ಪ್ರಯುಕ್ತ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಪಾವತಿಗೆ ಮಂಜೂರಾತಿ ಪಡೆಯಲಾಯಿತು. ಪಂಚ ಕಸುಬುಗಳಲ್ಲಿ ಸಾಧನೆ ಮಾಡಿದ ಐವರು ಶಿಲ್ಪಿಗಳಾದ ಸ್ವರ್ಣ ಶಿಲ್ಪಿ ಎನ್.ರಾಮಚಂದ್ರ ಆಚಾರ್ಯ ಕಾರ್ಕಳ, ಕಾಷ್ಠ ಶಿಲ್ಪಿ ಬಳ್ಕೂರು ಗೋಪಾಲ ಆಚಾರ್ಯ ಮಣಿಪಾಲ, ಅಯಸ್ ಶಿಲ್ಪಿ ಲೀಲಾವತಿ ಆಚಾರ್ಯ ಸುಳ್ಯ, ಎರಕ ಶಿಲ್ಪಿ ಹರೀಶ್ಚಂದ್ರ ಆಚಾರ್ಯ ಬೆಳ್ತಂಗಡಿ, ಶಿಲಾ ಶಿಲ್ಪಿ ಜನಾರ್ಧನ ಆಚಾರ್ಯ ಕಾರ್ಕಳ ಇವರಿಗೆ ಎಸ್.ಕೆ.ಜಿ.ಐ ಪುರಸ್ಕಾರ ಪ್ರದಾನ ಮಾಡಲಾಯಿತು. ಸಂಗೀತ ಕ್ಷೇತ್ರದ ಸಾಧಕ ಯಶವಂತ ಎಸ್.ಟಿ ಮೂಡುಬಿದಿರೆ, ವಾಗ್ಮಿ ಎಸ್.ಆರ್ ದಾಮೋದರ…
ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ತಾರಾನಾಥ ಕಾಯರ್ಗ ಘೋಷಣೆ ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 412.92 ಕೋಟಿ ರೂ. ವ್ಯವಹಾರ ಮಾಡಿದ್ದು, 1.67 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ ಶೇ.14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಹೇಳಿದರು. https://chat.whatsapp.com/EbVKVnWB6rlHT1mWtsgbch ಸಂಘದ ಸಭಾಂಗಣದಲ್ಲಿ ಭಾನುವಾರ ಜರಗಿದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದಸ್ಯರ ಸಹಕಾರದಿಂದ ಸಂಘವು ಸತತವಾಗಿ 23ನೇ ಬಾರಿ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇ.99.25 ಸಾಲವಸೂಲಾತಿ ಸಾಧನೆ ಮಾಡಿದೆ. ವರದಿ ವರ್ಷದಲ್ಲಿ 3,525 ಸದಸ್ಯರಿದ್ದು, ರೂ. 5.72 ಕೋಟಿ ಪಾಲು ಬಂಡವಾಳ ಮತ್ತು ರೂ. 40.34 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ಸದಸ್ಯರಿಗೆ ರೂ. 66.10. ಕೋಟಿ ಸಾಲ ವಿತರಿಸಿ, ವರ್ಷಾಂತ್ಯಕ್ಕೆ ರೂ. 58.07 ಕೋಟಿ ಹೊರಬಾಕಿ ಸಾಲ ಇರುತ್ತದೆ ಎಂದು ತಾರಾನಾಥ ಕಾಯರ್ಗ ತಿಳಿಸಿದರು. ಪ್ರತಿದಿನ ಮಾಸ್ ಸಂಸ್ಥೆಯ ಮೂಲಕ ಸಂಘದಲ್ಲಿ ಅಡಿಕೆ…
ನವದೆಹಲಿ: ಕನಿಷ್ಠ ಸಿಬಿಲ್ ಸ್ಕೋರ್ ಇಲ್ಲ ಎಂಬ ಒಂದೇ ಕಾರಣಕ್ಕೆ ಮೊದಲ ಬಾರಿ ಸಾಲಕ್ಕೆ ಅರ್ಜಿ ಹಾಕಿದವರಿಗೆ ಬ್ಯಾಂಕ್‌ಗಳು ಸಾಲ ನಿರಾಕರಿಸುವಂತಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. https://chat.whatsapp.com/EbVKVnWB6rlHT1mWtsgbch ಸಂಸತ್ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯಲ್ಲಿ ಈ ಬಗ್ಗೆ ಉತ್ತರ ನೀಡಿರುವ ಹಣಕಾಸು ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ, ‘ಹೊಸ ಸಾಲಗಾರರ ಅರ್ಜಿಗಳನ್ನು ಹಿಂದಿನ ಸಾಲದ ಇತಿಹಾಸವಿಲ್ಲ ಎಂಬ ಕಾರಣಕ್ಕೆ ತಿರಸ್ಕರಿಸುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ಮಾಹಿತಿ ನೀಡಿದರು. ಮೊದಲ ಬಾರಿ ಸಾಲ ಪಡೆಯುವವರಿಗೆ ಸಿಬಿಲ್ ಸ್ಕೋರ್ ಇಂತಿಷ್ಟೇ ಇರಬೇಕು ಎಂದು ಆರ್‌ಬಿಐ ನಿಗದಿಪಡಿಸಿಲ್ಲ. ಸಾಲ ನೀಡುವ ಹಣಕಾಸು ಸಂಸ್ಥೆಗಳು ಅನುಮೋದಿತ ನೀತಿಗಳು ಮತ್ತು ಮಾರ್ಗಸೂಚಿಗಳ ಆಧಾರದ ಮೇಲೆ ತಮ್ಮ ನಿರ್ಧಾರ ತೆಗೆದುಕೊಳ್ಳುತ್ತವೆ. ಕ್ರೆಡಿಟ್ ಮಾಹಿತಿ ವರದಿಯು ಹಲವಾರು ಅಂಶಗಳಲ್ಲಿ ಒಂದು ಅಂಶ ಮಾತ್ರ ಎಂದು ಚೌಧರಿ ತಿಳಿಸಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ:…
ನಿರಂತರ “ಎ” ಗ್ರೇಡ್ ಮಾನ್ಯತೆ, 1.70 ಕೋಟಿ ರೂ.ಗಳ ನಿವ್ವಳ ಲಾಭ ಮಂಗಳೂರು: ನಗರದ ಪ್ರತಿಷ್ಠಿತ, ಗ್ರಾಹಕ ಸ್ನೇಹಿ ಸೊಸೈಟಿ ಎಂದೇ ಜನಾನುರಾಗಿಯಾಗಿರುವ ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ 2024-25ನೇ ಆರ್ಥಿಕ ವರ್ಷದ ಸರ್ವಸದಸ್ಯರ ಮಹಾಸಭೆ ಭಾನುವಾರ ಶ್ರೀನಿವಾಸ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಸದಸ್ಯರಿಗೆ ಶೇ.25 ಡಿವಿಡೆಂಡ್ ಘೋಷಿಸಲಾಯಿತು. https://chat.whatsapp.com/EbVKVnWB6rlHT1mWtsgbch ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷರಾದ ಎಂ.ಎಸ್.ಗುರುರಾಜ್, ಕಳೆದ ವರ್ಷದ ವರದಿ ಮಂಡಿಸುತ್ತ, ಶ್ರೀಶಾ ಸೌಹಾರ್ದ ಸೊಸೈಟಿಯು ತನ್ನ ವಸ್ತುನಿಷ್ಠ ಮತ್ತು ವೃತ್ತಿಪರತೆ ಆಡಳಿತದ ಮೂಲಕ ವರ್ಷದಿಂದ ವರ್ಷಕ್ಕೆ ಉತ್ತರೋತ್ತರ ಅಭಿವೃದ್ಧಿ ಕಾಣುತ್ತಿದೆ. 2024 -25ನೇ ಸಾಲಿನಲ್ಲಿ 1.70 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿ ದಾಖಲೆ ನಿರ್ಮಿಸಿ ಸದಸ್ಯರಿಗೆ ಈ ವರ್ಷವೂ ಶೇಕಡಾ.25 ಡಿವಿಡೆಂಡ್ ನೀಡಿದೆ. ಸಾಲ ವಸೂಲಾತಿಯು 98.3% ಇದ್ದು, ಇದು ಹೆಚ್ಚಿನ ಲಾಭ ಗಳಿಕೆಯಲ್ಲಿ ಮುಖ್ಯ ಪಾತ್ರ ವಹಿಸಿದೆ. ಠೇವಣಿ ಸಂಗ್ರಹದಲ್ಲಿ 25% ಹೆಚ್ಚಳದೊಂದಿಗೆ 41 ಕೋಟಿಗೆ ತಲುಪಿದೆ. ಸಾಲ ನೀಡಿಕೆಯಲ್ಲಿ 23% ಹೆಚ್ಚಳದೊಂದಿಗೆ 32…
ತುಮಕೂರು: ಕೆಂಗಲ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ. ತುಮಕೂರು ಇದರ 9ನೇ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಹೊಯ್ಸಳ ಕಾನ್ಫರೆನ್ಸ್ ಹೋಟೆಲ್, ತುಮಕೂರು ಇಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಹಕಾರಿಯ ಅಧ್ಯಕ್ಷರಾದ ಕೆ.ಸಿ.ರಾಮಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. 2024-2025ನೇ ಸಾಲಿನಲ್ಲಿ ಸಹಕಾರಿಯು 27,50,000 ರೂ. ಲಾಭ ಗಳಿಸಿದ್ದು ಶೇಕಡಾ 12 ಡಿವಿಡೆಂಡ್ ಘೋಷಣೆ ಮಾಡಲಾಯಿತು. ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶಿವಸ್ವಾಮಿ ಜಿ.ಕೆ, ನಿರ್ದೇಶಕರಾದ ರಂಗೇಗೌಡ ಬಿ.ಟಿ., ಮುನಿಸ್ವಾಮಿಗೌಡ ಡಿ.ಟಿ., ನರಸಿಂಹ ಮೂರ್ತಿ ಡಿ., ಬಾಲರಾಜ್ ಟಿ.ಆರ್., ಗೋಪಾಲ ರೆಡ್ಡಿ ವೈ.ವಿ., ಜವರಯ್ಯ ಕೆ.ಟಿ., ಸುಮಿತ್ರಾ ಎಲ್.ಸಿ., ಕಮಲಾ ಕೆ., ವಿಶೇಷ ಆಹ್ವಾನಿತರಾದ ರಾಮಚಂದ್ರ ಟಿ.ಎಂ., ಶಂಕರಯ್ಯ ಜಿ.ಎಂ., ಗೋವಿಂದಯ್ಯ ಎಂ., ಕಾನೂನು ಸಲಹೆಗಾರರಾದ ಮಲ್ಲಿಕಾರ್ಜುನಯ್ಯ ಎಸ್.ಕೆ, ಆಸ್ತಿ ಮೌಲ್ಯಮಾಪಕ ರಾಧಾಕೃಷ್ಣ ರೆಡ್ಡಿ ಜಿ., ಲೆಕ್ಕಪರಿಶೋಧಕರಾದ ಮಂಜುನಾಥ ಗೌಡ, ಲೆಕ್ಕಿಗ ಚಿಕ್ಕಣ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ರಂಗಪ್ಪ ಭಾಗವಹಿಸಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ…
ರಾಜ್ಯದ ಸೌಹಾರ್ದ ಸಹಕಾರಿ ಕಾಯ್ದೆ ಮತ್ತು ಸೌಹಾರ್ದ ಚಳವಳಿಯ ರಜತ ಮಹೋತ್ಸವ ಆಚರಣೆ ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ 24ನೇ ವಾರ್ಷಿಕ ಮಹಾಸಭೆ ಹಾಗೂ ರಾಜ್ಯದ ಸೌಹಾರ್ದ ಸಹಕಾರಿ ಕಾಯ್ದೆ ಮತ್ತು ಸೌಹಾರ್ದ ಚಳವಳಿಯ ರಜತ ಮಹೋತ್ಸವ ಆಚರಣೆಯ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಆವರಣ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಉದ್ಘಾಟನಾ ಸಮಾರಂಭದಲ್ಲಿ ಸಂಗ್ರಹ ಮತ್ತು ಅಧ್ಯಯನಯೋಗ್ಯ ಸ್ಮರಣ ಸಂಚಿಕೆಯನ್ನು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಸಚಿವ ಪ್ರಲ್ಹಾದ್ ಜೋಶಿ ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಜಿ.ನಂಜನಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ.ಸುಧಾಕರ, ಶಾಸಕರಾದ ಬಿ.ಆರ್.ಪಾಟೀಲ್, ಸುನೀಲ್ ಪಾಟೀಲ್, ಯಶಪಾಲ್ ಸುವರ್ಣ, ಆರಗ ಜ್ಞಾನೇಂದ್ರ, ನಾಡೋಜ ಜಗದೀಶ್ ಗುಡಗುಂಟಿ, ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಸ್.ಬಿ.ಶೆಟ್ಟಣ್ಣವರ ಮೊದಲಾದವರು ಭಾಗವಹಿಸಿದ್ದರು. ರಾಜ್ಯದ ಸೌಹಾರ್ದ…
ಮಂಗಳೂರು: ನಿವೃತ್ತ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ನಿಯಮಿತ ಇದರ ಆರನೇ ಮಹಾಸಭೆ ಭಾನುವಾರ ಮಂಗಳೂರಿನ ಲಯನ್ಸ್ ಸೇವಾ ಮಂದಿರದಲ್ಲಿ ಜರಗಿತು. https://chat.whatsapp.com/EbVKVnWB6rlHT1mWtsgbch ಈ ಸಭೆಯಲ್ಲಿ 2024-2025ನೇ ಸಾಲಿನ ಶೇ.12 ಲಾಭಾಂಶ ಘೋಷಣೆ ಮಾಡಲಾಯಿತು. ಸಂಘದ ಅಧ್ಯಕ್ಷರಾದ ರವೀಂದ್ರನಾಥ ಶೆಟ್ಟಿ, ಉಪಾಧ್ಯಕ್ಷರಾದ ದಿನಕರ ಪೂಂಜಾ, ನಿರ್ದೇಶಕರಾದ ಕೆ.ಟಿ ರೈ, ಉದಯ ಕುಮಾರ, ಟಿ.ವಿ ರೈ, ನರೇಂದ್ರನಾಥ ಕಾಮತ್, ಶಾಲಿನಿ ಶೆಟ್ಟಿ, ಶಾಮಸುಂದರರಾವ್, ಜೆ.ವಿ ಶೆಟ್ಟಿ, ಶೋಭಾ ರಾವ್, ಸದಾಶಿವ ವಿ.ಎಸ್ ಮತ್ತು ದಿನಕರ ರೈ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ ರಾವ್ ಸಿ ಕಾರ್ಯಕ್ರಮ ನಿರ್ವಹಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ತುಮಕೂರು: ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಎನ್ ರಾಜಣ್ಣ ಬೆಂಬಲಿಗರು ಭರ್ಜರಿ ಜಯಭೇರಿ ದಾಖಲಿಸಿದ್ದಾರೆ. ಎಲ್ಲ 14 ಸ್ಥಾನದಲ್ಲೂ ಕೆ.ಎನ್.ರಾಜಣ್ಣ ಬೆಂಬಲಿಗರು ಆಯ್ಕೆಯಾಗುವ ಮೂಲಕ ಏಳನೇ ಬಾರಿ ತುಮಕೂರು ಡಿಸಿಸಿ ಬ್ಯಾಂಕ್‌ನಲ್ಲಿ ರಾಜಣ್ಣ ಹಿಡಿತ ಸಾಧಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಎಂಟು ನಿರ್ದೇಶಕರ ಅವಿರೋಧ ಆಯ್ಕೆ ನಡೆದಿದ್ದು ಆರು ಸ್ಥಾನಗಳಿಗೆ ಮತದಾನ ನಡೆಯಿತು. 14 ನಿರ್ದೇಶಕರ ಸ್ಥಾನಗಳ ಪೈಕಿ ಎ ಕೆಟಗರಿಯ ನಾಲ್ವರು, ಬಿ, ಸಿ, ಡಿ ಹಾಗೂ ಡಿ1 ಕೆಟಗರಿಯ ತಲಾ ಓರ್ವ ನಿರ್ದೇಶಕ ಸ್ಥಾನ ಸೇರಿ ಒಟ್ಟು ಎಂಟು ನಿರ್ದೇಶಕರ ಅವಿರೋಧ ಆಯ್ಕೆಯಾಗಿತ್ತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎ ಕೆಟಗರಿಯ ಕುಣಿಗಲ್, ತಿಪಟೂರು, ಪಾವಗಡ, ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ಸಿರಾ ತಾಲೂಕುಗಳ ತಲಾ ಒಂದು…
ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಬೆಳ್ತಂಗಡಿ ಶ್ರೀ ಗುರುಸಾನಿಧ್ಯ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಭಗೀರಥ ಜಿ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ಆರ್ಥಿಕ ವರ್ಷದಲ್ಲಿ ರೂ.4,84,15,079 ನಿವ್ವಳ ಲಾಭ ಗಳಿಸಿದೆ. https://chat.whatsapp.com/EbVKVnWB6rlHT1mWtsgbch ಸಂಘದ ನಿರ್ದೇಶಕ ಗಂಗಾಧರ ಮಿತ್ತಮಾರು ಸ್ವಾಗತಿಸಿದರು. ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಸ್ತಾವನೆಯೊಂದಿಗೆ ಮಹಾ ಸಭೆಯ ಕಾರ್ಯಕಲಾಪ ನಡೆಸಿದರು. ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ನಿರ್ದೇಶಕರಾದ ಸುಜಿತಾ ವಿ.ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ. ದಿವಾಕರ್, ಚಂದ್ರಶೇಖರ್, ಧರ್ಣಪ್ಪ ಪೂಜಾರಿ, ಧರಣೇ0ದ್ರ ಕುಮಾರ್, ಆನಂದ ಪೂಜಾರಿ ಕೆ., ಡಾ. ರಾಜಾರಾಮ್ ಕೆ.ಬಿ, ಜಯವಿಕ್ರಮ್ ಪಿ., ಚಿದಾನಂದ ಎಲ್ದಕ್ಕ, ರಕ್ಷಿತ್ ಶಿವರಾಮ್, ಸೂರಜ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು. ಗೌರವ ಪುರಸ್ಕಾರ: ಸಮಾರಂಭದಲ್ಲಿ ವೆನ್ ಲಾಕ್ ಆಸ್ಪತ್ರೆಯ ವೈದ್ಯ ಡಾ.ಸದಾನಂದ ಪೂಜಾರಿ, ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತ ಲೋಕಾಯುಕ್ತ ಪೊಲೀಸ್ ಇನ್ ಸ್ಪೆಕ್ಟರ್ ಪ್ರದೀಪ್ ಪೂಜಾರಿ ಇವರಿಗೆ ಗೌರವ…
