ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಬೆಳ್ತಂಗಡಿ ಶ್ರೀ ಗುರುಸಾನಿಧ್ಯ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಭಗೀರಥ ಜಿ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು ಆರ್ಥಿಕ ವರ್ಷದಲ್ಲಿ ರೂ.4,84,15,079 ನಿವ್ವಳ ಲಾಭ ಗಳಿಸಿದೆ.
https://chat.whatsapp.com/EbVKVnWB6rlHT1mWtsgbch
ಸಂಘದ ನಿರ್ದೇಶಕ ಗಂಗಾಧರ ಮಿತ್ತಮಾರು ಸ್ವಾಗತಿಸಿದರು. ವಿಶೇಷಾಧಿಕಾರಿ ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಸ್ತಾವನೆಯೊಂದಿಗೆ ಮಹಾ ಸಭೆಯ ಕಾರ್ಯಕಲಾಪ ನಡೆಸಿದರು. ಸಂಘದ ಉಪಾಧ್ಯಕ್ಷ ಜಗದೀಶ್ಚಂದ್ರ ಡಿ.ಕೆ., ನಿರ್ದೇಶಕರಾದ ಸುಜಿತಾ ವಿ.ಬಂಗೇರ, ತನುಜಾ ಶೇಖರ್, ಸಂಜೀವ ಪೂಜಾರಿ, ಕೆ.ಪಿ. ದಿವಾಕರ್, ಚಂದ್ರಶೇಖರ್, ಧರ್ಣಪ್ಪ ಪೂಜಾರಿ, ಧರಣೇ0ದ್ರ ಕುಮಾರ್, ಆನಂದ ಪೂಜಾರಿ ಕೆ., ಡಾ. ರಾಜಾರಾಮ್ ಕೆ.ಬಿ, ಜಯವಿಕ್ರಮ್ ಪಿ., ಚಿದಾನಂದ ಎಲ್ದಕ್ಕ, ರಕ್ಷಿತ್ ಶಿವರಾಮ್, ಸೂರಜ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್ ಕುಮಾರ್ ಉಪಸ್ಥಿತರಿದ್ದರು.


ಗೌರವ ಪುರಸ್ಕಾರ: ಸಮಾರಂಭದಲ್ಲಿ ವೆನ್ ಲಾಕ್ ಆಸ್ಪತ್ರೆಯ ವೈದ್ಯ ಡಾ.ಸದಾನಂದ ಪೂಜಾರಿ, ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತ ಲೋಕಾಯುಕ್ತ ಪೊಲೀಸ್ ಇನ್ ಸ್ಪೆಕ್ಟರ್ ಪ್ರದೀಪ್ ಪೂಜಾರಿ ಇವರಿಗೆ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಧ್ಯಕ್ಷರು, ನಿರ್ದೇಶಕರುಗಳ ಸಭಾ ಭತ್ಯೆಯನ್ನು ವೈದ್ಯಕೀಯ ನೆರವು, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ವಿತರಿಸಿದರು.
ಶಾಖಾವಾರು ಸಾಧನೆಗೈದ ಬೆಳ್ತಂಗಡಿ ಶಾಖೆ, ಸಿಬ್ಬಂದಿಗಳನ್ನು, ಅತೀ ಹೆಚ್ಚು ಠೇವಣಿ ಸಂಗ್ರಹ ಮಾಡಿದ ಪಡೀಲು, ಹೆಚ್ಚು ಲಾಭ ಗಳಿಸಿದ ಪುರುಷರಕಟ್ಟೆ, ಹೆಚ್ಚು ಲಾಭ ಗಳಿಸಿದ ಕಡಬ ಶಾಖೆ, ಹೆಚ್ಚು ಚಿನ್ನಾಭರಣ ಸಾಲ ನೀಡಿ ಹಳೆಯಂಗಡಿ ಶಾಖೆ, ಉಪ್ಪಿನಂಗಡಿ ಶಾಖೆ, ಕಡಿಮೆ ಖರ್ಚು ಮಾಡಿದ ಕಲ್ಲಡ್ಕ, ಶೀಘ್ರ ಬೆಳೆದ ಕುಂಬ್ರ ಹೊಸ ಶಾಖೆಯ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಅತೀ ಹೆಚ್ಚು ಠೇವಣಿ ಸಂಗ್ರಹ ಮಾಡಿದ ಶಶಿಧರ ಪೂಜಾರಿ,ನಾರಾಯಣ ಭಟ್ ಇವರನ್ನು ಸನ್ಮಾನಿಸಲಾಯಿತು ಸಿಇಒ ಅಶ್ವಥ್ ಕುಮಾರ್ ಸನ್ಮಾನಿತರ ವಿವರ ನೀಡಿದರು. ಗಾನ ಸುರಭಿ ರವಿಚಂದ್ರ ಕನ್ನಡಿಕಟ್ಟೆ ಸಾರತ್ಯದಲ್ಲಿ ಯಕ್ಷಗಾನ ಗಾನ ಹಾಸ್ಯ ಜರಗಿತು. ನಿರ್ದೇಶಕ ಡಾ. ರಾಜಾರಾಮ್ ಕೆ.ಬಿ. ವಂದಿಸಿದರು.

