Close Menu
    Top News

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ 24ನೇ ವಾರ್ಷಿಕ ಮಹಾಸಭೆ
    News

    ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ 24ನೇ ವಾರ್ಷಿಕ ಮಹಾಸಭೆ

    adminBy adminAugust 25, 2025

    ರಾಜ್ಯದ ಸೌಹಾರ್ದ ಸಹಕಾರಿ ಕಾಯ್ದೆ ಮತ್ತು ಸೌಹಾರ್ದ ಚಳವಳಿಯ ರಜತ ಮಹೋತ್ಸವ ಆಚರಣೆ

    ಬೆಂಗಳೂರು: ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿ. ಬೆಂಗಳೂರು ಇದರ 24ನೇ ವಾರ್ಷಿಕ ಮಹಾಸಭೆ ಹಾಗೂ ರಾಜ್ಯದ ಸೌಹಾರ್ದ ಸಹಕಾರಿ ಕಾಯ್ದೆ ಮತ್ತು ಸೌಹಾರ್ದ ಚಳವಳಿಯ ರಜತ ಮಹೋತ್ಸವ ಆಚರಣೆಯ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಆವರಣ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯಿತು.

    https://chat.whatsapp.com/EbVKVnWB6rlHT1mWtsgbch
    ಉದ್ಘಾಟನಾ ಸಮಾರಂಭದಲ್ಲಿ ಸಂಗ್ರಹ ಮತ್ತು ಅಧ್ಯಯನಯೋಗ್ಯ ಸ್ಮರಣ ಸಂಚಿಕೆಯನ್ನು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಸಚಿವ ಪ್ರಲ್ಹಾದ್‌ ಜೋಶಿ ಬಿಡುಗಡೆ ಮಾಡಿದರು. ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷರಾದ ಜಿ.ನಂಜನಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಡಿ.ಸುಧಾಕರ, ಶಾಸಕರಾದ ಬಿ.ಆರ್.ಪಾಟೀಲ್, ಸುನೀಲ್ ಪಾಟೀಲ್, ಯಶಪಾಲ್‌ ಸುವರ್ಣ, ಆರಗ ಜ್ಞಾನೇಂದ್ರ, ನಾಡೋಜ ಜಗದೀಶ್ ಗುಡಗುಂಟಿ, ಸಹಕಾರ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಎಸ್.ಬಿ.ಶೆಟ್ಟಣ್ಣವರ ಮೊದಲಾದವರು ಭಾಗವಹಿಸಿದ್ದರು.
    ರಾಜ್ಯದ ಸೌಹಾರ್ದ ಸಹಕಾರಿ ಕ್ಷೇತ್ರದ ಐದು ಶ್ರೇಷ್ಠ ಸಹಕಾರಿಗಳನ್ನು, ಐದು ಉತ್ತಮ ಸೌಹಾರ್ದ ಸಹಕಾರಿ ಸಂಸ್ಥೆಗಳನ್ನ, ಪ್ರತಿಷ್ಠಿತ ಸಹಕಾರ ರತ್ನ ಪುರಸ್ಕೃತ ಸೌಹಾರ್ದ ಕ್ಷೇತ್ರದ ಸಹಕಾರಿಗಳನ್ನು ಸನ್ಮಾನಿಸಲಾಯಿತು. ಹಿರಿಯ ಸಹಕಾರಿ ಅಧಿಕಾರಿ ಸಿ.ಎನ್ ಪರಮಶಿವಮೂರ್ತಿಯವರ ಲೇಖನಗಳ ಸಂಗ್ರಹ ‘ಸಹಕಾರ ಸುಗಂಧ’, ‘ರಾಷ್ಟ್ರೀಯ ಸಹಕಾರ ನೀತಿʼ ಪುಸ್ತಕ ಹಾಗೂ ಸೌಹಾರ್ದ ಸಹಕಾರಿಯ ‘ಕಿರುಹೊತ್ತಿಗೆ’ಯನ್ನು ಬಿಡುಗಡೆ ಮಾಡಲಾಯಿತು.


    ಕರ್ನಾಟಕ ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ 01/01/2001ರಿಂದ ಜಾರಿಗೆ ಬಂದಿದೆ. ಅಂದಿನಿಂದ ಇಲ್ಲಿಯವರೆಗೂ ರಾಜ್ಯದಲ್ಲಿ 6500ಕ್ಕೂ ಹೆಚ್ಚು ಸೌಹಾರ್ದ ಸಹಕಾರಿಗಳು ನೋಂದಣಿಯಾಗಿ ಕಾರ್ಯನಿರ್ವಹಿಸುತ್ತಿವೆ. 1,704 ಇ-ಸ್ಟಾಂಪ್ ಕೇಂದ್ರಗಳನ್ನು ಹೊಂದಿದ್ದು 1,630 ಕೋಟಿ ರೂ. ಶೇರು ಬಂಡವಾಳ, 3,992 ಕೋಟಿ ರೂ. ಕಾಯ್ದಿಟ್ಟ ನಿಧಿ, 51,064 ಕೋಟಿ ರೂ. ದುಡಿಯುವ ಬಂಡವಾಳ, 44,793 ಕೋಟಿ ರೂ. ಠೇವಣಿಗಳು ಇದ್ದು, 35,747 ಕೋಟಿ ರೂ. ಸಾಲ ನೀಡಿದೆ. 735 ಕೋಟಿ ರೂ. ಲಾಭ ಗಳಿಸಿದೆ. 75 ಲಕ್ಷ, ಸದಸ್ಯರು 7,50,000ಕ್ಕೂ ಹೆಚ್ಚು ಉದ್ಯೋಗ ಕಲ್ಪಿಸಿದೆ.


    ಸೌಹಾರ್ದ ಸಹಕಾರಿ ಕ್ಷೇತ್ರದಲ್ಲಿ ಇ-ಸ್ಟಾಂಪಿಂಗ್, ಸೌಹಾರ್ದ ಸಹಕಾರಿಳ ದಾವಾ ಪಂಚಾಯಿತಿ ನ್ಯಾಯಾಲಯ, ಸಹಕಾರ ಹಾಗೂ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್‌ ಡಿಪ್ಲೋಮಾ, ಜಿಲ್ಲಾ ಸಂಪರ್ಕ ಕಛೇರಿಗಳು, ಪ್ರಾಂತೀಯ ಕಛೇರಿಯ ಸ್ವಂತ ಕಟ್ಟಡಗಳು, ಕಾಮನ್ ಸರ್ವೀಸ್ ಸೆಂಟರ್‌ಗಳು, ವಾರ್ಷಿಕ ಸಾಮಾನ್ಯ ಸಭೆಯ ಸಂಭ್ರಮ, ರಾಜ್ಯ, ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ವಿಚಾರಗೋಷ್ಠಿಗಳು, ಸಮಾವೇಶಗಳಲ್ಲಿ ಭಾಗವಹಿಸುವಿಕೆ, ಸಹಕಾರ ಸಪ್ತಾಹದ ನೇತೃತ್ವ ವಹಿಸಿಕೊಳ್ಳುವುದು, ಸಂಶೋಧನಾ ವಿದ್ಯಾರ್ಥಿಗಳಿಗೆ ಅಧ್ಯಯನ ವಿಷಯ, ವ್ಯಕ್ತಿತ್ವ ವಿಕಸನ ತರಬೇತಿ, ತರಬೇತಿ ಕಾರ್ಯಕ್ರಮಗಳು, ಬೇಸಿಕ್ ಬ್ಯಾಂಕಿಂಗ್ ಸರ್ಟಿಫಿಕೇಟ್ ಕೋರ್ಸ್, ಐ.ಸಿ.ಎ ಮತ್ತು ಐಎಸ್ಎಸ್‌ಸಿ ಸಂಶೋಧನಾ ಸಮ್ಮೇಳನಗಳಲ್ಲಿ ಭಾಗವಹಿಸುವುದು, ವಿಷಯ ಮಂಡನೆ ನಿರ್ವಹಿಸುವುದು, ಮೈಸೂರು ಹಾಗೂ ಚಾಣಕ್ಯ ವಿಶ್ವವಿದ್ಯಾಲಯಗಳು ಈ ಕ್ಷೇತ್ರದ ಕಾರ್ಯಚುವಟಿಕೆಗಳನ್ನು ಅಧ್ಯಯನ ಮಾಡಿರುವುದು, ವಾರ್ಷಿಕ ಸಂಪರ್ಕ ಸಭೆಗಳು, ಮುಖ್ಯಕಾರ್ಯನಿರ್ವಾಹಕರ ವಾರ್ಷಿಕ ಸಭೆಗಳು, ಸಂಯುಕ್ತ ಸಹಕಾರಿಗೆ ಗಣ್ಯರ ಭೇಟಿ, ಸ್ವಾಭಿಮಾನಿ ಸಹಕಾರಿ ಮಾಸಪತ್ರಿಕೆ ಹಾಗೂ ಡಿಜಿಟಲ್ ಸ್ವಾಭಿಮಾನಿ ಸಹಕಾರಿ ಮಾಸಪತ್ರಿಕೆ, ಯೂಟ್ಯೂಬ್ ಮೂಲಕ ಅಧ್ಯಯನ ಸಾಹಿತ್ಯ ಹಾಗೂ ಉಪನ್ಯಾಸಗಳನ್ನು ಬಿತ್ತರಿಸುವುದು, ಸೌಹಾರ್ದ ಸಹಕಾರಿ ದಿನಾಚರಣೆ, ಯುವಕರ ಹಾಗೂ ಸಹಕಾರ ಯುವ ಸಂವಾದ ಕಾರ್ಯಕ್ರಮಗಳು, ಮಹಿಳಾ ಸಬಲೀಕರಣಕ್ಕೆ ಆದ್ಯತೆ. ಆಧುನಿಕ ತಂತ್ರಜ್ಞಾನ ಅಳವಡಿಸುವಿಕೆ ಈ ಸಾಧನೆಗಳ ಕಿರೀಟ ಸಂಯುಕ್ತ ಸಹಕಾರಿಯಾಗಿದೆ.
    ರಾಜ್ಯದ ಸೌಹಾರ್ದ ಸಹಕಾರಿ ಚಳುವಳಿ ಈ ದೇಶದ ರಾಜ್ಯದ ಸಹಕಾರಿಗಳ ಗಮನವನ್ನು ಸೆಳೆದಿದೆ. ಈ ಸೌಹಾರ್ದ ಸಹಕಾರಿಗಳನ್ನು ಸೌಹಾರ್ದ ಕಾಯ್ದೆಯಡಿ ಪ್ರಾರಂಭವಾಗಿರುವ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನೇತೃತ್ವ ವಹಿಸಿ ಸೌಹಾರ್ದ ಸಹಕಾರಿಗಳಿಗೆ ಅಗತ್ಯವಾಗಿರುವ ಶಿಕ್ಷಣ, ತರಬೇತಿ, ಪ್ರಚಾರ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದೆ. ಸೌಹಾರ್ದ ಸಹಕಾರಿ ಕಾಯ್ದೆಯಲ್ಲಿ ರಚಿತವಾಗಿರುವ ಈ ಸಂಯುಕ್ತ ಸಹಕಾರಿಗೆ ಶಾಸನಬದ್ಧ ಕಾರ್ಯಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿರುವುದು ವಿಶೇಷ.

    G. Nanjana Gowda Karnataka Rajya Samyukta Souharda Sahakari Karnataka Rajya Samyukta Souharda Sahakari 24th GB Souharda Sahakari Spandana Spandana NEws
    Previous Articleನಿವೃತ್ತ ಬ್ಯಾಂಕ್ ನೌಕರರ ಹಾಗೂ ಅಧಿಕಾರಿಗಳ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಶೇ.12 ಲಾಭಾಂಶ
    Next Article ಕೆಂಗಲ್‌ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಶೇ.12 ಡಿವಿಡೆಂಡ್

    Related Posts

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ

    March 6, 2026

    ಅತಿ ಹೆಚ್ಚು ಬಜೆಟ್‌ ಮಂಡನೆಯ ದಾಖಲೆ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ದ್ವಿತೀಯ ಸ್ಥಾನ

    March 6, 2026

    ಸಹಕಾರಿ ಕ್ರೀಡೋತ್ಸವದಲ್ಲಿ ದಕ್ಷಿಣ ಕನ್ನಡ -ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್‌ ಸಮಗ್ರ ಚಾಂಪಿಯನ್‌

    March 6, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.