Author: admin
ಉಡುಪಿ ಕ್ಯಾಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಸಾಧನಾ ಪುರಸ್ಕಾರ ಪ್ರಧಾನ
ಉಡುಪಿ: ಇಲ್ಲಿನ ಉಡುಪಿ ಕ್ಯಾಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಶನಿವಾರ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮಹಾಸಭೆಯಲ್ಲಿ ಸಾಧನಾ ಪುರಸ್ಕಾರ ಪ್ರದಾನ ಮಾಡಲಾಯಿತು. https://chat.whatsapp.com/EbVKVnWB6rlHT1mWtsgbch ಸೊಸೈಟಿಯ ಅಧ್ಯಕ್ಷರಾದ ಲೂಯಿಸ್ ಲೋಬೊ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ್ ಫೆರ್ನಾಂಡಿಸ್ ಅವರು, ಸಹಕಾರ ರತ್ನ ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಸೊಸೈಟಿಯ ಉಪಾಧ್ಯಕ್ಷರಾದ ಜೇಮ್ಸ್ ಡಿಸೋಜ, ನಿರ್ದೇಶಕರಾದ ಮ್ಯಾಕ್ಸಿಮ್ ಆರ್ ಡಿಸೋಜ, ಒನಿಲ್ ಡಿಸೋಜ, ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ರಾಜಾರಾಮ ಭಟ್, ಭಾಸ್ಕರ್ ಕೋಟ್ಯಾನ್, ಸಹಕಾರ ಸಂಘಗಳ ದ.ಕ ಜಿಲ್ಲಾ ಉಪನಿಬಂಧಕ ಎಚ್. ಎನ್ ರಮೇಶ್, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮೊದಲಾದವರು ಉಪಸ್ಥಿತರಿದ್ದರು. 1997ರಲ್ಲಿ ಸ್ಥಾಪನೆಯಾದ ಉಡುಪಿ ಕ್ಯಾಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2025ರ ಮಾರ್ಚ್ 31ಕ್ಕೆ ಕೊನೆಗೊಂಡ ಲೆಕ್ಕಾಚಾರ ಪ್ರಕಾರ 50 ಕೋಟಿ ಠೇವಣಿ ಹೊಂದಿದ್ದು, 42 ಕೋಟಿ…
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ “ಸಾಧನಾ ಪ್ರಶಸ್ತಿ”
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 2024-25ನೇ ಸಾಲಿನ ವ್ಯವಹಾರದಲ್ಲಿ ಸಾಧಿಸಿದ ಸರ್ವತೋಮುಖ ಪ್ರಗತಿಯನ್ನು ಗುರುತಿಸಿ ಶನಿವಾರ “ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಸಕ್ತ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಡಾ| ಎಂ.ಎನ್. ರಾಜೇಂದ್ರ ಕುಮಾರ್ ರವರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. https://chat.whatsapp.com/EbVKVnWB6rlHT1mWtsgbch ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 2012ರಲ್ಲಿ ಪ್ರಾರಂಭವಾಗಿ ದಶಮಾನೋತ್ಸವಕ್ಕೆ ಮಂಗಳೂರಿನ ಪಡೀಲ್‌ನಲ್ಲಿ ಸ್ವಂತ ಪ್ರಧಾನ ಕಛೇರಿಯನ್ನು ಹೊಂದಿರುತ್ತದೆ. ಪ್ರಸ್ತುತ ದ.ಕ ಹಾಗೂ ಉಡುಪಿ ಜಿಲ್ಲೆಯಾದ್ಯಂತ 33 ಶಾಖೆಗಳನ್ನು ಹೊಂದಿರುವ ಸಂಘವು, 2024-25ನೇ ಸಾಲಿನಲ್ಲಿ ದುಡಿಯುವ ಬಂಡವಾಳ ರೂ. 25,749.48 ಲಕ್ಷ ಹೊಂದಿದ್ದು, ರೂ.3.06 ಕೋಟಿಗೂ ಮಿಕ್ಕಿ ಲಾಭ ಗಳಿಸಿದೆ. ಪ್ರಶಸ್ತಿ ವಿತರಣೆ…
ವಿಟ್ಲ : ಅಧ್ಯಾಪಕರ ಸಹಕಾರಿ ಸಂಘ ನಿ. ವಿಟ್ಲ 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ಮಾಡಿದ ವಿಶಿಷ್ಟ ಸಾಧನೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ 4ನೇ ಬಾರಿ ಸಾಧನಾ ಪ್ರಶಸ್ತಿಗೆ ಆಯ್ಕೆಯಾಗಿದೆ. https://chat.whatsapp.com/EbVKVnWB6rlHT1mWtsgbch ಒಟ್ಟು 9 ಶಾಖೆಗಳನ್ನು ಹೊಂದಿರುವ ಅಧ್ಯಾಪಕರ ಸಹಕಾರಿ ಸಂಘವು ವಿಟ್ಲ, ಬಿ.ಸಿ.ರೋಡ್, ಪುತ್ತೂರು, ಬೆಳ್ತಂಗಡಿ, ಮೂಡಬಿದ್ರೆ, ಸುಳ್ಯ ಮೂಲ್ಕಿ, ಕಡಬ ಹಾಗೂ ಮಂಗಳೂರು ಇಲ್ಲಿ ಬ್ರಾಂಚ್ ಗಳನ್ನು ಹೊಂದಿದೆ. ಸಂಘವು 2024-25ನೇ ಸಾಲಿನ ಆಡಿಟ್ ವರ್ಗಿಕರಣದಲ್ಲಿ “ಎ” ತರಗತಿ ಪಡೆದುಕೊಂಡು ಬರುತ್ತಿದ್ದು, ಸಂಘವು 2024-25ನೇ ಸಾಲಿನಲ್ಲಿ 660.58 ಕೋಟಿ ವ್ಯವಹಾರ ಮಾಡಿ, ರೂ.2.09 ಕೋಟಿ ನಿವ್ವಳ ಲಾಭ ಗಳಿಸಿದೆ. ಮಾರ್ಚ್ 2025ರ ಅಂತ್ಯಕ್ಕೆ ಒಟ್ಟು 4906 ಎ ತರಗತಿ ಸದಸ್ಯರನ್ನು ಹೊಂದಿದ್ದು, ರೂ.5.57 ಕೋಟಿ ಪಾಲು ಬಂಡವಾಳ, ರೂ.209.69 ಕೋಟಿ ಠೇವಣಿ ಹಾಗೂ ರೂ.192.39 ಕೋಟಿ ಹೊರ ಬಾಕಿ ಸಾಲವನ್ನು ಹೊಂದಿದೆ. ಮಾತ್ರವಲ್ಲದೇ ಸಂಘವು ಹಲವಾರು ವರ್ಷಗಳಿಂದ ಶೇಕಡಾ 15ಕ್ಕಿಂತ ಮೇಲಿನ ಡಿವಿಡೆಂಡನ್ನು ಸದಸ್ಯರಿಗೆ…
ಬಂಟ್ವಾಳ: ಇಲ್ಲಿನ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳವು 2024-25ನೇ ಸಾಲಿನಲ್ಲಿ ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಶನಿವಾರ ನಡೆದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಹಾಸಭೆಯಲ್ಲಿ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಯಿತು. https://chat.whatsapp.com/EbVKVnWB6rlHT1mWtsgbch ಸಮಾಜ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ದಾಖಲೆಯ 1158.43 ಕೋಟಿ ರೂ. ವ್ಯವಹಾರ ನಡೆಸಿ 5.04 ಕೋಟಿ ರೂ. ಲಾಭ ಗಳಿಸಿದೆ. ಸಂಘದ ದುಡಿಯುವ ಬಂಡವಾಳವು 259.66 ಕೋಟಿ ರೂ. ಆಗಿದೆ. ಆಡಿಟ್ ವರ್ಗೀಕರಣದಲ್ಲಿ ಸತತ ‘ಎ’ ಶ್ರೇಣಿ ಪಡೆದಿರುತ್ತದೆ. ಸಂಘವು ಸಾಧಿಸಿದ ಈ ಎಲ್ಲಾ ಸಾಧನೆ ಗುರುತಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಅಧ್ಯಕ್ಷ, ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರು, ಸತತ ನಾಲ್ಕನೇ ಬಾರಿ ಸಾಧನಾ ಪುರಸ್ಕಾರ ನೀಡಿ ಗೌರವಿಸಿದರು. ಸಂಘದ ಅಧ್ಯಕ್ಷರಾದ ಸುರೇಶ್ ಕುಲಾಲ್, ಪ್ರಧಾನ ವ್ಯವಸ್ಥಾಪಕರಾದ ಭೋಜ ಮೂಲ್ಯ, ಪ್ರಶಸ್ತಿ ಸ್ವಿಕರಿಸಿದರು. ಸಂಘದ ಉಪಾಧ್ಯಕ್ಷರಾದ ಜನಾರ್ದನ ಬೊಂಡಾಲ, ನಿರ್ದೇಶಕರಾದ ಬಿ.ರಮೇಶ್ ಬಿ.ಸಾಲ್ಯಾನ್, ಸುರೇಶ್ ಕುಲಾಲ್ ಎನ್.,…
ಮೂಲ್ಕಿ: ಹಳೆಯಂಗಡಿಯ ಪ್ರತಿಷ್ಠಿತ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಗೆ ಶನಿವಾರ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ “ವಿಶಿಷ್ಟ ಸಾಧನಾ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಎಸ್‌ಸಿಡಿಸಿಸಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಸತತ ಎರಡನೇ ಬಾರಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಗೆ ಪ್ರಶಸ್ತಿ ನೀಡಲಾಯಿತು. ಸಂಸ್ಥೆಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ ಎರಡನೇ ಬಾರಿ ಸಾಧನಾ ಪ್ರಶಸ್ತಿ ಪಡೆದಿದೆ. ಮೂಲ್ಕಿ ತಾಲೂಕಿನಲ್ಲಿ ಈ ಪ್ರಶಸ್ತಿ ಪಡೆದ ಪ್ರಥಮ ಸೊಸೈಟಿಯಾಗಿ ಮೂಡಿಬಂದಿದೆ. ಸೊಸೈಟಿಯ ಅಧ್ಯಕ್ಷರಾದ ಎಚ್.ವಸಂತ್ ಬೆರ್ನಾರ್ಡ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಸಂಘದ ನಿರ್ದೇಶಕರಾದ ಉಮಾನಾಥ್ ಜೆ. ಶೆಟ್ಟಿಗಾರ್, ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಬೆಳಪು ದೇವಿಪ್ರಸಾದ್ ಶೆಟ್ಟಿ, ಮೋನಪ್ಪ ಶೆಟ್ಟಿ, ಸದಾಶಿವ ಉಳ್ಳಾಲ್, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್ ರಮೇಶ್ ಮೊದಲಾದವರು…
ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ 10ನೇ ಬಾರಿ ಎಸ್‌ಸಿಡಿಸಿಸಿ ಬ್ಯಾಂಕಿನ ಸಾಧನಾ ಪ್ರಶಸ್ತಿ
ಬಂಟ್ವಾಳ: ಇಲ್ಲಿನ ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಸಂಸ್ಥೆಯು 2024-25ನೇ ಸಾಲಿನಲ್ಲಿ ಸಾಧಿಸಿದ ಸರ್ವತೋಮುಖ ಅಭಿವೃದ್ಧಿಯನ್ನು ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇವರಿಂದ 10ನೇ ಬಾರಿ ಸಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಪ್ರಶಸ್ತಿ ವಿತರಿಸಿದರು. https://chat.whatsapp.com/EbVKVnWB6rlHT1mWtsgbch ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 10 ಶಾಖೆಗಳನ್ನು ಒಳಗೊಂಡು ಬಿ.ಸಿ.ರೋಡ್ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಸಂಘವು ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ‘ಎ’ ತರಗತಿ ಪಡೆಯುತ್ತಾ ಬಂದಿದೆ. 2024-25ನೇ ಸಾಲಿನಲ್ಲಿ ₹ 930.71 ಕೋಟಿ ವ್ಯವಹಾರ ನಡೆಸಿ ₹2.75 ಕೋಟಿ ನಿವ್ವಳ ಲಾಭ ಗಳಿಸಿದೆ. 2025ರ ಮಾರ್ಚ್ ಅಂತ್ಯಕ್ಕೆ ₹. 122 ಕೋಟಿ ಠೇವಣಿ, ₹ 110 ಕೋಟಿ ಹೊರಬಾಕಿ ಸಾಲದೊಂದಿಗೆ ಎಲ್ಲಾ ಶಾಖೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ ಸಂಘದ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಹೊಸ ಶಾಖೆಗಳನ್ನು ತೆರೆಯುವ ಯೋಜನೆಗಳನ್ನು ರೂಪಿಸಲಾಗಿದೆ. ಸಂಘದ…
ಮಂಗಳೂರು: ಪಾಣೆಮಂಗಳೂರಿನ ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಶನಿವಾರ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಸಾಧನಾ ಪುರಸ್ಕಾರ ನೀಡಿ ಗೌರವಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ಎಸ್‌ಸಿಡಿಸಿಸಿ ಬ್ಯಾಂಕಿನ ವಾರ್ಷಿಕ ಮಹಾಸಭೆ ಶನಿವಾರ ಮಂಗಳೂರಿನಲ್ಲಿ ನಡೆದಿದ್ದು ಆ ಸಮಾರಂಭದಲ್ಲಿ ಐದನೇ ಬಾರಿ ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಸಾಧನಾ ಪುರಸ್ಕಾರ ನೀಡಲಾಗಿದೆ. ಸಂಸ್ಥೆಯು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಸತತ ಐದನೇ ಬಾರಿ ಸಾಧನಾ ಪ್ರಶಸ್ತಿ ಪಡೆದಿದೆ. ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ನಾಗೇಶ್ ಕಲ್ಲಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ಪಿ. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಸಂಘದ ನಿರ್ದೇಶಕರಾದ ಸಚಿನ್ ಮೆಲ್ಕಾರ್, ಬಾಲಕೃಷ್ಣಸೆರ್ಕಳ, ಈಶ್ವರ ಸಪಲ್ಯ ಮೆಲ್ಕಾರ್, ನರ್ಸಪ್ಪ ಅಮೀನ್, ಸಿಬ್ಬಂದಿ ದೀಕ್ಷಿತ್, ಸಹಕಾರ ಸಂಘಗಳ ದ.ಕ. ಜಿಲ್ಲಾ ಉಪನಿಬಂಧಕ ಎಚ್.ಎನ್ ರಮೇಶ್, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಜಾರಾಮ್ ಭಟ್, ಭಾಸ್ಕರ ಕೋಟ್ಯಾನ್, ಕೆ.ಜೈರಾಜ್ ಬಿ.ರೈ ಮೊದಲಾದವರು…
ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ಗೆ ಸತತ ನಾಲ್ಕನೇ ಬಾರಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಾಧನಾ ಪ್ರಶಸ್ತಿ ಪ್ರದಾನ
ವಿಟ್ಲ: ಪ್ರತಿಷ್ಠಿತ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಶನಿವಾರ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ಗೆ ಸತತ ನಾಲ್ಕನೇ ಬಾರಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು. https://chat.whatsapp.com/EbVKVnWB6rlHT1mWtsgbch ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್, 2024-25 ನೇ ಆರ್ಥಿಕ ವರ್ಷದಲ್ಲಿ ತನ್ನ ಕಾರ್ಯದಕ್ಷತೆ ಮೆರೆದು ದಾಖಲೆಯ ರೂ. 864.42 ಕೋಟಿಗಳ ವ್ಯವಹಾರ ಮಾಡಿದೆ. ರೂ.134.73 ಕೋಟಿ ರೂಪಾಯಿಗಳ ಠೇವಣಿ ಹೊಂದಿದ್ದು, ಸದಸ್ಯರ ಹೊರಬಾಕಿ ಸಾಲ ರೂ. 104.13 ಕೋಟಿ, ಸಾಲ ವಸೂಲಾತಿ ಪ್ರಮಾಣ ಶೇಕಡಾ 93.20ರಷ್ಟಿದ್ದು, ವರದಿ ವರ್ಷದಲ್ಲಿ ರೂ.3.45 ಕೋಟಿ ಲಾಭ ಗಳಿಸಿದೆ. ಪ್ರಸ್ತುತ ಬ್ಯಾಂಕಿನ ದುಡಿಯುವ ಬಂಡವಾಳ 164.93 ಕೋಟಿಗಳಾಗಿದೆ. ಬ್ಯಾಂಕ್ ಹಲವಾರು ವರ್ಷಗಳಿಂದ ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಹೊಂದಿದ್ದು, ಈ ಎಲ್ಲಾ ಸಾಧನೆಗಳನ್ನು ಗುರುತಿಸಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಹೆಚ್.ಜಗನ್ನಾಥ್ ಸಾಲಿಯಾನ್, ಉಪಾಧ್ಯಕ್ಷರಾದ…
ಮಂಗಳೂರು: ಕಿರಣ್ ಗೇಮ್ಸ್ ಟೀಮ್ ಮಾರ್ನಮಿಕಟ್ಟೆ ಇದರ 55ನೇ ವಾರ್ಷಿಕೋತ್ಸವದ ಅಂಗವಾಗಿ ರಾಮಕೃಷ್ಣ ಮಿಷನ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ., ರಥಬೀದಿ ಮಂಗಳೂರು ಮತ್ತು ಮಹಾರಾಣ ಪ್ರತಾಪ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು ಇವರ ಸಹಯೋಗದಲ್ಲಿ ಮಂಗಳೂರಿನ ಪ್ರತಿಷ್ಠಿತ ಕೆ.ಎಂ.ಸಿ.ಆಸ್ಪತ್ರೆ ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಮಂಗಳೂರಿನ ಖ್ಯಾತ ತಜ್ಞ ವೈದ್ಯರುಗಳ ಉಪಸ್ಥಿತಿಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವು ಭಾನುವಾರ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಬೆಳಗ್ಗೆ 9ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಿಬಿರದಲ್ಲಿ ಮಂಗಳೂರಿನ ಖ್ಯಾತ ತಜ್ಞ ವೈದ್ಯರುಗಳು ಉಪಸ್ಥಿತರಿದ್ದು, ಶ್ವಾಸಕೋಶ, ಸಕ್ಕರೆ ಕಾಯಿಲೆ, ಲಿವರ್, ಉಬ್ಬಸ, ಜ್ವರ, ಥೈರಾಯಿಡ್ ತಜ್ಞರಾದ ಡಾ|ಚಕ್ರಪಾಣಿ ಎಂ. ಹಾಗೂ ಡಾ.ಬಿ.ದೇವದಾಸ್ ರೈ, ಹೃದಯ ಸಂಬಂಧಿತ ಖಾಯಿಲೆಗಳ ತಜ್ಞರಾದ ಡಾ|ಪದ್ಮನಾಭ ಕಾಮತ್, ಕಿವಿ, ಮೂಗು, ಗಂಟಲು ತಜ್ಞರಾದ ಡಾ|ವಿಜಯೇಂದ್ರ ಶೆಣೈ, ಮೂತ್ರಪಿಂಡ , ಕಿಡ್ನಿ ಸಮಸ್ಯೆ ತಜ್ಞರಾದ…
ಮೂಡುಬಿದಿರೆ: ಕರಿಂಜೆ ಮಠದ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಸ್ಥಾಪಿಸಿದ ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿ ಸಂಘದ ದ್ವಿತೀಯ ಶಾಖೆ ಮೂಡುಬಿದಿರೆಯ ಜಿವಿಪೈ ಆಸ್ಪತ್ರೆ ಎದುರಿರುವ ವಿಶ್ವಾಸ್ ಪೈನಾಪಲ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿ ಶುಕ್ರವಾರ ಶುಭಾರಂಭಗೊಂಡಿತು. https://chat.whatsapp.com/EbVKVnWB6rlHT1mWtsgbch ಬಳಿಕ ಎಂಸಿಎಸ್ ಬ್ಯಾಂಕ್ ಕಲ್ಪವೃಕ್ಷ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿಯವರು, ಕರಿಂಜೆ ಗ್ರಾಮೀಣ ಪ್ರದೇಶದಲ್ಲಿ ಆರು ವರ್ಷಗಳ ಹಿಂದೆ ಸ್ಥಾಪನೆಯಾದ ಸಂಸ್ಥೆಯು ಇಂದು ಪೆರಿಂಜೆಯಲ್ಲಿ ಪ್ರಧಾನ ಕಚೇರಿ, ಕರಿಂಜೆ ಮಠದಲ್ಲಿ ಆಡಳಿತ ಕಚೇರಿ, ಬೆಳ್ತಂಗಡಿ ತಾಲೂಕಿನ ಮದ್ದಡ್ಕದಲ್ಲಿ ಪ್ರಥಮ ಶಾಖೆ, ಇದೀಗ ಮೂಡುಬಿದಿರೆಯಲ್ಲಿ ದ್ವಿತೀಯ ಶಾಖೆಯನ್ನು ಪ್ರಾರಂಭಿಸಿದೆ. ಮುಂದೆ ಮಂಗಳೂರು ನಗರದಲ್ಲಿ ಶಾಖೆ ಪ್ರಾರಂಭಿಸಲು ಉದ್ದೇಶಿಸಿದ್ದೇವೆ. ಸಹಕಾರಿ ಹಾಗೂ ಸ್ವಸಹಾಯ ಗುಂಪುಗಳು ಪಾರದರ್ಶಕವಾಗಿ ಮುನ್ನಡೆಯಲು ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಶ್ರಮವೇ ಕಾರಣ. ಗ್ರಾಹಕರು ಕೂಡ ವ್ಯವಸ್ಥೆ ಸದಾ ಬೆಂಗಾವಲಾಗಿರುವುದರಿಂದ ಕಡಿಮೆ ಅವಧಿಯಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗಿದೆ ಎಂದರು. ಗ್ರಾಮ ಸಮೃದ್ಧಿ ಸೌಹಾರ್ದ ಸಹಕಾರಿಯ…
