Author: admin

ನವದೆಹಲಿ: ಹಿರಿಯ ಸಹಕಾರಿ ಮತ್ತು ಸಹಕಾರ ಭಾರತಿ ಸಂಸ್ಥಾಪಕ ಸದಸ್ಯ ಸತೀಶ್ ಮರಾಠೆ ಅವರನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನ ನಿರ್ದೇಶಕರ ಮಂಡಳಿಯ ಸದಸ್ಯರಾಗಿ ನೇಮಿಸಲಾಗಿದೆ. ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ಭಾರತೀಯ ರಿಸರ್ವ್ ಬ್ಯಾಂಕ್‌ನೊಂದಿಗೆ ಸಮಾಲೋಚಿಸಿ, ಅಧಿಸೂಚನೆಯ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಈ ನೇಮಕಾತಿ ಕಲ್ಪಿಸಿದೆ. ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಮಂಡಳಿಯಲ್ಲಿ ನಿರ್ದೇಶಕರಾಗಿರುವ ಮರಾಠೆ, ಬ್ಯಾಂಕಿಂಗ್, ಸಹಕಾರಿ ಅಭಿವೃದ್ಧಿ ಮತ್ತು ಗ್ರಾಮೀಣ ಹಣಕಾಸಿನಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಫೆಬ್ರವರಿ 1, 1950ರಂದು ಜನಿಸಿದ ಸತೀಶ್‌ ಮರಾಠೆ ಬಾಂಬೆ ವಿಶ್ವವಿದ್ಯಾಲಯದಿಂದ ವಾಣಿಜ್ಯ ಮತ್ತು ಕಾನೂನಿನಲ್ಲಿ ಸ್ನಾತಕೋತ್ತರ ಪದವಿ (ಜನರಲ್) ಮತ್ತು ಭಾರತೀಯ ವಿದ್ಯಾ ಭವನದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ (ಚಿನ್ನದ ಪದಕ ವಿಜೇತ) ಪಡೆದಿದ್ದಾರೆ. ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ತಮ್ಮ ವೃತ್ತಿಜೀವನ ಪ್ರಾರಂಭಿಸಿ, ಮುಂದೆ ಜನಕಲ್ಯಾಣ ಸಹಕಾರಿ ಬ್ಯಾಂಕ್ ಲಿಮಿಟೆಡ್‌ನ ಸಿಇಒ ಆಗಿ ಕಾರ್ಯನಿರ್ವಹಿಸಿದ್ದರು.…

Read More

ಮಂಗಳೂರು: ಎಸ್.ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಆ.24ರಂದು ಬೆಳಗ್ಗೆ 11ರಿಂದ ಉರ್ವಾಸ್ಟೋರ್ ನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ಇದೇ ಕಾರ್ಯಕ್ರಮದಲ್ಲಿ ಐದು ಸಾಧಕರಿಗೆ ಎಸ್.ಕೆ.ಜಿ.ಐ ಪುರಸ್ಕಾರ ಪ್ರದಾನ ಮಾಡಲಾಗುವುದು. https://chat.whatsapp.com/EbVKVnWB6rlHT1mWtsgbch ಪಂಚ ಕಸುಬುಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಗೌರವ ಸನ್ಮಾನ ನಡೆಸಲಾಗುವುದು. ಸ್ವರ್ಣ ಶಿಲ್ಪಿ ಎನ್.ರಾಮಚಂದ್ರ ಆಚಾರ್ಯ ಕಾರ್ಕಳ, ಕಾಷ್ಠ ಶಿಲ್ಪಿ ಬಳ್ಕೂರು ಗೋಪಾಲ ಆಚಾರ್ಯ ಮಣಿಪಾಲ, ಅಯಸ್ ಶಿಲ್ಪಿ ಲೀಲಾವತಿ ಆಚಾರ್ಯ ಸುಳ್ಯ, ಎರಕ ಶಿಲ್ಪಿ ಹರೀಶ್ಚಂದ್ರ ಆಚಾರ್ಯ ಬೆಳ್ತಂಗಡಿ, ಶಿಲಾ ಶಿಲ್ಪಿ ಜನಾರ್ಧನ ಆಚಾರ್ಯ ಕಾರ್ಕಳ ಇವರಿಗೆ ಎಸ್.ಕೆ.ಜಿ.ಐ ಪುರಸ್ಕಾರ ಪ್ರದಾನ ಮಾಡಲಾಗುವುದು. ಸಂಗೀತ ಕ್ಷೇತ್ರದ ಸಾಧಕ ಯಶವಂತ ಎಸ್.ಟಿ ಮೂಡುಬಿದಿರೆ, ವಾಗ್ಮಿ ಎಸ್.ಆರ್ ದಾಮೋದರ ಶರ್ಮ ಬಾರಕೂರ್, ಕಲಾ ಕ್ಷೇತ್ರದ ಸಾಧಕ ಎ.ಟಿ ಸದಾಶಿವ ಮಂಗಳಾದೇವಿ, ವೈದಿಕ ಕ್ಷೇತ್ರದ ಸಾಧಕ ಬ್ರಹ್ಮಶ್ರೀ ಉಮೇಶ್ ತಂತ್ರಿ ಮಂಗಳೂರು, ಯಕ್ಷಗಾನ ಕ್ಷೇತ್ರದ ಕೆ.ಜೆ ಗಣೇಶ್ ಆಚಾರ್ಯ, ಉಡುಪಿ, ಚಿತ್ರಕಲಾ ಕ್ಷೇತ್ರದ ಲಕ್ಷ್ಮೀನಾರಾಯಣ…

Read More

ಬೆಂಗಳೂರು: ಈ ಹಿಂದೆ ತಿರಸ್ಕೃತಗೊಂಡಿದ್ದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಮತ್ತೊಮ್ಮೆ ಮಂಡನೆಯಾಗಿ ಅನುಮೋದನೆ ಪಡೆದುಕೊಂಡಿದೆ. https://chat.whatsapp.com/EbVKVnWB6rlHT1mWtsgbch ವಿಧಾನಸಭೆಯಲ್ಲಿ ಅಂಗೀಕಾರಗೊಂಡು ಮೊದಲನೇ ಸಲ ಮಂಡನೆಯಾಗಿದ್ದ ಈ ಮಸೂದೆಗೆ ಪರಿಷತ್‌ನಲ್ಲಿ ಮೂರು ಮತಗಳಿಂದ ಸೋಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲವು ತಿದ್ದುಪಡಿಯೊಂದಿಗೆ ವಿಧಾನಸಭೆ ಈ ಮಸೂದೆಯನ್ನು ಗುರುವಾರ ಮತ್ತೊಮ್ಮೆ ಅಂಗೀಕರಿಸಿತ್ತು. ಶುಕ್ರವಾರ ಮಸೂದೆಯನ್ನು ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ಮತ್ತೊಮ್ಮೆ ವಿಧಾನ ಪರಿಷತ್ ನಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುಳ್ಯಪದವು ಶಾಖೆಯ ಪ್ರಕೃತಿ ಸಹಕಾರ ಸೌಧ ಉದ್ಘಾಟನೆ ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತನ್ನ ಪಾರದರ್ಶಕ ಕಾರ್ಯ ಚಟುವಟಿಕೆಗಳ ಮೂಲಕ ಸಹಕಾರಿ ಸಂಘಗಳು ರಾಷ್ಟ್ರೀಯ ಬ್ಯಾಂಕ್‌ಗಳನ್ನು ಮೀರಿ ಬೆಳೆದಿದೆ. ಸಹಕಾರಿ ವ್ಯವಸ್ಥೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ನವೋದಯ ಸ್ವಸಹಾಯ ಸಂಘಗಳಿಂದ ಮಹಿಳೆಯರಿಗೆ ಶಕ್ತಿ ತುಂಬುವ ಕಾರ್ಯವಾಗಿದೆ, ದೇಶ ಆರ್ಥಿಕವಾಗಿ 3ನೇ ಸ್ಥಾನಕ್ಕೆ ಹೋಗುವಲ್ಲಿ ಸಹಕಾರಿ ಸಂಘಗಳ ಕೊಡುಗೆ ಬಹಳಷ್ಟಿದೆ.ಗ್ರಾಹಕರ ವಿಶ್ವಾಸ ಗಳಿಸಿದ ಕಾರಣದಿಂದಾಗಿಯೇ ಸಹಕಾರಿ ಸಂಘಗಳು ಅದ್ಭುತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಮಾಜಿ ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು. https://chat.whatsapp.com/EbVKVnWB6rlHT1mWtsgbch ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸುಳ್ಯಪದವು ಶಾಖೆಯ ನೂತನ ಕಚೇರಿ ಕಟ್ಟಡ ‘ಪ್ರಕೃತಿ ಸಹಕಾರ ಸೌಧ’ ವನ್ನು ಗುರುವಾರ ಉದ್ಘಾಟಿಸಿ, ಮಾತನಾಡಿದರು. ಸಹಕಾರ ಕ್ಷೇತ್ರದ ಅಭ್ಯುದಯಕ್ಕಾಗಿಯೇ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹಕಾರ…

Read More

ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರಾಗಿ ಬೆಳೆಸಾಲ ಪಡೆದು ಮೃತರಾದ ಸದಸ್ಯರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ರೈತ ಕಲ್ಯಾಣ ನಿಧಿ ಯೋಜನೆಯಡಿಯಲ್ಲಿ ಮರಣ ಹೊಂದಿದ ಕುಟುಂಬದ ನಾಮಿನಿ 22 ಸದಸ್ಯರಿಗೆ ತಲಾ ರೂ.10 ಸಾವಿರದಂತೆ ರೂ.2.20 ಲಕ್ಷ ರೈತ ಕಲ್ಯಾಣ ನಿಧಿಯನ್ನು ಇತ್ತೀಚೆಗೆ ಸಂಘದ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ವಿತರಿಸಲಾಯಿತು. https://chat.whatsapp.com/EbVKVnWB6rlHT1mWtsgbch ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಿ ರೈತ ಕಲ್ಯಾಣ ನಿಧಿಯನ್ನು ಫಲಾನುಭವಿಗಳಿಗೆ ವಿತರಿಸಿದರು. ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿ, ಬೆಳೆ ಸಾಲ ಪಡೆದುಕೊಂಡು ಸಂಘದಲ್ಲಿ ವ್ಯವಹಾರ ಮಾಡಿಕೊಂಡು ಬರುತ್ತಿದ್ದ ರೈತ ಸದಸ್ಯರು ಮರಣ ಹೊಂದಿದಾಗ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡುವ ಉದ್ದೇಶದಿಂದ ಸಂಘವು ರೈತ ಕಲ್ಯಾಣ ನಿಧಿ ಯೋಜನೆಯನ್ನು ಸ್ಥಾಪಿಸಿ, ಸದ್ರಿ ಯೋಜನೆಯಡಿಯಲ್ಲಿ ಮೃತ ಸದಸ್ಯರ ಕುಟುಂಬಕ್ಕೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ,…

Read More

2024-25ನೇ ಸಾಲಿನಲ್ಲಿ 412.92 ಕೋಟಿ ರೂ. ವಾರ್ಷಿಕ ವ್ಯವಹಾರ: ಅಧ್ಯಕ್ಷ ತಾರಾನಾಥ ಕಾಯರ್ಗ ಮಾಹಿತಿ ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 412.92 ಕೋಟಿ ರೂ. ವಾರ್ಷಿಕ ವ್ಯವಹಾರ ನಡೆಸಿದ್ದು, ರೂ. 1.67 ಕೋಟಿ ಲಾಭ ಗಳಿಸಿದೆ. ಸಂಘವು ಸತತ 23ನೇ ಬಾರಿ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇಕಡಾ 99.25% ಸಾಲ ವಸೂಲಾತಿ ಮಾಡಿದೆ. ಸತತ 13 ವರ್ಷಗಳಿಂದ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿಗೆ ಭಾಜನವಾಗಿದೆ ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ತಿಳಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಸಂಘದಲ್ಲಿ 3525 ಸದಸ್ಯರಿದ್ದು, ರೂ.5.72 ಕೋಟಿ ಪಾಲು ಬಂಡವಾಳ ಮತ್ತು ರೂ. 40.34 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಕೃಷಿ ಸಾಲ, ಕೃಷಿಯೇತರ ಸಾಲ, ಚಿನ್ನಾಭರಣ ಈಡಿನ ಸಾಲ, ಸ್ವಸಹಾಯ ಗುಂಪು ಸಾಲ, ಇತ್ಯಾದಿಗಳಿಗೆ ರೂ.66.10 ಕೋಟಿ ಸಾಲ ವಿತರಿಸಲಾಗಿದೆ. ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ರೂ. 34.30 ಕೋಟಿ ಸಾಲ…

Read More

ಮಂಗಳೂರು: ಎಸ್.ಕೆ.ಗೋಲ್ಡ್‌ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ ವಜ್ರಮಹೋತ್ಸವ ವರ್ಷಾಚರಣೆ ಮತ್ತು ಸ್ಥಾಪಕರ ದಿನಾಚರಣೆ ಪ್ರಯುಕ್ತ ಚಿತ್ರ ಸಿಂಚನ-2025 ಸ್ಪರ್ಧೆಯು ಸಂಸ್ಥೆಯ ಸಂಸ್ಥಾಪಕರಾದ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯ ಇವರ ಭಾವಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ. ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಕಿರಿಯರ ವಿಭಾಗ (8ನೇ ತರಗತಿಯಿಂದ ದ್ವಿತೀಯ ಪಿ.ಯು.ಸಿ. ವರೆಗೆ) ಮತ್ತು ಹಿರಿಯರ ವಿಭಾಗ (ಮುಕ್ತ ಪ್ರವೇಶ)ದಲ್ಲಿ ನಡೆಯಲಿದೆ. https://chat.whatsapp.com/EbVKVnWB6rlHT1mWtsgbch ಸ್ಪರ್ಧೆಗೆ ಸಂಬಂಧಿಸಿದ ಸೂಚನೆಗಳು: A3 ಸೈಜ್‌ ಡ್ರಾಯಿಂಗ್‌ ಶೀಟ್‌ನಲ್ಲಿ ಚಿತ್ರ ಬರೆಯಬೇಕು, ವಾಟರ್ ಕಲರ್ ಅಥವಾ ಆಕ್ರಿಲಿಕ್ ಕಲರ್ ಬಳಸಬಹುದು. ನೈಜವಾಗಿ ಬಿಡಿಸಿದ ಬಹುವರ್ಣದ ಚಿತ್ರಗಳಾಗಿರಬೇಕು. ಸೃಜನಶೀಲತೆ, ಬಣ್ಣ ಸಂಯೋಜನೆ, ಅಚ್ಚುಕಟ್ಟಾಗಿರುವಿಕೆಗೆ ಆದ್ಯತೆ ನೀಡಲಾಗುವುದು. 31-08-2025ರೊಳಗೆ ತಾವು ಬಿಡಿಸಿದ ಚಿತ್ರದಲ್ಲಿ ತಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ವಿಭಾಗ ನಮೂದಿಸಿ ಎಸ್‌.ಕೆ ಗೋಲ್ಡ್‌ಸ್ಮಿತ್‌ ಇಂಡಸ್ಟ್ರಿಯಲ್‌ ಕೋ ಆಪರೇಟಿವ್‌ ಸೊಸೈಟಿ ಲಿಮಿಟೆಡ್‌, ವಿಶ್ವ ಸೌಧ, ರಾಷ್ಟ್ರೀಯ ಹೆದ್ದಾರಿ -66, ಕೊಟ್ಟಾರ ಚೌಕಿ, ಮಂಗಳೂರು -575006 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು. 08-09-2025ರಂದು ಸೋಮವಾರ…

Read More

7,768 ಹೊಸ ಪಿಎಸಿಎಸ್‌ಗಳು ಆರಂಭ: ರಾಷ್ಟ್ರೀಯ ಸಹಕಾರಿ ಡೇಟಾಬೇಸ್‌ನ ಮಾಹಿತಿ ನವದೆಹಲಿ: ಕೇಂದ್ರದಲ್ಲಿ ಸಹಕಾರ ಸಚಿವಾಲಯ ಆರಂಭವಾದ ಬಳಿಕ ದೇಶಾದ್ಯಂತ ಸಹಕಾರ ಸಂಘಗಳು ಬಲವರ್ಧನೆಗೊಳ್ಳುತ್ತಿದ್ದು, ಹೊಸದಾಗಿ ಆಂಭವಾಗುತ್ತಿರುವ ಸಹಕಾರ ಸಂಘಗಳ ಸಂಖ್ಯೆಯಲ್ಲೂ ಹೆಚ್ಚಳವಾಗತೊಡಗಿದೆ. ಸಹಕಾರ ಸಂಘಗಳ ತ್ವರಿತಗತಿಯ ಚಲನೆ ಕುರಿತ ಅಂಕಿ ಅಂಶವೊಂದರ ಪ್ರಕಾರ ದೇಶದ 93% ಗ್ರಾಮ ಪಂಚಾಯತ್‌ಗಳಲ್ಲಿ ಸಹಕಾರ ಸಂಘಗಳು ಅದರಲ್ಲೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ವ್ಯಾಪಿಸಿವೆ. https://chat.whatsapp.com/EbVKVnWB6rlHT1mWtsgbch ರಾಷ್ಟ್ರೀಯ ಸಹಕಾರಿ ಡೇಟಾಬೇಸ್ (ಎನ್‌ಸಿಡಿ) ಪ್ರಕಾರ ಭಾರತದ ಗ್ರಾಮೀಣ ಸಹಕಾರಿ ಸಾಲ ರಚನೆಯ ಬೆನ್ನೆಲುಬಾಗಿರುವ ಪ್ರಾಥಮಿಕ ಕೃಷಿ ಸಾಲ ಸಂಘಗಳು (ಪಿಎಸಿಎಸ್), ಈಗ ದೇಶದ 93%ಕ್ಕಿಂತ ಹೆಚ್ಚು ಗ್ರಾಮ ಪಂಚಾಯತ್‌ಗಳಿಗೆ ವ್ಯಾಪಿಸಿವೆ. 2025ರ ಜೂನ್ 30ರ ಅಂಕಿ ಅಂಶಗಳ ಪ್ರಕಾರ ದೇಶದ 2,69,230 ಗ್ರಾಮ ಪಂಚಾಯತ್‌ಗಳ ಪೈಕಿ 2,51,872 ಪ್ಯಾಕ್ಸ್‌ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ)ಗಳು ಕಾರ್ಯನಿರ್ವಹಿಸುತ್ತಿವೆ. 17,358 ಗ್ರಾಮ ಪಂಚಾಯತ್‌ಗಳ ಮಾಹಿತಿ ಇನ್ನಷ್ಟೇ ದೃಢಪಡಬೇಕಿದೆ ಎಂದು ಸಂಸತ್‌ ಅಧಿವೇಶನದಲ್ಲಿ ಸಹಕಾರ ಸಚಿವ ಅಮಿತ್‌…

Read More

ಮಂಗಳೂರು: ಸಿಂಚನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 14ನೇ ವರ್ಷದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಪ್ರಫುಲ್ಲಾ ಕಾಮತ್ ಅಧ್ಯಕ್ಷತೆಯಲ್ಲಿ ವಿಠೋಭ ರುಕುಮಾಯಿ ದೇವಸ್ಥಾನದ ಸಭಾಂಗಣದಲ್ಲಿ ಬುಧವಾರ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಫುಲ್ಲಾ ಕಾಮತ್ ಮಾತನಾಡಿ ವಾರ್ಷಿಕ ವರದಿ ಮಂಡಿಸಿ ಲಾಭಾಂಶದ ವಿವರ ನೀಡಿ ಡಿವಿಡೆಂಡ್ ಘೋಷಿಸಿದರು. 2012ನೇ ಇಸವಿಯಲ್ಲಿ ಪ್ರಾರಂಭವಾದ ಸಿಂಚನ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ನಿರಂತರ ಲಾಭ ಗಳಿಸುತ್ತ ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದೆ ಎಂದು ಮಾಹಿತಿ ನೀಡಿದರು. ಲೆಕ್ಕಪರಿಶೋಧಕರಾದ ಪಿ.ನರೇಂದ್ರ ಪೈ ಲೆಕ್ಕಪತ್ರ ಮಂಡಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಅವರು ಅಂದಾಜು ಆಯವ್ಯಯ ಮಂಡಿಸಿದರು. ನಿರ್ದೇಶಕರಾದ ಮಹೇಶ್ ಸುವರ್ಣ ಮುಂದಿನ ವರ್ಷದ ಕಾರ್ಯಯೋಜನೆಗಳನ್ನು ಸಭೆಯ ಮುಂದಿಟ್ಟರು. ಕಾರ್ಯಕ್ರಮದಲ್ಲಿ ಸಂಘದ ಹಿರಿಯ ಸದಸ್ಯರನ್ನು ಗೌರವಿಸಲಾಯಿತು. ಸಹಕಾರಿಯ ಉಪಾಧ್ಯಕ್ಷ ಗುರುರಾಜ್, ನಿರ್ದೇಶಕರಾದ ಎಂ.ರಾಧಾಕೃಷ್ಣ ಕಾಮತ್, ಡಾ. ಜಯವಂತ ನಾಯಕ್, ಮೋಹನ್ ನಾಯಕ್, ಅನಿಲ್ ಕುಮಾರ್, ಗೌತಮ್ ಕಾಮತ್, ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ…

Read More

ವಿಧೇಯಕದ ಪರ 23, ವಿರುದ್ಧ 26 ಮತಗಳು ಚಲಾವಣೆ, ಸರ್ಕಾರಕ್ಕೆ ಮುಜುಗರ ಬೆಂಗಳೂರು: ಹಲವಾರು ತಿದ್ದುಪಡಿಗಳೊಂದಿಗೆ ವಿಧಾನಸಭೆಯಲ್ಲಿ ಮಂಗಳವಾರವಷ್ಟೇ ಮಂಡನೆಯಾಗಿದ್ದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ ವಿಧಾನ ಪರಿಷತ್ತಿನಲ್ಲಿ ತಿರಸ್ಕೃತಗೊಂಡಿದೆ. ವಿಧಾನಸಭೆಯಲ್ಲಿ ಅಂಗೀಕಾರಗೊಂಡ ಮಸೂದೆ ವಿಧಾನ ಪರಿಷತ್‌ನಲ್ಲಿ ತಿರಸ್ಕೃತಗೊಳ್ಳುವ ಮೂಲಕ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿದೆ. https://chat.whatsapp.com/EbVKVnWB6rlHT1mWtsgbch ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿರುದ್ಧ 26 ಮತಗಳು ಬಂದರೆ, ಪರ 23 ಮತಗಳಷ್ಟೇ ಚಲಾವಣೆಯಾದವು. ಇದರಿಂದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಧಾನಪರಿಷತ್​ನಲ್ಲಿ ತಿರಸ್ಕೃತಗೊಂಡಂತಾಗಿದೆ. ಮಂಗಳವಾರ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ ವಿಚಾರವಾಗಿ ಸುದೀರ್ಘ ಚರ್ಚೆಯಾಗಿ ಅಂಗೀಕಾರಗೊಂಡಿತ್ತು. ಬುಧವಾರ ಕಾನೂನು ಸಚಿವ ಎಚ್‌.ಕೆ ಪಾಟೀಲ್​ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಮಂಡಿಸಿದರು. ಈ ಕುರಿತು ಚರ್ಚೆಯಾಗಿ ಪ್ರತಿಪಕ್ಷಗಳು ಈ ವಿಧೇಯಕವನ್ನು ಮತಕ್ಕೆ ಹಾಕುವಂತೆ ಮನವಿ ಮಾಡಿದವು. ಸಭಾಪತಿ ಬಸವರಾಜ ಹೊರಟ್ಟಿಯವರು ವಿಧೇಯಕವನ್ನು ಮತಕ್ಕೆ ಹಾಕಲು ಮುಂದಾದರು. ಮತಕ್ಕೆ ಹಾಕುವ…

Read More