Close Menu
    Top News

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ 6.09 ಕೋಟಿ ರೂ. ಲಾಭ: ಶೇ.20 ಡಿವಿಡೆಂಡ್ ಘೋಷಣೆ
    News

    ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಗೆ 6.09 ಕೋಟಿ ರೂ. ಲಾಭ: ಶೇ.20 ಡಿವಿಡೆಂಡ್ ಘೋಷಣೆ

    adminBy adminAugust 25, 2025

    ಎಸ್‌ಕೆಜಿಐ ಪ್ರಶಸ್ತಿ ಪ್ರದಾನ, ಪಂಚ ಸಾಧಕರಿಗೆ ಗೌರವಾರ್ಪಣೆ

    ಮಂಗಳೂರು: ಎಸ್.ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2024-2025ನೇ ಸಾಲಿನ ವಾರ್ಷಿಕ ಮಹಾಸಭೆ ಭಾನುವಾರ ನಡೆದಿದ್ದು, ಸೊಸೈಟಿಗೆ 6.09 ಕೋಟಿ ರೂ. ಲಾಭ ಬಂದಿದ್ದು, ಶೇ.20 ಡಿವಿಡೆಂಡ್ ಘೋಷಣೆ ಮಾಡಲಾಯಿತು.

    https://chat.whatsapp.com/EbVKVnWB6rlHT1mWtsgbch
    ಉರ್ವಸ್ಟೋರ್‌ನ ಡಾ.ಬಿ.ಆರ್‌ ಅಂಬೇಡ್ಕರ್‌ ಭವನದಲ್ಲಿ ಸಂಸ್ಥೆಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಅಧ್ಯಕ್ಷತೆಯಲ್ಲಿನಡೆದ ಕಾರ್ಯಕ್ರಮದಲ್ಲಿ ಪ್ರಧಾನ ವ್ಯವಸ್ಥಾಪಕರಾದ ಯಜ್ಞೇಶ್ವರ ವಾರ್ಷಿಕ ವರದಿ ಮಂಡಿಸಿದರು. ವಜ್ರಮಹೋತ್ಸವ ವರ್ಷಾಚರಣೆ ಪ್ರಯುಕ್ತ ಸದಸ್ಯರಿಗೆ ಶೇ.20ರಷ್ಟು ಡಿವಿಡೆಂಡ್ ಪಾವತಿಗೆ ಮಂಜೂರಾತಿ ಪಡೆಯಲಾಯಿತು.


    ಪಂಚ ಕಸುಬುಗಳಲ್ಲಿ ಸಾಧನೆ ಮಾಡಿದ ಐವರು ಶಿಲ್ಪಿಗಳಾದ ಸ್ವರ್ಣ ಶಿಲ್ಪಿ ಎನ್.ರಾಮಚಂದ್ರ ಆಚಾರ್ಯ ಕಾರ್ಕಳ, ಕಾಷ್ಠ ಶಿಲ್ಪಿ ಬಳ್ಕೂರು ಗೋಪಾಲ ಆಚಾರ್ಯ ಮಣಿಪಾಲ, ಅಯಸ್ ಶಿಲ್ಪಿ ಲೀಲಾವತಿ ಆಚಾರ್ಯ ಸುಳ್ಯ, ಎರಕ ಶಿಲ್ಪಿ ಹರೀಶ್ಚಂದ್ರ ಆಚಾರ್ಯ ಬೆಳ್ತಂಗಡಿ, ಶಿಲಾ ಶಿಲ್ಪಿ ಜನಾರ್ಧನ ಆಚಾರ್ಯ ಕಾರ್ಕಳ ಇವರಿಗೆ ಎಸ್.ಕೆ.ಜಿ.ಐ ಪುರಸ್ಕಾರ ಪ್ರದಾನ ಮಾಡಲಾಯಿತು. ಸಂಗೀತ ಕ್ಷೇತ್ರದ ಸಾಧಕ ಯಶವಂತ ಎಸ್.ಟಿ ಮೂಡುಬಿದಿರೆ, ವಾಗ್ಮಿ ಎಸ್.ಆರ್ ದಾಮೋದರ ಶರ್ಮ ಬಾರಕೂರ್, ಕಲಾ ಕ್ಷೇತ್ರದ ಸಾಧಕ ಎ.ಟಿ ಸದಾಶಿವ ಮಂಗಳಾದೇವಿ, ವೈದಿಕ ಕ್ಷೇತ್ರದ ಸಾಧಕ ಬ್ರಹ್ಮಶ್ರೀ ಉಮೇಶ್ ತಂತ್ರಿ ಮಂಗಳೂರು, ಯಕ್ಷಗಾನ ಕ್ಷೇತ್ರದ ಕೆ.ಜೆ ಗಣೇಶ್ ಆಚಾರ್ಯ, ಉಡುಪಿ, ಚಿತ್ರಕಲಾ ಕ್ಷೇತ್ರದ ಲಕ್ಷ್ಮೀನಾರಾಯಣ ಬಂಟ್ವಾಳ ಇವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸ್ಥಾಪಕ ದೇವಮಾನವ ಪಾಲ್ಕೆ ಬಾಬುರಾಯ ಆಚಾರ್ಯ ಅವರ ಕಲಾಕೃತಿಯನ್ನು ರಚಿಸಿದ ಮಧುಸೂಧನ ಆಚಾರ್ಯ ಪಡುಬಿದ್ರಿ ಅವರನ್ನು ಗೌರವಿಸಲಾಯಿತು. 2024-2025ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ಶಾಖೆಗಳನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಿ ಒಂದನೇ ವರ್ಗದಲ್ಲಿ ಪ್ರಥಮ ಸ್ಥಾನವನ್ನು ಕೋಟೇಶ್ವರ ಶಾಖೆ ಮತ್ತು ದ್ವಿತೀಯ ಸ್ಥಾನ ಉಡುಪಿ ಶಾಖೆಗೆ ನೀಡಲಾಯಿತು. ಎರಡನೇ ವರ್ಗದಲ್ಲಿ ಸಂತಕಟ್ಟೆ-ಕಲ್ಯಾಣ್‌ಪುರ ಶಾಖೆ ಪ್ರಥಮ ಮತ್ತು ಶಿರ್ವ-ಮಂಚಕಲ್ ಶಾಖೆಗೆ ದ್ವಿತೀಯ ಸ್ಥಾನ ನೀಡಲಾಯಿತು.


    ಸಂಸ್ಥೆಯ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ಮಾತನಾಡಿ, ಸಂಸ್ಥೆಯ ಕಾರ್ಯ ಚಟುವಟಿಕೆಗಳು ಎಲ್ಲರ ಹೃದಯ ತಟ್ಟಿದಲ್ಲಿ ಅದೇ ಸಂತೃಪ್ತಿ ಎಂದರು. ಸಂಸ್ಥೆಯ ಉಪಾಧ್ಯಕ್ಷ ಎ.ಆನಂದ ಆಚಾರ್ಯ, ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ.ವಿಶ್ವಜ್ಞಮೂರ್ತಿ, ವಿ.ಜಯ ಆಚಾರ್ಯ, ಕೆ.ಶಶಿಕಾಂತ್ ಆಚಾರ್ಯ, ಮಲ್ಲಪ್ಪ ಎನ್.ಪತ್ತಾರ್, ರೋಹಿಣಿ ಎಂ.ಪಿ, ಜ್ಯೋತಿ ಎಂ.ವಿ., ರಮೇಶ್ ರಾವ್ ಯು. ಪ್ರಕಾಶ್ ಆಚಾರ್ಯ ಕೆ. ಮಂಜುನಾಥ ಆಚಾರ್ಯ ಮತ್ತು ಚಂದ್ರಶೇಖರ ಎ.ಎಸ್. ಉಪಸ್ಥಿತರಿದ್ದರು. ಉಪಾಧ್ಯಕ್ಷ ಎ.ಆನಂದ ಆಚಾರ್ಯ ಸ್ವಾಗತಿಸಿದರು. ಉಷಾ ಮನೋಜ್ ಹಾಗೂ ಶ್ರೀಕಾಂತ ಕಾರ್ಯಕ್ರಮ ನಿರೂಪಿಸಿದರು. ಪ್ರಕಾಶ್‌ ಆಚಾರ್ಯ ಕೆ ವಂದಿಸಿದರು.

    ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694

    EMAIL: sahakaraspandana@gmail.com

    Palke Baburaya Achaya SK Goldsmiths Industrial Co Operative Society SKGI Award Upendra Acharya Vjaramahotsava Yajneshwara
    Previous Articleಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 1.67 ಕೋಟಿ ರೂ ಲಾಭ; ಶೇ.14 ಡಿವಿಡೆಂಡ್‌
    Next Article ಸಫಲ ಸೌಹಾರ್ದ ಸಹಕಾರಿ ಸಂಘಕ್ಕೆ 82.85 ಲಕ್ಷ ರೂ. ನಿವ್ವಳ ಲಾಭ

    Related Posts

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳ ಎನ್‌ಪಿಎ 21,769 ಕೋಟಿ ರೂ.ಗೆ ಇಳಿಕೆ

    July 23, 2026

    ಸಹಕಾರಿ ಸಂಸ್ಥೆಗಳ ಅಭಿವೃದ್ಧಿಗೆ ಎನ್‌ಸಿಡಿಸಿ 5.74 ಕೋಟಿ ರೂ. ವಿತರಣೆ

    July 23, 2026

    ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯಿಂದ ಕಾರ್ಗಿಲ್ ವಿಜಯೋತ್ಸವ

    July 22, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.