Author: admin
ಬ್ಯಾಂಕಿನ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಂಗಳೂರು: ಇಲ್ಲಿನ ಕಾರ್‌ಸ್ಟ್ರೀಟ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿಮಿಟೆಡ್‌ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯು ಬ್ಯಾಂಕಿನ ಉಪವಿಧಿಗಳಿಗೆ, ನೇಮಕಾತಿ ನಿಯಮಗಳಿಗೆ, ನೌಕರರ ಸೇವಾ ನಿಬಂಧನೆಗಳಿಗೆ ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಹಾಗೂ ನಿಯಮಗಳು 1960ರ ಉಪಬಂಧಗಳಿಗೆ ಒಳಪಟ್ಟಿರುತ್ತದೆ. https://chat.whatsapp.com/JVAtKKe2M19AFO3W5629ZS?mode=ems_copy_t ಶಾಖಾ ವ್ಯವಸ್ಥಾಪಕರು( 2 ಹುದ್ದೆ), ಸಹಾಯಕ ಶಾಖಾ ವ್ಯವಸ್ಥಾಪಕರು (1 ಹುದ್ದೆ), ಸಾರ್ವಜನಿಕ ಸಂಪರ್ಕಾಧಿಕಾರಿ (1 ಹುದ್ದೆ), ಕಿರಿಯ ಸಹಾಯಕರು (16 ಹುದ್ದೆಗಳು) ಮತ್ತು ಅಟೆಂಡರ್ (3 ಹುದ್ದೆ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಶಾಖಾ ವ್ಯವಸ್ಥಾಪಕ ಹುದ್ದೆಗೆ ಕನಿಷ್ಠ ಶೇಕಡಾ 60 ಅಂಕಗಳೊಂದಿಗೆ ಎಂಎ ಅರ್ಥಶಾಸ್ತ್ರ, ಎಂಕಾಂ ಅಥವಾ ಎಂ.ಬಿ.ಎ. ಸ್ನಾತಕೋತ್ತರ ಪದವಿ ಪಡೆದಿರಬೇಕು. ಬ್ಯಾಂಕಿಂಗ್ ಯಾ ಹಣಕಾಸು ವಿಷಯದಲ್ಲಿ ಯಾವುದೇ ಡಿಪ್ಲೊಮಾ ಪದವಿ, ಬ್ಯಾಂಕಿಂಗ್ ಯಾ ಹಣಕಾಸು ಕ್ಷೇತ್ರದಲ್ಲಿ ಕನಿಷ್ಠ 5 ವರ್ಷಗಳ ಸೇವಾ ಅನುಭವ ಇರಬೇಕು. ಸಹಾಯಕ ಶಾಖಾ ವ್ಯವಸ್ಥಾಪಕ ಹುದ್ದೆಗೆ…
ಸೆ.19ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ ಸೌಹಾರ್ದ ಸಹಕಾರಿಗಳ ಒಕ್ಕೂಟದ ವಾರ್ಷಿಕ ಮಹಾಸಭೆ
ಬೆಂಗಳೂರು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಸೌಹಾರ್ದ ಸಹಕಾರಿಗಳ ಒಕ್ಕೂಟದ ವಾರ್ಷಿಕ ಮಹಾಸಭೆಯು ಸೆ.19ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಗಂಟೆಗೆ ಉದಯ ಸಹಕಾರ ಭವನ ಹನುಮಂತನಗರ ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು ಎಲ್ಲರೂ ಪಾಲ್ಗೊಳ್ಳುವಂತೆ ಪ್ರಕಟಣೆ ಮೂಲಕ ತಿಳಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಸೌಹಾರ್ದ ಸಹಕಾರಿಗಳ ಒಕ್ಕೂಟದ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ವೈ.ಕುಮಾರ್, ಉಪಾಧ್ಯಕ್ಷರಾಗಿ ಎಸ್.ಎನ್ ಶಂಕರಮೂರ್ತಿ, ನಿರ್ದೇಶಕರಾಗಿ ಎನ್.ಚಂದ್ರಶೇಖರ್, ಬಿ.ಎನ್ ನಾಗಮಣಿ, ಟಿ.ಹೆಚ್ ಕರಿಯಪ್ಪ, ಹೆಚ್.ಕೆ ಶ್ರೀನಿವಾಸ್, ಎ.ಚಿಕ್ಕಯ್ಯ, ಎ.ಎಸ್ ಜಯಕುಮಾರ್, ಎಚ್.ವಿ ಕುಮಾರ್ ಮೂರ್ತಿ, ಇ.ಎಸ್ ನಟರಾಜ್, ಎಂ.ವಿ ರಂಗನಾಥ್, ಎಸ್.ಲಿಂಗೇಶ್ ಕುಮಾರ್, ಜಿ.ಕೃಷ್ಣಾ ರೆಡ್ಡಿ(ವೃತ್ತಿಪರ ನಿರ್ದೇಶಕರು) ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಎಂ.ಎಚ್ ಕವಿತಾ ಅವರಿದ್ದಾರೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಬೆಂಗಳೂರು: ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ನಿಯಮಿತ ಬೆಂಗಳೂರು ಇದರ 9ನೇ ವಾರ್ಷಿಕ ಮಹಾಸಭೆ ಭಾನುವಾರ ದ್ವಾರಕಾ ನಗರ ಸಮುದಾಯ ಭವನ ಚಿಕ್ಕಬಾಣಾವರದಲ್ಲಿ ನಡೆಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಲೋಕೇಶ್ ಎಸ್ ಎಸ್ ಮಾತನಾಡಿ ಸಹಕಾರಿಯು ಒಟ್ಟು 919 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 14.61 ಲಕ್ಷ ರೂ. ನಿವ್ವಳ ಲಾಭ ದಾಖಲಿಸಿದೆ ಎಂದು ಮಾಹಿತಿ ನೀಡಿದರು. ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿಯು 2017ರಲ್ಲಿ ಆರಂಭಗೊಂಡು ಪಾರದರ್ಶಕ ಆಡಳಿತ ನಡೆಸುತ್ತ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು. ವಾರ್ಷಿಕ ಮಹಾಸಭೆಯಲ್ಲಿ ಗುಟ್ಟೆ ಬಸವಣ್ಣ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಯೋಗಾನಂದ ಮೂರ್ತಿ ಎನ್ ವಿ, ಕೈಲಾಸ್ ಮೂರ್ತಿ ಜಿಎಸ್, ಶಿವಗಂಗಾಧರ್ ಯು, ಲಕ್ಷ್ಮೀಪತಿ ಕೆ, ಶೋಭಾ, ಪುಷ್ಪಲತಾ ಎಚ್ಎಂ, ಗಾಯತ್ರಿ ಮತ್ತು ಗೀತಾ ಮತ್ತಿತರು ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಮಂಗಳೂರು: ಕೊಲ್ಯದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸೌಂದರ್ಯ ಓಂ ಸಾಯಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಕೊಲ್ಯ ಇದರ ಎಂಟನೇ ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ವಾರ್ಷಿಕ ಸಾಮಾನ್ಯ ಸಭೆಯನ್ನು ಸಹಕಾರಿಯ ಅಧ್ಯಕ್ಷರಾದ ರಮೇಶ್ ಕೆ ಮತ್ತು ಉಪಾಧ್ಯಕ್ಷರಾದ ಭರತ್ ಪಿ ಉದ್ಘಾಟಿಸಿದರು. ಸಹಕಾರಿಯು ಕಳೆದ 2024-25ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಒಟ್ಟು 1.32 ಕೋಟಿ ರೂ. ಠೇವಣಿ ಹೊಂದಿದ್ದು ಸದಸ್ಯರಿಗೆ ಒಟ್ಟು 1 ಕೋಟಿಗಿಂತಲೂ ಹೆಚ್ಚು ವಿವಿಧ ರೀತಿಯ ಸಾಲ ನೀಡಲಾಗಿದೆ. ಈ ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿಯ ನಿರ್ದೇಶಕರಾದ ಶಶಿಧರ ಶೆಟ್ಟಿ ಕೆರಮ, ಡಾ.ಶ್ರೀನಿವಾಸ ಮೂಲ್ಯ, ವಿಶಾಲ್, ಪ್ರಕಾಶ್ ಎಚ್, ಲಿಂಗಪ್ಪ ಪೂಜಾರಿ, ನಿರ್ಮಲ, ಸೌಮ್ಯ, ಅನಿಲ್ ಕುಮಾರ್, ರಂಜಿತ್ ಕುಮಾರ್, ತುಳಸಿ, ಸಹಕಾರಿಯ ಕಾನೂನು ಸಲಹೆಗಾರರು, ಸಹಕಾರಿಯ ಸಿಬ್ಬಂದಿ ರಮಿತಾ ಮತ್ತು ಸಹಕಾರಿಯ ಸದಸ್ಯರು ಹಾಜರಿದ್ದರು. ಈ ಸಭೆಯ ಸಹಕಾರಿಯ ವಾರ್ಷಿಕ ವರದಿಯನ್ನು ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕರಾದ ಅಕ್ಷಯ ಮಂಡಿಸಿದರು. ನಿರ್ದೇಶಕರಾದ ಶಶಿಧರ ಶೆಟ್ಟಿಯವರು ಸರಕಾರದಿಂದ…
ವಾರ್ಷಿಕ ಮಹಾಸಭೆಯಲ್ಲಿ ರಾಜ್ಯಮಟ್ಟದ ಸದಸ್ಯ ಶಿಕ್ಷಕರು, ಜಿಲ್ಲಾಮಟ್ಟದ 12 ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಸಂಘದ ಸದಸ್ಯ ಶಿಕ್ಷಕರಿಗೆ ಸನ್ಮಾನ ವಿಟ್ಲ: ಅಧ್ಯಾಪಕರ ಸಹಕಾರಿ ಸಂಘ (ನಿ) ವಿಟ್ಲ ಇದರ ವಾರ್ಷಿಕ ಮಹಾಸಭೆ ಭಾನುವಾರ ಸಂಘದ ಅಧ್ಯಕ್ಷರಾದ ರಮೇಶ್ ನಾಯಕ್ ಕೆ. ಅಧ್ಯಕ್ಷತೆಯಲ್ಲಿ ವಿಠಲ ಪದವಿಪೂರ್ವ ಕಾಲೇಜು ವಿಟ್ಲ ಇದರ ಸುವರ್ಣ ರಂಗಮಂದಿರದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ರಮೇಶ್ ನಾಯಕ್ ಕೆ ಸ್ವಾಗತಿಸಿ, ಅಧ್ಯಕ್ಷ ಭಾಷಣ ಮಾಡಿದರು. ಸಂಘವು ವರದಿ ಸಾಲಿನಲ್ಲಿ 661 ಕೋಟಿ ರೂ. ವ್ಯವಹಾರ ನಡೆಸಿದ್ದು, 2.09 ಕೋಟಿ ರೂ. ಲಾಭ ಗಳಿಸಿದೆ. 5.57 ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿದೆ. ವರ್ಷಾಂತ್ಯಕ್ಕೆ 4,906 “ಎ” ತರಗತಿ ಸದಸ್ಯರಿದ್ದು, 209 ಕೋಟಿ ರೂ. ಠೇವಣಿ ಹೊಂದಿರುತ್ತದೆ. 192.39 ಕೋಟಿ ಹೊರಬಾಕಿ ಸಾಲ ಇದ್ದು, ಲೆಕ್ಕಪರಿಶೋಧನೆಯಲ್ಲಿ ಸಂಘವು “ಎ” ಶ್ರೇಣಿಯನ್ನು ಪಡೆದುಕೊಂಡಿದೆ. ಸಂಘವು ಪ್ರಗತಿಪಥದಲ್ಲಿ ಮುನ್ನಡೆಯಲು ಸದಸ್ಯರ ಮತ್ತು ಗ್ರಾಹಕರ ಸಹಕಾರದಿಂದ ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು. https://chat.whatsapp.com/JVAtKKe2M19AFO3W5629ZS?mode=ems_copy_t ದ.ಕ.ಜಿಲ್ಲಾ…
ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಶ್ಲಾಘನೆ ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದಿಂದ ವಿದ್ಯಾನಿಧಿ-ಧನಸಹಾಯ ವಿತರಣೆ ಪುತ್ತೂರು: ಆರ್ಥಿಕವಾಗಿ ಹಿಂದುಳಿದ ಸರಕಾರಿ ಪ್ರಾಥಮಿಕ ಶಾಲಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ವರ್ಷಂಪ್ರತಿಯಂತೆ ಸಂಘದ ‘ಧರ್ಮಾರ್ಥ’ ಮತ್ತು ‘ವಿದ್ಯಾಸಂಸ್ಥೆʼ ನಿಧಿಯಿಂದ ಧನಸಹಾಯ ವಿತರಣೆ ನೀಡುವ ವಿಶೇಷ ಕಾರ್ಯಕ್ರಮ ಶನಿವಾರ ದರ್ಬೆ ಪ್ರಶಾಂತ್ ಮಹಲ್ ಸನ್ನಿಧಿ ಹಾಲ್‌ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರೂ, ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲೊಟ್ಟು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಸವಣೂರು ಸೀತಾರಾಮ ರೈಯವರು ತಮ್ಮ ಬಾಲ್ಯ ಜೀವನದಲ್ಲಿ ತುಂಬಾ ಕಷ್ಟಪಟ್ಟು ಓದಿ, ಇಂದು ಉನ್ನತವಾದ ಸ್ಥಾನದಲ್ಲಿದ್ದಾರೆ. ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಸಿಗಲೆಂಬ ನಿಟ್ಟಿನಲ್ಲಿ ಅವರು ತಮ್ಮ ಆದರ್ಶ ಸಹಕಾರ ಸಂಸ್ಥೆಯ ಮೂಲಕ ವಿದ್ಯಾನಿಧಿ ಯೋಜನೆಯನ್ನು ಪ್ರಾರಂಭ ಮಾಡಿರುವುದು…
ಮಂಗಳೂರು: ಬೋಳಾರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ 14ನೇ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಶ್ರೀ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ಶ್ರೀದೇವಿ ನಿಲಯದಲ್ಲಿ ಸಹಕಾರಿಯ ಅಧ್ಯಕ್ಷರಾದ ನವೀನ್ ಶೆಟ್ಟಿ ಕುತ್ತಾರುಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಉಪಾಧ್ಯಕ್ಷರಾದ ಬಿ.ರಮಾನಂದ ಪೂಜಾರಿ, ಸ್ವಾಗತಿಸಿ ಅಧ್ಯಕ್ಷರ ಭಾಷಣ ನೆರವೇರಿಸಿದರು. ನಿರ್ದೇಶಕರಾದ ವರುಣ್ ರಾಜ್ ಅಂಬಟ್ ವಾರ್ಷಿಕ ವರದಿ ಮಂಡಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮನಾಥ ಬಿ ಇವರು 2024-25ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಕೃಷ್ಣಮೂರ್ತಿ ಐತಾಳ್ 2025-26ನೇ ಸಾಲಿನ ಮುಂಗಡ ಬಜೆಟ್ ಮಂಡಿಸಿದರು. ಸೊಸೈಟಿಯು ವರದಿ ಸಾಲಿನಲ್ಲಿ 38 ಕೋಟಿ ರೂ. ವ್ಯವಹಾರ ಮಾಡಿದ್ದು, 13,55,645.43 ಲಾಭಾಂಶ ಗಳಿಸಿದೆ. ಸದಸ್ಯರಿಗೆ 12% ಡಿವಿಡೆಂಡ್ ಘೋಷಿಸಲಾಯಿತು. ಸಹಕಾರಿಯ ನಿರ್ದೇಶಕರಾದ ಸುಜಿತ್ ಕುಮಾರ್, ರೊನಾಲ್ಡ್ ಡಿಸೋಜ, ಉದಯ್ ಕುಮಾರ್, ರಾಜೇಂದ್ರ ವಿಠ್ಠಲ್, ಮಮತಾ ಮನೋಜ್ ಕುಮಾರ್ ಮತ್ತು ಉಷಾ ಎಸ್ ರಾವ್ ಹಾಗೂ ಹಿರಿಯ ಸದಸ್ಯರಾದ ಬಿ.ವಿಠ್ಠಲ್ ಪೂಜಾರಿ, ಶ್ರೀ ಮೋನಪ್ಪ ಅಂಚನ್ ಮತ್ತು ಬಿ.ಪ್ರೇಮ್…
ಸರಾಸರಿ ಹಾಲು ಉತ್ಪಾದನೆ 50 ಸಾವಿರ ಲೀಟರ್‌ನಷ್ಟು ಏರಿಕೆ: ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಮಾಹಿತಿ ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ 1,174 ಕೋಟಿ ರೂ. ವಹಿವಾಟು ನಡೆಸಿದ್ದು 12.79 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಸೋಮವಾರ ಒಕ್ಕೂಟದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. https://chat.whatsapp.com/JVAtKKe2M19AFO3W5629ZS?mode=ems_copy_t ಪ್ರಸ್ತುತ 751 ಹಾಲು ಸಂಘಗಳ ಮೂಲಕ ಪ್ರತಿದಿನ 3.97 ಲಕ್ಷ ಲೀಟರ್ ಹಾಲು ಶೇಖರಣೆ ಮಾಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಇದು 3.42 ಲಕ್ಷ ಲೀಟರ್ ಆಗಿತ್ತು. ಶೇ.16ರಷ್ಟು ಏರಿಕೆಯಾಗಿರುವುದು ಉತ್ತಮ ಬೆಳವಣಿಗೆ ಬೇಡಿಕೆ ಪ್ರಮಾಣವು 5.5 ಲಕ್ಷ ಲೀಟರ್ ಆಗಿದ್ದು, ಉಳಿಕೆ ಹಾಲನ್ನು ಹಾಸನ ಡೇರಿಯಿಂದ ಪೂರೈಸಲಾಗುತ್ತಿದೆ ಎಂದು ಹೇಳಿದರು. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ತಿಂಗಳಿಗೆ ಸರಾಸರಿ 4,000 ಟನ್ ರಸಮೇವು ವಿತರಿಸುವ ಕೆಲಸ ನಡೆದಿದ್ದು, ಹಾಸನ, ಧಾರವಾಡ, ಮೈಸೂರಿನಿಂದ ಅದನ್ನು ತರಿಸಲಾಗುತ್ತಿದೆ. ಇದು ಹಾಲಿನ ಉತ್ಪಾದಕತೆ ಹೆಚ್ಚುವುದಕ್ಕೆ ಕಾರಣವಾಗಿದೆ.…
ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘಕ್ಕೆ ರೂ. 8.25 ಲಕ್ಷ ನಿವ್ವಳ ಲಾಭ; ಸದಸ್ಯರಿಗೆ ಶೇಕಡಾ 11 ಲಾಭಾಂಶ ವಿತರಣೆ
ರಾಯಚೂರು: ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ರಾಯಚೂರು ಇದರ 2024-25ನೇ ಸಾಲಿನ ಸರ್ವ ಸದಸ್ಯರ 4ನೇ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ರಾಯಚೂರಿನ ಕೊಠಾರಿ ಫಂಕ್ಷನ್ ಹಾಲ್ ನಲ್ಲಿ ರವಿಕುಮಾರ್ ಎಂ. ಇವರ ಅಧ್ಯಕ್ಷತೆಯಲ್ಲಿ ಜರುಗಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಹಕಾರಿ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಭೆಯನ್ನು ಆರಂಭಿಸಲಾಯಿತು. ಸಹಕಾರಿಯ ನಿರ್ದೇಶಕರಾದ ಶಿವಶಂಕರ್ ಬಿ. ಶೀಲವಂತರ್ ಪ್ರಾಸ್ತಾವಿಕ ಮಾತನಾಡಿ ಸಹಕಾರಿಯ ಧ್ಯೇಯ ಉದ್ದೇಶಗಳ ಅಡಿಯಲ್ಲಿ ಸದಸ್ಯರಿಗೆ ಸಹಕಾರಿಯಲ್ಲಿನ ವಿವಿಧ ಠೇವಣಿ ಮತ್ತು ಪತ್ತಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸದಸ್ಯರ ಏಳಿಗೆಯನ್ನು ಮುಖ್ಯ ಉದ್ದೇಶವಾಗಿಸಿಕೊಂಡು ಸಹಕಾರಿಯು ಗುಣಮಟ್ಟದ ವ್ಯವಹಾರ ನಡೆಸಿಕೊಂಡು ಬರುತ್ತಿರುವುದರಿಂದ ಮತ್ತು ಸಹಕಾರಿಯಲ್ಲಿನ ಸೇವೆಗಳನ್ನು ಸದಸ್ಯರು ಉತ್ತಮ ರೀತಿಯಲ್ಲಿ ಬಳಸಿಕೊಂಡ ಕಾರಣ ಸಹಕಾರಿಯು ಕಡಿಮೆ ಸಮಯದಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು. ಮುಖ್ಯ ಕಾರ್ಯನಿರ್ವಾಹಕರಾದ ಗಿರಿಯಪ್ಪ ಹವಾಲ್ದಾರ್, 2024-25ನೇ ಸಾಲಿನ ವಾರ್ಷಿಕ ವರದಿ ಮತ್ತು ಸಾಮಾನ್ಯ ಸಭೆಯ…
ನವದೆಹಲಿ: ಆಂಧ್ರಪ್ರದೇಶದ ಹಿರಿಯ ಸಹಕಾರಿ ವಲ್ಲಭನೇನಿ ಸುಧಾಕರ್ ಚೌಧರಿ ಕ್ರಿಭ್ಕೋ (ಕೃಷಕ್ ಭಾರತಿ ಸಹಕಾರಿ ಲಿ. KRIBHCO)ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅನುಭವಿ ಸಹಕಾರಿ ನಾಯಕ ಚಂದ್ರಪಾಲ್ ಸಿಂಗ್ ಯಾದವ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. https://chat.whatsapp.com/JVAtKKe2M19AFO3W5629ZS?mode=ems_copy_t ಕೃಷಕ್ ಭಾರತಿ ಸಹಕಾರಿ ಲಿಮಿಟೆಡ್‌ನ ಪದಾಧಿಕಾರಿಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಗಳು ಸೋಮವಾರ ಮುಕ್ತಾಯಗೊಂಡಿದ್ದು ಫಲಿತಾಂಶ ಘೋಷಣೆಯಾಗಿದೆ. ಎರಡೂ ಉನ್ನತ ಹುದ್ದೆಗಳಿಗೆ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾದ ಕಾರಣ ಸುಧಾಕರ್ ಚೌಧರಿ ಹಾಗೂ ಚಂದ್ರಪಾಲ್ ಸಿಂಗ್ ಯಾದವ್ ಅವಿರೋಧವಾಗಿ ಆಯ್ಕೆಯಾದರು. ಸುಗಮ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರದ ಇಬ್ಬರು ಸಚಿವರು ಎನ್‌ಸಿಯುಐ ಪ್ರಧಾನ ಕಚೇರಿಗೆ ಭೇಟಿ ನೀಡಿ ವೀಕ್ಷಕರಾಗಿ ಭಾಗವಹಿಸಿದ್ದರು. ಉತ್ತಮವಾಗಿ ಕಾರ್ಯನಿರ್ವಹಿಸುವ ಸಹಕಾರಿ ಸಂಸ್ಥೆಗಳಲ್ಲಿ ಅಧಿಕಾರದ ಸುಗಮ ವರ್ಗಾವಣೆ ಸರ್ಕಾರದ ಗುರಿಯಾಗಿರುತ್ತದೆ ಎಂದು ಉನ್ನತ ಸಹಕಾರಿ ನಾಯಕರೊಬ್ಬರು ಹೇಳಿದ್ದು, ಕ್ರಿಭ್ಕೋ ನಾಯಕತ್ವ ಬದಲಾವಣೆ ಇದಕ್ಕೆ ಉದಾಹರಣೆಯಾಗಿದೆ ಎಂದು ಅವರು ತಿಳಿಸಿದರು. ಕ್ರಿಭ್ಕೋದ ಚುನಾಯಿತ ಮಂಡಳಿಯ ಸದಸ್ಯರು ಮತ್ತು ಇಬ್ಬರು ಸಚಿವರ…
