Author: admin

ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಂಪೂರ್ಣ ಡಿಜಿಟಲೀಕರಣ: ಮಹಾಸಭೆಯಲ್ಲಿ ಹಲವು ಹೊಸ ಯೋಜನೆಗಳ ಉದ್ಘಾಟನೆ ಹಿರಿಯ ಸದಸ್ಯರಿಗೆ ಸನ್ಮಾನ; ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ವಿತರಣೆ ಪುತ್ತೂರು: ಶತಮಾನದ ಇತಿಹಾಸ ಹೊಂದಿರುವ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಗ್ರಾಹಕರಿಗೆ ಪ್ರಯೋಜನ ಆಗುವ ರೀತಿಯಲ್ಲಿ ಹಲವು ಹೊಸತನಗಳೊಂದಿಗೆ ಸಂಪೂರ್ಣ ಡಿಜಿಟಲೀಕರಣವಾಗುತ್ತಿದ್ದು, ಇದರ ಪ್ರಮುಖ ನಾಲ್ಕು ಯೋಜನೆಗಳನ್ನು ಭಾನುವಾರ ನಡೆದ 116ನೇ ಮಹಾಸಭೆಯಲ್ಲಿ ಉದ್ಘಾಟಿಸಲಾಯಿತು. ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷರಾದ ಕಿಶೋರ್ ಕೊಳತ್ತಾಯ ಎನ್ ಅವರ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2024-25ನೇ ಸಾಲಿನಲ್ಲಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಇತಿಹಾಸದಲ್ಲಿ ಹೊಸ ಮೈಲುಗಲ್ಲನ್ನು ಸಾಧಿಸಿದೆ. ವ್ಯವಹಾರದಲ್ಲಿ ಗಣನೀಯ ಹೆಚ್ಚಳ ಸಾಧಿಸಿದ್ದು, ಒಟ್ಟು ಠೇವಣಿ ರೂ. 74.87 ಕೋಟಿ, ಒಟ್ಟು ಸಾಲ ರೂ. 51.39 ಕೋಟಿಗಳಾಗಿದ್ದು, ಒಟ್ಟು ವ್ಯವಹಾರ ರೂ. 126.26 ಕೋಟಿ ದಾಟಿದೆ. ಈ ವರ್ಷದ ನಿವ್ವಳ ಲಾಭ ರೂ. 1.04 ಕೋಟಿ…

Read More

30 ಲಕ್ಷ ರೂ.ಗೂ ಅಧಿಕ ಲಾಭ; ಅಧ್ಯಕ್ಷ ಗಣೇಶ್‌ ಶೆಣೈ ಮಾಹಿತಿ ಮಂಗಳೂರು: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವ ಉದಾತ್ತ ಧ್ಯೇಯದೊಂದಿಗೆ ಸ್ಥಾಪನೆಯಾದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು, 300 ಕೋಟಿ ರೂ. ಅಧಿಕ ವ್ಯವಹಾರ ದಾಖಲಿಸುವ ಮುಖೇನ ಅಪೂರ್ವ ಸಾಧನೆ ಮಾಡಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 30 ಲಕ್ಷ ರೂ.ಗೂ ಮೀರಿ ಲಾಭ ಗಳಿಸಿದ್ದು, ಸದಸ್ಯರಿಗೆ ಈ ಬಾರಿ ಶೇ.11 ಡಿವಿಡೆಂಡ್ ನೀಡಲಿದೆ ಎಂದು ಶ್ರೀ ಪೂರ್ಣಾನಂದ ಸಹಕಾರಿ ಸಂಘದ ಅಧ್ಯಕ್ಷರಾದ ಗಣೇಶ್ ಶೆಣೈ ಘೋಷಿಸಿದರು. https://chat.whatsapp.com/EbVKVnWB6rlHT1mWtsgbch ಭಾನುವಾರ ನಡೆದ ಶ್ರೀ ಪೂರ್ಣಾನಂದ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಗಣೇಶ್‌ ಶೆಣೈ ಅವರು, ನಮ್ಮ ಸಂಸ್ಥೆಯು 70 ಲಕ್ಷ ರೂ. ಶೇರು ಬಂಡವಾಳ, 35 ಕೋಟಿ ರೂ. ಠೇವಣಿಗಳು ಇದ್ದು, 28 ಕೋಟಿ ರೂ. ಸಾಲ ನೀಡಲಾಗಿದೆ. ಏಳು ಕೋಟಿ ರೂ. ವಿನಿಯೋಗಗಳು, 37 ಕೋಟಿ ರೂ. ದುಡಿಯುವ…

Read More

ಹಾಸನ: ಇಲ್ಲಿನ ಬಳೆಗಾರರ ಬೀವಿ(ದೊಣ್ಣೂರು ಬಾಗಿಲು ಚೌಕ, ಹೊಸಲೈನ್ ರಸ್ತೆ) ಶ್ರೀ ವಿಘ್ನೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ಭಾನುವಾರ ಹಾಸನ ನಗರದ ಸುಲಗ್ನಾ ಕಲ್ಯಾಣ ಮಂಟಪದಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಕೆ.ಟಿ.ಕುಮಾರಪ್ಪ ಅವರು ಮಾತನಾಡಿ, ಸಂಘವು ಒಟ್ಟು 4282 ಸದಸ್ಯರನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ 34.84 ಲಕ್ಷ ರೂ. ನಿವ್ವಳ ಲಾಭ ಪಡೆದಿದೆ ಎಂದು ಮಾಹಿತಿ ನೀಡಿದರು. ಶ್ರೀ ವಿಘ್ನೇಶ್ವರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು 2003ರ ಅಕ್ಟೋಬರ್ 1ರಂದು ಒಟ್ಟು 156 ಜನ ಸದಸ್ಯರಿಂದ ರೂ.1,56,000 ಪಾಲು ಬಂಡವಾಳದೊಂದಿಗೆ ಆರಂಭವಾಗಿ ಇಂದಿಗೆ 22 ವರ್ಷ ಪೂರ್ಣಗೊಳಿಸಿ 25ನೇ ಸಂವತ್ಸರದಲ್ಲಿ ಪಾರದರ್ಶಕ ಆಡಳಿತ ನಡೆಸುತ್ತಿದೆ. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ, ಬೆಂಗಳೂರು, ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಹಕಾರ ಸಂಘಗಳ ಜಂಟಿ ನಿರ್ದೇಶಕರುಗಳಿಂದ ನೀಡಲ್ಪಡುವ ಎಲ್ಲಾ ರೀತಿಯ ಆದೇಶ, ಸಲಹೆ, ಸೂಚನೆಗಳನ್ನು ಅಳವಡಿಸಿಕೊಂಡು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. 2025ರ…

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕೋ ಆಪರೇಟಿವ್ ಬ್ಯಾಂಕ್ ಮಂಗಳೂರು ಇದರ 2024-25ನೇ ಸಾಲಿನ 31ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಅಧ್ಯಕ್ಷೆ ಭಾರತಿ ಜಿ.ಭಟ್ ಇವರ ಅಧ್ಯಕ್ಷತೆಯಲ್ಲಿ ಶನಿವಾರ ಜರಗಿತು. https://chat.whatsapp.com/EbVKVnWB6rlHT1mWtsgbch ವರ್ಷಾಂತ್ಯಕ್ಕೆ ಬ್ಯಾಂಕ್ ಒಟ್ಟು 178.08 ಲಕ್ಷ ಪಾಲು ಬಂಡವಾಳ, 297.87 ಲಕ್ಷ ಕ್ಷೇಮನಿಧಿ ಹಾಗೂ ಇತರ ನಿಧಿಗಳನ್ನು ಹೊಂದಿದೆ. ಬ್ಯಾಂಕ್ ಒಟ್ಟು 3319.67 ಲಕ್ಷ ಠೇವಣಿಯನ್ನು ಹೊಂದಿದ್ದು, ಸದಸ್ಯರಿಗೆ ವಿವಿಧ ಉದ್ದೇಶಗಳಿಗೆ ರೂ. 2117.54 ಲಕ್ಷ ಸಾಲ ನೀಡಲಾಗಿದೆ. ವರದಿ ವರ್ಷದಲ್ಲಿ ಆದಾಯ ತೆರಿಗೆ ರೂ. 4.71 ಲಕ್ಷ ಕಾಯ್ದಿರಿಸಿ ರೂ. 14.04 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಶೇ.6 ಡಿವಿಡೆಂಡ್ ಘೋಷಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಭಾರತಿ ಜಿ.ಭಟ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಪ್ರತಿಭಾ ಶೆಟ್ಟಿ ಉಪನಿಬಂಧನೆ ತಿದ್ದುಪಡಿ, ಲಾಭ ವಿಂಗಡನೆ, ಲೆಕ್ಕ ಪರಿಶೋಧಿತ ಆರ್ಥಿಕ ತಖ್ತೆ ಹಾಗೂ ಬಜೆಟ್‌ ಮಂಡಿಸಿದರು. ಗೌರವ ಡಾಕ್ಟರೇಟ್ ಪಡೆದ ಡಾ| ದಿವ್ಯಾರಾಣಿ ಪ್ರದೀಪ್…

Read More

ತೊಕ್ಕೊಟ್ಟು: ದಕ್ಷಿಣಕನ್ನಡ ಜಿಲ್ಲೆಯ ಜನ್ಮಭೂಮಿ ಸ್ವಸಹಾಯ ಸೌಹಾರ್ದ ಸಹಕಾರಿ ಸಂಘ ತೊಕ್ಕೊಟ್ಟು ಇದರ 13ನೇ ವರ್ಷದ ವಾರ್ಷಿಕ ಮಹಾಸಭೆ ಭಾನುವಾರ ಕುತ್ತಾರು ಎಂವೈಎಂ ಸಭಾಂಗಣದಲ್ಲಿ ಉಪಾಧ್ಯಕ್ಷರಾದ ಸುಂದರ ಗಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಹಕಾರಿಯ ಉಪಾಧ್ಯಕ್ಷರಾದ ಸುಂದರ ಗಟ್ಟಿ, ಸೊಸೈಟಿಯ ನಿರ್ದೇಶಕರು ಹಾಗೂ ಕಾನೂನು ಸಲಹೆಗಾರರು ದೀಪ ಪ್ರಜ್ವಲಿಸಿ ಮಹಾಸಭೆಯನ್ನು ಉದ್ಘಾಟಿಸಿದರು. ಸಂಘವು 2024-25ರ ಅವಧಿಯಲ್ಲಿ ರೂ. 4.21 ಕೋಟಿ ವ್ಯವಹಾರ ನಡೆಸಿ ರೂ.13,86,779.82 ಲಾಭ ಗಳಿಸಿದೆ. ಲಾಭಾಂಶದ ವರದಿಯನ್ನು ಸುಂದರ ಗಟ್ಟಿ ಸಭೆಯ ಮುಂದೆ ಮಂಡಿಸಿ ಸದಸ್ಯರಿಗೆ ಶೇ.5 ಡಿವಿಡೆಂಡ್ ಘೋಷಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಕ್ರಮ್ ಶೆಟ್ಟಿಯವರು 2024 -25ನೇ ಸಾಲಿನ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು. 2025ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80 ಕ್ಕಿಂತ ಅಧಿಕ ಅಂಕ ಗಳಿಸಿದ ಸ್ವಸಹಾಯ ಸಂಘದ ಸದಸ್ಯರ ಹತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. 1ರಿಂದ 10ನೇ ತರಗತಿಯವರೆಗಿನ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. 2 ಅತ್ಯುತ್ತಮ…

Read More

ಮಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸೌಹಾರ್ದ ಸಹಕಾರಿ ಸಂಘ ನಿಯಮಿತ 2024-25ನೇ ಸಾಲಿನ ಸಾಮಾನ್ಯ ಸಭೆಯನ್ನು ಯೆಯ್ಯಾಡಿಯ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಶನಿವಾರ ನೆರವೇರಿಸಲಾಯಿತು. https://chat.whatsapp.com/EbVKVnWB6rlHT1mWtsgbch ಸಹಕಾರಿಯ ಅಧ್ಯಕ್ಷರಾದ ಉರ್ಬನ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿಯ ಮೂಡುಬಿದಿರೆ ಶಾಖೆಯಲ್ಲಿ ನೂರು ಸ್ವಸಹಾಯ ಗುಂಪುಗಳಲ್ಲಿ 5 ಗುಂಪುಗಳಿಗೆ ಲಾಭಾಂಶವನ್ನು ನೀಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಸದಾಶಿವ ಬಂಗೇರ, ನಿರ್ದೇಶಕರಾದ ಶೈಲೇಶ್‌ ಮಲ್ಯ, ಎಡ್ವರ್ಡ್ ಸಿಕ್ವೇರ, ಕುಶಲ್ ಪೂಜಾರಿ, ರವಿಪ್ರಸಾದ್ ಶೆಟ್ಟಿ, ನವೀನ್‌ಚಂದ್ರ, ದಿನೇಶ್ ರಾವ್, ಸುಬ್ರಹ್ಮಣ್ಯ ರಾವ್, ಆರ್. ಕೆ ಪುರುಷೋತ್ತಮ್, ಅಶೋಕ್, ರವಿ ಸುವರ್ಣ, ಸುರೇಖಾ ಪುರುಷೋತ್ತಮ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀವನ್ ಕೆ.ಎಸ್ ಉಪಸ್ಥಿತರಿದ್ದರು. ಸಹಕಾರಿ 2023-24ನೇ ಸಾಲಿನಲ್ಲಿ 13.5 ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. ಪ್ರಸ್ತುತ ಸಹಕಾರಿಯು 126 ಸ್ವಸಹಾಯ ಗುಂಪುಗಳನ್ನು ಹೊಂದಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಮಂಗಳೂರು: ಇಲ್ಲಿನ ದೈವಜ್ಞ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ 2024-25ನೇ ಸಾಲಿನ 33ನೇ ವಾರ್ಷಿಕ ಸಾಮಾನ್ಯ ಸಭೆ ಸೊಸೈಟಿಯ ಅಧ್ಯಕ್ಷ ಎಸ್.ರಮಾನಂದ್ ಶೇಟ್ ಇವರ ಅಧ್ಯಕ್ಷತೆಯಲ್ಲಿ ದೈವಜ್ಞ ಕಲ್ಯಾಣ ಮಂಟಪದಲ್ಲಿ ನೆರವೇರಿತು. https://chat.whatsapp.com/EbVKVnWB6rlHT1mWtsgbch ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸಂತೋಷ್ ಶೇಟ್ ವಾರ್ಷಿಕ ವರದಿ ಮಂಡಿಸಿದರು. 2024-25ನೇ ಸಾಲಿನಲ್ಲಿ ಸಂಘವು 55.68 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 10 ಡಿವಿಡೆಂಡ್‌ ಘೋಷಿಸಲಾಯಿತು. ಸಂಘವು 63.85 ಲಕ್ಷ ರೂಪಾಯಿ ಪಾಲು ಬಂಡವಾಳ, 21.96 ಕೋಟಿ ರೂಪಾಯಿ ಠೇವಣಿ ಹೊಂದಿದ್ದು ಸದಸ್ಯರಿಗೆ 19.80 ಕೋಟಿ ರೂಪಾಯಿ ಸಾಲ ನೀಡಿದೆ. ಸಂಘವು 2024- 2025ನೇ ಸಾಲಿನಲ್ಲಿ131 ಕೋಟಿ ರೂಪಾಯಿ ವ್ಯವಹಾರ ನಡೆಸಿದೆ. ಸಂಘವು ಸತತವಾಗಿ ‘ಎ’ ತರಗತಿಯ ಆಡಿಟ್ ವರ್ಗೀಕರಣ ಪಡೆಯುತ್ತ ಬಂದಿದೆ. ಸಭೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಸದಸ್ಯರ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ…

Read More

ಬಂಟ್ವಾಳ: ಬಂಟ್ವಾಳ ಕಥೋಲಿಕ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ 2024-25ನೇ ಸಾಲಿನ 28ನೇ ವಾರ್ಷಿಕ ಮಹಾಸಭೆಯು ಭಾನುವಾರ ಬಿ.ಸಿ.ರೋಡ್‌ನ ಸ್ಪರ್ಶಾ ಕಲಾಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಜೀವನ್ ಲಾಯ್ಡ್‌ ಪಿಂಟೊ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘವು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ.2.75 ಕೋಟಿ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 18 ಡಿವಿಡೆಂಡ್ ಘೋಷಣೆ ಮಾಡಲಾಯಿತು. https://chat.whatsapp.com/EbVKVnWB6rlHT1mWtsgbch ಸಂಘದ ಅಧ್ಯಕ್ಷರಾದ ಜೀವನ್ ಲಾಯ್ಡ್‌ ಪಿಂಟೊ ಇವರು ಸ್ವಾಗತಿಸಿ, ಸಂಘದ ಪ್ರಗತಿಯ ಅಂಕಿ ಅಂಶಗಳನ್ನು, ಮುಂದಿನ ಯೋಜನೆಗಳನ್ನು ಮಂಡಿಸಿದರು. ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ ಸರ್ವರನ್ನು ಸ್ಮರಿಸುತ್ತಾ, ಗತ ಸಾಲಿನಲ್ಲಿ ದೈವಾಧೀನರಾದಂತಹ ಸಂಘದ ಸ್ಥಾಪಕ ಅಧ್ಯಕ್ಷರಾದ ದಿ.ಲಿಗೋರಿ ಲೋಬೊ ಹಾಗೂ ಸಂಘದಲ್ಲಿ ಸೇವೆ ಸಲ್ಲಿಸಿ ದೈವಾಧೀನರಾದ ನಿರ್ದೇಶಕರಿಗೆ ಹಾಗೂ ಸದಸ್ಯರಿಗೆ ಸಂತಾಪ ಸೂಚಿಸಿದರು. ಸಂಘವು ಪ್ರಸಕ್ತ ವರ್ಷದಲ್ಲಿ ರೂ.930.71 ಕೋಟಿ ವ್ಯವಹಾರ ನಡೆಸಿ, ಮಾರ್ಚ್ ಅಂತ್ಯಕ್ಕೆ ರೂ.3.87 ಕೋಟಿ ಪಾಲು ಬಂಡವಾಳ, ರೂ.121.69 ಕೋಟಿ ಠೇವಣಿ, ರೂ. 110.78 ಕೋಟಿ ಸದಸ್ಯರ ಹೊರಬಾಕಿ ಸಾಲದೊಂದಿಗೆ,…

Read More

ಮಂಗಳೂರು: ಇಲ್ಲಿನ ಜನತಾ ಬಜಾರ್‌ ಬಿಲ್ಡಿಂಗ್‌ನಲ್ಲಿ ಕೇಂದ್ರ ಕಚೇರಿ ಹೊಂದಿರುವ ತುಳುನಾಡು ವಿವಿಧೋದ್ದೇಶ ಸಹಕಾರ ಸಂಘದ 16ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಂಘದ ಅಧ್ಯಕ್ಷ ನಾಗಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಂಘದಲ್ಲಿ 63 ಲಕ್ಷ ರೂ. ಪಾಲು ಬಂಡವಾಳವಿದ್ದು, 3.93 ಕೋಟಿ ರೂ. ಠೇವಣಿ ಇದೆ. 2.03 ಕೋಟಿ ರೂ. ಸಾಲ ವಿತರಿಸಲಾಗಿದೆ. 51 ಲಕ್ಷ ರೂ. ವಿವಿಧ ನಿಧಿಗಳಿವೆ. ವರದಿ ವರ್ಷದಲ್ಲಿ 15.38 ಲಕ್ಷ ರೂ. ಲಾಭ ದಾಖಲಿಸಿದ್ದು, ಶೇ.12 ಡಿವಿಡೆಂಡ್‌ ನೀಡಲು ನಿರ್ಧರಿಸಲಾಗಿದೆ. ಸಂಘದ ಉಪಾಧ್ಯಕ್ಷ ಸಂಜೀವ ಎಚ್‌., ನಿರ್ದೇಶಕರಾದ ಬಿ.ಪಿ ಹರೀಶ್‌ ಕುಮಾರ್‌, ಚಂಚಲಾ ತೇಜೋಮಯ, ಕೃತಿನ್‌ ಕುಮಾರ್‌, ಪದ್ಮನಾಭ ಕೋಟ್ಯಾನ್‌, ಪರಮೇಶ್ವರ ನಾಯ್ಕ್‌, ಆನಂದ ಪಾಂಗಾಳ, ಶಂಕರ ಕೃಷ್ಣ ಭಟ್‌, ಲೋಕನಾಥ ಪೂಜಾರಿ ಬಿ., ವಿಶ್ವನಾಥ ಅಮೀನ್‌ ಕಲ್ಲಾಪು, ಪ್ರತಿಭಾ ಶೆಟ್ಟಿ, ರಮಣಿ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ಭಟ್‌ ಭಾಗವಹಿಸಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694…

Read More

ಬಾಗಲಕೋಟೆ: ಇಲ್ಲಿನ ಶ್ರೀ ಕೂಡಲಸಂಗಮೇಶ್ವರ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 50 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಉಪಾಧ್ಯಕ್ಷ ಬಸಪ್ಪ ಟಕ್ಕಳಕಿ ತಿಳಿಸಿದರು. https://chat.whatsapp.com/EbVKVnWB6rlHT1mWtsgbch ಬಾಗಲಕೋಟೆಯಲ್ಲಿ ಭಾನುವಾರ ಜರುಗಿದ ಸಂಘದ 20ನೇ ವರ್ಷದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ 2024 -25ರ ಸಾಲಿನಲ್ಲಿ 2030 ಸದಸ್ಯರನ್ನು ಹೊಂದಿದ್ದು, 18 ಕೋಟಿ ರೂ.ಗಳ ದುಡಿಯುವ ಬಂಡವಾಳವಿದೆ. 11 ಕೋಟಿ ರೂ.ಗೂ ಹೆಚ್ಚು ಹಣ ಸಾಲದ ರೂಪದಲ್ಲಿ ಸದಸ್ಯರಿಗೆ ನೀಡಲಾಗಿದೆ. ಒಂದೂವರೆ ಕೋಟಿ ಶೇರು ಬಂಡವಾಳವನ್ನು ಸಂಘ ಹೊಂದಿದೆ. ಸಂಘ ಪ್ರಾರಂಭವಾಗಿ 20 ವರ್ಷ ಪೂರೈಸಿದೆ. ಸಂಘದ ಅಮೋಘ ಬೆಳವಣಿಗೆ, ಸದಸ್ಯರುಗಳ ಸಹಕಾರ, ಹಗಲಿರುಳು ಶ್ರಮಿಸಿದ ಸಿಬ್ಬಂದಿ ವರ್ಗ, ನಿರ್ದೇಶಕ ಮಂಡಳಿಯ ಅವಿರತ ಪ್ರಯತ್ನದ ಫಲವಾಗಿ ಅತ್ಯಂತ ಕಡಿಮೆ ಅವದಿಯಲ್ಲಿ ಅತಿ ಶೀಘ್ರ ಪ್ರಗತಿಗೆ ಮುನ್ನೋಟ ಬರೆದು ಅದಕ್ಕೆ ಅನುಗುಣವಾಗಿ ಗುರಿ ಮುಟ್ಟಿದ್ದು ಸಂತೋಷವಾಗಿದೆ. 2005ರಲ್ಲಿ ಕೇವಲ ಐದು ಲಕ್ಷಗಳಿಂದ ಪ್ರಾರಂಭವಾಗಿದ್ದ…

Read More