Author: admin

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ಇದರ ೨೦೨೪-೨೫ನೇ ಸಾಲಿನ ಸಹಕಾರಿ ಶಿಕ್ಷಣ ನಿಧಿಯ ಚೆಕ್‌ ಅನ್ನು ಬ್ಯಾಂಕಿನ ಅಧ್ಯಕ್ಷರಾದ ಹೆಚ್.ಜಗನ್ನಾಥ ಸಾಲಿಯಾನ್ ಇವರು ಕೆ.ಐ.ಸಿ.ಎಂ ಮೂಡಬಿದಿರೆ ಇದರ ಪ್ರಥಮದರ್ಜೆ ಸಹಾಯಕರಾದ ಹೊನ್ನಪ್ಪ ಇವರಿಗೆ ಹಸ್ತಾಂತರಿಸಿದರು. https://chat.whatsapp.com/JVAtKKe2M19AFO3W5629ZS?mode=ems_copy_t ಈ ವೇಳೆ ಬ್ಯಾಂಕಿನ ನಿರ್ದೇಶಕರಾದ ದಯಾನಂದ ಆಳ್ವ ಕೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೃಷ್ಣ ಮುರಳಿ ಶ್ಯಾಮ್ ಕೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿಗಳಾದ ಚಂದ್ರಹಾಸ ರಾಣ್ಯ ಡಿ, ಲೆಕ್ಕಾಧಿಕಾರಿಗಳಾದ ಕುಶಾಲಪ್ಪ ಶೆಟ್ಟಿ ಪಿ ಹಾಗೂ ಲೆಕ್ಕಿಗ ಚಂದ್ರಶೇಖರ ಎ ಇವರು ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ಕಟೀಲು: ನಂದಿನಿ ಪತ್ತಿನ ಸಹಕಾರ ಸಂಘ ಕಟೀಲು ಇದರ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಸಂಘದ ಅಧ್ಯಕ್ಷರಾದ ಕೆ.ನೀಲಯ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಆಡಳಿತ ಕಚೇರಿಯ ವಠಾರದಲ್ಲಿ ನಡೆಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಕೆರಮ ಸ್ವಾಗತಿಸಿದರು. ಸಾಮಾನ್ಯ ಸಭೆಯ ನೋಟೀಸ್ ಅನ್ನು ಸಂಘದ ಸಿಬ್ಬಂದಿ ದಿವ್ಯಾ ಡಿ.ಅಮೀನ್ ಓದಿದರು. ಕಳೆದ ಸಾಲಿನ ಮಹಾಸಭೆಯ ನಡವಳಿಕೆಗಳನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ ಶೆಟ್ಟಿ ಕೆರಮ ಮಂಡಿಸಿದರು. ಸಂಘದ ಉಪಾಧ್ಯಕ್ಷೆ ಬಬಿತಾ ಎಂ 2024-25ನೇ ಸಾಲಿನ ಆಡಳಿತ ವರದಿ ಮಂಡಿಸಿ, 2025-26ನೇ ಸಾಲಿನ ಲೆಕ್ಕ ಪರಿಶೋಧಕರ ನೇಮಕಾತಿ ಬಗ್ಗೆ ಮಂಡಿಸಿದರು. 2025-26ನೇ ಸಾಲಿನ ಬಜೆಟ್ ಅನ್ನು ಸಂಘದ ಹಿರಿಯ ಸಿಬ್ಬಂದಿ ದಿವ್ಯಾ ಡಿ.ಅಮೀನ್ ಮಂಡಿಸಿದರು. ಕಳೆದ ಸಾಲಿನ ಬಜೆಟ್‌ಗಿಂತ ಹೆಚ್ಚು ಆದ ಖರ್ಚನ್ನು ಸಂಘದ ಹಿರಿಯ ನಿರ್ದೇಶಕರಾದ ಸೀತಾರಾಮ ಬಂಗೇರ ಮಂಡಿಸಿದರು. ನಿರ್ದೇಶಕರಾದ ಬಿ.ಲತಾ 2025-26ನೇ ಸಾಲಿನ ಕ್ರಿಯಾ ಯೋಜನೆಗಳನ್ನು ಮಂಡಿಸಿದರು. 2024–25ನೇ ಸಾಲಿನ ಲೆಕ್ಕ ಪರಿಶೋಧಿತ ಆರ್ಥಿಕ ತಖ್ತೆಗಳನ್ನು,…

Read More

ಮೂಡುಬಿದಿರೆ: ಶಿರ್ತಾಡಿ ನವಮೈತ್ರಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 2024-2025ನೇ ಸಾಲಿನ ವಾರ್ಷಿಕ ಮಹಾಸಭೆಯು ಶಿರ್ತಾಡಿ ಹೋಟೆಲ್ ಶ್ರೀ ಬ್ರಹ್ಮ ರೆಸಿಡೆನ್ಸಿ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಸತೀಶ್ ವಿ.ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಭಾನುವಾರ ಜರುಗಿತು. https://chat.whatsapp.com/JVAtKKe2M19AFO3W5629ZS?mode=ems_copy_t 2೦12ರಲ್ಲಿ ಪ್ರಾರಂಭಗೊಂಡ ನವಮೈತ್ರಿ ಸಹಕಾರಿಯು 13 ವರ್ಷಗಳನ್ನು ಪೂರೈಸಿ ಶಿರ್ತಾಡಿ, ನಾರಾವಿ ಮತ್ತು ಅಳದಂಗಡಿಯಲ್ಲಿ ಶಾಖೆ ಹೊಂದಿ ಸದಸ್ಯ ಗ್ರಾಹಕರಿಗೆ ವ್ಯವಹಾರ ನಡೆಸಲು ಅನುಕೂಲ ಕಲ್ಪಿಸಿದೆ. ಸಹಕಾರಿಯು 20.36 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, 17.07 ಕೋಟಿ ಸದಸ್ಯ ಠೇವಣಿ ಹೊಂದಿದೆ. ಪ್ರಸಕ್ತ ವರ್ಷದಲ್ಲಿ 51.81 ಲಕ್ಷ ರೂ. ಲಾಭ ಪಡೆದುಕೊಂಡಿದೆ. ಸಹಕಾರಿ ಸಂಘವು ಸದಸ್ಯರ ಅನುಕೂಲಕ್ಕಾಗಿ ಯುನಿಕ್ಸ್ ಮೊಬೈಲ್ ಆಪ್ ಬಿಡುಗಡೆಗೊಳಿಸಿದ್ದು, ಇದರ ಮೂಲಕ ಗ್ರಾಹಕರು ಸಂಘದಲ್ಲಿನ ವ್ಯವಹಾರವನ್ನು ತಿಳಿದುಕೊಳ್ಳಬಹುದಾಗಿದೆ. ಪ್ರಸಕ್ತ ವರ್ಷದಲ್ಲಿ ಶೇಕಡ 10 ಲಾಭಾಂಶ ನೀಡಲು ಮಹಾಸಭೆಯಲ್ಲಿ ನಿರ್ಧರಿಸಲಾಗಿದೆ. ಒಟ್ಟಾರೆಯಾಗಿ ಪ್ರಸಕ್ತ ವರ್ಷ ಇನ್ನೂರು ಕೋಟಿ ರೂ. ವ್ಯವಹಾರವನ್ನು ಮಾಡಿ ಮೆಚ್ಚುಗೆ ಗಳಿಸಿದೆ. ಇ ಸ್ಟ್ಯಾಂಪಿಂಗ್, ಪಹಣಿ ಪತ್ರ ಸೇವೆ,…

Read More

ಕುಂದಾಪುರ: ಇಲ್ಲಿನ ಹೊಸಾಡು ಸೇವಾ ಸಹಕಾರ ಸಂಘ ಮುಳ್ಳಿಕಟ್ಟೆ ಇದರ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಹೊಸಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಇವರು ವಹಿಸಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಲೆಕ್ಕಪರಿಶೋಧನಾ ವರದಿ ವಾಚಿಸಿದರು. ನಿರ್ದೇಶಕರಾದ ಸತೀಶ್ ಶೆಟ್ಟಿ ಯಳೂರು ಸ್ವಾಗತಿಸಿದರು. ವರದಿ ವರ್ಷದಲ್ಲಿ ಸಂಘವು ಗಳಿಸಿದ ಲಾಭಾಂಶ ಹಂಚಿಕೆ ಮಾಡಿ ಎ ವರ್ಗದ ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಿಸಲಾಯಿತು. ಉತ್ತಮ ಗ್ರಾಹಕರನ್ನು ಗುರುತಿಸಿ ಗೌರವಿಸಲಾಯಿತು. ಉಪಾಧ್ಯಕ್ಷರಾದ ಚಂದ್ರಶೇಖರ, ನಿರ್ದೇಶಕರಾದ ದಿನೇಶ್ ಜೋಗಿ, ಶಶಿಧರ ಅಡಿಗ, ಪ್ರದೀಪ ಬಿಲ್ಲವ, ರಾಮ ಗಾಣಿಗ, ಶರತ್ ಶೆಟ್ಟಿ, ನವೀನ್ ಫೆರ್ನಾಂಡಿಸ್, ರೇಖಾ ಪುತ್ರನ್, ಅಕ್ಷತಾ ರವೀಂದ್ರ ಹಾಗೂ ಸಂಘದ ಸದಸ್ಯರು ಹಾಜರಿದ್ದರು. ಸಿಬ್ಬಂದಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಪ್ರಶಾಂತ್ ವಂದಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com

Read More

ತೆರಿಗೆ ಕಟ್ಟುವ ಪ್ರಕ್ರಿಯೆ ಸರಳ, ಪಾರದರ್ಶಕ ಮತ್ತು ಜನಸ್ನೇಹಿಯಾಗಿ ರೂಪು: ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರ ಅಭಿಪ್ರಾಯ ಮಂಗಳೂರು: ನವರಾತ್ರಿ ಹಬ್ಬದ ಶುಭ ಸಂದರ್ಭದಲ್ಲಿ ದೇಶದಲ್ಲಿ ಜಾರಿಗೆ ಬರುತ್ತಿರುವ GST 2.0 ಸುಧಾರಣಾ ಕ್ರಮವು ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದುಕೊಡಲಿದೆ. ಇದು ತೆರಿಗೆ ಕಟ್ಟುವ ಪ್ರಕ್ರಿಯೆಯನ್ನು ಸರಳ, ಪಾರದರ್ಶಕ ಮತ್ತು ಜನಸ್ನೇಹಿಯಾಗಿ ರೂಪಿಸುವುದರ ಜೊತೆಗೆ ಮಧ್ಯಮ ವರ್ಗ ಹಾಗೂ ಕೆಳವರ್ಗದ ಜನರ ಆರ್ಥಿಕ ಹಿತಾಸಕ್ತಿಗೆ ಅನುಕೂಲಕರವಾಗಲಿದೆ ಎಂದು ಸಹಕಾರ ಅಧ್ಯಯನ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಡಾ. ಎಸ್‌ ಆರ್‌ ಹರೀಶ್‌ ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. https://chat.whatsapp.com/JVAtKKe2M19AFO3W5629ZS?mode=ems_copy_t ದೇಶದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯ ಹಂತಗಳನ್ನು ಕಡಿಮೆ ಮಾಡಿದ್ದು ಹಲವು ವಸ್ತುಗಳ ಮೇಲಿನ ಜಿಎಸ್‌ಟಿ ದರವನ್ನು ಗಣನೀಯವಾಗಿ ಇಳಿಕೆ ಮಾಡಿದೆ. ದೈನಂದಿನ ಬಳಕೆಯ ಹಲವಾರು ವಸ್ತುಗಳು, ಸೇವಾ ವಲಯದ ಹಲವು ಪ್ರಕಲ್ಪಗಳ ಬೆಲೆ ಇಳಿಕೆಯಾಗಲಿದ್ದು ಇದರಿಂದ ಜನಸಾಮಾನ್ಯರ ಜೀವನ ಮಟ್ಟ…

Read More

ವ್ಯವಹಾರ ವಹಿವಾಟು ₹1300 ಕೋಟಿ ದಾಟಿ ಮುನ್ನಡೆ: ಅಧ್ಯಕ್ಷ ಅನಿಲ್‌ ಲೋಬೊ ಘೋಷಣೆ ಮಂಗಳೂರು: ಎಂ.ಸಿ.ಸಿ. ಬ್ಯಾಂಕ್ 2024–25ನೇ ಹಣಕಾಸು ವರ್ಷದಲ್ಲಿ ಎಲ್ಲಾ ಹಣಕಾಸು ನಿಯತಾಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಷೇರುದಾರರಿಗೆ 10% ಲಾಭಾಂಶ ಘೋಷಿಸಿದೆ. 2024–25ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ₹9.51 ಕೋಟಿಗಳ ಅಭೂತಪೂರ್ವ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಹೇಳಿದರು. ಮಂಗಳೂರಿನ ಕೊಡಿಯಾಲ್‌ಬೈಲ್‌ನ ಸೇಂಟ್ ಅಲೋಶಿಯಸ್ ಪಿ.ಯು. ಕಾಲೇಜಿನ ಲೊಯೊಲಾ ಹಾಲ್‌ನಲ್ಲಿ ಭಾನುವಾರ ಬ್ಯಾಂಕಿನ 107ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. https://chat.whatsapp.com/JVAtKKe2M19AFO3W5629ZS?mode=ems_copy_t ಬ್ಯಾಂಕಿನ ದಾಖಲೆಯ ಕಾರ್ಯಕ್ಷಮತೆಯನ್ನು ಗಮನಕ್ಕೆ ತಂದ ಅವರು, ₹9.51 ಕೋಟಿ ನಿವ್ವಳ ಲಾಭ, ₹705.40 ಕೋಟಿ ಠೇವಣಿಗಳು (10% ಹೆಚ್ಚಳ), ₹535.49 ಕೋಟಿ ಮುಂಗಡಗಳು (25.21% ಬೆಳವಣಿಗೆ), ₹830.30 ಕೋಟಿ ದುಡಿಯುವ ಬಂಡವಾಳ (10.03% ಹೆಚ್ಚಳ), ₹32.43 ಕೋಟಿ ಷೇರು ಬಂಡವಾಳ (14.07% ಬೆಳವಣಿಗೆ), ಎನ್‌ಪಿಎ 1.40%, ಆರ್‌ಒಎ 1.15%, ಮಾರ್ಚ್ 31, 2025ರಂತೆ…

Read More

ನೂತನ ಕಟ್ಟಡದ ಉದ್ಘಾಟನೆ, ಶೇ.18 ಲಾಭಾಂಶ ಘೋಷಣೆ ಸಿಂಧನೂರು: ಇಲ್ಲಿನ ಕಿರಣ ಸ್ವ-ಸಹಾಯ ಸೌಹಾರ್ದ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆ ಹಾಗೂ 24ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಿಂಧನೂರಿನ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಜರುಗಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸುಕೋ ಬ್ಯಾಂಕ್ ಸಂಸ್ಥಾಪಕ ಮನೋಹರ ಮಸ್ಕಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಹಕಾರಿಗಳಿಗೆ ವಿಶೇಷವಾಗಿ, ಕಲ್ಯಾಣ ಕರ್ನಾಟಕ ಕಲಬುರಗಿ ವಿಭಾಗದಲ್ಲಿ ಸಹಕಾರ ಸಂಘಗಳ ಇನ್ನೂ ಹೆಚ್ಚಿನ ಆರ್ಥಿಕ ಅಭಿವೃದ್ಧಿಯನ್ನು ಹೊಂದಬೇಕು, ಕಾರ್ಯದಕ್ಷತೆಯಿಂದ ಮತ್ತು ಪ್ರಾಮಾಣಿಕತೆಯಿಂದ ಸದಸ್ಯರಿಗೆ ವಿಶೇಷ ಯೋಜನೆಗಳನ್ನು ಪರಿಚಯಿಸುವುದರ ಮೂಲಕ ಉಳಿತಾಯ ಹಾಗೂ ಸಾಲ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು. ಪಂಚಮವೇದ ಸಾವಯವ ಕೃಷಿ ತಜ್ಞರಾದ ದಯಾವತಿ ಮಸ್ಕಿ ಅವರು ಸಹಕಾರಿಯ ಸದಸ್ಯರ ಸಾವಯವ ಕೃಷಿಯಿಂದ ಸಶಕ್ತ, ಸಮೃದ್ಧಿ, ಗುಣಮಟ್ಟದ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ತುಂಬಾ ಸಹಾಯಕಾರಿಯಾಗಿದೆ. ಸ್ವತಹ ನಾನೇ ಸಾವಯವ ಕೃಷಿಯನ್ನು ಮಾಡಿ ವಾರ್ಷಿಕವಾಗಿ ರೂ.24 ಲಕ್ಷ ಆದಾಯ ಪಡೆಯುತ್ತಿದ್ದೇನೆ ಎಂದು ತಿಳಿಸಿದರು. ನಂತರ ಸಹಕಾರಿಯ ಅಧ್ಯಕ್ಷರಾದ ಮಂಜುಳಾ…

Read More

ನಿರಂಜನ ಪೀಠ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಶ್ರೀ ರುದ್ರಮುನಿ ಸ್ವಾಮೀಜಿ ಆಶೀರ್ವಚನ ಅರಸೀಕೆರೆ: ಒಬ್ಬರಿಗೊಬ್ಬರ ಸಹಕಾರದಿಂದ ಸಹಕಾರಿ ಕ್ಷೇತ್ರವು ಉನ್ನತ ಮಟ್ಟದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದು ನಿರಂಜನ ಪೀಠ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ, ಮಾಡಾಳು ಶ್ರೀ ನಿರಂಜನ ಪೀಠದ ಪೀಠಾಧ್ಯಕ್ಷರಾದ ರುದ್ರಮುನಿ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. https://chat.whatsapp.com/JVAtKKe2M19AFO3W5629ZS?mode=ems_copy_t ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮ ನಿರಂಜನ ಪೀಠದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಶ್ರೀ ನಿರಂಜನ ಪೀಠ ಸೌಹಾರ್ದ ಸಹಕಾರ ಸಂಘದ ಮೊದಲನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಹಕಾರ ಸಂಸ್ಥೆಗಳಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು, ನಿರ್ದೇಶಕರು ಹಾಗೂ ನೌಕರ ವರ್ಗ ಪ್ರಾಮಾಣಿಕತೆಯಿಂದ ಪಾರದರ್ಶಕವಾಗಿ ಬಡವ ಬಲ್ಲಿದ ಎಂಬ ತಾರತಮ್ಯವಿಲ್ಲದೆ ಉತ್ತಮ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಪಥದಲ್ಲಿ ಸಾಗುವುದಲ್ಲದೆ ಸಂಘದ ಷೇರುದಾರರಿಗೆ ಮತ್ತು ರೈತರಿಗೆ ಸಾಲ ನೀಡಲು ಕೂಡ ಅನುಕೂಲವಾಗುತ್ತದೆ. ಆದ್ದರಿಂದ ಎಲ್ಲರೂ ಸಂಘದ ಅಭ್ಯುದಯಕ್ಕೆ ಶ್ರಮಿಸುವ…

Read More

ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ಬಂಟ್ವಾಳ: ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದ ಅಡಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಬರುವ ಸಹಕಾರಿಗಳು ಮತ್ತು ಗ್ರಾಹಕರಿಗೆ ದೇಶೀಯ ಉತ್ಪನ್ನಗಳ ಉತ್ಪಾದನೆ, ಬಳಕೆಗೆ ಹಾಗೂ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬದಲಾಗಿ ಸಾವಯವ ಗೊಬ್ಬರಗಳ ಬಳಕೆಗೆ ಉತ್ತೇಜನ ನೀಡಿದಾಗ ಭಾರತದ ಜಿಡಿಪಿ ಏರಿಕೆಯಾಗಿ ಪ್ರಾಥಮಿಕ ಸಹಕಾರ ಸಂಘಗಳು ಬಲವರ್ಧನೆಯಾಗುವುದರೊಂದಿಗೆ ಭಾರತ ಜಗತ್ತಿನಲ್ಲಿಯೇ ಅಗ್ರರಾಷ್ಟ್ರವಾಗಿ ಹೊರ ಹೊಮ್ಮಲ್ಲಿದ್ದು ಸಹಕಾರ ಸಂಘಗಳು ದೇಶೀಯ ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಸಹಕರಿಸಬೇಕು ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು. https://chat.whatsapp.com/JVAtKKe2M19AFO3W5629ZS?mode=ems_copy_t ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಿದ ಸಂಘದ 2024-25ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ…

Read More

ಮಂಗಳೂರು: ಶ್ರೀಶಾ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ವತಿಯಿಂದ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ನವರಾತ್ರಿಯ ಸಂದರ್ಭಕ್ಕೆ ಬೇಕಾಗುವಂತ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ 5000 ಪ್ರಸಾದ ನೀಡುವ ಕೈಚೀಲಗಳು ಮತ್ತು ಭಕ್ತರಿಗೆ ದೇವಸ್ಥಾನದಲ್ಲಿ ಊಟಕ್ಕೆಂದು 500 ಸ್ಟೀಲ್ ತಟ್ಟೆಗಳನ್ನು ಶುಕ್ರವಾರ ದೇವಸ್ಥಾನದ ಆಡಳಿತ ಮೊಕ್ತೇಸರ ಅರುಣ ಐತಾಳ್ ಅವರಿಗೆ ದೇವಸ್ಥಾನದಲ್ಲಿ ಹಸ್ತಾಂತರಿಸಲಾಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಶ್ರೀಶಾ ಸೊಸೈಟಿಯ ಅಧ್ಯಕ್ಷ ಎಂ.ಎಸ್.ಗುರುರಾಜ್ ಅವರು ದೇವಸ್ಥಾನಕ್ಕೆ ವಸ್ತುಗಳನ್ನು ಹಸ್ತಾಂತರಿಸಿ ಮಾತನಾಡಿ, ಶ್ರೀಶಾ ಸೊಸೈಟಿಯು ಆರಂಭವಾಗಿ ಆರು ವರ್ಷಗಳಾದ ಶುಭವಸರದಲ್ಲಿ ಮಂಗಳೂರಿನ ಗ್ರಾಮದೇವತೆ ಮಂಗಳಾದೇವಿಯ ಭಕ್ತರಿಗೆ ಅನುಕೂಲವಾಗುವಂತ ಊಟದ ತಟ್ಟೆಗಳನ್ನು ಹಾಗೂ ದೇವರ ಪ್ರಸಾದ ನೀಡಲು ಚೀಲಗಳನ್ನು ದೇವಸ್ಥಾನಕ್ಕೆ ನೀಡಲು ಅವಕಾಶ ದೊರಕಿದ್ದು ನಮ್ಮ ಸೌಭಾಗ್ಯ. ಶ್ರೀ ಮಂಗಳಾದೇವಿಯು ನಮ್ಮ ನಿಮ್ಮನ್ನೆಲ್ಲಾ ಸಕಲ ಸೌಭಾಗ್ಯಗಳನ್ನಿತ್ತು ಅನುಗ್ರಹಿಸಲಿ ಎಂದು ಮಾತೆಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು. ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅರುಣ ಐತಾಳ್ ಅವರು ಶ್ರೀಶಾ ಸೌಹಾರ್ದ ಸೊಸೈಟಿಯ ಈ ದೊಡ್ಡ ಕೊಡುಗೆ ದೇವಸ್ಥಾನಕ್ಕೆ ತುಂಬಾ…

Read More