ಮಂಗಳೂರು: ಬೋಳಾರ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ 14ನೇ ವಾರ್ಷಿಕ ಸಾಮಾನ್ಯ ಸಭೆಯು ಭಾನುವಾರ ಶ್ರೀ ಮಂಗಳಾದೇವಿ ದೇವಸ್ಥಾನದ ಬಳಿ ಇರುವ ಶ್ರೀದೇವಿ ನಿಲಯದಲ್ಲಿ ಸಹಕಾರಿಯ ಅಧ್ಯಕ್ಷರಾದ ನವೀನ್ ಶೆಟ್ಟಿ ಕುತ್ತಾರುಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಉಪಾಧ್ಯಕ್ಷರಾದ ಬಿ.ರಮಾನಂದ ಪೂಜಾರಿ, ಸ್ವಾಗತಿಸಿ ಅಧ್ಯಕ್ಷರ ಭಾಷಣ ನೆರವೇರಿಸಿದರು. ನಿರ್ದೇಶಕರಾದ ವರುಣ್ ರಾಜ್ ಅಂಬಟ್ ವಾರ್ಷಿಕ ವರದಿ ಮಂಡಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮನಾಥ ಬಿ ಇವರು 2024-25ನೇ ಸಾಲಿನ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕರಾದ ಕೃಷ್ಣಮೂರ್ತಿ ಐತಾಳ್ 2025-26ನೇ ಸಾಲಿನ ಮುಂಗಡ ಬಜೆಟ್ ಮಂಡಿಸಿದರು. ಸೊಸೈಟಿಯು ವರದಿ ಸಾಲಿನಲ್ಲಿ 38 ಕೋಟಿ ರೂ. ವ್ಯವಹಾರ ಮಾಡಿದ್ದು, 13,55,645.43 ಲಾಭಾಂಶ ಗಳಿಸಿದೆ. ಸದಸ್ಯರಿಗೆ 12% ಡಿವಿಡೆಂಡ್ ಘೋಷಿಸಲಾಯಿತು.
ಸಹಕಾರಿಯ ನಿರ್ದೇಶಕರಾದ ಸುಜಿತ್ ಕುಮಾರ್, ರೊನಾಲ್ಡ್ ಡಿಸೋಜ, ಉದಯ್ ಕುಮಾರ್, ರಾಜೇಂದ್ರ ವಿಠ್ಠಲ್, ಮಮತಾ ಮನೋಜ್ ಕುಮಾರ್ ಮತ್ತು ಉಷಾ ಎಸ್ ರಾವ್ ಹಾಗೂ ಹಿರಿಯ ಸದಸ್ಯರಾದ ಬಿ.ವಿಠ್ಠಲ್ ಪೂಜಾರಿ, ಶ್ರೀ ಮೋನಪ್ಪ ಅಂಚನ್ ಮತ್ತು ಬಿ.ಪ್ರೇಮ್ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com



