Author: admin
ಮಂಗಳೂರು: ಸೈಂಟ್ ಅಲ್ಪೋನ್ಸಾ ಸೌಹಾರ್ದ ಸಹಕಾರಿ ಸಂಘದ ಎರಡನೇ ವಾರ್ಷಿಕ ಮಹಾಸಭೆ ಕಂಕನಾಡಿಯ ಸೈಂಟ್ ಅಲ್ಪೋನ್ಸಾ ಚರ್ಚ್ ಹಾಲ್‌ನಲ್ಲಿ ಭಾನುವಾರ ನಡೆಯಿತು. https://chat.whatsapp.com/EbVKVnWB6rlHT1mWtsgbch ಸೈಂಟ್ ಅಲ್ಪೋನ್ಸಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಮನೋಜ್ ಪಿ.ವಿ, ರೆ.ಫಾದರ್ ಅಗಸ್ಟಿನ್ ಪಿ ಹಾಗೂ ಎಲ್ಲಾ ನಿರ್ದೇಶಕರು ಸೇರಿ ದೀಪ ಬೆಳಗಿಸಿದರು. ಸಹಕಾರಿಯ ನಿರ್ದೇಶಕರಾದ ಜೇಮ್ಸ್ ಮುಂಡಟ್ಟು ವರ್ಕೀ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾನಂದ ಟಿ.ಬಂಗೇರ ವಾರ್ಷಿಕ ಸಭೆಯ ಸೂಚನಾ ಪತ್ರ ಮಂಡಿಸಿದರು. ಸಹಕಾರಿಯ ಸಿಬ್ಬಂದಿ ವೇದಾವತಿ ಹಿಂದಿನ ಸಭೆಯ ನಡಾವಳಿಗಳನ್ನು ಮಂಡಿಸಿದರು. ನಿರ್ದೇಶಕರಾದ ಜಾಯ್ ವರ್ಗೀಸ್ ೨೦೨೪-೨೫ನೇ ಸಾಲಿನ ಆಡಳಿತ ಮಂಡಳಿಯ ವರದಿ ಮಂಡಿಸಿದರು. ನಿರ್ದೇಶಕ ಜಾರ್ಜ್ ಜೋಸೆಫ್ ಕೆ ೨೦೨೪-೨೫ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಹಾಗೂ ಪರಿಶೋಧಿತ ಲೆಕ್ಕಪತ್ರ ಮಂಡಿಸಿದರು. ಸಹಕಾರಿಯ ಅಧ್ಯಕ್ಷ ಮನೋಜ್ ಪಿ.ವಿ, ಅಧ್ಯಕ್ಷೀಯ ಭಾಷಣದಲ್ಲಿ ಸಹಕಾರಿಯ ಏಳಿಗೆಯು ಸಹಕಾರಿಯ ಸದಸ್ಯರ ಸಹಕಾರದಿಂದ ಆಗುತ್ತದೆ. ಸದಸ್ಯರ ಸಹಕಾರ ಅತೀ ಮುಖ್ಯವೆಂದು ಹೇಳಿದರು. ಸಹಕಾರಿಯ ಮಾರ್ಗದರ್ಶಕರಾದ ಫಾದರ್ ಅಗಸ್ಟಿನ್ ಪಿ…
ಕಾರ್ಕಳ: ಇಲ್ಲಿನ ಕೊಂಕಣ್ ಕ್ಯಾಥೋಲಿಕ್ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ಕಾರ್ಕಳ ಕ್ರಿಸ್ಟ್ ಕಿಂಗ್ ಚರ್ಚ್ ಸಭಾಭವನದಲ್ಲಿ ನಡೆಯಿತು. https://chat.whatsapp.com/EbVKVnWB6rlHT1mWtsgbch ಸಹಕಾರಿಯ ಅಧ್ಯಕ್ಷರಾದ ಡಾ|ಪೀಟರ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ರೋಶನ್ ಡಿಸೋಜ ವರ್ಷದ ವರದಿ ಮಂಡಿಸಿದರು. ಅಧ್ಯಕ್ಷ ಡಾ. ಪೀಟರ್ ಫರ್ನಾಂಡಿಸ್ ಮಾತನಾಡಿ, ಸಹಕಾರಿಯು ಹಿಂದಿನ ವರ್ಷ ರೂ. 81 ಕೋಟಿ ವ್ಯವಹಾರ ಮಾಡಿದ್ದು, ಮುಂದಿನ ವರ್ಷ 100 ಕೋಟಿ ರೂ. ವ್ಯವಹಾರ ಮಾಡುವ ಯೋಜನೆ ಮಾಡಲಾಗಿದೆ. ಅಲ್ಲದೆ ವರ್ಷದ ಠೇವಣಿ ಹಿಂದಿನ ವರ್ಷದಿಂದ 12% ವೃದ್ದಿಯಾಗಿರುತ್ತದೆ. ಸದಸ್ಯರಿಗೆ 10% ಡಿವಿಡೆಂಡ್ ನೀಡುವುದರ ಕುರಿತು ಘೋಷಿಸಿದರು. ನಂತರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಾರ್ಕಳ ವಲಯದ 33 ಕ್ರೈಸ್ತ ವಿದ್ಯಾರ್ಥಿಗಳನ್ನು ಸನ್ಮಾನಿಲಾಯಿತು. ಮುಖ್ಯ ಅತಿಥಿಯಾಗಿ ಮಿಯಾರು ಚರ್ಚ್ ಧರ್ಮಗುರುಗಳಾದ ಅ|ವಂ| ಕ್ಯಾನೂಟ್ ಬರ್ಬೋಜ, ಕ್ರೈಸ್ಟ್ ಕಿಂಗ್ ಚರ್ಚ್ ಕಾರ್ಕಳ ಪಾಲನಾ ಸಮಿತಿ ಉಪಾಧ್ಯಕ್ಷರಾದ ನೋವೆಲ್ ಡಿಸಿಲ್ವ…
ಹಂಪನಕಟ್ಟೆಯಲ್ಲಿ ಉಚಿತ ವೈದ್ಯಕೀಯ, ನೇತ್ರ ತಪಾಸಣಾ, ದಂತ ತಪಾಸಣಾ ಶಿಬಿರದಲ್ಲಿ ಲಯನ್ ನರಸಿಂಹ ಪೈ ಅಭಿಮತ ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಹಂಪನಕಟ್ಟ ಶಾಖೆ ಮತ್ತು ದ.ಕ ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇವರ ಜಂಟಿ ಸಹಯೋಗದೊಂದಿಗೆ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮತ್ತು ಮಣಿಪಾಲ ಕಾಲೇಜ್ ಆಫ್ ಡೆಂಟಲ್ ಸೈನ್ಸನ್ ಮಂಗಳೂರು ಇವರ ನುರಿತ ವೈದ್ಯರ ತಂಡದವರಿಂದ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ತಪಾಸಣಾ ಶಿಬಿರವು ರಾಜ್ಯ ಸರ್ಕಾರಿ ನೌಕರರ ಸಂಘದ ಸಮುದಾಯ ಭವನ ಕಟ್ಟಡದ ಎರಡನೇ ಮಹಡಿಯಲ್ಲಿ ಇತ್ತೀಚೆಗೆ ಜರುಗಿತು. https://chat.whatsapp.com/EbVKVnWB6rlHT1mWtsgbch ಕಾರ್ಯಕ್ರಮವನ್ನು ನಿವೃತ್ತ ಸಹಕಾರಿ ಸಂಘಗಳ ಉಪನಿಬಂಧಕ ಚಂದ್ರಶೇಖರ್ ಸುವರ್ಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲಯನ್ಸ್ ಕ್ಲಬ್ ಮಂಗಳೂರು ಆದಿತ್ಯ ಇದರ ಅಧ್ಯಕ್ಷ ಲಯನ್ ನರಸಿಂಹ ಪೈ ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮುಂದಾಳತ್ವದಲ್ಲಿ…
ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಸಂಪೂರ್ಣ ಬೆಂಬಲ, ಧರ್ಮಸ್ಥಳದ ಪಾವಿತ್ರ್ಯ ರಕ್ಷಣೆಗೆ ಸಹಕಾರಿಗಳು ಬದ್ಧ: ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತಿರುವ ಧರ್ಮಸ್ಥಳದ ರಕ್ಷಣೆಗೆ ಎಲ್ಲರೂ ಕಟಿಬದ್ಧ: ಡಾ.ಎಂ ಮೋಹನ ಆಳ್ವ ಭಕ್ತರು, ಅಭಿಮಾನಿಗಳ ಪ್ರೀತಿ-ವಿಶ್ವಾಸ, ಗೌರವ, ಅಭಿಮಾನದಿಂದ ಹೆಚ್ಚಿನ ಉತ್ಸಾಹ: ಡಾ.ಡಿ.ವೀರೇಂದ್ರ ಹೆಗ್ಗಡೆ ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ನಡೆಯುತ್ತಿರುವ ಹಲವು ರೀತಿಯ ಷಡ್ಯಂತ್ರಗಳನ್ನು ವಿರೋಧಿಸಿ ಭಾನುವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮಸ್ತ ಸಹಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಧರ್ಮಜಾಗೃತಿ ಯಾತ್ರೆ ಕೈಗೊಂಡು ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ಸೂಚಿಸಿ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬ ಸಂದೇಶ ಸಾರಿದರು. https://chat.whatsapp.com/EbVKVnWB6rlHT1mWtsgbch ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನೇತೃತ್ವದಲ್ಲಿ ಸಹಕಾರಿಗಳು ಜೊತೆ ಸೇರಿ ಹಮ್ಮಿಕೊಂಡ ಧರ್ಮ ಜಾಗೃತಿ ಯಾತ್ರೆಯು ಆಯಾ ಕೇಂದ್ರಗಳಿಂದ ಸಾವಿರಾರು ವಾಹನಗಳ ಮೂಲಕ ಮಧ್ಯಾಹ್ನ 12 ಗಂಟೆಗೆ ಉಜಿರೆ ತಲುಪಿತು. ಅಲ್ಲಿಂದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ…
ಮಂಗಳೂರು: ಎಂಸಿಸಿ ಬ್ಯಾಂಕ್ ಮಂಗಳೂರು ತನ್ನ 12ನೇ ಎಟಿಎಂ ಅನ್ನು ಶನಿವಾರ ಕಿನ್ನಿಗೋಳಿ ಶಾಖೆಯಲ್ಲಿ ಉದ್ಘಾಟಿಸಿತು. https://chat.whatsapp.com/EbVKVnWB6rlHT1mWtsgbch ಈ ಎಟಿಎಂ ಅನ್ನು ಎಂಆರ್‌ಪಿಎಲ್‌ನ ಕಾರ್ಪೊರೇಟ್ ಬ್ರ‍್ಯಾಂಡಿoಗ್ ಮತ್ತು ಕಾರ್ಪೊರೇಟ್ ಕಮ್ಯುನಿಕೇಷನ್ ಚೀಫ್ ಜನರಲ್ ಮ್ಯಾನೇಜರ್ ಡಾ| ರುಡಾಲ್ಫ್ ಜೋಯರ್ ನೊರೊನ್ಹಾ ಉದ್ಘಾಟಿಸಿದರು. ಕಿನ್ನಿಗೋಳಿಯ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಚರ್ಚ್ ಧರ್ಮಗುರು ರೆವರೆಂಡ್ ಫಾದರ್ ಜೋಕಿಮ್ ಫೆರ್ನಾಂಡಿಸ್ ಅವರು ಎಟಿಎಂ ಅನ್ನು ಆಶೀರ್ವದಿಸಿದರು. ಹೊಸದಾಗಿ ಉದ್ಘಾಟನೆಗೊಂಡ ಎಟಿಎಂನಿoದ ಮೊದಲ ನಗದು ಹಿಂಪಡೆಯುವಿಕೆಯನ್ನು ಬಳ್ಕುಂಜೆಯ ಸೇಂಟ್ ಪೌಲ್ಸ್ ಚರ್ಚ್ ಧರ್ಮಗುರು ರೆವರೆಂಡ್ ಫಾದರ್ ಪೌಲ್ ಸಿಕ್ವೇರ ಮಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಎನ್‌ಆರ್‌ಐ, ಕಥೋಲಿಕ್ ಸಭಾ ಕಿನ್ನಿಗೋಳಿಯ ಕಾರ್ಯದರ್ಶಿ ಹಾಗೂ ವಿನ್ಸೆಂಟ್ ಡಿ ಪಾಲ್ ಲೆಕ್ಕಪರಿಶೋಧಕ ಜೆರೋಮ್ ಡಿ’ಅಲ್ಮೇಡಾ ಮತ್ತು ಕಿನ್ನಿಗೋಳಿಯ ಮೆಸ್ಸರ್ಸ್ ಚೈತನ್ಯ ಮೆಡಿಕಲ್ಸ್ ಮತ್ತು ಸಾಗರಿಕಾ ಅರೇಂಜರ್ಸ್ ಮಾಲೀಕ ಧನಂಜಯ ಪಿ. ಶೆಟ್ಟಿಗಾರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಮತ್ತು ಶಾಖಾ ವ್ಯವಸ್ಥಾಪಕ ಅನಿಲ್ ಆರ್.ಡಿಸೋಜ ಹಾಜರಿದ್ದರು. ಅಧ್ಯಕ್ಷತೆಯನ್ನು ಎಂಸಿಸಿ…
ಬೆಳ್ತಂಗಡಿ: ಪವಿತ್ರ ತೀರ್ಥಕ್ಷೇತ್ರ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮೇಲಿನ ಆರೋಪಗಳ ವಿರುದ್ಧ ಷಡ್ಯಂತ್ರ ಬಯಲಿಗೆಳೆದು ವಿಷಯದ ಸತ್ಯಾಸತ್ಯತೆಗಾಗಿ ಮತ್ತು ಪ್ರಕರಣಕ್ಕೆ ಅಂತ್ಯ ಹಾಡುವ ಸಲುವಾಗಿ ಕರಾವಳಿ ಜೆಲ್ಲೆಗಳ ಎಲ್ಲಾ ಸಹಕಾರಿಗಳ ಒಗ್ಗೂಡುವಿಕೆಯಿಂದ ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಸೆ.14ರಂದು ಮಧ್ಯಾಹ್ನ ಧರ್ಮಸ್ಥಳದಲ್ಲಿ ನಡೆಯಲಿರುವ ಸಹಕಾರಿಗಳ ಧರ್ಮಜಾಗೃತಿ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಮತ್ತು ಸಿಬ್ಬಂದಿಗಳು ಭಾಗವಹಿಸಿ ಯಾತ್ರೆಯನ್ನು ಯಶಸ್ವಿಗೊಳಿಸುವಂತೆ ದಕ್ಷಿಣ ಕನ್ನಡ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಚ್.ಪ್ರಭಾಕರ ಬೆಳ್ತಂಗಡಿ ಇವರು ಪತ್ರಿಕಾ ಹೇಳಿಕೆ ಮೂಲಕ ಸಹಕಾರಿಗಳನ್ನು ವಿನಂತಿಸಿದ್ದಾರೆ. https://chat.whatsapp.com/EbVKVnWB6rlHT1mWtsgbch ಕರಾವಳಿ ಜೆಲ್ಲೆಗಳಲ್ಲಿ ಹಲವಾರು ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸ್ವಂತ ಕಟ್ಟಡ ಇಲ್ಲದ ಹಾಲು ಉತ್ಪಾದಕ ಸಹಕಾರ ಸಂಘಗಳು ಕಟ್ಟಡ ನಿರ್ಮಾಣಕ್ಕೆ ಬೇಡಿಕೆ ಇಟ್ಟಾಗ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಆರ್ಥಿಕ ನೇರವು ನೀಡಿರುವುದಲ್ಲದೇ ಬೆಳ್ತಂಗಡಿ ತಾಲೂಕಿನಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಹೈನುಗಾರಿಕೆಗೆ…
ಮಾನ್ವಿ: ರಾಯಚೂರು ಜಿಲ್ಲೆಯ ಪೋತ್ನಾಳ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ಪೋತ್ನಾಳ ಇದರ 12ನೇ ವರ್ಷದ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. https://chat.whatsapp.com/EbVKVnWB6rlHT1mWtsgbch ಮಹಾಸಭೆಯನ್ನು ಸಹಕಾರಿಯ ಅಧ್ಯಕ್ಷರಾದ ಮೂರ್ತಯ್ಯ ಶೆಟ್ಟಿ ಕೆ ಮತ್ತು ಉಪಾಧ್ಯಕ್ಷರಾದ ಬಸವರಾಜ್ ಎಂ ದೀಪ ಬೆಳಗಿಸಿ ಉದ್ಘಾಟಿಸಿದರು. ಸಹಕಾರಿಯು 2024- 25ನೇ ಸಾಲಿನಲ್ಲಿ 43.76 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಸದಸ್ಯರ ಷೇರಿಗೆ ಶೇ.16 ಲಾಭಾಂಶ ಘೋಷಣೆ ಮಾಡಲಾಯಿತು. ಸಹಕಾರಿಯು ಕಳೆದ 2024-25ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಒಟ್ಟು 10 ಕೋಟಿ 44 ಲಕ್ಷ ರೂ. ಠೇವಣಿ ಹೊಂದಿದ್ದು, ಸದಸ್ಯರಿಗೆ ಒಟ್ಟು ರೂ. 9 ಕೋಟಿ 86 ಲಕ್ಷ ವಿವಿಧ ರೀತಿಯ ಸಾಲ ನೀಡಲಾಗಿದೆ. ಈ ವಾರ್ಷಿಕ ಮಹಾಸಭೆಗೆ ಸಹಕಾರಿಯ ನಿರ್ದೇಶಕರು.ಸಹಕಾರಿಯ ಕಾನೂನು ಸಲಹೆಗಾರರು, ಸಹಕಾರಿಯ ಲೆಕ್ಕಪರಿಶೋಧಕರು, ಸಹಕಾರಿಯ ಸಿಬ್ಬಂದಿ, ಪಿಗ್ಮಿ ಏಜೆಂಟರು ಮತ್ತು ಸಹಕಾರಿಯ ಸದಸ್ಯರು ಹಾಜರಿದ್ದರು. ಈ ಸಭೆಯ ಸಹಕಾರಿಯ ವಾರ್ಷಿಕ ವರದಿಯನ್ನು ಸಹಕಾರಿಯ ಮುಖ್ಯ ಕಾರ್ಯನಿರ್ವಾಹಕರಾದ ಸುಧಾಕರ್ ಆರ್ ಮಂಡಿಸಿದರು.…
ಬೆಂಗಳೂರು: ಇಲ್ಲಿನ ಚಿಕ್ಕಬಾಣಾವರ ಕೃಷ್ಣ ಕಾಲೇಜ್ ಹತ್ತಿರ, ಎಸ್.ಕೆ.ಆರ್. ಕಾಂಪ್ಲೆಕ್ಸ್, ರಾಘವೇಂದ್ರ ಲೇಔಟ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಮಹೇಶ್ವರಮ್ಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ ಸೆ.14ರಂದು ನಿಗದಿಯಾಗಿದೆ. https://chat.whatsapp.com/EbVKVnWB6rlHT1mWtsgbch ಚಿಕ್ಕಬಾಣಾವರ ಆಚಾರ್ಯ ಕಾಲೇಜು ರಸ್ತೆಯ ಕೆ.ಎಂ.ವಿ ರೆಡ್ ಹಿಲ್ಸ್ ಶಾಲೆಯ ಸಭಾಂಗಣದಲ್ಲಿ ಬೆಳಗ್ಗೆ 11ಕ್ಕೆ ಸಭೆ ನಡೆಯಲಿದೆ. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು. 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಪಿ. ಪರೀಕ್ಷೆಗಳಲ್ಲಿ ಶೇಕಡ 80ಕ್ಕೂ ಹೆಚ್ಚಿನ ಅಂಕ ಗಳಿಸಿದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಲಾಗುವುದು. ಸಂಬಂಧಪಟ್ಟವರು ದೃಢೀಕೃತ ಅಂಕಪಟ್ಟಿ ಪ್ರತಿಯೊಂದಿಗೆ ಅರ್ಜಿಯನ್ನು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಲ್ಲಿಸಬೇಕಾಗಿ ಕೋರಲಾಗಿದೆ. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ ರೂ. 545 ಕೋಟಿ ವ್ಯವಹಾರ, ರೂ. 1.93 ಕೋಟಿ ಲಾಭ
ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಲ್ಲಿ ಜಿಲ್ಲಾಮಟ್ಟದಲ್ಲಿ ಗರಿಷ್ಠ ಸಾಧನೆ : ಅಧ್ಯಕ್ಷರಾದ ಪ್ರಭಾಕರ ಪ್ರಭು ಮಾಹಿತಿ ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ಒಟ್ಟು ರೂ. 545.04 ಕೋಟಿ ವ್ಯವಹಾರ ನಡೆಸಿದ್ದು, ರೂ.1,93,06,792.15 ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ. ಶನಿವಾರ ಸಂಘದ ಪ್ರಧಾನ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣ ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘವು 1947ರಲ್ಲಿ ಆಗಿನ ಸಹಕಾರಿ ಬಂಧುಗಳ ನೆರವಿನಿಂದ ಬಿ.ಕೃಷ್ಣ ರೈ ಯವರ ಅಧ್ಯಕ್ಷತೆಯಲ್ಲಿ ಸ್ಥಾಪನೆಗೊಂಡು, ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮ ಸೇರಿದಂತೆ ಬಂಟ್ವಾಳ ತಾಲೂಕಿನ ಏಳು ಗ್ರಾಮಗಳೊಂದಿಗೆ ಒಟ್ಟಾರೆ ಎಂಟು ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದ್ದು ,ಆಡಳಿತ ಮಂಡಳಿಯ ನಿರ್ದೇಶಕರ, ಸಿಬ್ಬಂದಿಗಳ ಹಾಗೂ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ತೃಪ್ತಿಕರ ಸೇವೆ ನೀಡುತ್ತಾ ಬಂದಿದ್ದು,ಕಳೆದ 78 ವರ್ಷಗಳಿಂದ ಅಭಿವೃದ್ದಿಯಲ್ಲಿ ಮುನ್ನಡೆಯುತ್ತಿದೆ. 2024-25ನೇ ವರ್ಷದಲ್ಲಿ ವಿವಿಧ ಉದ್ದೇಶಗಳಿಗೆ ಒಟ್ಟು ರೂ. 122.33 ಕೋಟಿ…
ವಿಟ್ಲ: ಕಳೆದ 70 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಿ, ಪ್ರತೀ ವರ್ಷವೂ ಉತ್ತಮ ಲಾಭ ಗಳಿಸಿ ಸಮಾಜಮುಖಿ ಕೆಲಸಗಳಲ್ಲಿ ಜೋಡಿಸಿಕೊಂಡಿರುವ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ 2024-25ನೇ ಸಾಲಿನಲ್ಲಿ 3.45 ಕೋಟಿ ರೂಗಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 22 ಡಿವಿಡೆಂಡ್ ಘೋಷಿಸಲಾಗಿದೆ. https://chat.whatsapp.com/EbVKVnWB6rlHT1mWtsgbch ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್, 2.82 ಕೋಟಿ ರೂ. ಪಾಲು ಬಂಡವಾಳ ಹೊಂದಿದ್ದು 8ಮ515 ಸದಸ್ಯರು, 13,473 ಕೋಟಿ ರೂ. ಠೇವಣಾತಿ, ಸುಮಾರು 164.93 ಕೋಟಿ ರೂ ದುಡಿಯುವ ಬಂಡವಾಳ ಹಾಗೂ 104.13 ಕೋಟಿ ರೂ. ಸಾಲ ವಿತರಿಸಿದ್ದು, ವರದಿ ಸಾಲಿನಲ್ಲಿ ದಾಖಲೆಯ 864.42 ಕೋಟಿ ರೂಗಳ ವ್ಯವಹಾರ ನಡೆದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮವನ್ನು ಹೊರತುಪಡಿಸಿ ಜಿಲ್ಲೆಯ ಉಳಿದೆಲ್ಲಾ ತಾಲೂಕಿನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಬ್ಯಾಂಕ್, ವಿಟ್ಲದಲ್ಲಿ ಪ್ರಧಾನ ಕಛೇರಿ, ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡ್, ಪುತ್ತೂರಿನಲ್ಲಿ ಶಾಖೆಯನ್ನು ಹೊಂದಿದೆ. ಬ್ಯಾಂಕ್ ಸಂಪೂರ್ಣ ಕಂಪ್ಯೂಟರೀಕರಣಗೊಂಡಿದ್ದು ಸಿ.ಬಿ.ಎಸ್. ವ್ಯವಸ್ಥೆಯಲ್ಲಿ ತ್ವರಿತ ಸೇವೆ…
