ರಾಯಚೂರು: ಶ್ರೀ ವಿಜಯ ವಿಕಾಸ ಪತ್ತಿನ ಸೌಹಾರ್ದ ಸಹಕಾರಿ ಸಂಘ ನಿಯಮಿತ ರಾಯಚೂರು ಇದರ 2024-25ನೇ ಸಾಲಿನ ಸರ್ವ ಸದಸ್ಯರ 4ನೇ ವಾರ್ಷಿಕ ಸಾಮಾನ್ಯ ಸಭೆ ಭಾನುವಾರ ರಾಯಚೂರಿನ ಕೊಠಾರಿ ಫಂಕ್ಷನ್ ಹಾಲ್ ನಲ್ಲಿ ರವಿಕುಮಾರ್ ಎಂ. ಇವರ ಅಧ್ಯಕ್ಷತೆಯಲ್ಲಿ ಜರುಗಿತು.
https://chat.whatsapp.com/JVAtKKe2M19AFO3W5629ZS?mode=ems_copy_t
ಸಹಕಾರಿ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಭೆಯನ್ನು ಆರಂಭಿಸಲಾಯಿತು. ಸಹಕಾರಿಯ ನಿರ್ದೇಶಕರಾದ ಶಿವಶಂಕರ್ ಬಿ. ಶೀಲವಂತರ್ ಪ್ರಾಸ್ತಾವಿಕ ಮಾತನಾಡಿ ಸಹಕಾರಿಯ ಧ್ಯೇಯ ಉದ್ದೇಶಗಳ ಅಡಿಯಲ್ಲಿ ಸದಸ್ಯರಿಗೆ ಸಹಕಾರಿಯಲ್ಲಿನ ವಿವಿಧ ಠೇವಣಿ ಮತ್ತು ಪತ್ತಿನ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸದಸ್ಯರ ಏಳಿಗೆಯನ್ನು ಮುಖ್ಯ ಉದ್ದೇಶವಾಗಿಸಿಕೊಂಡು ಸಹಕಾರಿಯು ಗುಣಮಟ್ಟದ ವ್ಯವಹಾರ ನಡೆಸಿಕೊಂಡು ಬರುತ್ತಿರುವುದರಿಂದ ಮತ್ತು ಸಹಕಾರಿಯಲ್ಲಿನ ಸೇವೆಗಳನ್ನು ಸದಸ್ಯರು ಉತ್ತಮ ರೀತಿಯಲ್ಲಿ ಬಳಸಿಕೊಂಡ ಕಾರಣ ಸಹಕಾರಿಯು ಕಡಿಮೆ ಸಮಯದಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದೆ ಎಂದರು.

ಮುಖ್ಯ ಕಾರ್ಯನಿರ್ವಾಹಕರಾದ ಗಿರಿಯಪ್ಪ ಹವಾಲ್ದಾರ್, 2024-25ನೇ ಸಾಲಿನ ವಾರ್ಷಿಕ ವರದಿ ಮತ್ತು ಸಾಮಾನ್ಯ ಸಭೆಯ ವಿಷಯಗಳನ್ನು ಮಂಡಿಸಿ ವಿಷಯವಾರು ಚರ್ಚಿಸಿದ ನಂತರ ಸಭೆಯ ಸೂಚನಾ ಪಾತ್ರದಲ್ಲಿರುವ ಎಲ್ಲಾ ವಿಷಯಗಳಿಗೆ ಸಾಮಾನ್ಯ ಸಭೆಯ ಅನುಮೋದನೆ ಪಡೆದುಕೊಂಡರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ರವಿಕುಮಾರ್ ಎಂ ಅವರು ಸಹಕಾರಿಯು ರೂಪಾಯಿ 19.18 ಲಕ್ಷಗಳ ಷೇರು ಬಂಡವಾಳ, ರೂಪಾಯಿ 4.76 ಕೋಟಿ ಠೇವಣಿ, ರೂಪಾಯಿ 1.14 ಕೋಟಿ ಹೂಡಿಕೆ, ಒಟ್ಟು ರೂಪಾಯಿ 5.42 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ. ರೂಪಾಯಿ 4.07 ಕೋಟಿ ಸಾಲ ವಿತರಿಸಿದೆ. ಒಟ್ಟು 9.25 ಕೋಟಿ ವ್ಯವಹಾರ ಮಾಡಿದ್ದು, ರೂಪಾಯಿ 8.25 ಲಕ್ಷ ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇಕಡಾ 11 ಲಾಭಾಂಶ ನೀಡಲಾಗುವುದು ಎಂದು ಘೋಷಿಸಿದರು. ಸಹಕಾರಿಯ ಪ್ರಗತಿಗೆ ಕಾರಣರಾದ ಸಹಕಾರಿಯ ಸರ್ವಸದಸ್ಯರಿಗೆ, ಆಡಳಿತ ಮಂಡಳಿಯ ಸದಸ್ಯರಿಗೆ, ಸಹಕಾರಿಯ ಸಿಬ್ಬಂದಿ ಹಾಗೂ ಪಿಗ್ಮಿ ಏಜೆಂಟರ್‌ಗಳಿಗೆ ಮತ್ತು ಸಹಕಾರಿಯ ಬೆಳವಣಿಗೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.


ಸಹಕಾರಿಯ ನಿರ್ದೇಶಕರಾದ ಕೆ.ಯರ್ರಿಸ್ವಾಮಿ, ಶಿವುಕುಮಾರ, ಮಾಯಾ, ಸುನೀಲ್ ಕುಮಾರ್ ಬಿ.ಎಂ, ಶಾಂತಾ ಹೂಗಾರ್, ಅಮೃತಾ, ಉಮಾ ಹಾಗೂ ಸಹಕಾರಿಯ ಕಾನೂನು ಸಲಹೆಗಾರರಾದ ಎ.ಶ್ರೀನಿವಾಸ ವಕೀಲರು ಮತ್ತು ಸಹಕಾರಿಯ ಆಸ್ತಿ ಮೌಲ್ಯಮಾಪಕರಾದ ವೀರಪ್ಪಯ್ಯ ಸ್ವಾಮಿ ಹಾಜರಿದ್ದರು.
ಐಶ್ವರ್ಯ ಮತ್ತು ಮಂಗಳ ಗೌರಿ ಪ್ರಾರ್ಥನೆ ಹಾಡಿದರು. ಶ್ರೀದೇವಿ ಮಲ್ಹಾರಾವ್ ಕುಲಕರ್ಣಿ ಸ್ವಾಗತಿಸಿದರು. ಡಾ.ಶಿವಲೀಲಾ ಬಸನಗೌಡ ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ್ ಹೊಸಮನಿ ವಂದಿಸಿದರು.
ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694
EMAIL: sahakaraspandana@gmail.com

