Author: admin
ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿಕೆ ಉಡುಪಿ: ಸ್ವಚ್ಛ ಗಾಳಿ, ನೀರು, ಬೆಳಕು ಹಾಗೂ ಪರಿಸರವನ್ನು ನಿರ್ಮಿಸಿಕೊಳ್ಳುವುದು ನಮ್ಮ ಕರ್ತವ್ಯದ ಭಾಗವಾಗಿದೆ. ಇದು ಸರಕಾರದ ಜವಾಬ್ದಾರಿಯಲ್ಲ. ನಮ್ಮ ಮೂಲಭೂತ ಜವಾಬ್ದಾರಿ. ಸ್ವಚ್ಛ ಪರಿಸರವನ್ನು ನಿರ್ಮಿಸುವರೇ ನಮ್ಮ ಕಸ, ನಮ್ಮ ಹೊಣೆ ಎಂಬ ಸಾಮಾಜಿಕ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕು ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು. https://chat.whatsapp.com/JVAtKKe2M19AFO3W5629ZS?mode=ems_copy_t ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಡುಪಿ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಎಂಬ ಧ್ಯೇಯದಂತೆ ನಡೆದ 11ನೇ “ಸ್ವಚ್ಛ ಭಾರತ್” ಶ್ರಮದಾನದ ಸಂದರ್ಭದಲ್ಲಿ ಅವರು ಮಾತನಾಡಿದರು. ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ ಇದರ ಮೊಕ್ತೇಸರರಾದ ಮುರಹರಿ ಕೆ ಆಚಾರ್ಯ ಹಾಗೂ ಗಂಗಾಧರ ಆಚಾರ್ಯ, ಇವರು ಹಸಿರು ನಿಶಾನೆ ತೋರಿಸಿ ಶ್ರಮದಾನಕ್ಕೆ ಚಾಲನೆ ನೀಡಿದರು. ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಪರಿಸರದಲ್ಲಿ ಸ್ವಚ್ಛತೆಯ ಕಾರ್ಯ ನಡೆಯಿತು. ವಿಶ್ವಕರ್ಮ ಬ್ಯಾಂಕಿನ ಉಪಾಧ್ಯಕ್ಷರಾದ…
ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿಕೆ ಉಡುಪಿ: ಸ್ವಚ್ಛ ಗಾಳಿ, ನೀರು, ಬೆಳಕು ಹಾಗೂ ಪರಿಸರವನ್ನು ನಿರ್ಮಿಸಿಕೊಳ್ಳುವುದು ನಮ್ಮ ಕರ್ತವ್ಯದ ಭಾಗವಾಗಿದೆ. ಇದು ಸರಕಾರದ ಜವಾಬ್ದಾರಿಯಲ್ಲ. ನಮ್ಮ ಮೂಲಭೂತ ಜವಾಬ್ದಾರಿ. ಸ್ವಚ್ಛ ಪರಿಸರವನ್ನು ನಿರ್ಮಿಸುವರೇ ನಮ್ಮ ಕಸ, ನಮ್ಮ ಹೊಣೆ ಎಂಬ ಸಾಮಾಜಿಕ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕು ಎಂದು ವಿಶ್ವಕರ್ಮ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಡಾ. ಎಸ್ ಆರ್ ಹರೀಶ್ ಆಚಾರ್ಯ ಹೇಳಿದರು. https://chat.whatsapp.com/JVAtKKe2M19AFO3W5629ZS?mode=ems_copy_t ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಡುಪಿ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಎಂಬ ಧ್ಯೇಯದಂತೆ ನಡೆದ 11ನೇ “ಸ್ವಚ್ಛ ಭಾರತ್” ಶ್ರಮದಾನದ ಸಂದರ್ಭದಲ್ಲಿ ಅವರು ಮಾತನಾಡಿದರು. ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ ಇದರ ಮೊಕ್ತೇಸರರಾದ ಮುರಹರಿ ಕೆ ಆಚಾರ್ಯ ಹಾಗೂ ಗಂಗಾಧರ ಆಚಾರ್ಯ, ಇವರು ಹಸಿರು ನಿಶಾನೆ ತೋರಿಸಿ ಶ್ರಮದಾನಕ್ಕೆ ಚಾಲನೆ ನೀಡಿದರು. ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಪರಿಸರದಲ್ಲಿ ಸ್ವಚ್ಛತೆಯ ಕಾರ್ಯ ನಡೆಯಿತು. ವಿಶ್ವಕರ್ಮ ಬ್ಯಾಂಕಿನ ಉಪಾಧ್ಯಕ್ಷರಾದ…
ಹಣದುಬ್ಬರ ಇಳಿಕೆ, ನಿರೀಕ್ಷೆಗಿಂತ ಬಲವಾದ ಆರ್ಥಿಕ ವೇಗದ ಹಿನ್ನೆಲೆಯಲ್ಲಿ ಆರ್‌ಬಿಐ ನಿರ್ಧಾರ ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇದರಿಂದ ವಾಹನ ಮತ್ತು ಗೃಹ ಸಾಲಗಾರರಿಗೆ ಲಾಭವಾಗಲಿದೆ. ಹಣದುಬ್ಬರ ಇಳಿಕೆ ಮತ್ತು ನಿರೀಕ್ಷೆಗಿಂತ ಬಲವಾದ ಆರ್ಥಿಕ ಆವೇಗದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಚಿಲ್ಲರೆ ಹಣದುಬ್ಬರವು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಇಳಿದಿದ್ದು, ಬೆಲೆ ಸ್ಥಿರತೆಗೆ ಧಕ್ಕೆ ತರದೆ ಬೇಡಿಕೆಯನ್ನು ಬೆಂಬಲಿಸಲು ಆರ್‌ಬಿಐಗೆ ಸಾಕಷ್ಟು ಅವಕಾಶ ನೀಡಿದ್ದು, ಇದೇ ವೇಳೆ ಆರ್ಥಿಕತೆಯು ಉತ್ತಮವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿ, ಎರಡನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆಯು ಶೇಕಡಾ 8.2ರಷ್ಟು ವಿಸ್ತರಣೆಯನ್ನು ದಾಖಲಿಸಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ದರ ಕಡಿತವನ್ನು ತಕ್ಷಣದಿಂದ ಜಾರಿಗೆ ತರುವ ಸರ್ವಾನುಮತದ ನಿರ್ಧಾರಕ್ಕೆ ಬರುವ ಮೊದಲು, ವಿಕಸನಗೊಳ್ಳುತ್ತಿರುವ ಸ್ಥೂಲ ಆರ್ಥಿಕ ಪರಿಸ್ಥಿತಿಗಳು ಮತ್ತು ಭವಿಷ್ಯದ ದೃಷ್ಟಿಕೋನಗಳ ವಿವರವಾದ ಮೌಲ್ಯಮಾಪನವನ್ನು ವಿತ್ತೀಯ ನೀತಿ ಸಮಿತಿ(MPC) ತೆಗೆದುಕೊಂಡಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.…
ಮಂಗಳೂರು: ಎಂಸಿಸಿ ಬ್ಯಾಂಕ್ ಮಂಗಳೂರು ಇದರ ನವೀಕೃತ ಕಂಕನಾಡಿ ಶಾಖೆಯು ಗುರುವಾರ ಪಂಪ್‌ವೆಲ್ ರಸ್ತೆಯಲ್ಲಿರುವ ಎಂಪೋರಿಯo ವಾಣಿಜ್ಯ ಸಂಕೀರ್ಣದಲ್ಲಿ ಉದ್ಘಾಟನೆಗೊಂಡಿತು. ನವೀಕರಿಸಿದ ಶಾಖೆಯನ್ನು ಹೆಸರಾಂತ ಅನಿವಾಸಿ ಭಾರತೀಯ ಉದ್ಯಮಿ, ವಿಷನ್ ಕೊಂಕಣಿಯ ಪ್ರವರ್ತಕ ಮೈಕಲ್ ಡಿಸೋಜ ಉದ್ಘಾಟಿಸಿದರು. ಕಂಕನಾಡಿ ಫಾದರ್ ಮುಲ್ಲರ್ಸ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ವಂದನೀಯ ಫಾದರ್ ಫೌಸ್ಟಿನ್ ಲೋಬೊ ಆಶೀರ್ವದಿಸಿದರು. https://chat.whatsapp.com/JVAtKKe2M19AFO3W5629ZS?mode=ems_copy_t ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಜೆಪ್ಪುವಿನ ಸೇಂಟ್ ಆ್ಯಂಟನಿ ಆಶ್ರಮದ ನಿರ್ದೇಶಕ ವಂದನೀಯ ಫಾದರ್ ಜೆ.ಬಿ.ಕ್ರಾಸ್ತಾ, ಬೆಂದೂರಿನ ಸೇವಾನಿಲಯ ಕಾನ್ವೆಂಟ್‌ನ ಸುಪೀರಿಯರ್‌ನ ಸಿಸ್ಟರ್ ಸಿಂತಿಯಾ ಡಿಸೋಜ, ಮತ್ತು ಕೊಂಕಣಿ ಸಾಂಸ್ಕೃತಿಕ ಸಂಸ್ಥೆ (ಕೆಸಿಒ) ಅಧ್ಯಕ್ಷ ಲಿಯೋ ರೋಡ್ರಿಗಸ್ ಮುಖ್ಯ ಅತಿಥಿಗಳಾಗಿದ್ದರು. ಅಧ್ಯಕ್ಷರಾದ ಅನಿಲ್ ಲೋಬೊ ಅವರು ಮಾತನಾಡಿ, ಕಂಕನಾಡಿ ಶಾಖೆಯ ನವೀಕರಣದ ಹಿಂದಿನ ಉದ್ದೇಶ ಮತ್ತು ದೃಷ್ಟಿಕೋನವನ್ನು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಆಧುನಿಕ ಮತ್ತು ಹೊಸಹೊಸ ಆಲೋಚನೆಗಳನ್ನು ನಿರೀಕ್ಷಿಸುತ್ತಾರೆ. ನಮ್ಮ ಬ್ಯಾಂಕ್ ಅದನ್ನು ಹೇಗೆ ಸಾಧಿಸುವುದು ಎಂಬುದರ…
ಬಂಟ್ವಾಳ: ಬಿ.ಸಿ. ರೋಡಿನ ವಿವೇಕ ನಗರದ, ಶಕ್ತಿ ಕಾಂಪೌಂಡಿನಲ್ಲಿ ಕಾರ್ಯಾಚರಿಸುತ್ತಿರುವ ಶರ್ವಾಣಿ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಇದರ 2026ನೇ ಸಾಲಿನ ನೂತನ ವರ್ಷದ ಕ್ಯಾಲೆಂಡರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. https://chat.whatsapp.com/JVAtKKe2M19AFO3W5629ZS?mode=ems_copy_t ಸಹಕಾರಿಯ ಅಧ್ಯಕ್ಷರಾದ ರೋಹಿಣಿ ಉದಯ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯ ವೆಂಕಟೇಶ್ ಭಟ್, ಡೈಜಿವರ್ಲ್ಡ್ ಟಿ.ವಿ ವಾಹಿನಿಯ ಪ್ರೊಡಕ್ಷನ್ ಡೈರೆಕ್ಟರ್ ಸ್ಟ್ಯಾನಿ ಬೇಳ, ನಿರ್ದೇಶಕರಾದ ಜಯಾನಂದ ಆಚಾರ್ಯ, ಪರಮೇಶ್ವರ ಮೊಯ್ಲಿ, ಪ್ರಜ್ವಲ್ ಪ್ರಸಾದ್, ಜಯಲಕ್ಷ್ಮಿ, ಅನಿತಾ ನಾಯಕ್, ಬಿಂದು ಕುಡ್ವ, ರೂಪಕಲಾ, ವಸಂತ ಆಚಾರ್ಯ, ಕೃಷ್ಣಪ್ರಸಾದ್, ಶ್ರದ್ಧಾ, ಸಿಬ್ಬಂದಿ ವಿಘ್ನೇಶ್ ಮತ್ತು ಶ್ರಾಮ್ಯ ಹಾಗೂ ಪಿಗ್ಮಿ ಸಂಗ್ರಾಹಕರಾದ ಯೋಗೀಶ್ ಪ್ರಭು ಉಪಸ್ಥಿತರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಮಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಸಹಕಾರ ಕ್ಷೇತ್ರ ಹಾಗೂ ಕಂಬಳ ಕ್ಷೇತ್ರದ ಸಾಧಕರಾದ ಕೊಳಕೆ ಇರ್ವತ್ತೂರು ಭಾಸ್ಕರ ಎಸ್.ಕೋಟ್ಯಾನ್ ಅವರಿಗೆ ನಾಗರಿಕ ಪೌರ ಸನ್ಮಾನ “ಭಾಸ್ಕರಾಭಿನಂದನ” ಕಾರ್ಯಕ್ರಮ ಡಿಸೆಂಬರ್ 6ರಂದು ಮಂಗಳೂರು ಪುರಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಈ ಬಗ್ಗೆ ಗುರುವಾರ ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಭಾಸ್ಕರಾಭಿನಂದನ ಸಮಿತಿಯ ಸಂಚಾಲಕರಾದ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್, ಭಾಸ್ಕರ್ ಎಸ್.ಕೋಟ್ಯಾನ್ ಅವರು ಸಹಕಾರ, ಕಂಬಳ, ಕೃಷಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಅಪೂರ್ವ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಬಳಗದಿಂದ ನಾಗರಿಕ ಪೌರಸನ್ಮಾನ ಕಾರ್ಯಕ್ರಮ ಡಿ.6ರಂದು ನಡೆಯಲಿದೆ ಎಂದು ಹೇಳಿದರು. ಮಧ್ಯಾಹ್ನ 3ರಿಂದ ಮಂಜು ರೈ ಮೂಳೂರು ಅವರ ನೇತೃತ್ವದಲ್ಲಿ ಸಂಗೀತ, ಹಾಸ್ಯ. ಲಹರಿ…
ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಅಭ್ಯಾಸ ವರ್ಗದಲ್ಲಿ ವಿದ್ಯಾ ವಿಜೇತ ಪೈ ವಿಶ್ಲೇಷಣೆ ಗುರುವಾಯನಕೆರೆ: ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ರಾಜ್ಯದಲ್ಲಿ ಪ್ರಪ್ರಥಮವಾಗಿ ಸಹಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪದಾಧಿಕಾರಿಗಳು ಹಾಗೂ ವಿವಿಧ ಸಹಕಾರಿ ಸಂಸ್ಥೆಗಳ ನಿರ್ದೇಶಕರ ಅಭ್ಯಾಸ ವರ್ಗ ಮಂಗಳವಾರ ಗುರುವಾಯನಕೆರೆಯ “ನಮ್ಮ ಮನೆ ಹವ್ಯಕ ಭವನ”ದಲ್ಲಿ ಜರಗಿತು. https://chat.whatsapp.com/JVAtKKe2M19AFO3W5629ZS?mode=ems_copy_t ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿ ಕರ್ನಾಟಕ ರಾಜ್ಯ ಮಹಿಳಾ ಪ್ರಮುಖ್ ವಿದ್ಯಾ ವಿಜೇತ ಪೈ ಮಾತನಾಡಿ, ಸಹಕಾರ ಕ್ಷೇತ್ರದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ. ಮಹಿಳೆಯರು ಸಹಕಾರಿ ಕ್ಷೇತ್ರದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ, ಸಂಘಟನಾತ್ಮಕವಾಗಿ ಹೆಚ್ಚು ಹೆಚ್ಚು ತೊಡಗಿಸಿಕೊಂಡು ದಕ್ಷಿಣ ಕನ್ನಡ ಸಹಕಾರ ಭಾರತಿಗೆ ಮತ್ತಷ್ಟು ಶಕ್ತಿ ತುಂಬಿಸುವ ಕೆಲಸ ಆಗಬೇಕು ಎಂದು ಶುಭ ಹಾರೈಸಿದರು. ಕಾರ್ಯಕ್ರಮ ಉದ್ಘಾಟಿಸಿ ಭಾರತಮಾತೆ ಹಾಗೂ ಸಹಕಾರ ಭಾರತಿ ಸಂಸ್ಥಾಪಕರಾದ ಲಕ್ಷ್ಮಣರಾವ್ ಇನಾಂದಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಉಜಿರೆ ಕೃಷಿ…
ಕಾಪುವಿನಲ್ಲಿ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಶುಭಾಷಯ ಕಾಪು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕಾಪು ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ರೋಟರಿ ಕ್ಲಬ್ ಕಾಪು ಹಾಗೂ ಸುಜ್ಞಾನ ಚಾರಿಟೇಬಲ್ ಟ್ರಸ್ಟ್ ಕಾಪು ಇವರ ಜಂಟಿ ಸಹಯೋಗದೊಂದಿಗೆ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಹಾಗೂ ಶ್ರೀ ಸುಧೀಂದ್ರ ಆಯುರ್ ಕ್ಲಿನಿಕ್ ಕಾಪು ಇವರ ನುರಿತ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ಹಾಗೂ ನೇತ್ರ ತಪಾಸಣೆ ಶಿಬಿರವು ಕಾಪು ಹೊಸ ಮಾರಿಗುಡಿ ದೇವಸ್ಥಾನದ ಹತ್ತಿರದ ವಿವೇಕ್ ಕಾಂಪ್ಲೆಕ್ಸ್‌ನಲ್ಲಿ ಜರುಗಿತು. https://chat.whatsapp.com/JVAtKKe2M19AFO3W5629ZS?mode=ems_copy_t ಮಾಜಿ ಸಚಿವ ಹಾಗೂ ಮಾಜಿ ಸಂಸದರಾದ ವಿನಯ ಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜನರು ಆರೊಗ್ಯದ ಬಗ್ಗೆ ಕಾಳಜಿ ವಹಿಸುವುದು ಇತ್ತೀಚಿನ ದಿನಗಳಲ್ಲಿ ತುಂಬಾ ಅನಿವಾರ್ಯ. ಈ ನಿಟ್ಟಿನಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್…
ಕ್ಯಾಂಪ್ಕೊ ಸಂಸ್ಥೆಗೆ ನೂತನ ಸಾರಥ್ಯ: ಉಪಾಧ್ಯಕ್ಷರಾಗಿ ಪದ್ಮರಾಜ್ ಪಟ್ಟಾಜೆ ಆಯ್ಕೆ ಮಂಗಳೂರು: ಸೆಂಟ್ರಲ್ ಅರೆಕಾನಟ್ ಅಂಡ್ ಕೊಕ್ಕೋ ಮಾರ್ಕೆಟಿಂಗ್ ಆಂಡ್ ಪ್ರೋಸೆಸ್ಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ), ಮಂಗಳೂರು – ಇದರ ನೂತನ ಅಧ್ಯಕ್ಷರಾಗಿ ಎಸ್. ಆರ್ ಸತೀಶ್ಚಂದ್ರ, ಉಪಾಧ್ಯಕ್ಷರಾಗಿ ಪದ್ಮರಾಜ್ ಪಟ್ಟಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. https://chat.whatsapp.com/JVAtKKe2M19AFO3W5629ZS?mode=ems_copy_t 2025-2030ರ ಅವಧಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ, ಎಸ್. ಆರ್. ಸತೀಶ್ಚ0ದ್ರ ಅವರನ್ನು ನೂತನ ಅಧ್ಯಕ್ಷರನ್ನಾಗಿ ಹಾಗೂ ಶ್ರೀ ಪದ್ಮರಾಜ್ ಪಟ್ಟಾಜೆ ಅವರನ್ನು ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಂಟ್ವಾಳ ತಾಲೂಕಿನ ಪುಣಚ ಗ್ರಾಮದವರಾದ ಎಸ್. ಆರ್. ಸತೀಶ್‌ಚಂದ್ರ ಅವರು ಸಹಕಾರಿ ಕ್ಷೇತ್ರದಲ್ಲಿ ಹಿರಿಯರಾಗಿದ್ದು ಎರಡೂವರೆ ದಶಕಗಳಿಗೂ ಹೆಚ್ಚಿನ ಸುದೀರ್ಘ ಅನುಭವ ಹೊಂದಿದ್ದಾರೆ. ಇವರು 2015-2020ರ ಅವಧಿಯಲ್ಲೂ ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ನಿರ್ಗಮಿತ ಆಡಳಿತ ಮಂಡಳಿಯಲ್ಲಿ ನಿರ್ದೇಶಕರಾಗಿದ್ದರು. ಕೃಷಿ ಹಾಗೂ ಸಹಕಾರಿ ವಲಯದಲ್ಲಿ ಇವರ ನಾಯಕತ್ವಕ್ಕೆ ಅಪಾರ ಮನ್ನಣೆಯಿದೆ. ಕಾಸರಗೋಡಿನ ಪಟ್ಟಾಜೆ-ಬದಿಯಡ್ಕ ಮೂಲದ ಪ್ರಗತಿಪರ ಕೃಷಿಕರಾದ ಪದ್ಮರಾಜ್ ಪಟ್ಟಾಜೆ ಅವರು ದೀರ್ಘಕಾಲದಿಂದ…
ಪುತ್ತೂರು: ಬೊಳುವಾರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ರೋಯಲ್ ಸೌಹಾರ್ದ ಸಹಕಾರಿ ಸಂಘದ ಕೆಯ್ಯೂರು ಶಾಖೆಯ ಉದ್ಘಾಟನಾ ಸಮಾರಂಭ ಡಿಸೆಂಬರ್ 6ರಂದು ಶನಿವಾರ ಬೆಳಗ್ಗೆ 11ಕ್ಕೆ ಕೆಯ್ಯೂರಿನ ಬ್ರಹ್ಮಶ್ರೀ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟನೆಗೊಳ್ಳಲಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಶಾಸಕ ಅಶೋಕ್ ಕುಮಾರ್ ರೈಯವರು ಕಚೇರಿ ಉದ್ಘಾಟಿಸಲಿದ್ದಾರೆ. ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಸವಣೂರು ಸೀತಾರಾಮ ರೈಯವರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ರಾಮಜಾಲು ಗರಡಿ ಪರ್ಪುಂಜ ಇದರ ಆಡಳಿತ ಮೊಕ್ತೇಸರರಾದ ಸಂಜೀವ ಪೂಜಾರಿ ಕೂರೇಲು ಗಣಕಯಂತ್ರ ಮತ್ತು ಕೋರ್ ಬ್ಯಾಂಕಿಂಗ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಸಂಯುಕ್ತ ಸೌಹಾರ್ದ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ.ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರೋಯಲ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ ಎ.ಕೆ ಜಯರಾಮ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಪ್ರಥಮ ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ದ್ವಾರಕಾ ಕಾರ್ಪೊರೇಶನ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ ಸ್ವಸಹಾಯ ಸಂಘಗಳ ಪುಸ್ತಕ ಹಸ್ತಾಂತರಿಸಲಿದ್ದಾರೆ. ರೋಯಲ್…
