Author: admin

ರಾಷ್ಟ್ರೀಯ ಸಹಕಾರ ದತ್ತಸಂಚಯದ ಮಾಹಿತಿ ಆಧರಿಸಿ ಸಹಕಾರ ಸಚಿವ ಅಮಿತ್‌ ಷಾ ಲೋಕಸಭೆಯಲ್ಲಿ ಮಾಹಿತಿ ನವದೆಹಲಿ: ದೇಶಾದ್ಯಂತ ಪ್ರಸ್ತುತ 6.56 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, 1.39 ಲಕ್ಷ ಸಹಕಾರ ಸಂಘಗಳು ನಿಷ್ಕ್ರಿಯವಾಗಿವೆ ಮತ್ತು 48,537 ಸಂಘಗಳು ದಿವಾಳಿ ಹಂತದಲ್ಲಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್‌ ಷಾ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ. https://chat.whatsapp.com/FCEnlTkAKCC0MGPhXtX4i4 ರಾಷ್ಟ್ರೀಯ ಸಹಕಾರಿ ದತ್ತಸಂಚಯ (ಎನ್‌ಸಿಡಿ) ಪೋರ್ಟಲ್‌ನಲ್ಲಿ ನವೆಂಬರ್ 15ರ ತನಕದ ಲಭ್ಯವಿರುವ ಮಾಹಿತಿ ಆಧರಿಸಿ ಹೇಳಿಕೆ ನೀಡಿರುವ ಅಮಿತ್‌ ಷಾ, ರಾಜ್ಯವಾರು ವಿವರಗಳನ್ನು ಒದಗಿಸಿದ್ದು, ಮಹಾರಾಷ್ಟ್ರವು ಸುಮಾರು 2.17 ಲಕ್ಷ ಕ್ರಿಯಾತ್ಮಕ ಸಹಕಾರಿ ಸಂಘಗಳೊಂದಿಗೆ ದೇಶದಲ್ಲೇ ಮುಂಚೂಣಿಯಲ್ಲಿದೆ. ಗುಜರಾತ್ (78,215), ತೆಲಂಗಾಣ (48,186), ಕರ್ನಾಟಕ (40,231) ಮತ್ತು ಮಧ್ಯಪ್ರದೇಶ (27,370) ನಂತರದ ಸ್ಥಾನದಲ್ಲಿವೆ. ರಾಜಸ್ಥಾನದಲ್ಲಿ 25,491 ಕ್ರಿಯಾತ್ಮಕ ಸಹಕಾರ ಸಂಘಗಳಿದ್ದರೆ, ಪಶ್ಚಿಮ ಬಂಗಾಳ (22,952) ಮತ್ತು ಉತ್ತರ ಪ್ರದೇಶ (22,724) ಸಹ ಗಮನಾರ್ಹ ಸಂಖ್ಯೆಯ ಸಕ್ರಿಯ ಸಂಘಗಳನ್ನು ಹೊಂದಿವೆ ಎಂದು ಲಿಖಿತ…

Read More

ಪುತ್ತೂರು: ಬೆಳ್ತಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನೆಲ್ಯಾಡಿ ಶಾಖೆಯ ದಶಮಾನೋತ್ಸವ ಪ್ರಯುಕ್ತ ಮಂಗಳೂರಿನ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಎ.ಜೆ ದಂತ ವಿಜ್ಞಾನ ಸಂಸ್ಥೆ ಇದರ ಸಹಯೋಗದೊಂದಿಗೆ ಭಾನುವಾರ ನೆಲ್ಯಾಡಿಯ ಪಿ.ಎಂ.ಶ್ರೀ ಶಾಲೆಯಲ್ಲಿ ಬೃಹತ್‌ ವೈದ್ಯಕೀಯ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು. https://chat.whatsapp.com/GnJ3FvCten7JlVtjNJYA58 ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಾಲಕೃಷ್ಣ ಬಾಣಜಾಲು ಕಾರ್ಯಕ್ರಮ ಉದ್ಘಾಟಿಸಿದರು. ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಭಗೀರಥ ಜಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕ ಚಂದ್ರಶೇಖರ್‌ ನೆಲ್ಯಾಡಿ, ವರ್ತಕರ ಸಂಘದ ಅಧ್ಯಕ್ಷ ಸತೀಶ್‌ ಕೆ.ಎಸ್‌, ಎ.ಜೆ ಆಸ್ಪತ್ರೆಯ ಡೆಂಟಲ್‌ ವಿಭಾಗದ ಅಸಿಸ್ಟೆಂಟ್‌ ಪ್ರೊಫೆಸರ್‌ ಡಾ.ಸಂದೀಪ್‌, ನೆಲ್ಯಾಡಿ ಪಿ.ಎಂ.ಶ್ರೀ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ವೀಣಾ ಮಸ್ಕರೇನ್ಹಸ್‌, ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ವಿಶೇಷಾಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವಥ್‌ ಕುಮಾರ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.…

Read More

ನವದೆಹಲಿ: ರಸಗೊಬ್ಬರ ವಲಯದಲ್ಲಿ ದೇಶದ ಪ್ರಮುಖ ಸಹಕಾರಿ ಸಂಸ್ಥೆಯಾದ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೇಟಿವ್ ಲಿಮಿಟೆಡ್ (ಇಫ್ಕೋ), 2025ರ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಗಳ ಪುರಸ್ಕೃತರನ್ನು ಘೋಷಿಸಿದೆ. ಖ್ಯಾತ ಹಿಂದಿ ಬರಹಗಾರ್ತಿ ಮತ್ತು ಕಾದಂಬರಿಕಾರ್ತಿ ಮೈತ್ರೇಯಿ ಪುಷ್ಪಾ ಇಫ್ಕೋ ಸಾಹಿತ್ಯ ಸಮ್ಮಾನ್‌ಗೆ ಆಯ್ಕೆಯಾಗಿದ್ದು, ಅಂಕಿತಾ ಜೈನ್ ಅವರನ್ನು ಇಫ್ಕೋ ಯುವ ಸಾಹಿತ್ಯ ಸಮ್ಮಾನ್‌ಗೆ ಆಯ್ಕೆ ಮಾಡಲಾಗಿದೆ. https://chat.whatsapp.com/Ge11n7QCiMj5QyPvCc0H19 ಹಿರಿಯ ಸಾಹಿತಿ ಚಂದ್ರಕಾಂತ ಅವರ ಅಧ್ಯಕ್ಷತೆಯ ತೀರ್ಪುಗಾರರ ಸಮಿತಿಯು ಈ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ. ಆಯ್ಕೆ ಸಮಿತಿಯ ಇತರ ಸದಸ್ಯರಲ್ಲಿ ಪ್ರಸಿದ್ಧ ಬರಹಗಾರರು ಮತ್ತು ವಿಮರ್ಶಕರಾದ ನಾಸಿರ್ ಶರ್ಮ, ಅನಂತ್ ವಿಜಯ್, ಯತೀಂದ್ರ ಮಿಶ್ರಾ, ಉತ್ಕರ್ಷ್ ಶುಕ್ಲಾ ಮತ್ತು ಡಾ. ನಳಿನ್ ವಿಕಾಸ್ ಸೇರಿದ್ದರು. ಸಮಿತಿಯು ಗ್ರಾಮೀಣ ಸಮಾಜ ಮತ್ತು ಕೃಷಿ ಕಾಳಜಿಗಳನ್ನು ಪ್ರತಿಬಿಂಬಿಸುವ ಕೃತಿಗಳ ಮೇಲೆ ವಿಶೇಷ ಒತ್ತು ನೀಡಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮೈತ್ರೇಯಿ ಪುಷ್ಪಾ ನವೆಂಬರ್ 30, 1944ರಂದು ಅಲಿಗಢ ಜಿಲ್ಲೆಯ ಸಿಕುರ್ರಾ ಗ್ರಾಮದಲ್ಲಿ ಜನಿಸಿದ್ದು, ಝಾನ್ಸಿ ಜಿಲ್ಲೆಯ…

Read More

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಮೈಸೂರು ಜಿಲ್ಲೆಗಳ ಕಾರ್ಯಕ್ಷೇತ್ರವನ್ನು ಹೊಂದಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ಪುತ್ತೂರು ಇದರ ವತಿಯಿಂದ ಕೇಂದ್ರ ಜವಳಿ ಸಚಿವಾಲಯದ ಕರಕುಶಲ ಆಯುಕ್ತರ ಕಚೇರಿಯ ಸಹಯೋಗದೊಂದಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾವಂಜೆಯಲ್ಲಿ ಕಾವಿ ಕಲೆಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಭಾನುವಾರ ಹಾವಂಜೆಯಲ್ಲಿ ನಡೆಯಿತು. https://chat.whatsapp.com/Ge11n7QCiMj5QyPvCc0H19 ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘವು ಗ್ರಾಮೀಣ ಗುಡಿ ಕೈಗಾರಿಕೆಗಳು, ಕರಕುಶಲ ಕಲೆಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘವಾಗಿದೆ. ಕಾವಿ ಕಲೆಯು ಅತೀ ಪುರಾತನ ಕಲೆಯಾಗಿದ್ದು ನಶಿಸಿ ಹೋಗುವ ಹಂತದಲ್ಲಿದ್ದು ಸದ್ರಿ ಕಲೆಯ ಬೆಳವಣಿಗೆಗಾಗಿ ಹಾವಂಜೆ ಗ್ರಾಮ ಪಂಚಾಯತ್ ಪ್ರದೇಶದ 30 ಜನ ಕುಶಲಕರ್ಮಿಗಳನ್ನು ಸೇರಿಸಿ 25 ದಿನಗಳ ಕಾರ್ಯಾಗಾರ ನಡೆಸಲಾಯಿತು. ಡಾ.ಜನಾರ್ದನ ಹಾವಂಜೆಯವರು ಕಾವಿ ಕಲೆಯಲ್ಲಿ ಪರಿಣತಿ ಹೊಂದಿದವರಾಗಿದ್ದು ಅವರ ನೇತೃತ್ವದಲ್ಲಿ ತರಬೇತಿ ನಡೆಯಿತು. ದೆಹಲಿಯ ಬ್ರಿಜೇಶ್ ಜೈಸ್ವಾಲ್‌ ತರಬೇತಿಗೆ ಸಹಕಾರ ನೀಡಿದರು. ಕಾವಿ ಕಲೆಯನ್ನು ಕುಂಬಾರಿಕೆ ಉತ್ಪನ್ನಗಳ ಮೇಲೆ, ಬಟ್ಟೆ, ಮರದ…

Read More

ಬೆಳ್ತಂಗಡಿ: ಇಲ್ಲಿನ ರಾಮನಗರದ ಶ್ರೀ ಅಯ್ಯಪ್ಪ ದೇವಸ್ಥಾನದ ಬಳಿಯ ಶ್ರೀದೇವಿ ಕಾಂಪ್ಲೆಕ್ಸ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರವರ ಸೌಹಾರ್ದ ಕೋ ಆಪರೇಟಿವ್‌ ಸೊಸೈಟಿಯ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. https://chat.whatsapp.com/Ge11n7QCiMj5QyPvCc0H19 ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್‌ ಅರಿಕೋಡಿ ದೀಪ ಬೆಳಗಿಸಿ ಸೊಸೈಟಿಯನ್ನು ಲೋಕಾರ್ಪಣೆಗೊಳಿಸಿದರು. ನೂರಾರು ಕಾಲ ಈ ಜ್ಯೋತಿ ಹೀಗೆಯೇ ಬೆಳಗುತ್ತಿರಲಿ ಎಂದು ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕರಾದ ಭಾರತಿ ಜಿ.ಭಟ್‌ ಸೊಸೈಟಿಯ ಸದಸ್ಯರಿಗೆ ವ್ಯವಹಾರದ ಮಾಹಿತಿ ನೀಡಿದರು. ನಾರಾವಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಭಂಡಾರಿ ಭದ್ರತಾ ಕೊಠಡಿ ಉದ್ಘಾಟಿಸಿದರು. ಮಂಜೊಟ್ಟಿ ಹೋಲಿ ಕ್ರಾಸ್‌ ಚರ್ಚ್‌ನ ಧರ್ಮಗುರು ಅತಿ ವಂದನೀಯ ಪೌಲ್‌ ಸೆಬೆಸ್ಟಿಯನ್‌ ಡಿಸೋಜ ಆಶೀರ್ವಚನ ನೀಡಿದರು. ಪೆರಾಡಿ ಪ್ಯಾಕ್ಸ್‌ ಅಧ್ಯಕ್ಷ, ಸಹಕಾರ ರತ್ನ ಸತೀಶ್‌ ಕೆ ಕಾಶಿಪಟ್ಣ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ದಕ್ಷಿಣ ಕನ್ನಡ ಅಭಿವೃದ್ಧಿ ಅಧಿಕಾರಿ ನಂದನ್‌ ಬಿ.ಎಸ್‌, ಕಾಂಪ್ಲೆಕ್ಸ್‌ನ ಮಾಲೀಕ ಶರತ್‌…

Read More

ಕಾರ್ಕಳ ತಾಲೂಕು ಸಹಕಾರ ಭಾರತಿ ಅಭ್ಯಾಸ ವರ್ಗದಲ್ಲಿ ಬೋಳ ಸದಾಶಿವ ಶೆಟ್ಟಿ ಅಭಿಪ್ರಾಯ ಕಾರ್ಕಳ: ಕಳೆದ 46 ವರ್ಷಗಳಿಂದ ದೇಶಾದ್ಯಂತ ಎಲ್ಲಾ ರಾಜ್ಯಗಳ ಸುಮಾರು 700 ಜಿಲ್ಲೆಗಳಲ್ಲಿ ಸಂಘಟನಾ ಜಾಲವನ್ನು ವಿಸ್ತರಿಸಿರುವ ಸಹಕಾರ ಭಾರತಿ, ಸಹಕಾರ ಕ್ಷೇತ್ರದ ಬಲವರ್ಧನೆಗಾಗಿ ನಿರಂತರ ಕಾರ್ಯೋನ್ಮುಖವಾಗಿದೆ ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಬೋಳ ಸದಾಶಿವ ಶೆಟ್ಟಿ ಹೇಳಿದರು. https://chat.whatsapp.com/Ge11n7QCiMj5QyPvCc0H19 ಕಾರ್ಕಳ ಜೋಡುರಸ್ತೆಯ ರಾಜಾಪುರ ಸಾರಸ್ವತ ಸೊಸೈಟಿಯ ಸಭಾಭವನದಲ್ಲಿ ಶನಿವಾರ ನಡೆದ ತಾಲೂಕು ಸಹಕಾರ ಭಾರತಿ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಕಳ ತಾಲೂಕು ಅಧ್ಯಕ್ಷರಾದ ನೀರೆ ರವೀಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹಕಾರ ರತ್ನ ಕಡಾರಿ ರವೀಂದ್ರ ಪ್ರಭು, ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀಶ್ ನಾಯಕ್ ಉಪಸ್ಥಿತರಿದ್ದರು. ಸಹಕಾರ ಭಾರತಿ ಪರಿಚಯ, ಸಹಕಾರಿ ಕಾಯ್ದೆಗಳು ಮತ್ತು ನಿರ್ದೇಶಕರ ಜವಾಬ್ದಾರಿ” ಈ ವಿಷಯದ ಬಗ್ಗೆ ಸಹಕಾರ ಭಾರತಿ ರಾಜ್ಯ ಪ್ರಧಾನ…

Read More

ಪ್ರತಿಪಕ್ಷದ ಶಾಸಕ ಸುನೀಲ್‌ ಕುಮಾರ್‌ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಖಿತ ಉತ್ತರ ಬೆಳಗಾವಿ: ರಾಜ್ಯದಲಿರುವ ಹಾಲು ಉತ್ಪಾದಕ ಸಹಕಾರ ಸಂಘಗಳೂ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿರುವ 47,736 ಸಹಕಾರ ಸಂಘಗಳ ಪೈಕಿ 14,798 ಸಹಕಾರ ಸಂಘಗಳು ನಷ್ಟದಲ್ಲಿವೆ! ಸ್ವತಃ ರಾಜ್ಯದ ಮುಖ್ಯಮಂತ್ರಿಗಳೇ ಈ ವಿವರವನ್ನು ಸೋಮವಾರ ವಿಧಾನಸಭೆಯಲ್ಲಿ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ. https://chat.whatsapp.com/JVAtKKe2M19AFO3W5629ZS?mode=ems_copy_t ರಾಜ್ಯದಲ್ಲಿ 47,736 ಸಹಕಾರ ಸಂಘಗಳಿದ್ದು ಇವುಗಳಲ್ಲಿ 28,145 ಸಂಸ್ಥೆಗಳು ಮಾತ್ರ ಲಾಭದಲ್ಲಿ ನಡೆಯುತ್ತಿವೆ. ಸಹಕಾರ ಕ್ಷೇತ್ರದ ಆಡಳಿತಾತ್ಮಕ ವೆಚ್ಚಗಳಿಂದಾಗಿ ಸಂಘಗಳ ಲಾಭಾಂಶ ಕಡಿಮೆಯಾಗಿವೆ ಎಂದು ಸರ್ಕಾರವೇ ಸದನಕ್ಕೆ ತಿಳಿಸಿದೆ. ಬೆಳಗಾವಿ ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಅತಿಹೆಚ್ಚು ಸಹಕಾರ ಸಂಘಗಳು ನಷ್ಟದಲಿವೆ ಎಂದೂ ಸರ್ಕಾರ ಮಾಹಿತಿ ನೀಡಿದೆ. ಬಿಜೆಪಿ ಶಾಸಕ ಕಾರ್ಕಳದ ಸುನೀಲ್‌ ಕುಮಾರ್‌ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ರಾಜ್ಯದ ಮುಖ್ಯಮಂತ್ರಿಯೂ ಆಗಿರುವ ಸಹಕಾರ ಸಚಿವರಾದ ಸಿದ್ದರಾಮಯ್ಯ ಈ ಮಾಹಿತಿ ಒದಗಿಸಿದ್ದು ಬೆಳಗಾವಿಯಲ್ಲಿ 2661 ಸಹಕಾರ ಸಂಘಗಳು ನಷ್ಟದಲ್ಲಿವೆ. ಕಲಬುರಗಿಯಲ್ಲಿ ಲಾಭದಲ್ಲಿರುವ ಸಹಕಾರ ಸಂಘಗಳ ಸಂಖ್ಯೆಗಿಂತ…

Read More

ಮುಂದಿನ ವರ್ಷದ ಜೂನ್‌ 15ಕ್ಕೆ ಅಂತಿಮ ವಿಚಾರಣೆಗೆ ದಿನ ನಿಗದಿ ಮುಂಬೈ: 2025ರಲ್ಲಿ ತಿದ್ದುಪಡಿ ಮಾಡಲಾದ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಅಡಿಯಲ್ಲಿ ಪರಿಷ್ಕೃತ ಅಧಿಕಾರಾವಧಿಯ ಮಾನದಂಡಗಳ ಅನುಷ್ಠಾನವನ್ನು ಪ್ರಶ್ನಿಸಿ ಸಹಕಾರಿ ಬ್ಯಾಂಕುಗಳು ಮತ್ತು ಅವುಗಳ ನಿರ್ದೇಶಕರಿಗೆ ಮಧ್ಯಂತರ ಪರಿಹಾರ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಮುಂಬರುವ ಸಹಕಾರಿ ಬ್ಯಾಂಕ್ ಚುನಾವಣೆಗಳಲ್ಲಿ ನಿರ್ದೇಶಕರ ಅರ್ಹತೆಯ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೊರಡಿಸಿದ ನಿರ್ದೇಶನಗಳನ್ನು ಪ್ರಶ್ನಿಸಿ ಕೊಲ್ಹಾಪುರ ಜಿಲ್ಲಾ ನಗರ ಬ್ಯಾಂಕುಗಳ ಸಹಕಾರ ಸಂಘ ಲಿಮಿಟೆಡ್ ಮತ್ತು ಇತರರು ಸಲ್ಲಿಸಿದ ರಿಟ್ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ.ಎಸ್. ಕಾರ್ಣಿಕ್ ಮತ್ತು ನ್ಯಾಯಮೂರ್ತಿ ಅಜಿತ್ ಬಿ. ಕಡೆತಂಕರ್ ಅವರ ವಿಭಾಗೀಯ ಪೀಠವು ಸೋಮವಾರ ಈ ಆದೇಶವನ್ನು ನೀಡಿದೆ. ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರಿಗೆ ಗರಿಷ್ಠ 10 ವರ್ಷಗಳ ನಿರಂತರ ಅಧಿಕಾರಾವಧಿ ನಿಗದಿಪಡಿಸುವ ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯ್ದೆ, 2025 ಅನ್ನು ಆಗಸ್ಟ್ 1, 2025ರಿಂದ ಜಾರಿಗೆ ಬರುವಂತೆ ಹಿಂದಿನಿಂದಲೂ ಅನ್ವಯಿಸಲಾಗುತ್ತಿದೆ ಎಂದು ಅರ್ಜಿದಾರರು…

Read More

ನವದೆಹಲಿ: ಸಹಕಾರಿ ಬ್ಯಾಂಕಿಂಗ್ ವಲಯಕ್ಕೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ನಿರ್ದೇಶಕರ ಅವಧಿಯ ಕುರಿತ ಆದೇಶ/ಸುತ್ತೋಲೆ ಹೊಸ ಚರ್ಚೆ ಹುಟ್ಟುಹಾಕಿದೆ. ಆಗಸ್ಟ್‌ 1ರಿಂದ ಜಾರಿಗೊಂಡಿರುವ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ (ತಿದ್ದುಪಡಿ) 2025, ಸೆಕ್ಷನ್ 10ಎ(2)(ಜಿ)ಯ ಪ್ರಕಾರ ರಾಜ್ಯ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ) ಹಾಗೂ ಪಟ್ಟಣ ಸಹಕಾರ ಬ್ಯಾಂಕ್‌ಗಳ ನಿರ್ದೇಶಕರ ಆಡಳಿತ ಮಂಡಳಿಗೆ ನಿರಂತರ 10 ವರ್ಷ ಮಾತ್ರ ನಿರ್ದೇಶಕರಾಗಲು ಅವಕಾಶ ಮಾಡಿಕೊಡಲಾಗಿದೆ. ಈ ತಿದ್ದುಪಡಿ ಅನ್ವಯ ಆರ್‌ಬಿಐ ಆದೇಶ/ಸುತ್ತೋಲೆ ಹೊರಡಿಸಿದೆ. ತಿದ್ದುಪಡಿ ಕಾಯ್ದೆ ಪ್ರಕಾರ 10 ವರ್ಷ ಅವಧಿ ಮೀರಿ ನಿರ್ದೇಶಕರಾದವರು ಅನರ್ಹರಾಗುತ್ತಾರೆ. ಆರ್‌ಬಿಐ ಈಗಾಗಲೇ ದೇಶದ ಎಲ್ಲ ರಾಜ್ಯಗಳಂತೆ ಕರ್ನಾಟಕದ ಅಪೆಕ್ಸ್, ಡಿಸಿಸಿ ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್‌ಗಳಿಗೆ ಸುತ್ತೋಲೆ ಕಳುಹಿಸಿ, 2025ರ ಆಗಸ್ಟ್ 1ಕ್ಕೆ ಪರಿಚಯಿಸಿದ ತಿದ್ದುಪಡಿ ಕಾಯ್ದೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸೂಚಿಸಿದೆ. https://chat.whatsapp.com/JVAtKKe2M19AFO3W5629ZS?mode=ems_copy_t ಕೇಂದ್ರ ಸರ್ಕಾರ ತಂದ ತಿದ್ದುಪಡಿ, ಅರ್‌ಬಿಐ ಸೂಚನೆಯ ಬಾಣದಿಂದ ಬಚಾವಾಗಲು ರಾಜ್ಯ ಸಹಕಾರಿ ಕಾಯ್ದೆಯನ್ನು ಮುನ್ನೆಲೆಗೆ…

Read More

ವಿಶ್ವಕರ್ಮ ಸಹಕಾರ ಬ್ಯಾಂಕ್‌ ನಿರ್ದೇಶಕರಾದ ಭರತ್ ನಿಡ್ಪಳ್ಳಿ ಆಶಯ ಮಂಗಳೂರು: ಸ್ವಚ್ಛತೆಯು ಮನೆ ಮನೆಯಿಂದ ಸ್ವಯಂಜಾಗೃತಿಯೊಂದಿಗೆ ಪ್ರಾರಂಭವಾಗಬೇಕು. ಅದು ಸಾಮೂಹಿಕವಾಗಿ ಪರಿವರ್ತನೆಗೊಂಡು ರಾಷ್ಟ್ರೀಯ ಜಾಗೃತಿಯನ್ನು ಉಂಟು ಮಾಡುತ್ತದೆ. ಆವಾಗ ಮಹಾತ್ಮ ಗಾಂಧೀಜಿಯವರು ಕಂಡ ಸ್ವಚ್ಛ ಭಾರತ್ ಪರಿಕಲ್ಪನೆಯು ಸಾಕಾರಗೊಳ್ಳುತ್ತದೆ ಎಂದು ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕರಾದ ಭರತ್ ನಿಡ್ಪಳ್ಳಿ ಹೇಳಿದರು. ಅವರು ವಿಶ್ವಕರ್ಮ ಸಹಕಾರ ಬ್ಯಾಂಕಿನ ಮಂಗಳೂರು ಶಾಖೆಯ ಆಶ್ರಯದಲ್ಲಿ ಭಾನುವಾರ “ಸ್ವಚ್ಛತಾ ಹೀ ಸೇವಾ” ದ್ಯೇಯದೊಂದಿಗೆ ನಡೆದ ಹನ್ನೆರಡನೇ ಸ್ವಚ್ಛ ಭಾರತ್ ಶ್ರಮದಾನದಲ್ಲಿ ಮಾತನಾಡಿದರು. https://chat.whatsapp.com/JVAtKKe2M19AFO3W5629ZS?mode=ems_copy_t ಶ್ರಮದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಪ್ರವೀಣ್ ಶೇಟ್ ನಾಗ್ವೇಕರ್, ವಿಶ್ವಕರ್ಮ ಬ್ಯಾಂಕ್ ಬ್ಯಾಂಕಿಂಗ್ ಚಟುವಟಿಕೆಗಳೊಂದಿಗೆ ಸಮಾಜಮುಖಿಯಾಗಿ ಸ್ವಚ್ಛ ಭಾರತ್‌ನಂತಹ ಗುರುತರವಾದ ಕಿಷ್ಟಕರ ಕಾರ್ಯವನ್ನು ಸಮಾಜದ ಎಲ್ಲರನ್ನೂ ಸೇರಿಸಿಕೊಂಡು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಸ್ತುತ್ಯರ್ಹವೆಂದು ಹೇಳಿದರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಸ್ ಆರ್ ಹರೀಶ್ ಆಚಾರ್ಯ, ಕುದ್ರೋಳಿ ಯುವಕ ಮಂಡಲದ ಅಧ್ಯಕ್ಷರಾದ ರಾಜೇಶ್ ಕುದ್ರೋಳಿ, ಅಂಜನ ಪಟೇಲ್…

Read More