Close Menu
    Top News

    ಶ್ರೀಶಾ ಸೌಹಾರ್ದ ಸೊಸೈಟಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಣೆ

    July 13, 2026

    ಉರ್ವ ಮಾರಿಯಮ್ಮನ ಆಶೀರ್ವಾದದಿಂದ ವಿಜಯ ಕ್ರೆಡಿಟ್‌ ಸೊಸೈಟಿ ಉತ್ತರೋತ್ತರ ಅಭಿವೃದ್ಧಿಯಾಗಲಿ

    July 13, 2026

    ಕರ್ನಾಟಕ ರಾಜ್ಯ ಸಹಕಾರಿ ಅರ್ಬನ್‌ ಬ್ಯಾಂಕುಗಳ ಒಕ್ಕೂಟದ ರಿಟ್‌ ಅರ್ಜಿಗೂ ಹೈಕೋರ್ಟ್‌ ಮಧ್ಯಂತರ ರಿಲೀಫ್‌

    July 13, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಉರ್ವ ಮಾರಿಯಮ್ಮನ ಆಶೀರ್ವಾದದಿಂದ ವಿಜಯ ಕ್ರೆಡಿಟ್‌ ಸೊಸೈಟಿ ಉತ್ತರೋತ್ತರ ಅಭಿವೃದ್ಧಿಯಾಗಲಿ
    News

    ಉರ್ವ ಮಾರಿಯಮ್ಮನ ಆಶೀರ್ವಾದದಿಂದ ವಿಜಯ ಕ್ರೆಡಿಟ್‌ ಸೊಸೈಟಿ ಉತ್ತರೋತ್ತರ ಅಭಿವೃದ್ಧಿಯಾಗಲಿ

    adminBy adminJuly 13, 2026

    ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್‌ ಶಾಖೆ ಉದ್ಘಾಟಿಸಿ ಡಾ. ಎ.ಸದಾನಂದ ಶೆಟ್ಟಿ ಶುಭ ಹಾರೈಕೆ

    ಮಂಗಳೂರು: ಬೆಳ್ತಂಗಡಿಯ ಗುರುವಾಯನಕೆರೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸ್ಥಳಾಂತರಿತ ಉರ್ವ ಮಾರ್ಕೆಟ್‌ ಶಾಖೆಯ ಉದ್ಘಾಟನಾ ಸಮಾರಂಭ ಸೋಮವಾರ ಉರ್ವ ಮಾರಿಗುಡಿ ಸಮೀಪದ ಎಂ.ಎಸ್‌.ಸಿ.ಎಲ್‌ ಇಂಡೋರ್‌ ಸ್ಟೇಡಿಯಂ ಬಿಲ್ಡಿಂಗ್‌ನಲ್ಲಿ ಉದ್ಘಾಟನೆಗೊಂಡಿತು.

    https://chat.whatsapp.com/FCEnlTkAKCC0MGPhXtX4i4
    ಶ್ರೀದೇವಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎ.ಸದಾನಂದ ಶೆಟ್ಟಿ ಸ್ಥಳಾಂತರಿತ ಶಾಖೆ ಉದ್ಘಾಟಿಸಿ ಮಾತನಾಡಿ, ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಸಿಬ್ಬಂದಿಗಳ ಸೇವೆ ಶ್ಲಾಘನೀಯ. ಉರ್ವ ಮಾರಿಯಮ್ಮನ ಆಶೀರ್ವಾದದಿಂದ ವಿಜಯ ಕ್ರೆಡಿಟ್‌ ಸೊಸೈಟಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು.
    ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಲಕ್ಷ್ಮಣ ಅಮೀನ್ ಕೋಡಿಕಲ್‌ ಮಾತನಾಡಿ, ಸೊಸೈಟಿಯ ಆರಂಭವಾಗಿ ಲಾಭದ ಹಾದಿಯಲ್ಲಿ ಅದನ್ನು ಮುನ್ನಡೆಸಿ 21 ಶಾಖೆಗಳನ್ನು ಸ್ಥಾಪಿಸುವುದು ದೊಡ್ಡ ಸಾಧನೆ. ಇದರಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ನಿರ್ದೇಶಕರು, ಸಿಬ್ಬಂದಿಗಳ ಶ್ರಮ ಸಾಕಷ್ಟಿದೆ. ಯಶಸ್ಸು ಸಿಗಬೇಕಾದರೆ ಅದರ ಹಿಂದೆ ದೊಡ್ಡ ಶ್ರಮ ಬೇಕು. ಅದನ್ನು ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯವರು ಮಾಡಿ ತೋರಿಸಿದ್ದಾರೆ. ಮುಂದೆಯೂ ಈ ಸೊಸೈಟಿಯು ಜನರಿಗೆ ಉತ್ತಮ ಸೇವೆ ಕೊಡಲಿ ಎಂದು ಹಾರೈಸಿದರು.


    ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಎಸ್ ಜಯರಾಮ್ ಶೆಟ್ಟಿ ಮಾತನಾಡಿ, ವಿಜಯ ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯು ಇಂದು ಬೃಹದಾಕಾರವಾಗಿ ಬೆಳೆದಿದೆ. ರಾಜ್ಯದಲ್ಲೇ ಪ್ರತಿಷ್ಟಿತ ಸಂಸ್ಥೆಯಾಗಿ ಬೆಳೆದಿದೆ. ಇನ್ನೊಂದು ಒಂದು ವರ್ಷದಲ್ಲಿ 1000 ಕೋಟಿ ರೂ. ವ್ಯವಹಾರ ದಾಖಲಿಸುವ ವಿಶ್ವಾಸವಿದೆ. ಈ ಮಟ್ಟಿಗೆ ಬೆಳೆಯಬೇಕಾದರೆ ಜನರು ನಮ್ಮ ಮೇಲಿಟ್ಟಿರುವ ವಿಶ್ವಾಸ ಅಷ್ಟು ದೊಡ್ಡ ಪ್ರಮಾಣದಲ್ಲಿದೆ. ನಿಷ್ಠೆ, ನಿಷ್ಪಕ್ಷಪಾತ, ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕೆಲಸ ಮಾಡಿದ್ದರಿಂದ ನಮ್ಮ ಸಂಸ್ಥೆಯು ಸ್ವಲ್ಪ ಕಾಲದಲ್ಲೇ ದೊಡ್ಡ ಮಟ್ಟದಲ್ಲಿ ಬೆಳೆಯಲು ಕಾರಣವಾಗಿದೆ. ಜನರಿಗೆ ನಮ್ಮ ಮೇಲೆ ಅಪಾರ ವಿಶ್ವಾಸವಿದೆ. ವಿದ್ಯಾವಂತ ಜನ ನಮ್ಮನ್ನು ಹುಡುಕಿಕೊಂಡು ಬಂದು ವ್ಯವಹಾರ ಮಾಡುಲು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಗೆ ಸ್ವಂತ ಕಟ್ಟಡ ಆಗಲಿದೆ. ಮಂಗಳೂರಿನ ಅತ್ತಾವರ ಹಾಗೂ ಉಡುಪಿ ಜಿಲ್ಲೆಯ ಕಾಪುವಿನಲ್ಲೂ ಸಂಘದ ಶಾಖೆ ಆರಂಭ ಆಗಲಿದೆ ಎಂದು ಹೇಳಿದರು. 


    ದ.ಕ. ಬ್ಯಾಡ್ಮಿಂಟನ್‌ ಅಸೋಸಿಯೇಶನ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ ಕೋರ್ಯಾರು ಮಾತನಾಡಿ, ಮುಂದಿನ ಒಂದೂವರೆ ವರ್ಷದಲ್ಲಿ 1000 ಕೋಟಿ ರೂ. ವ್ಯವಹಾರ ದಾಖಲಿಸುವ ಗುರಿ ಹೊಂದಲಾಗಿದೆ. ಈ ಭಾಗದಲ್ಲೂ ಉತ್ತಮ ವ್ಯವಹಾರಕೆ ಗ್ರಾಹಕರು ಸಹಕಾರ ಕೊಡಬೇಕು ಎಂದರು. ಸೊಸೈಟಿಯ ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕೆ, ನಿರ್ದೇಶಕರಾದ ಎಸ್‌.ಜಯರಾಮ ಶೆಟ್ಟಿ, ಸೀತಾರಾಮ ಶೆಟ್ಟಿ, ಬಾಲಕೃಷ್ಣ ಪೂಂಜ ಹೆಚ್‌, ಪುಷ್ಪರಾಜ್‌ ಶೆಟ್ಟಿ, ರಘುರಾಮ ಶೆಟ್ಟಿ ಎ, ಕೃಷ್ಣ ರೈ ಟಿ., ಎಂ.ಜಯರಾಮ ಶೆಟ್ಟಿ ಮುಂಡಾಡಿಗುತ್ತು, ರಾಜೇಶ್‌ ಶೆಟ್ಟಿ ನವಶಕ್ತಿ, ಪ್ರಕಾಶ್‌ ಶೆಟ್ಟಿ ನೊಚ್ಚ, ಸಾರಿಕಾ ಶೆಟ್ಟಿ, ವಿಜಯ ಬಿ.ಶೆಟ್ಟಿ, ಶಾಖಾ ಪ್ರಬಂಧಕರಾದ ದಿನಕರ ರೈ ಡಿ ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಸಂಘದ ನಿರ್ದೇಶಕ ರಘುರಾಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಇಒ ಸುಜಯ್‌ ಶೆಟ್ಟಿ ವಂದಿಸಿದರು.

    Ajith Shetty Koryaar D.K District Badminton Association Jayaram Shetty Shree Devi Shikshan Samooha Samsthe Sujaya Shetty Urva Mariyamma Temple Vijaya Credit Co Operative Society Guruvayanakere
    Previous Articleಕರ್ನಾಟಕ ರಾಜ್ಯ ಸಹಕಾರಿ ಅರ್ಬನ್‌ ಬ್ಯಾಂಕುಗಳ ಒಕ್ಕೂಟದ ರಿಟ್‌ ಅರ್ಜಿಗೂ ಹೈಕೋರ್ಟ್‌ ಮಧ್ಯಂತರ ರಿಲೀಫ್‌
    Next Article ಶ್ರೀಶಾ ಸೌಹಾರ್ದ ಸೊಸೈಟಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಣೆ

    Related Posts

    ಶ್ರೀಶಾ ಸೌಹಾರ್ದ ಸೊಸೈಟಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಣೆ

    July 13, 2026

    ಕರ್ನಾಟಕ ರಾಜ್ಯ ಸಹಕಾರಿ ಅರ್ಬನ್‌ ಬ್ಯಾಂಕುಗಳ ಒಕ್ಕೂಟದ ರಿಟ್‌ ಅರ್ಜಿಗೂ ಹೈಕೋರ್ಟ್‌ ಮಧ್ಯಂತರ ರಿಲೀಫ್‌

    July 13, 2026

    ರಿಸರ್ವ್‌ ಬ್ಯಾಂಕ್‌ ಹಣಕಾಸು ಪರಿಸ್ಥಿತಿ ನಿಯಂತ್ರಿಸಲಿ, ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿಯ ಅಧಿಕಾರಾವಧಿಯನ್ನಲ್ಲ

    July 13, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಶ್ರೀಶಾ ಸೌಹಾರ್ದ ಸೊಸೈಟಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಣೆ

    July 13, 2026

    ಉರ್ವ ಮಾರಿಯಮ್ಮನ ಆಶೀರ್ವಾದದಿಂದ ವಿಜಯ ಕ್ರೆಡಿಟ್‌ ಸೊಸೈಟಿ ಉತ್ತರೋತ್ತರ ಅಭಿವೃದ್ಧಿಯಾಗಲಿ

    July 13, 2026

    ಕರ್ನಾಟಕ ರಾಜ್ಯ ಸಹಕಾರಿ ಅರ್ಬನ್‌ ಬ್ಯಾಂಕುಗಳ ಒಕ್ಕೂಟದ ರಿಟ್‌ ಅರ್ಜಿಗೂ ಹೈಕೋರ್ಟ್‌ ಮಧ್ಯಂತರ ರಿಲೀಫ್‌

    July 13, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.