Author: admin
ಬಂಟ್ವಾಳ: ಸಹಕಾರ ಸಂಘಗಳಲ್ಲಿನ ಸದಸ್ಯರ ಅನುಕೂಲಕ್ಕೆ ಜಾರಿಯಲ್ಲಿರುವ ಹಾಗೂ ಫಲಾನುಭವಿಗಳ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ವೈದ್ಯಕೀಯ ಚಿಕಿತ್ಸಾ ವೆಚ್ಚದ ನಗದುರಹಿತ ಸೌಲಭ್ಯದೊಂದಿಗೆ ಚಾಲ್ತಿಯಲ್ಲಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು 2025-26ನೇ ಸಾಲಿಗೆ ಸಂಬಂಧಿಸಿ ಮರುಜಾರಿಗೊಳಿಸಲಾಗಿದ್ದು,ಈಗಾಗಲೇ ಈ ಯೋಜನೆಯಲ್ಲಿ ನೋಂದಾಯಿಸಿಕೊಂಡ ಸದಸ್ಯರು ನವೀಕರಣ ಮಾಡಬಹುದಾಗಿದೆ. ನೋಂದಣಿ ಮಾಡಿಕೊಳ್ಳದ ಸದಸ್ಯರಿಗೆ ಹೊಸದಾಗಿ ನೋಂದಾಯಿಸಿಕೊಳ್ಳಲೂ ಅವಕಾಶ ಕಲ್ಪಿಸಲಾಗಿದೆ. https://chat.whatsapp.com/FCEnlTkAKCC0MGPhXtX4i4 ಈ ಯೋಜನೆ 2025-26ನೇ ಸಾಲಿಗೆ ಸಂಬಂಧಿಸಿ ಚಿಕಿತ್ಸಾ ಅವಧಿಯನ್ನು 01-04-2026ರಿಂದ 31-03-2027ರವರೆಗೆ ನಿಗದಿಗೊಳಿಸಿದ್ದು, 2026ರ ಜನವರಿ 3ರಿಂದ ನೋಂದಣಿಯನ್ನು ಪ್ರಾರಂಭಿಸಿದ್ದು, 2026ರ ಮಾರ್ಚ್ ಅಂತ್ಯದ ತನಕ ನೋಂದಣಿ ದಿನಾಂಕ ನಿಗದಿಗೊಳಿಸಲಾಗಿದೆ. ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಇಚ್ಚಿಸುವ ಸಹಕಾರ ಸಂಘಗಳಲ್ಲಿನ ಸದಸ್ಯರು ಆಧಾರ್ ಕಾರ್ಡ್, ಪಡಿತರ ಚೀಟಿಯ ಜೆರಾಕ್ಸ್ ಪ್ರತಿ ಮತ್ತು ಭಾವಚಿತ್ರದೊಂದಿಗೆ ತಾವು ಸದಸ್ಯರು ಆಗಿರುವ ಸಂಘದಲ್ಲಿ ಅರ್ಜಿ ಸಲ್ಲಿಸಬಹುದು. ಸಂಬಂಧಿತ ರೈತ ಸದಸ್ಯರು ಯಾವುದಾದರೂ ಒಂದು ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿ ಒಂದು ತಿಂಗಳು ಪೂರ್ಣಗೊಂಡಿದ್ದರೆ ಈ ಯೋಜನೆಗೆ ಅರ್ಹರಾಗುತ್ತಾರೆ. ಗ್ರಾಮೀಣ ಸಹಕಾರ ಸಂಘಗಳ…
ಅವೇಕ್ ಕುಡ್ಲ ಸಂಚಾಲಕ ಉಮಾನಾಥ್ ಕೋಟೆಕಾರ್ ಅಭಿಪ್ರಾಯ ಮಂಗಳೂರು: ಕಸ ಎಸೆಯುವ ಮನಸ್ಥಿತಿ ಬದಲಾಯಿಸಬೇಕಾದರೆ ಸಾರ್ವಜನಿಕವಾಗಿ ಕಸ ಹೆಕ್ಕುವ ಸಂಪ್ರದಾಯ ಮೂಡಿ ಅದು ಸಾರ್ವತ್ರಿಕವಾಗಬೇಕು. ಪೋಷಕರು ಪ್ರತಿ ಮನೆಗಳಲ್ಲೂ ಮಕ್ಕಳಿಗೆ ಸಣ್ಣ ಪ್ರಾಯದಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಆ ಮೂಲಕ ಮುಂದಿನ ಜಾಗೃತ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಅವೇಕ್ ಕುಡ್ಲ ಸಂಚಾಲಕರಾದ ಉಮಾನಾಥ್ ಕೋಟೆಕಾರ್ ಹೇಳಿದರು. https://chat.whatsapp.com/FCEnlTkAKCC0MGPhXtX4i4 ವಿಶ್ವಕರ್ಮ ಸಹಕಾರ ಬ್ಯಾಂಕಿನ ಮಂಗಳೂರು ಶಾಖೆಯ ಆಶ್ರಯದಲ್ಲಿ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ನಡೆದ ಹದಿನಾರನೇ ಸ್ವಚ್ಛ ಭಾರತ ಶ್ರಮದಾನದಲ್ಲಿ ಭಾಗವಹಿಸಿದ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಿಡದರು. ಪತ್ರಕರ್ತ ಗುರುಪ್ರಸಾದ್ ಎಸ್ ಮಾತನಾಡಿ, ನಾಗರಿಕ ಸಮಾಜದಲ್ಲಿ ಸ್ವಚ್ಛತೆಯ ಪರಿಪಾಠವೂ ನಮ್ಮ ಮನೆ, ಮನದಾಳದಿಂದ ಮೂಡಬೇಕು, ಈ ನಿಟ್ಟಿನಲ್ಲಿ ಪ್ರತೀ ಮನೆಗಳಂತೆ ಸಂಘ ಸಂಸ್ಥೆಗಳೂ ಜವಾಬ್ದಾರಿಯುತ ಪಾತ್ರವನ್ನು ಹೊಂದಿರುತ್ತದೆ. ಈ ಹಿನ್ನಲೆಯಲ್ಲಿ ವಿಶ್ವಕರ್ಮ ಸಹಕಾರ ಬ್ಯಾಂಕ್ ಒಂದು ಉತ್ತಮ ಉದಾಹರಣೆ ಎಂದು ಅಭಿಪ್ರಾಯಪಟ್ಟರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಸ್. ಆರ್.…
ವಿಶ್ವಕರ್ಮ ಸಹಕಾರ ಬ್ಯಾಂಕ್ ಮೆಲ್ಕಾರ್ ಶಾಖೆ ವತಿಯಿಂದ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಚೆನ್ನಪ್ಪ ಆರ್. ಕೋಟ್ಯಾನ್ ಹೇಳಿಕೆ ಬಂಟ್ವಾಳ: ಪರಿಸರ ನೈರ್ಮಲ್ಯದ ಹೊಣೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು. ಎಲ್ಲರ ಜವಾಬ್ದಾರಿಯುತ ಭಾಗೀದಾರಿಕೆಯಿಂದ ಇದು ಸಾಕಾರವಾಗಬೇಕು. ಈ ನಿಟ್ಟಿನಲ್ಲಿ ವಿಶ್ವಕರ್ಮ ಬ್ಯಾಂಕ್ ಹಮ್ಮಿಕೊಂಡಿರುವ ಸ್ವಚ್ಛತಾ ಶ್ರಮದಾನ ಕಾರ್ಯ ನಮ್ಮೆಲ್ಲರಿಗೆ ಪ್ರೇರಣೆ ಎಂದು ಶ್ರೀರಾಮ ಮಂದಿರದ ಅಧ್ಯಕ್ಷರಾದ ಚೆನ್ನಪ್ಪ ಆರ್.ಕೋಟ್ಯಾನ್ ಹೇಳಿದರು. ವಿಶ್ವಕರ್ಮ ಸಹಕಾರ ಬ್ಯಾಂಕಿನ ಮೆಲ್ಕಾರ್ ಶಾಖೆಯ ವತಿಯಿಂದ “ಸ್ವಚ್ಛತಾ ಹೀ ಸೇವಾ” ಧ್ಯೇಯದೊಂದಿಗೆ ನಡೆದ ಹದಿನೈದನೇ ಸ್ವಚ್ಛ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. https://chat.whatsapp.com/FCEnlTkAKCC0MGPhXtX4i4 ಯುವ ಸಂಗಮ ಮೆಲ್ಕಾರ್ ಇದರ ಗೌರವಾಧ್ಯಕ್ಷರಾದ ಎಂ.ಎನ್. ಕುಮಾರ್ ಮಾತನಾಡಿ, ವಿಶ್ವಕರ್ಮ ಬ್ಯಾಂಕ್ ಒಂದು ಆರ್ಥಿಕ ಸಂಸ್ಥೆಯಾಗಿ ಸಾಮಾಜಿಕ ಕಾರ್ಯವನ್ನು ನಿರಂತರ ಸಂಘಟಿಸುತ್ತಿರುವುದು ಶ್ಲಾಘನೀಯ ಹಾಗೂ ಇವರೊಂದಿಗೆ ಹೆಚ್ಚಿನ ಸಂಘ ಸಂಸ್ಥೆಗಳು ಕೈಜೋಡಿಸಿ ಸ್ವಚ್ಛತೆಯ ಅರಿವು ಹಾಗೂ ಜಾಗೃತಿಯನ್ನು ಮೂಡಿಸುವತ್ತ ಕಾರ್ಯಪ್ರವೃತ್ತರಾಗಬೇಕೆಂದು ಎಂದು ಹೇಳಿದರು. ಬಿಲ್ಲವ ಸಮಾಜ ಸೇವಾ ಸಂಘ ಕಲ್ಲಡ್ಕ ಇದರ ಅಧ್ಯಕ್ಷ…
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ ಕುಡಿಯುವ ನೀರು ಶುದ್ದೀಕರಣ ಯಂತ್ರ ಕೊಡುಗೆ
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಇದರ ವತಿಯಿಂದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರಕ್ಕೆ ನಿತ್ಯ ಕುಡಿಯುವ ನೀರು ಶುದ್ದೀಕರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕೊಡುಗೆಯಾಗಿ ಕುಡಿಯುವ ನೀರು ಶುದ್ದೀಕರಣ ಯಂತ್ರವನ್ನು ಹಸ್ತಾಂತರಿಸುವ ಕಾರ್ಯಕ್ರಮ ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಇತ್ತೀಚೆಗೆ ಜರುಗಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಕುಡಿಯುವ ನೀರು ಶುದ್ದೀಕರಣ ಯಂತ್ರವನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷರಾದ ಚಿತ್ತರಂಜನ್ ಕೆ ಇವರಿಗೆ ಹಸ್ತಾಂತರಿಸಿದರು. ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ರಮಾನಾಥ್ ಸನಿಲ್, ಮುದ್ದು ಮೂಡುಬೆಳ್ಳೆ, ಗೋಪಾಲ್ ಎಂ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಮ್ಯಾನೇಜರ್ ಜೆ. ಕಿಶೋರ್ ಮಜಿಲ, ಟ್ರಸ್ಟಿಗಳಾದ ಜಗದೀಪ್ ಡಿ. ಸುವರ್ಣ, ವಿಠಲ್ ಎ, ವಾಮನ, ಕ್ಷೇತ್ರದ ಮುಖಂಡರಾದ ಮೋಹನ್ ನೆಕ್ಕೆರೆಮಾರ್, ವಸಂತ ಪೂಜಾರಿ, ಪ್ರಕಾಶ್ ಗರೋಡಿ, ಅರ್ಚಕರಾದ ಮನೋಜ್…
ತುಮಕೂರು: ಸನ್‌ರೈಸ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಕ್ಯಾತ್ಸಂದ್ರ ತುಮಕೂರು ಇದರ ಪ್ರಥಮ ಶಾಖೆಯನ್ನು ಕೊರಟಕೆರೆ ತಾಲೂಕಿನ ಕೋಳಾಲ ಗ್ರಾಮದಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು. https://chat.whatsapp.com/FCEnlTkAKCC0MGPhXtX4i4 ಎಲೆರಾಂಪುರದ ಹನುಮಂತನಾಥ ಸ್ವಾಮಿಗಳ ಪಾದಪೂಜೆ ನಡೆಸಲಾಯಿತು. ಕೊರಟಗೆರೆ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕೆಂಪಣ್ಣ, ಕೋಲಾರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀನಿವಾಸ್ ಮೂರ್ತಿ ಶಾಖೆಯ ಉದ್ಘಾಟನೆ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷರಾದ ವಿಜಯ್ ಸಿ.ಪಿ, ಉಪಾಧ್ಯಕ್ಷರಾದ ಅಶೋಕ್ ಕುಮಾರ್ ವೈಷ್ಣವ್, ನಿರ್ದೇಶಕರುಗಳಾದ ನಾಗರಾಜು, ರಾಜಕುಮಾರ, ಚಂದ್ರಶೇಖರ್, ಆನಂದ್, ರೂಪಾ ಧನಂಜಯ್, ವಿದ್ಯಾವತಿ ಸಂಪತ್ ಕುಮಾರ್, ಶಾಂತಕುಮಾರ್, ಶಾಂತರಾಜು ಭಾಗವಹಿಸಿದ್ದರು. ರಾಜಕುಮಾರ ಕಾರ್ಯಕ್ರಮ ನಿರೂಪಿಸಿದರು. ಯಶಸ್ವಿನಿ ಸಹಕಾರ ಗೀತೆ ಹಾಡಿದರು. ಸಂಸ್ಥೆಯ ಧ್ಯೇಯ ಉದ್ದೇಶಗಳ ಬಗ್ಗೆ ಹಾಗೂ ಹೊಸ ಶಾಖೆ ತೆರೆಯುವುದರ ಬಗ್ಗೆ ಅಧ್ಯಕ್ಷರಾದ ವಿಜಯ್ ಸಿ.ಪಿ ಸವಿಸ್ತಾರವಾದ ಮಾಹಿತಿ ನೀಡಿದರು. ಜಿಲ್ಲಾ ಸೌಹಾರ್ದ ಅಧಿಕಾರಿಗಳಾದ ಉಮೇಶ್, ರವಿಕುಮಾರ್ ಭಾಗವಹಿಸಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಮಡಂತ್ಯಾರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಮಡಂತ್ಯಾರು ಶಾಖೆಯ ತೃತೀಯ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ಮಡಂತ್ಯಾರು ಶಾಖೆಯಲ್ಲಿ ಜರುಗಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಸದಸ್ಯರಾದ ಮನ್ಮಥ ಕಜೆಕ್ಕಾರ್, ಆನಂದ್ ಎನ್, ಟಿ.ಪದ್ಮನಾಭ ಪೂಜಾರಿ, ರವಿ ಎಸ್, ಹಿತೇಶ್, ಸುರೇಂದ್ರ ಎಸ್ ಹಾಗೂ ಸುಧಾಕರ ಆಚಾರ್ಯ ಇವರು ಉದ್ಘಾಟಿಸಿದರು. ಸಂಘದ ಸದಸ್ಯ ಪ್ರವೀಣ್ ಭಂಡಾರಿ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಮುಂದಾಳತ್ವದಲ್ಲಿ ಶಾಖೆಯ ಪ್ರಾರಂಭದಿಂದಲೂ ಉತ್ತಮ ಸೇವೆ ನೀಡುತ್ತಿದ್ದು, ಗ್ರಾಹಕರ ಬೇಡಿಕೆಗಳನ್ನು ಈಡೇರಿಸುತ್ತ ಬರುತ್ತಿದೆ ಎಂದು ತಿಳಿಸಿದರು. ಸದಸ್ಯ ರವಿ ಎಸ್ ಮಾತನಾಡಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅತೀ ಕಡಿಮೆ ಅವಧಿಯಲ್ಲಿ 33 ಶಾಖೆಗಳನ್ನು ಹೊಂದಿ, ಉತ್ತಮ ಪ್ರಗತಿ ಸಾಧಿಸಿರುವುದು ಶ್ಲಾಘನೀಯ. ಇನ್ನೂ ಹೆಚ್ಚಿನ ಅಭಿವೃದ್ದಿ ಹೊಂದಲಿ ಎಂದು ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಚಿತ್ತರಂಜನ್…
ಮಂಡ್ಯ: ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ವತಿಯಿಂದ ಗುರುವಾರ ಒಕ್ಕೂಟದ ಕಚೇರಿಯಲ್ಲಿ ಸೌಹಾರ್ದ ಸಹಕಾರಿ ದಿನಾಚರಣೆಯ ಪ್ರಯುಕ್ತ ಸಹಕಾರ ಧ್ವಜಾರೋಹಣ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ಒಕ್ಕೂಟದ ಅಧ್ಯಕ್ಷರಾದ ಬಿ.ಟಿ ಗುರುರಾಜ ಶೆಟ್ಟಿ, ಉಪಾಧ್ಯಕ್ಷರಾದ ಎಸ್.ಸಿದ್ದಲಿಂಗಯ್ಯ, ನಿರ್ದೇಶಕರಾದ ವೆಂಕಟೇಶ ಗೌಡ, ಬಿ.ವಿ ಕೃಷ್ಣಪ್ಪ, ರಮೇಶ್, ಬಸವೇಗೌಡ, ಕೃಷ್ಣಗೌಡ, ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲೆಯ ಸಹಕಾರಿಗಳಾದ ಮಾತಪ್ಪ, ಗುರುಪ್ರಸಾದ್ ಹಾಗೂ ಒಕ್ಕೂಟದ ಸಿಬ್ಬಂದಿ ಮಿತ್ರರು ಸೇರಿ ಕಾರ್ಯಕ್ರಮ ಆಚರಿಸಿದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಂಜಿಮೊಗರು ಶಾಖೆಯ ಒಂಬತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಜನವರಿ 4ರಂದು ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣಾ ಮತ್ತು ದಂತ ಚಿಕಿತ್ಸಾ ಶಿಬಿರವು ಪಂಜಿಮೊಗರು ಉರುಂದಾಡಿಯ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಲ್ಲಿ ನಡೆಯಲಿದೆ. https://chat.whatsapp.com/FCEnlTkAKCC0MGPhXtX4i4 ಉರುಂದಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ, ಯುವವಾಹಿನಿ ಕೂಳೂರು ಘಟಕ, ಲಯನ್ಸ್ ಕ್ಲಬ್ ಮಂಗಳೂರು ಲೇಡಿಹಿಲ್ ಮತ್ತು ಲಯನ್ಸ್ ಕ್ಲಬ್ ಕುದುರೆಮುಖ ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾವೂರು ಪ್ರಖಂಡ ಇವರ ಜಂಟಿ ಸಹಯೋಗದಲ್ಲಿ ಬೆಳಗ್ಗೆ 9.30ರಿಂದ ಮದ್ಯಾಹ್ನ 12.30ರವರೆಗೆ ನಡೆಯಲಿದೆ. ಈ ವೈದ್ಯಕೀಯ ಶಿಬಿರದಲ್ಲಿ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಮುಕ್ಕ ಸುರತ್ಕಲ್ ಇವರ ನುರಿತ ವೈದ್ಯರ ತಂಡದವರಿಂದ ದಂತ ತಪಾಸಣೆ ಮತ್ತು ಜಾಗೃತಿ, ಹುಳುಕು ಹಲ್ಲುಗಳನ್ನು ಭರ್ತಿ ಮಾಡುವುದು, ಹಲ್ಲುಗಳ ಶುಚಿತ್ವ, ಹಲ್ಲು ಕೀಳುವುದು ಹಾಗೂ ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಫೌಂಡೇಶನ್ ಕದ್ರಿ ಇವರ ನುರಿತ ವೈದ್ಯರ ತಂಡದವರಿಂದ…
ರಾಯಚೂರು: ಇಲ್ಲಿನ ಮಾಸ್ಕಿ ತಾಲೂಕು ಬಳಗನೂರು ಶ್ರೀ ಮಾರುತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದಲ್ಲಿ ಗುರುವಾರ ಸೌಹಾರ್ದ ಸಹಕಾರಿ ದಿನ ಆಚರಣೆಯ ಅಂಗವಾಗಿ ಸಹಕಾರಿ ಧ್ವಜಾರೋಹಣ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಅಧ್ಯಕ್ಷರಾದ ಬಿ.ಶಿವನಾಥ್, ಉಪಾಧ್ಯಕ್ಷರಾದ ಮಲ್ಲನಗೌಡ ಗಡ್ಡಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಎಂ, ಗ್ರಾಹಕರಾದ ಶರಣಪ್ಪ ಕುಂಬಾರ್ ಹಾಜರಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
ಬೆಂಗಳೂರು: ಇಲ್ಲಿನ ರಾಜಾಜಿನಗರ ಮಹಾಗಣಪತಿ ನಗರದ ಬನವಾಸಿ ಸೌಹಾರ್ದ ಸಹಕಾರಿ ಸಂಘದಲ್ಲಿ ಗುರುವಾರ ಸೌಹಾರ್ದ ಸಹಕಾರಿಗಳ ದಿನಾಚರಣೆ ಅಂಗವಾಗಿ ಸಹಕಾರಿ ಧ್ವಜಾರೋಹಣ ಮಾಡಲಾಯಿತು. https://chat.whatsapp.com/FCEnlTkAKCC0MGPhXtX4i4 ಸಂಘದ ಉಪಾಧ್ಯಕ್ಷರಾದ ಬಾಬು ಎಸ್ ಕುಂಬಾರ್, ವ್ಯವಸ್ಥಾಪಕರಾದ ಶಿವಶರಣಪ್ಪ, ಆಡಳಿತಾಧಿಕಾರಿ ಶಂಬಯ್ಯ ಕೆ ಎಲ್, ನಿರ್ದೇಶಕರಾದ ಮಂಜುನಾಥ ಎನ್, ನಾರಾಯಣಸ್ವಾಮಿ ಹೆಚ್, ಸಿಬ್ಬಂದಿಗಳಾದ ಭೂಮಿಕಾ ಜಿ ಆರ್, ಉಷಾ ಜಿ ಜೆ, ಸದಸ್ಯರಾದ ರಂಗನಾಥಪ್ಪ ಎಮ್ ಪಿ, ಡಿ ಕೆ ಕೆಂಪಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿಮ್ಮ ಸಂಸ್ಥೆಗಳ ಸುದ್ದಿ ಪ್ರಕಟಣೆ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 9901319694 EMAIL: sahakaraspandana@gmail.com
