Close Menu
    Top News

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್‌ಗೆ ವಿಶಿಷ್ಟ ಸೇವಾ ಪ್ರಶಸ್ತಿ

    July 15, 2026

    ಶ್ರೀಶಾ ಸೌಹಾರ್ದ ಸೊಸೈಟಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಣೆ

    July 13, 2026

    ಉರ್ವ ಮಾರಿಯಮ್ಮನ ಆಶೀರ್ವಾದದಿಂದ ವಿಜಯ ಕ್ರೆಡಿಟ್‌ ಸೊಸೈಟಿ ಉತ್ತರೋತ್ತರ ಅಭಿವೃದ್ಧಿಯಾಗಲಿ

    July 13, 2026
    Facebook X (Twitter) Instagram
    Sahakara Spandana NewsSahakara Spandana News
    • Home
    • About Us
    • News
    • Articles
    • Contact Us
    Sahakara Spandana NewsSahakara Spandana News
    Home » ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್‌ಗೆ ವಿಶಿಷ್ಟ ಸೇವಾ ಪ್ರಶಸ್ತಿ
    News

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್‌ಗೆ ವಿಶಿಷ್ಟ ಸೇವಾ ಪ್ರಶಸ್ತಿ

    adminBy adminJuly 15, 2026

    ಮಂಗಳೂರು: ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ವತಿಯಿಂದ ಸೋಮವಾರ ನಾಟೆಕಲ್ ಕಣಚೂರು ಸಭಾಂಗಣದಲ್ಲಿ ಸಂಸ್ಥಾಪಕರ ದಿನ ಕಾರ್ಯಕ್ರಮದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ಅವರಿಗೆ ವಿಶಿಷ್ಟ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    https://chat.whatsapp.com/FCEnlTkAKCC0MGPhXtX4i4
    ಕಣಚೂರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಯು. ಕಣಚೂರು ಮೋನು ಅಧ್ಯಕ್ಷತೆಯಲ್ಲಿ ನಡೆದ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮದಲ್ಲಿ ಚಿತ್ತರಂಜನ್‌ ಬೋಳಾರ್‌ ಅವರಿಗೆ ಈ ಪ್ರಶಸ್ತಿ ನೀಡಲಾಯಿತು. ಸಹಕಾರ ಕ್ಷೇತ್ರದ ಮೂಲಕ ಸಾಮಾಜಿಕ ಧ್ಯೇಯದೊಂದಿಗೆ ಪ್ರಸ್ತುತ ೧೧೨ಕ್ಕೂ ಮಿಕ್ಕಿ ಉಚಿತ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವ ಮೂಲಕ ಸಾಮಾಜಿಕ ಕಳಕಳಿಯೊಂದಿಗೆ ನೀಡುತ್ತಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಯಿತು. ಕರ್ನಾಟಕ ಸರ್ಕಾರದ ನೌಕರರ ರಾಜ್ಯ ವಿಮಾ (ಇಎಸ್‌ಐ) ವೈದ್ಯಕೀಯ ಸೇವೆಗಳ ಆಯುಕ್ತ ಡಾ| ದಿನೇಶ್ ಕುಮಾರ್ ವೈ.ಕೆ., ಕಣಚೂರು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಸಲಹಾ ಸಮಿತಿ ಚೇರ್ಮನ್ ಹಾಗೂ ಕಣ್ಣೂರು ವಿಶ್ವವಿದ್ಯಾಲಯ ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ| ಡಾ| ಎಂ. ಅಬ್ದುಲ್ ರಹಿಮಾನ್ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಣಚೂರು ಇಸ್ಲಾಮಿಕ್ ಎಜುಕೇಶನ್ ಟ್ರಸ್ಟ್ ನಿರ್ದೇಶಕ ಅಬ್ದುಲ್ ರಹಿಮಾನ್, ಟ್ರಸ್ಟಿಗಳಾದ ಸಾಹಿದಾ ರಹಿಮಾನ್, ಉಮಯಾ ಬಾನು ಆರಿಫ್, ಫರೀದಾ ನಸೀರ್ ಹಾಗೂ ಡಾ| ಅಬಿದಾ ಹಾಶಿಂ, ಕಣಚೂರು ಹೆಲ್ತ್ ಸೈನ್ಸಸ್ ಸಲಹಾ ಮಂಡಳಿ, ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧ್ಯಕ್ಷ ಡಾ| ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕಣಚೂರು ಹೆಲ್ತ್ ಸೈನ್ಸಸ್ ಸಲಹಾ ಮಂಡಳಿ ಸದಸ್ಯ ಡಾ| ಎಂ. ವೆಂಕಟರಾಯ ಪ್ರಭು, ಮುಖ್ಯ ಆಡಳಿತಾಧಿಕಾರಿ ಡಾ| ರೋಹನ್ ಎಸ್. ಮೊನಿಸ್ ಉಪಸ್ಥಿತರಿದ್ದರು. ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್‌ ಡಾ.ಶಹನವಾಝ್‌ ಮಣಿಪಾಡಿ ಸ್ವಾಗತಿಸಿದರು. ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲೆ ಡಾ.ವಿದ್ಯಾಪ್ರಭಾ ಆರ್‌ ವಂದಿಸಿದರು.
    ಚಿತ್ತರಂಜನ್‌ ಬೋಳಾರ್‌ ಅವರು ಸಹಕಾರ ಕ್ಷೇತ್ರದ ಜೊತೆಗೆ ಸಾಮಾಜಿಕ, ಧಾರ್ಮಿಕ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸಲ್ಲಿಸಿದ ಅನನ್ಯ ಸೇವೆಗೆ ಅನೇಕ ರಾಷ್ಟೀಯ, ರಾಜ್ಯಮಟ್ಟದ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಇವರಿಗೆ “ಸಹಕಾರ ರತ್ನ ಪ್ರಶಸ್ತಿ” “ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ”, “ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ”, “ಸಮಾಜ ರತ್ನ ಪ್ರಶಸ್ತಿ”, “ಸಜ್ಜನ – ಚಂದನ ಸದ್ಭಾವನಾ ರಾಜ್ಯ ಪ್ರಶಸ್ತಿ”, “ಪರಿವರ್ತನಶ್ರೀ ರಾಜ್ಯ ಪ್ರಶಸ್ತಿ”, “ಭಾರತ ರತ್ನ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ರಾಷ್ಟೀಯ ಪ್ರಶಸ್ತಿ”, “ಐಐಬಿ ಬೆಸ್ಟ್ ಬುಸಿನೆಸ್ ಲೀಡರ್‌ಶಿಪ್ ಅವಾರ್ಡ್ -೨೦೨೩ ಪ್ರಶಸ್ತಿ”, “ತೌಳವ ಸಹಕಾರಿ ಮಾಣಿಕ್ಯ”, “ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ”, ಜೊತೆಯಲ್ಲಿ ಸಂಘ -ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಇವರನ್ನು ಹಲವಾರು ಸಹಕಾರ ಸಂಘ- ಸಂಸ್ಥೆಗಳು ಗುರುತಿಸಿ ಸನ್ಮಾನಿಸಿದೆ.

     

    Athmashakthi Vividhoddesha Sahakara Sangha Chittaranjan Bolar Dr.Kanachuru Monu Kanachuru Educatioanl Trust
    Previous Articleಶ್ರೀಶಾ ಸೌಹಾರ್ದ ಸೊಸೈಟಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಣೆ

    Related Posts

    ಶ್ರೀಶಾ ಸೌಹಾರ್ದ ಸೊಸೈಟಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಣೆ

    July 13, 2026

    ಉರ್ವ ಮಾರಿಯಮ್ಮನ ಆಶೀರ್ವಾದದಿಂದ ವಿಜಯ ಕ್ರೆಡಿಟ್‌ ಸೊಸೈಟಿ ಉತ್ತರೋತ್ತರ ಅಭಿವೃದ್ಧಿಯಾಗಲಿ

    July 13, 2026

    ಕರ್ನಾಟಕ ರಾಜ್ಯ ಸಹಕಾರಿ ಅರ್ಬನ್‌ ಬ್ಯಾಂಕುಗಳ ಒಕ್ಕೂಟದ ರಿಟ್‌ ಅರ್ಜಿಗೂ ಹೈಕೋರ್ಟ್‌ ಮಧ್ಯಂತರ ರಿಲೀಫ್‌

    July 13, 2026
    Add A Comment
    Leave A Reply Cancel Reply

    ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Top Post

    ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್‌ಗೆ ವಿಶಿಷ್ಟ ಸೇವಾ ಪ್ರಶಸ್ತಿ

    July 15, 2026

    ಶ್ರೀಶಾ ಸೌಹಾರ್ದ ಸೊಸೈಟಿ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಉದಯವಾಣಿ ಶಿಕ್ಷಣ ಮಾರ್ಗದರ್ಶಿ ವಿತರಣೆ

    July 13, 2026

    ಉರ್ವ ಮಾರಿಯಮ್ಮನ ಆಶೀರ್ವಾದದಿಂದ ವಿಜಯ ಕ್ರೆಡಿಟ್‌ ಸೊಸೈಟಿ ಉತ್ತರೋತ್ತರ ಅಭಿವೃದ್ಧಿಯಾಗಲಿ

    July 13, 2026
    Facebook X (Twitter) YouTube LinkedIn
    • Home
    • About Us
    • News
    • Articles
    • Contact Us
    • sahakara spandana
    ಸುದ್ದಿ ಪ್ರಕಟಣೆಗಾಗಿ ಸಂಪರ್ಕಿಸಿ editor@sahakaraspandana.in | +91 8296645109
    © 2025 news.sahakaraspandana.in | All Right Reserved
    Powered by Blueline Computers

    Type above and press Enter to search. Press Esc to cancel.